For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ,ಸುಖ ನಿದ್ದೆಗೆ ಅಡಚಣೆಯಾಗುತ್ತಿದೆಯೇ?

|

ಗರ್ಭಿಣಿಯರಿಗೆ ರಾತ್ರಿ ನಿದ್ದೆಗೆ ಕೊರತೆ ಕಂಡು ಬರುವುದು ಸಹಜ. ಹೊಟ್ಟೆಯಲ್ಲಿ ಮಗುವಿನ ಚಲನೆಯಿಂದಾಗಿ ಆಗಾಗ ಎಚ್ಚರವಾಗುವುದು. ಅಲ್ಲದೆ ತಮಗೆ ಇಷ್ಟ ಬಂದ ಭಂಗಿಯಲ್ಲಿ ಮಲಗಲು ಸಾಧ್ಯವಿಲ್ಲ, ಒಂದು ಬದಿಯಿಂದ ಇನ್ನೊಂದು ಬದಿಗೆ ತಿರುಗಿ ಮಲಗುವಷ್ಟರಲ್ಲಿ ಸಂಪೂರ್ಣವಾಗಿ ಎಚ್ಚರವಾಗಿ ಬಿಡುತ್ತದೆ.

ಅದಲ್ಲದೆ ಈ ಸಮಯದಲ್ಲಿ ಸೊಂಟನೋವು, ಕಾಲು ನೋವು, ಕೆಲವರಿಗೆ ಪಾದಗಳಲ್ಲಿ ಉರಿ, ಎದೆ ಉರಿ ಈ ರೀತಿಯ ಸಮಸ್ಯೆ ಕಂಡು ಬರುವುದು. ಈ ಎಲ್ಲಾ ಕಾರಣಗಳಿಂದ ಸುಖ ನಿದ್ದೆ ದೂರವಾಗುವುದು. ಈ ಎಲ್ಲಾ ಕಾರಣಗಳಿಂದ ಗರ್ಭಾವಸ್ಥೆಯಲ್ಲಿ ಸುಖ ನಿದ್ದೆ ಅನ್ನುವುದು ಹೆಚ್ಚಿನ ಸಂದರ್ಭದಲ್ಲಿ ದೂರವಾಗುವುದು.

ಕೆಲವೊಂದು ಟಿಪ್ಸ್ ಪಾಲಿಸಿದರೆ ನಿದ್ದೆಗೆ ಭಂಗ ಆಗುವುದನ್ನು ತಡೆಯಬಹುದು. ಅದೇನೆಂದು ತಿಳಿಯಲು ಮುಂದೆ ಓದಿ:

ತುಂಬಾ ಟೀ , ಕಾಫಿ ಕುಡಿಯಬೇಡಿ

ತುಂಬಾ ಟೀ , ಕಾಫಿ ಕುಡಿಯಬೇಡಿ

ಗರ್ಭಾವಸ್ಥೆಯಲ್ಲಿ ಟೀ, ಕಾಫಿ ಒಳ್ಳೆಯದಲ್ಲ. ಟೀ, ಕಾಫಿ ಕುಡಿಯುವ ಅಭ್ಯಾಸವಿದ್ದು, ಅದನ್ನು ಬಿಡಲು ಕಷ್ಟವಾದರೆ 1 ಲೋಟಕ್ಕಿಂತ ಹೆಚ್ಚು ಕುಡಿಯಬೇಡಿ. ರಾತ್ರಿ ಹಾಲಿಗೆ ಸ್ವಲ್ಪ ಕೇಸರಿ ಹಾಕಿ ಕುಡಿಯಿರಿ.

ಶುದ್ಧತೆ

ಶುದ್ಧತೆ

ಮಲಗುವ ರೂಂನಲ್ಲಿ ಗಾಳಿ, ಬೆಳಕು ಸರಿಯಾಗಿ ಬೀಳುವಂತೆ, ಇರಲಿ ತಲೆ ದಿಂಬು ಸ್ವಲ್ಪ ಎತ್ತರವಿರಲಿ. ಕಾಲು ಹತ್ತಿರ ಒಂದು ತಲೆ ದಿಂಬು ಇಟ್ಟು ಅದರ ಮೇಲೆ ಕಾಲು ಇಟ್ಟು ಮಲಗಿದರೆ ತುಂಬಾ ಕಂಫರ್ಟ್ ಅನಿಸುವುದು.

