For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರ ಯಾವುವು?

By ವಿವೇಕ್
|

ಇತ್ತೀಚಿಗೆ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ತುಂಬಾ ಚಿಕ್ಕ ಪ್ರಾಯದಲ್ಲಿಯೇ ಕಡಿಮೆಯಾಗುತ್ತಿದೆ ಎಂಬ ಅಂಶ ಇದರ ಬಗ್ಗೆ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಅಧಿಕ ಮಾನಸಿಕ ಒತ್ತಡ ಮತ್ತು ಜೀವನ ಶೈಲಿ, ಆಹಾರಕ್ರಮ.

ಪುರುಷತ್ವದ ಶಕ್ತಿ ಕಡಿಮೆಯಾಗದಿರಲು ಜೀವನ ಶೈಲಿಯಲ್ಲಿ ಬದಲಾವಣೆ ತರುವುದು ಅವಶ್ಯಕ. ಯೋಗ, ಧ್ಯಾನ, ವ್ಯಾಯಾಮ ಇವುಗಳಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ಇನ್ನು ಧೂಮಪಾನ ಚಟದಿಂದ ದೂರವಿರುವುದು, ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಇಡದಿರುವುದು ಹಾಗೂ ಉತ್ತಮ ಜೀವನ ಶೈಲಿ ಪಾಲಿಸಿದರೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.

ಸಂತಾನೋತ್ಪತ್ತಿ ಸಾಮರ್ಥ್ಯ ಕಮ್ಮಿಯಾಗದಿರಲು ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಆಹಾರಕ್ರಮ. ಸತುವಿನಂಶವಿರುವ ಆಹಾರವು ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ. ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರಗಳ ಪಟ್ಟಿ ನೋಡಿ ಇಲ್ಲಿದೆ:

ಹರ್ಬ್ಸ್ ಟೀ

ಹರ್ಬ್ಸ್ ಟೀ

Ginseng ಎಂಬ ಗಿಡಮೂಲಿಕೆ ಬಳಸಿ ಮಾಡುವ ಟೀ ಪುರುಷಹಾರ್ಮೋನ್ ಹೆಚ್ಚು ಉತ್ಪತ್ತಿಯಾಗುವಂತೆ ಮಾಡಿ, ಟೆಸ್ಟೋಸ್ಟಿರೋನೆ ಹೆಚ್ಚಿಸುತ್ತದೆ.

 ಗಾರ್ಲಿಕ್ ಚಿಕನ್

ಗಾರ್ಲಿಕ್ ಚಿಕನ್

ಬೆಳ್ಳುಳ್ಳಿ ಹಾಕಿ ಮಾಡುವ ಚಿಕನ್ ಸಾರು ಅಥವಾ ಗ್ರಿಲ್ಡ್ ತಿಂದರೆ ಪುರುಷ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚಾಗುವುದು.

ಮೃದ್ವಂಗಿಗಳು

ಮೃದ್ವಂಗಿಗಳು

ಪುರುಷರ ಹಾರ್ಮೋನ್ ಹೆಚ್ಚಿಸುವಲ್ಲಿ ಮೃದ್ವಂಗಿಗಳು ತುಂಬಾ ಪರಿಣಾಮಕಾರಿಯಾದ ಆಹಾರವಾಗಿದೆ. ಇದನ್ನು ಬಳಸಿ ಮಾಡಿದ ಆಹಾರಗಳನ್ನು ತಿಂದರೆ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು.

ರಾಯತ

ರಾಯತ

ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಲು ವಿಟಮಿನ್ ಬಿ 12 ಅವಶ್ಯಕ. ಇದರ ಕೊರತೆ ಉಂಟಾಗದಿರಲು ರಾಯತ ತಿನ್ನುವುದು ಒಳ್ಳೆಯದು. ಈರುಳ್ಳಿ ಸ್ವಲ್ಪ ಹೆಚ್ಚಾಗಿಯೇ ತಿನ್ನಿ.

 ಬೆರ್ರಿ ಫ್ರೂಟ್ ಸಲಾಡ್

ಬೆರ್ರಿ ಫ್ರೂಟ್ ಸಲಾಡ್

ಬೆರ್ರಿ ಹಣ್ಣುಗಳು ಕೂಡ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ. ಆದ್ದರಿಂದ ಬೇರೆ-ಬೇರೆ ಬೆರ್ರಿಗಳಿಂದ ಸಲಾಡ್ ಮಾಡಿ ತಿನ್ನುವುದು ಒಳ್ಳೆಯದು.

ಖೀಮಾ

ಖೀಮಾ

ಕೆಂಪು ಮಾಂಸದ ಆಹಾರ ತಿಂದರೆ ಅವಶ್ಯಕವಾದ ಅಮೈನೋ ಆಸಿಡ್ ದೊರೆಯುತ್ತದೆ ಇನ್ನು ಲಿವರ್ ತಿಂದರೆ ಕಬ್ಬಿಣದಂಶ ದೊರೆಯುತ್ತದೆ.

ಗಂಜಿ

ಗಂಜಿ

ಬಾದಾಮಿ ಹಾಕಿ ಮಾಡುವ ಗಂಜಿ ಆಹಾರ ಕೂಡ ಪುರುಷರಿಗೆ ಬೆಸ್ಟ್ ಆದ ಆಹಾರವಾಗಿದೆ.

 ಮೀನು

ಮೀನು

ಮೀನಿನಲ್ಲಿರುವ ಒಮೆಗಾ3 ಕೊಬ್ಬಿನಂಶ ಅವಶ್ಯಕವಾದ ಕೊಬ್ಬಿನಂಶವನ್ನು ದೇಹಕ್ಕೆ ಒದಗಿಸಿ, ಶಕ್ತಿಯನ್ನು ತುಂಬುತ್ತದೆ. ಇದರಿಂದ ಲೈಂಗಿಕ ಸಾಮರ್ಥ್ಯ ಕೂಡ ಹೆಚ್ಚಾಗುವುದು.

ಡಾರ್ಕ್ ಚಾಕಲೇಟ್ ಕೇಕ್

ಡಾರ್ಕ್ ಚಾಕಲೇಟ್ ಕೇಕ್

ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಡೆಸರ್ಟ್ ಅಂದರೆ ಡಾರ್ಕ್ ಚಾಕಲೇಟ್.

ಸಿಹಿ ಕುಂಬಳದಿಂದ ಮಾಡಿದ ಆಹಾರಗಳು

ಸಿಹಿ ಕುಂಬಳದಿಂದ ಮಾಡಿದ ಆಹಾರಗಳು

ಸಿಹಿ ಕುಂಬಳದಲ್ಲಿ ಸತುವಿನಂಶ ಅತ್ಯಧಿಕವಾಗಿದೆ. ಇದರಿಂದ ಮಾಡಿದ ಎಲ್ಲಾ ಬಗೆಯ ಆಹಾರಗಳು ಪುರುಷರಿಗೆ ಒಳ್ಳೆಯದು

ಅಣಬೆ

ಅಣಬೆ

ಅಣಬೆಯಿಂದ ಮಾಡಿದ ಎಲ್ಲಾ ಬಗೆಯ ಖಾದ್ಯಗಳು ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವಂತೆ ಮಾಡುತ್ತದೆ.

English summary

Fertility Recipes For Men's Sperm Count

These fertility recipes for men include ingredients that can increase sperm count and male hormone levels. These fertility foods boost a man's chances of producing sufficient number of healthy sperms.
X
Desktop Bottom Promotion