For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ರಕ್ತಸ್ರಾವ ಮತ್ತು ಅದರ ಲಕ್ಷಣಗಳು

By Super
|

ಪ್ರತಿಯೊಬ್ಬ ಮಹಿಳೆಯು ಎಲ್ಲ ರೀತಿಯ ರಕ್ತ ಸ್ರಾವವನ್ನು ಗಂಭೀರ ಎಂದು ಪರಿಗಣಿಸಿ ಅದನ್ನು ತಪಾಸಣೆಗೆ ಒಳಪಡಿಸಬೇಕು. ರಕ್ತ ಸ್ರಾವ ಎಂಬುದು ಮಹಿಳೆಯರ ಜೀವನದಲ್ಲಿ ಬಹು ಸಾಮಾನ್ಯವಾದ ಸಂಗತಿಯಾಗಿದೆ. ಅದರಲ್ಲೂ ಗರ್ಭಿಣೆಯರಾದಾಗ ಅವರಲ್ಲಿ ಸ್ವಲ್ಪ ಮಟ್ಟಿಗಿನ ರಕ್ತ ಸ್ರಾವ ಕಂಡು ಬರುತ್ತದೆ. ಇದು ಸಾಮಾನ್ಯವು ಕೂಡ. ಹತ್ತರಲ್ಲಿ ಒಬ್ಬ ಮಹಿಳೆಗೆ ಪೂರ್ತಿ ಒಂಭತ್ತು ತಿಂಗಳು ಇದರ ಅನುಭವವಾಗಿರುತ್ತದೆ. ಆದರೆ ಒಂದು ವಿಷಯವನ್ನು ನೆನಪಿನಲ್ಲಿಡಿ. ಎಲ್ಲ ರೀತಿಯ ರಕ್ತ ಸ್ರಾವವು ಗರ್ಭಪಾತಕ್ಕೆ ಕಾರಣವಾಗುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಈ ರಕ್ತ ಸ್ರಾವವನ್ನು ನಿರ್ಲಕ್ಷಿಸಬಾರದು.

ನಿಮಗೆ ಇಂತಹ ಸಾಮಾನ್ಯ ತೊಂದರೆಗಳು ಕಂಡು ಬಂದಲ್ಲಿ, ನೀವು ನಿಮ್ಮನ್ನು ನೋಡಿಕೊಳ್ಳುತ್ತಿರುವ ವೈದ್ಯರನ್ನು ತಕ್ಷಣ ಸಂಪರ್ಕಿಸಿ. ಇಂತಹ ಚಿಕ್ಕ ವಿಷಯಕ್ಕೆ ಆತಂಕ ಪಡುವ ಅವಶ್ಯಕತೆ ಇಲ್ಲದಿದ್ದರೂ ಸಹ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಇದರಿಂದ ನಿಮಗೂ ಮತ್ತು ನಿಮ್ಮ ಗರ್ಭದಲ್ಲಿರುವ ಮಗುವಿಗೂ ತುಂಬಾ ಒಳ್ಳೆಯದಾಗುತ್ತದೆ.

