For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಗ್ಯಾಸ್ ಉತ್ಪತ್ತಿ ಮಾಡುವ ಆಹಾರಗಳಿವು!

|

ಗರ್ಭಿಣಿಯರಿಗೆ ಕೆಲವೊಂದು ಆಹಾರಗಳನ್ನು ತಿಂದರೆ ಗ್ಯಾಸ್ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಅಧಿಕ ನಾರಿನಂಶವಿರುವ, ಸಕ್ಕರೆಯಂಶ, ಕೊಬ್ಬಿನಂಶವಿರುವ ಆಹಾರಗಳು ಬೇಗನೆ ಜೀರ್ಣವಾಗದೆ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಮಾಡುತ್ತದೆ.

ಈ ಕೆಳಗಿನ ಆಹಾರಗಳು ಕೆಲವು ಮಹಿಳೆಯರಲ್ಲಿ ಗ್ಯಾಸ್ ಸಮಸ್ಯೆಯನ್ನು ಉತ್ಪತ್ತಿ ಮಾಡುತ್ತದೆ. ಗರ್ಭಿಣಿಯರು ಯಾವ ಆಹಾರಗಳನ್ನು ತಿಂದರೆ ಗ್ಯಾಸ್ ಸಮಸ್ಯೆ, ಎದೆ ಉರಿ ಉಂಟಾಗಬಹುದೆಂದು ನೋಡೋಣ ಬನ್ನಿ:

ಸೂಚನೆ : ಇವುಗಳನ್ನು ತಿಂದರೆ ಹೊಟ್ಟೆ ಗ್ಯಾಸ್ ಹಾಗೂ ಎದೆ ಉರಿ ಉಂಟಾಗದಿದ್ದರೆ ಈ ಆಹಾರಗಳನ್ನು ತಿನ್ನುವುದು ಒಳ್ಳೆಯದು.

 ಸೇಬು

ಸೇಬು

ಸೇಬು ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರಲ್ಲಿರುವ ಪೆಕ್ಟಿನ್ ಅಂಶ ಗ್ಯಾಸ್ ಸಮಸ್ಯೆಯನ್ನು ಉತ್ಪತ್ತಿ ಮಾಡಬಹುದು.

ಎಲೆಕೋಸು

ಎಲೆಕೋಸು

ಎಲೆಕೋಸು ನಿಧಾನಕ್ಕೆ ಜೀರ್ಣವಾಗುತ್ತದೆ. ಆದ್ದರಿಂದ ಇದನ್ನು ತಿಂದರೆ ಕೆಲ ಗರ್ಭಿಣಿಯರಿಗೆ ಎದೆ ಉರಿ ಉಂಟಾಗುತ್ತದೆ.

ಕಾಳು

ಕಾಳು

ಕಾಳುಗಳು ಸಾಮಾನ್ಯವಾಗಿ ಎಲ್ಲರಲ್ಲೂ ಗ್ಯಾಸ್ ಸಮಸ್ಯೆ ಉಂಟು ಮಾಡುತ್ತದೆ. ಗರ್ಭಿಣಿಯರು ಪೋಷಕಾಂಶದ ಕೊರತೆ ಉಂಟಾಗದಿರಲು ಬೀನ್ಸ್ ತಿನ್ನಬೇಕು. ಬೀನ್ಸ್ ತಿಂದರೆ ಗ್ಯಾಸ್ ಉತ್ಪತ್ತಿಯಾಗದಿರಲು 8 ಗಂಟೆಗಳ ನೆನೆ ಹಾಕಿ ನಂತರ ಚೆನ್ನಾಗಿ ತೊಳೆದು ತಿನ್ನಿ.

 ಫ್ರೈ ಮಾಡಿದ ಆಹಾರಗಳು

ಫ್ರೈ ಮಾಡಿದ ಆಹಾರಗಳು

ಎಣ್ಣೆಯಲ್ಲಿ ಫ್ರೈ ಮಾಡಿದ ಆಹಾರಗಳನ್ನು ತಿಂದರೆ ಗರ್ಭಿಣಿಯರಲ್ಲಿ ಅಜೀರ್ಣ ಕಾಣಿಸಿಕೊಳ್ಳಬಹುದು. ಅದರಲ್ಲೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ದೂರವಿಡುವುದು ಒಳ್ಳೆಯದು.