ಯೋಗ

ಯೋಗ

ಗರ್ಭಿಣಿಯರು ಯೋಗ ಮಾಡಿದರೆ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ಹೆರಿಗೆಯೂ ಸುಲಭವಾಗುವುದು.

ರಾತ್ರಿ ಮಿತಿ ತಿನ್ನಬೇಡಿ

ರಾತ್ರಿ ಮಿತಿ ತಿನ್ನಬೇಡಿ

ರಾತ್ರಿ ಲಘ ಆಹಾರ ತಿನ್ನಿ, ಮಿತಿ ಮೀರಿ ತಿಂದರೂ ನಿದ್ದೆ ಮಾಡಲು ಕಷ್ಟವಾಗುವುದು. ಅದರಲ್ಲೂ ಮಲಗುವ 2 ಗಂಟೆ ಮುಂಚೆ ಆಹಾರ ತಿನ್ನಿ.

ನೀರು

ನೀರು

ಹಗಲಿನಲ್ಲಿ ತುಂಬಾ ನೀರು ಕುಡಿಯಿರಿ, ಆದರೆ ರಾತ್ರಿ ನೀರು ಕುಡಿಯುವುದನ್ನು ಸ್ವಲ್ಪ ಕಮ್ಮಿ ಮಾಡಿ, ಇದರಿಂದ ಆಗಾಗ ಮೂತ್ರವಿಸರ್ಜನೆಗೆ ಹೋಗುವುದು ತಪ್ಪುತ್ತದೆ.

ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ

ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ

ಹಗಲಿನಲ್ಲಿ ಗರ್ಭಿಣಿಯರು ತುಂಬಾ ಹೊತ್ತು ನಿದ್ದೆ ಮಾಡುವುದು ಒಳ್ಳೆಯದಲ್ಲ, ಆದರೆ ಮಧ್ಯಾಹ್ನ ಹೊತ್ತು 30 ನಿಮಿಷ ಮಲಗಿದರೆ ಸುಸ್ತು ಸ್ವಲ್ಪ ಕಡಿಮೆಯಾಗುವುದು.

ಮಧ್ಯರಾತ್ರಿವರೆಗೆ ಕುಳಿತು ಕೆಲಸ ಮಾಡಬೇಡಿ

ಮಧ್ಯರಾತ್ರಿವರೆಗೆ ಕುಳಿತು ಕೆಲಸ ಮಾಡಬೇಡಿ

ತುಂಬಾ ಹೊತ್ತಿನವರೆಗೆ ಟಿವಿ ನೋಡುವುದು ಅಥವಾ ಕೆಲಸ ಮಾಡುವುದು, ಲ್ಯಾಪ್ ಟಾಪ್ ಮುಂದೆ ಕೂರುವುದು ಮಾಡಬೇಡಿ. ಪ್ರತೀದಿನ ಸರಿಯಾದ ಸಮಯಕ್ಕೆ ನಿದ್ದೆ ಮಾಡಿ.

ಎಡ ಬದಿಗೆ ತಿರುಗಿ ಮಲಗಿ

ಎಡ ಬದಿಗೆ ತಿರುಗಿ ಮಲಗಿ

ನಿದ್ದೆಗೆ ಭಂಗ ಉಂಟಾಗದಿರಲು ಹಾಗೂ ದೇಹದಲ್ಲಿ ರಕ್ತಸಂಚಾರಕ್ಕೆ ಸಹಾಯವಾಗಲು ಗರ್ಭಿಣಿಯರು ಎಡ ಬದಿಗೆ ತಿರುಗಿ ಮಲಗುವುದು ಒಳ್ಳೆಯದು.

ಮಸಾಜ್

ಮಸಾಜ್

ಕಾಲು ನೋವು ಕಾಣಿಸಿದರೆ ಗಂಡನ ಹತ್ತಿರ ಪಾದಕ್ಕೆ ಮಸಾಜ್ ಮಾಡಲು ಹೇಳಿ. ಸುವಾಸನೆ ಇರುವ ಎಣ್ಣೆ ಹಾಕಿ ಮೆಲ್ಲನೆ ಮಸಾಜ್ ಮಾಡಿದರೆ ಪಾದದಲ್ಲಿ ಉರಿ ಕಡಿಮೆಯಾಗಿ ಸುಖ ನಿದ್ದೆ ಬರುವುದು.

English summary

Get Good Sleep During Pregnancy

Lack of sleep can lead to lot of health problems for both you and your growing baby. So, here are few ways to enjoy good sleep during pregnancy.
X
Desktop Bottom Promotion