For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ನೀಡಿ ಭಾವನಾತ್ಮಕ ಬೆಂಬಲ

By Poornima Hegde
|

ಸಂಬಂಧಗಳೆಂದರೇ ಹಾಗೇ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಅವರ ನೋವುಗಳನ್ನು ಅರಿತು ಅದಕ್ಕೆ ಸರಿಯಾಗಿ ಸ್ಪಂದಿಸಬೇಕು. ಅದರಲ್ಲೂ ಗಂಡ ಹೆಂಡತಿಯರ ಸಂಬಂಧದಲ್ಲಿ ಇಬ್ಬರೂ ಸಮಾನವಾಗಿ ಎಲ್ಲಾ ವಿಷಯಗಳಲ್ಲೂ ಜವಾಬ್ದಾರಿ ನಿಭಾಯಿಸಬೇಕು. ಆದರೆ ಇಂತಹ ನಂಬಿಕೆ ಅಥವಾ ಅರ್ಥ ಮಾಡಿಕೊಂಡು ಸಂಗಾತಿ ನಿರೀಕ್ಷೆಯನ್ನು ಸಾಕಾರಗೊಳಿಸುವ ಪಾಲು ಸ್ತ್ರೀಯದ್ದು ಮಾತ್ರ. ಆದಾಗ್ಯೂ ಗಂಡಂದಿರಾಗಿ ಆಕೆ ಗರ್ಭಧಾರಣೆಯ ಸಂದರ್ಭದಲ್ಲಿಯಾದರೂ ನೀವು ಅವರ ಜೊತೆಯಾಗಿರುವುದು ಬಹಳ ಅಗತ್ಯ. ನಿಮ್ಮ ಸಂಬಂಧದ ಬಹುಮುಖ್ಯ ಹಂತವಾದ ಆಕೆಯ ಗರ್ಭಾವಸ್ಥೆ, ಆಕೆಯೊಬ್ಬಳೇ ಹೊರಬೇಕಾದ ಭಾರ. ಅದರ ಆರೈಕೆ ಮಾಡಬೇಕಾದದ್ದು ಆಕೆಯದ್ದೇ ಜವಾಬ್ದಾರಿ. ಆದ್ದರಿಂದ ಅವಳಿಗೆ ಈ ಭಾರವನ್ನು, ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಭಾವನಾತ್ಮಕ ಬೆಂಬಲ ಅತ್ಯಂತ ಅಗತ್ಯ.

ನಿಮ್ಮವಳ ಬಾಳ ಸಂಗಾತಿಯಾಗಿ ಆಕೆಯ ಹೆರಿಗೆಯವರೆಗೆ ನಿಮ್ಮ ಸಂಪೂರ್ಣ ಬೆಂಬಲ, ಸಹಕಾರ ಆಕೆಗೆ ದೊರೆತರೆ ನಿಶ್ವಿಂತೆಯಾಗಿ ಆಕೆ ಮಗುವಿಗೆ ಜನ್ಮ ನೀಡಬಲ್ಲಳು! ಈ ರೀತಿ ನೀವು ಈ ಸಂದರ್ಭದಲ್ಲಿ ಆಕೆಗೆ ಬೆನ್ನೆಲುಬಾಗಿ ನಿಂತರೆ ನಿಮ್ಮ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿ ಬೆಸೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಅದರ ಜೊತೆಯಲ್ಲಿಯೇ ಆಕೆಯ ಹೊಟ್ಟೆಯಲ್ಲಿರುವ ಮಗು ಆರೋಗ್ಯಕರವಾಗಿಯೂ ಸಹ ಬೆಳೆಯಬಹುದು. ಗರ್ಭಾವಸ್ಥೆಯ ಸಮಯದಲ್ಲಿ ಆಕೆಯಲ್ಲಿ ಆಗಾಗ ಕಂಡುಬರುವ ಹಾರ್ಮೋನ್ ಬದಲಾವಣೆಗಳು ನಿಮ್ಮ ಬೆಂಬಲ ಪ್ರೀತಿಯಿಂದ ಆಕೆಯ ಮೇಲೆ ಹೆಚ್ಚು ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬಹುದು. ಅದರಲ್ಲೂ ಗರ್ಭಾವಸ್ಥೆಯಲ್ಲಿರುವ ಸ್ತ್ರೀ ಯಾವುದೇ ಮಾನಸಿಕ ಒತ್ತಡಗಳಿಲ್ಲದೇ ಇದ್ದಾಗ ಮಾತ್ರ ಮಗುವಿನ ಸರಿಯಾದ ಬೆಳವಣಿಗೆ ಆಗಲು ಸಾಧ್ಯ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದೇ ನೀವು ಅವರಿಗೆ ನೀಡುವ ಮಾನಸಿಕ ಶಕ್ತಿ!