Bleeding and discharge during pregnancy

ನೀವು ನಿಮ್ಮ ಆರೋಗ್ಯದ ಕುರಿತು ಹೆಚ್ಚು ಆತಂಕಕ್ಕೆ ಒಳಗಾಗಬೇಡಿ. ಕೆಲವು ಸರಳ ಸೋಂಕುಗಳಾದ ಬಿವಿ ಅಥವಾ ತ್ರಷಗಳಿಂದ ದೂರವಿರಿ. ಇವುಗಳನ್ನು ಸುಲಭವಾಗಿ ನಿವಾರಿಸಬಹುದು. ಆದರೆ ಇದನ್ನು ಗುರುತಿಸದೇ ಹೋದರೆ ಪೂರ್ವ ಪ್ರಸವದ ಅಪಾಯವು ಉಂಟಾಗಬಹುದು. ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಲೋಳೆಯ ಪದರವು ಇನ್ನೂ ಹೆಚ್ಚು ನಯವಾಗುತ್ತದೆ. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ರಕ್ತದ ಚಲನೆ ಪ್ರಮಾಣವು ಸುಲಭವಾಗಿ ಹೆಚ್ಚುತ್ತದೆ. ಆದರೆ ಇದು ವಾಸನೆಯಿಂದ ಕೂಡಿದ್ದರೆ, ಕಿರಿ ಕಿರಿಯನ್ನು ಉಂಟುಮಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ನೀವು ನಿಮ್ಮಲ್ಲಿ ರಕ್ತ ಸ್ರಾವವಾಗುವುದನ್ನು ಗಮನಿಸಿದರೆ ಭಯ ಪಡಬೇಡಿ. ಆತಂಕಕ್ಕೆ ಒಳಗಾಗಬೇಡಿ. ತಾಳ್ಮೆಯಿಂದ ಇದ್ದು, ಏನಾಗುತ್ತಿದೆ? ಎಂದು ತಿಳಿದುಕೊಳ್ಳಿ. ನಿಮಗೆ ಹೆಚ್ಚು ನೋವು ಉಂಟಾಗುತ್ತಿದೇಯೇ? ಅವಶ್ಯಕತೆಗಿಂತ ಹೆಚ್ಚು ರಕ್ತ ಅಲ್ಲಿ ಕಂಡು ಬರುತ್ತಿದೆಯೇ? ಎಂದು ಪರೀಕ್ಷಿಸಿ. ನಂತರ ನಿಮ್ಮ ವ್ಯದ್ಯರನ್ನು ಅಥವಾ ಶುಶ್ರೂಷಕಿಯನ್ನು ಭೇಟಿಯಾಗಿ ಈ ರಕ್ತ ಸ್ರಾವದ ಕುರಿತು ಸವಿವರವನ್ನು ನೀಡಿ. ಇದು ಅವರಿಗೆ ಸಮಸ್ಯೆಯ ಕುರಿತು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಇದರ ಲಕ್ಷಣಗಳು ಯಾವುವು?

ನಿಮ್ಮ ರಕ್ತವನ್ನು ಪರೀಕ್ಷಿಸಿ. ಅದರ ಬಣ್ಣ, ಸ್ಥಿರತೆ ಮತ್ತು ಹರಿವಿನ ಪ್ರಮಾಣವನ್ನು ಗಮನಿಸಿ. ನಿಮಗೆ ಅವಶ್ಯಕತೆ ಎನಿಸಿದ್ದಲ್ಲಿ ಸೂಚನೆಗಳನ್ನು ಹಾಳೆಯಲ್ಲಿ ಬರೆದಿಟ್ಟುಕೊಂಡು ನಿಮ್ಮ ವೈದ್ಯರಿಗೆ ಅಥವಾ ಶುಶ್ರೂಷಕಿಗೆ ನೀಡಿ. ಇದು ತುಂಬಾ ನೋವಿನಿಂದ ಕೂಡಿದ್ದರೆ, ನಿಮಗೆ ದೂರವಾಣಿಯಲ್ಲಿಯೇ ವೈದ್ಯರಿಂದ ಸಹಾಯ ಪಡೆಯಲು ಸಾಧ್ಯವಾಗುವುದಿಲ್ಲ ಎಂದರೆ ನೇರವಾಗಿ ಎ+ಇ ಯನ್ನು ತಪಾಸಣೆ ಮಾಡಲು ಆಸ್ಪತ್ರೆಗೆ ಹೋಗಿ.

- ತೆಳು ಗುಲಾಬಿ/ ಕೆಂಪು ಅಥವಾ ಕಂದು ಬಣ್ಣದ ರಕ್ತ ಸ್ರಾ

- ನೋವಿನಿಂದ ಕೂಡಿದ ಮುಟ್ಟಿನ ದಿನಗಳು

- ತೀವೃವಾದ ಹೊಟ್ಟೆ ನೋವು (ಹೊಟ್ಟೆಯ ಒಂದು ಭಾಗದ ಕಡೆ ಇರುವಂತಹದ್ದು)

- ತುಂಬಾ ಗಾಢವಾದ ಕೆಂಪು ಬಣ್ಣದ ರಕ್ತ ಸ್ರಾವ

- ದಟ್ಟ, ಗಾಢವಾದ ಹೆಪ್ಪುಗಟ್ಟಿದ ರಕ್ತ

- ರಕ್ತ ಸ್ರಾವವು ಪದೇ ಪದೇ ಸಂಭವಿಸುತ್ತಿದ್ದರೇ

ಇದು ಯಾರಿಗೆ ಸಂಭವಿಸುತ್ತದೆ?

ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬ ಮಹಿಳೆಗೆ ತಮ್ಮ ಆರಂಭಿಕ ಗರ್ಭಾವಸ್ಥೆಯಲ್ಲಿ ರಕ್ತಸ್ರಾವದ ಅನುಭವವಾಗುತ್ತದೆ. ಪ್ರತಿ ಹತ್ತು ಮಹಿಳೆಯರಲ್ಲಿ ಒಬ್ಬ ಮಹಿಳೆಗೆ ಯಾವುದೇ ಸಮಯದಲ್ಲಿ ಇದರ ಅನುಭವ ಉಂಟಾಗುತ್ತದೆ.

ಇದಕ್ಕೆ ಕಾರಣಗಳೇನು?

ಗರ್ಭಾಶಯದ ಕುತ್ತಿಗೆಯ ಮೇಲೆ ಆಗುವ ಕೆಲವು ನಿರುಪದ್ರವ ಬದಲಾವಣೆಗಳ ಕಾರಣದಿಂದಾಗಿ ಲೋಳೆಯ ಪದರದಲ್ಲಿ ಸ್ವಲ್ಪ ತೊಂದರೆ ಕಾಣಿಸುಕೊಂಡು ಸ್ವಲ್ಪಮಟ್ಟಿಗಿನ ರಕ್ತ ಸ್ರಾವ ಉಂಟಾಗಬಹುದು. ಈ ರಕ್ತವು ತೆಳುವಾಗಿದ್ದು, ಸಾಮಾನ್ಯವಾಗಿ ಲೋಳೆಯ ಮಿಶ್ರಣವನ್ನು ಹೊಂದಿರುತ್ತದೆ.

ಕೆಲವು ಮಹಿಳೆಯರು ತಮ್ಮ ಗರ್ಭಾವಸ್ಥೆಯ ಉದ್ದಕ್ಕೂ ಮಾಸಿಕ ರಕ್ತ ಸ್ರಾವದ ಅನುಭವವನ್ನು ಪಡೆಯುತ್ತಾರೆ. ನಿಮ್ಮ ಜಿಪಿಯನ್ನು ಪರೀಕ್ಷಿಸುತ್ತಿರಬೇಕು. ಇದರಿಂದ ಮಗುವಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಎಗ್ ಇಂಪ್ಲಾಂಟಿಂಗ್

ನೀವು ಮೊದಲ ಬಾರಿಗೆ ನಿಮ್ಮ ರಕ್ತ ಸ್ರಾವವನ್ನು ತಪ್ಪಿಸಿಕೊಂಡಲ್ಲಿ ಆ ಸಮಯದಲ್ಲಿ ಸ್ವಲ್ಪ ಮಟ್ಟಿಗಿನ ರಕ್ತ ಸ್ರಾವವಾಗುತ್ತಿರುವುದನ್ನು ನೀವು ಗಮನಿಸಿರಬಹುದು. ನಿಮ್ಮ ಗರ್ಭದ ಒಳಪದರದಲ್ಲಿ ಎಗ್ ಇಂಪ್ಲಾಂಟಿಂಗ್ ನಡೆಯುತ್ತಿರುವ ಕಾರಣದಿಂದ ಈ ಸ್ವಲ್ಪ ಮಟ್ಟಿಗಿನ ರಕ್ತ ಸ್ರಾವವು ಸಂಭವಿಸುತ್ತಿರಬಹುದು.

ಗರ್ಭ ಕಂಠದ ಸೋಂಕು

ಗರ್ಭಿಣಿ ಆಗುವ ಮುನ್ನ ಈ ರಕ್ತ ಸ್ರಾವದ ಅನುಭವ ನಿಮಗೆ ಆಗಿರಬಹುದು. ಆ ರೀತಿ ಕಂಡು ಬಂದರೆ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು.

ಕೆಲವು ಸಲ ಲೈಂಗಿಕ ಕ್ರಿಯೆಯು ಗರ್ಭಕಂಠಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ. ಇದರಿಂದ ಗರ್ಭದ ಒಳಪದರದಲ್ಲಿ ಸ್ವಲ್ಪ ಮಟ್ಟಿಗಿನ ರಕ್ತ ಸ್ರಾವ ಉಂಟಾಗುತ್ತದೆ. ಈ ತರಹದ ರಕ್ತ ಸ್ರಾವವು ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ನಂತರ ಸಂಭವಿಸುತ್ತದೆ. ನಂತರ ಇದು ಕೆಲವೇ ಸಮಯದಲ್ಲಿ ನಿಂತು ಬಿಡುತ್ತದೆ.

