For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಕಾಡುವ ತಲೆನೋವಿಗೆ ಕಾರಣಗಳು

|

ಗರ್ಭಾವಸ್ಥೆಯಲ್ಲಿ ಒಂದಲ್ಲಾ, ಒಂದು ಸಮಸ್ಯೆ ಕಂಡು ಬರುತ್ತದೆ, ಅದರಲ್ಲೊಂದು ತಲೆನೋವು. ತಲೆನೋವು ಬಂತೆಂದು ಮಾತ್ರೆ ನುಂಗಲು ಸಾಧ್ಯವಿಲ್ಲ, ಅದು ನಿಮಜ್ಮ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆದರೆ ತಲೆನೋವಿಗೆ ಕಾರಣಗಳನ್ನು ತಿಳಿದುಕೊಂಡರೆ ತಲೆನೋವನ್ನು ತಡೆಗಟ್ಟಬಹುದು.

ಗರ್ಭಿಣಿಯರಿಗೆ ಕಾಡುವ ತಲೆನೋವಿಗೆ ಕಾರಣಗಳು:

Causes n Cures Of Pregnancy Headaches

ಒತ್ತಡ
ತುಂಬಾ ಮಾನಸಿಕ ಒತ್ತಡದಿಂದ ತಲೆನೋವು ಕಂಡು ಬರುವುದು, ಅದರಲ್ಲು ಮೊದಲ 3 ತಿಂಗಳು ತುಂಬಾ ಗರ್ಭಿಣಿಯರು ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಈ ಸಮಯದಲ್ಲಿ ಒತ್ತಡವನ್ನು ಬದಿಗೊತ್ತಿ ನಿರಾಳವಾಗಿರಲು ಪ್ರಯತ್ನಿಸಿ.

ಹಾರ್ಮೋನ್ ಗಳ ಬದಲಾವಣೆ
ಹಾರ್ಮೋನ್ ಗಳ ಬದಲಾವಣೆಯಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಶುದ್ಧ ಗಾಳಿ ಇರುವ ನಡೆದಾಡಿ, ಚಾಕಲೇಟ್ ತಿನ್ನಿ ತಲೆನೋವು ಕಡಿಮೆಯಾಗುವುದು.

ಬ್ಲಡ್ ಶುಗರ್
ಮಧ್ಯಾಹ್ನದ ನಂತರ ತಲೆನೋವು ಕಾಣಿಸಿಕೊಂಡರೆ ಅದು ರಕ್ತದಲ್ಲಿ ಸಕ್ಕರೆಯಂಶದ ವ್ಯತ್ಯಾಸದಿಂದ ಇರಬಹುದು. ಈ ರೀತಿ ವೈದ್ಯರು ಕಂಡು ಬ್ಲಡ್ ಶುಗರ್ ಟೆಸ್ಟ್ ಮಾಡಿಸಿ, ದೇಹದಲ್ಲಿ ಸಕ್ಕರೆಯಂಶವನ್ನು ಸಮತೋಲನದಲ್ಲಿಡವ ಆಹಾರ ತಿನ್ನಿ.

ತುಂಬಾ ಕೆಫೀನ್ ನಿಂದ
ಗರ್ಭಿಣಿಯರು ಆದಷ್ಟು ಕೆಫೀನ್ ಆಹಾರಗಳಿಂದ ದೂರವಿರಬೇಕು. ಕಾಫಿ, ಟೀಯನ್ನು ಕುಡಿಯುವುದು ಕಮ್ಮಿ ಮಾಡಿ.

ಶಬ್ದ ಮಾಲಿನ್ಯ
ಜೋರಾದ ಶಬ್ದ ಕಿವಿಗೆ ಬೀಳುವುದರಿಂದ, ಟ್ರಾಫಿಕ್ ಮುಂತಾದ ಶಬ್ದ ಮಾಲಿನ್ಯದಿಂದ ತಲೆನೋವು ಕಾಣಿಸಿಕೊಳ್ಳುವುದು. ಮನೆಯಲ್ಲಿದ್ದಾಗ ತುಂಬಾ ಜೋರು ಶಬ್ದದಲ್ಲಿ ಟಿವಿ ನೋಡುವುದು, ಹಾಡು ಕೇಳುವುದು ಮಾಡಬೇಡಿ. ಮನಸ್ಸಿಗೆ ಮುದ ನೀಡುವ ಮ್ಯೂಸಿಕ್ ಕೇಳಿ.

English summary

Causes n Cures Of Pregnancy Headaches | Tips For Pregnancy

The worst thing about pregnancy headaches is that you can't just pop a pill to get some relief. However, if you know the causes of headache during pregnancy, you can surely avoid the trouble. Here are some of the main causes of headaches during pregnancy that you should know.
Story first published: Monday, May 27, 2013, 17:31 [IST]
X
Desktop Bottom Promotion