Be An Emotional Support During Pregnancy
1. ಸಂವಹನ
ನಿಮ್ಮ ಸಂಗಾತಿಯ ಗರ್ಭಧಾರಣೆಯ ಸಮಯದಲ್ಲಿ ಅವರಿಗೆ ಭಾವನಾತ್ಮಕ ಬೆಂಬಲವನ್ನು ನೀಡಲು ನೀವು ಅವರೊಂದಿಗೆ ಸಂವಹನವನ್ನು ಮಾಡಬೇಕು. ಗರ್ಭಧರಿಸಿದಾಗಿನಿಂದ ಹೆರಿಗೆಯವರೆಗೆ ಸಾಕಷ್ಟು ನೋವನ್ನು ಆಕೆ ಅನುಭವಿಸಬಹುದು. ಅಥವಾ ಆಕೆಯಲ್ಲಿ ನಿಮ್ಮೊಂದಿಗೆ ಹೇಳಿಕೊಳ್ಳಬೇಕಾದಂತಹ ಮಾತುಗಳಿರಬಹುದು. ಆದ್ದರಿಂದ ಈ ಸಮಯದಲ್ಲಿ ಅವರ ಮಾತುಗಳಿಗೆ ನೀವು ಕಿವಿಯಾಗಬೇಕು. ಅವರ ಸಣ್ಣ ಪುಟ್ಟ ಭಾವನೆಗಳಿಗೂ ಕೂಡ ನೀವು ಪ್ರಾಮುಖ್ಯತೆ ನೀಡಬೇಕು.

2. ಮಗುವಿನೊಂದಿಗೆ ಮಾತು
ಇದು ತಮಾಷೆಯೆನಿಸಿದರೂ ಆಕೆಯ ಹೊಟ್ಟೆಯಲ್ಲಿರುವ ಮಗು ಆಗಾಗ ಮಾಡುವ ಚಟುವಟಿಕೆಯನ್ನು ನೀವು ಕಿವಿಯಿಟ್ಟು ಆಲಿಸಿದರೆ ನಿಮ್ಮ ಸಂಗಾತಿಗೆ ಹಾಗೂ ಭ್ರೂಣಾವಸ್ಥೆಯಲ್ಲಿರುವ ಮಗುವಿಗೆ ಪರೋಕ್ಷವಾಗಿ ಧನಾತ್ಮಕ ಬದಲಾವಣೆಗಳುಂಟಾಗುತ್ತವೆ. ಇದು ಹುಟ್ಟಲಿರುವ ಮಗುವಿನ ಬಗ್ಗೆ ಹಾಗೂ ನಿಮ್ಮ ಸಂಗಾತಿಯ ಬಗ್ಗೆ ನಿಮಗಿರುವ ಕಾಳಜಿಯನ್ನು ತೋರಿಸುತ್ತದೆ. ಜೊತೆಗೆ ನಿಮ್ಮ ಜವಾಬ್ದಾರಿಯನ್ನು ಸೂಚಿಸುತ್ತದೆ.

3. ನಿರಂತರ ಭರವಸೆ
ಮಗು ಹುಟ್ಟುವ ಬಗ್ಗೆ ತಾಯಂದಿರಲ್ಲಿ ಸಾಕಷ್ಟು ಗೊಂದಲ ಹಾಗೂ ಗಾಬರಿಗಳಿರುತ್ತವೆ. ಆದರೆ ನೀವು ಅವಳಿಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬ ಭರವಸೆಯನ್ನು ನೀಡಬೇಕು. ಇದರಿಂದ ಆಕೆಯ ಮನಸ್ಸಿಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ. ನೀವು ಆಕೆಯನ್ನು ಸಂತೋಷಗೊಳಿಸಲು ಆಡುವ ಮಾತುಗಳಿಗಿಂತ ನೀವು ನೀಡುವ ಭರವಸೆ ಆಕೆಗೆ ಇನ್ನಷ್ಟು ಶಕ್ತಿಯನ್ನು, ಮಾನಸಿಕ ಸ್ಥೈರ್ಯವನ್ನು ತುಂಬಬಹುದು.