ಮೂಲಂಗಿ

ಮೂಲಂಗಿ

ಗರ್ಭಿಣಿ ಮಹಿಳೆಯರಿಗೆ ಸಾಮಾನ್ಯವಾಗಿ ಮೂಲಂಗಿ ತಿಂದರೆ ಗ್ಯಾಸ್ ಸಮಸ್ಯೆ ಉಂಟಾಗಬಹುದು. ಇದನ್ನು ತಿಂದರೆ ಈ ಸಮಸ್ಯೆ ಕಂಡು ಬಂದರೆ ತಿನ್ನದೇ ಇರುವುದು ಒಳ್ಳೆಯದು.

ತಂಪು ಪಾನೀಯಗಳು

ತಂಪು ಪಾನೀಯಗಳು

ತಂಪು ಪಾನೀಯಗಳು ಗರ್ಭಿಣಿಯರಲ್ಲಿ ಮಾತ್ರವಲ್ಲ ಎಲ್ಲರಲ್ಲೂ ಹೊಟ್ಟೆ ಗ್ಯಾಸ್ ಉತ್ಪತ್ತಿ ಮಾಡುತ್ತದೆ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯನ್ನು ಹೆಚ್ಚಾಗಿ ತಿಂದರೆ ಗ್ಯಾಸ್ ಸಮಸ್ಯೆ ಕಂಡು ಬರುತ್ತದೆ. ಆಲೂಗಡ್ಡೆಯನ್ನು ಫ್ರೈ ಮಾಡಿ ತಿನ್ನುವ ಬದಲು ಬೇಯಿಸಿ ತಿಂದರೆ ಒಳ್ಳೆಯದು.

ಚೀಸ್

ಚೀಸ್

ಗರ್ಭಿಣಿ ಮಹಿಳೆಯರು ಚೀಸ್ ತಿನ್ನದಿರುವುದು ಒಳ್ಳೆಯದು. ಇದು ಗ್ಯಾಸ್ ಉತ್ಪತ್ತಿ ಮಾಡುವುದು ಮಾತ್ರವಲ್ಲ, ಇದರಲ್ಲಿರುವ ಬ್ಯಾಕ್ಟೀರಿಯಾಗಳ ಭ್ರೂಣದ ಆರೋಗ್ಯಕ್ಕೆ ಒಳ್ಳೆಯದಲ್ಲ.

 ಜೋಳ

ಜೋಳ

ಕೆಲವರಿಗೆ ಜೋಳ ಬೇಗನೆ ಜೀರ್ಣವಾಗುತ್ತದೆ. ಮತ್ತೆ ಕೆಲವರಿಗೆ ಬೇಗನೆ ಆಗದೆ ಗ್ಯಾಸ್ ಉತ್ಪತ್ತಿ ಮಾಡುತ್ತದೆ. ಜೋಳ ತಿಂದರೆ ಗ್ಯಾಸ್ ಉತ್ಪತ್ತಿ ಮಾಡುವುದಾದರೆ ಅದನ್ನು ತಿನ್ನದಿರುವುದು ಒಳ್ಳೆಯದು.

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿ ಕೂಡ ಕೆಲವು ಗರ್ಭಿಣಿ ಸ್ತ್ರೀಯರಲ್ಲಿ ಗ್ಯಾಸ್ ಉತ್ಪತ್ತಿ ಮಾಡುತ್ತದೆ. ಗ್ಯಾಸ್ ಸಮಸ್ಯೆ ತರುವುದಾದರೆ ಗರ್ಭಾವಸ್ಥೆಯಲ್ಲಿ ಸೌತೆಕಾಯಿ ತಿನ್ನಬೇಡಿ.

English summary

Foods That Cause Gas During Pregnancy | Tips For Pregnancy | ಗರ್ಭಿಣಿಯರಲ್ಲಿ ಗ್ಯಾಸ್ ಉತ್ಪತ್ತಿ ಮಾಡುವ ಆಹಾರಗಳು | ಗರ್ಭಿಣಿಯರಿಗೆ ಕೆಲ ಸಲಹೆಗಳು

This list contains gas causing foods that are not just applicable to pregnant women only but to lactating mothers as well.
X
Desktop Bottom Promotion