ಲೋಳೆಯ ಪ್ಲಗ್

ನೀವು ಶ್ರಮದ ಕೆಲಸವನ್ನು ಮಾಡಿದಾಗ ಲೋಳೆಯ ಪ್ಲಗ್ ಹೊರಬರುತ್ತದೆ. ಇದು ಇಲ್ಲಿಯವರೆಗೂ ನಿಮ್ಮ ಗರ್ಭ ಕಂಠದಲ್ಲಿರುತ್ತದೆ. ಕೆಲವು ಸಲ ಇದು ನಿಮಗೆ ನೀವು ನಿರೀಕ್ಷಿಸದೇ ಇರುವ ಸಮಯದಲ್ಲಿ ಸಂಭವಿಸಿ ಎಚ್ಚರಿಕೆಯನ್ನು ನೀಡುತ್ತದೆ. ನೀವು ಕೆಲವು ಸಲ ಹೆಚ್ಚು ಪರಿಶ್ರಮವನ್ನು ಮಾಡದೇ ಇರುವ ಸಮಯದಲ್ಲೂ ಇದು ಸಂಭವಿಸಬಹುದು.

ಪ್ಲಸೆಂಟಲ್ ಶೀಘ್ರ ಮುರಿಯುವಿಕೆ

ನಿಮ್ಮ ಗರ್ಭಾಶಯದ ಒಳಪದರದಿಂದ ಪ್ಲಾಸೆಂಟಾದ ಭಾಗಶಃ ಭಾಗವು ಹೊರ ಬರುವ ಸನ್ನಿವೇಶ ಇದಾಗಿದೆ.

ಪ್ಲಾಸೆಂಟ ಪ್ರಾವಿಯ

ಈ ಸನ್ನಿವೇಶದಲ್ಲಿ ಪ್ಲಾಸೆಂಟಾವು ನಿಮ್ಮ ಗರ್ಭದಲ್ಲಿ ಕಡಿಮೆ ಇದ್ದು, ಅದು ಗರ್ಭಕಂಠದ ಮೇಲೆ ಅಥವಾ ಹತ್ತಿರದಲ್ಲಿರುತ್ತದೆ. ಈ ಸಮಯದಲ್ಲಿ ನೀವು ಸಿಸೇರಿಯನ್ ಹೆರಿಗೆಗೆ ಒಳಗಾಗುವುದು ಒಳ್ಳೆಯದು.

ಅಪಸ್ಥಾನೀಯ ಗರ್ಭಾವಸ್ಥೆ

ಗರ್ಭಾಶಯದ ಹೊರಗಡೆ ಎಗ್ ಇಂಪ್ಲಾಂಟ್ ಆದಾಗ ಡಿಂಬನಾಳದಲ್ಲಿ ಇದು ಸಂಭವಿಸುತ್ತದೆ. ಈ ಸಮಯದಲ್ಲಿ ನಿಮಗೆ ಸ್ವಲ್ಪ ಮಟ್ಟಿಗಿನ ರಕ್ತ ಸ್ರಾವ ಉಂಟಾಗಬಹುದು. ಆದರೆ ತೀವೃವಾದ ಕಿಬ್ಬೊಟ್ಟೆ ನೋವು ನಿಮ್ಮನ್ನು ಕಾಡುತ್ತಿರುತ್ತದೆ. ಇದು ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿದ್ದು, ತಕ್ಷಣವೇ ಇದರ ಚಿಕಿತ್ಸೆಯ ಕಡೆಗೆ ಗಮನವನ್ನು ಹರಿಸಿ.

ಗರ್ಭಪಾತ

ಕೆಲವು ಸಲ ರಕ್ತದ ಗುರುತು ಸಹ ಗರ್ಭಪಾತದ ಸೂಚನೆಯಾಗಿರಬಹುದು. ಆದರೆ ಗರ್ಭ ಧರಿಸಿದ ಮೂರನೇ ತಿಂಗಳಿನ ನಂತರ ಇದರ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.

English summary

Bleeding and discharge during pregnancy

Although all bleeding should be investigated as it may be serious, some light bleeding during pregnancy is very common - up to one in ten women will experience it at some time over the full nine months. Not all bleeding will lead to miscarriage but it should never be ignored.
X
Desktop Bottom Promotion