4. ಒಟ್ಟಿಗೆ ಹೆಚ್ಚು ಸಮಯವನ್ನು ಕಳೆಯಿರಿ
ಬರಿ ದಿನಗಳಲ್ಲಿ ನೀವು ನಿಮ್ಮ ಸ್ನೇಹಿತರೊಂದಿಗೆ ಸಮಯವನ್ನು ಕಳೆದರೆ ನಿಮ್ಮ ಹೆಂಡತಿ ಅದನ್ನು ಒಪ್ಪಬಹುದು. ಆದರೆ ಆಕೆ ಗರ್ಭಿಣಿಯಾಗಿದ್ದಾಗ ನೀವು ಅವರೊಂದಿಗೇ ಹೆಚ್ಚು ಸಮಯವನ್ನು ಕಳೆಯುವುದು ಅತ್ಯಂತ ಅಗತ್ಯ! ಇದು ಉಳಿದ ಸಮಯಗಳಿಗಿಂತ ವಿಭಿನ್ನಬಾಗಿರುವುದರಿಂದ ನಿಮ್ಮ ಸನಿಹ ಅವರಿಗೆ ಧೈರ್ಯವನ್ನು ನೀಡುತ್ತದೆ. ಅವರೊಂದಿಗೆ ಟಿವಿ ನೋಡುತ್ತ ಅವರ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳನ್ನು ತುಂಬುತ್ತ ನಿಮ್ಮ ಮುಂಬರುವ ಮುದ್ದು ಮಗುವಿಗೆ ಜವಾಬ್ದಾರಿಯುತ ತಂದೆಯಾಗಲು ಸಿದ್ಧತೆ ನಡೆಸಿ!

5. ಸೂಕ್ಷ್ಮ ಮತ್ತು ಶಾಂತರಾಗಿರಿ

6. ನಿಮ್ಮ ಸಂಗಾತಿ ಗರ್ಭಿಣಿಯಾದಾಗ ಅವಳ ಮನಸ್ಥಿತಿ ಉಳಿದ ದಿನಗಳಿಗಿಂತ ಸಾಕಷ್ಟು ವಿಭಿನ್ನವಾಗಿರುತ್ತದೆ. ನೀವು ಹೇಳುವ ಮಾತಿಗೆ ಉಳಿದ ದಿನಗಳಲ್ಲಿ ನೀಡುವ ಪ್ರತಿಕ್ರಿಯೆಗಳಿಗಿಂತ ಈಗ ಬೇರೆಯೇ ಆಗಿರಬಹುದು. ಈ ಸಮಯದಲ್ಲಿ ಅವರ ಭಾವನೆಗಳು ಎಷ್ಟು ಬಲವಾಗಿರುತ್ತದೆ ಹಾಗೂ ಅವರು ವಿಷಯವನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು ಎಂದು ಹೇಳುವುದು ಕಷ್ಟ. ಆದ್ದರಿಂದ ನೀವು ಈ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಶಾಂತ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.

ನಿಮ್ಮ ಮುದ್ದಾದ ಮಗುವಿಗೆ ಜನ್ಮ ನೀಡಲು ಹೊರಟಿರುವ ನಿಮ್ಮ ಪ್ರೀತಿಯ ಸಂಗಾತಿಗೆ ನೀವೇ ಭರವಸೆ, ಸ್ಫೂರ್ತಿಯಾಗಿ, ಆಕೆಯ ಧನಾತ್ಮಕ ಚಿಂತನೆಗೆ ಸಹಕಾರ ನೀಡಿ. ಇದು ಪ್ರತಿಯೊಬ್ಬ ಗಂಡಂದಿರ ಕರ್ತವ್ಯ!

English summary

Be An Emotional Support During Pregnancy

Knowing what to expect when you are expecting is not confined to just the female partner in a relationship. As a man, you have to step up and stand up to the occasion by being supportive during the pregnancy phase.
Story first published: Wednesday, December 11, 2013, 9:50 [IST]
X
Desktop Bottom Promotion