For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ, ಈ ಆಹಾರಗಳನ್ನು ತಿನ್ನಬೇಡಿ!

By Super
|

ಗರ್ಭಿಣಿಯಾದಾಗ ಈ ಐದು ಬಗೆಯ ಆಹಾರವನ್ನು ಮುಟ್ಟಲೇಬೇಡಿ. ತಾಯಿಯಾಗುವವರು ಪೋಷಕಾಂಶವಿರುವ ಆಹಾರವನ್ನು ಹೆಚ್ಚಾಗಿ ತಿನ್ನಿ. ಇದರ ಜೊತೆಗೆ ನಿಮಗೆಸರಿಹೊಂದುವ ಆರೋಗ್ಯಕಾರಿ ಪಥ್ಯವನ್ನು ಪಾಲಿಸಿ ಹಾಗೂ ಈ ಆಹಾರಗಳನ್ನು ಸೇವಿಸುವುದರಿಂದ ದೂರವಿದ್ದರೆ ಒಳ್ಳೆಯದು.

ಅಹಿತವನ್ನುಂಟು ಮಾಡುವ ಆಹಾರಗಳು ಅಪಾಯಕಾರಿಯಷ್ಟೇ ಅಲ್ಲದೆ ಗರ್ಭಪಾತವನ್ನು ಸಹ ಉಂಟು ಮಾಡುತ್ತವೆ. ಇಲ್ಲಿ ನಿಮಗಾಗಿ ಕೆಲವು ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದ್ದೇವೆ. ಅದನ್ನು ಸೇವಿಸುವುದನ್ನು ಮೊದಲು ಬಿಡಿ.

1. ಸಮುದ್ರ ಜನ್ಯ ಆಹಾರಗಳು

1. ಸಮುದ್ರ ಜನ್ಯ ಆಹಾರಗಳು

ಸಮುದ್ರ ಜನ್ಯ ಆಹಾರಗಳಲ್ಲಿ ಒಮೆಗಾ- 3 ಕೊಬ್ಬಿನ ಆಮ್ಲಗಳು ಇರುತ್ತವೆ. ಇವು ಮಗುವಿನ ಆರೋಗ್ಯಕ್ಕೆ ಉಪಯೋಗಕಾರಿ. ಆದರೂ ಸಹ ಇವುಗಳಲ್ಲಿ ಅತಿಯಾದ ಪಾದರಸ ಇರುವ ಕಾರಣ ಇದನ್ನು ಸೇವಿಸುವುದನ್ನು ನಿಯಂತ್ರಿಸಿ. ಏಕೆಂದರೆ ಈ ಪಾದರಸವು ನಿಮ್ಮ ಮಗುವಿನ ಮೆದುಳಿನ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡಿ, ಅದಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ಸಾಲ್ಮನ್, ಏಡಿ, ಶಾರ್ಕ್ ಮಾಂಸವನ್ನು ಸೇವಿಸುವುದನ್ನು ನಿಯಂತ್ರಿಸಿ. ಸಾಮಾನ್ಯವಾಗಿ ಈ ಬಗೆಯ ಮೀನು ಮತ್ತು ಸಮುದ್ರ ಜನ್ಯ ಆಹಾರಗಳಲ್ಲಿ ಪಾದರಸವು ಇರುತ್ತದೆ.

2. ಕಚ್ಚಾ ಆಹಾರ

2. ಕಚ್ಚಾ ಆಹಾರ

ಕಚ್ಚಾ ಆಹಾರವನ್ನು ಸೇವಿಸದಿರುವುದು ಆದಷ್ಟೂ ಒಳ್ಳೆಯದು. ಏಕೆಂದರೆ ಇಂತಹ ಆಹಾರ ಪದಾರ್ಥಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳು ಹೆಚ್ಚಾಗಿದ್ದು, ತಾಯಿ ಮತ್ತು ಆಕೆಯ ಗರ್ಭದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಹಾಗಾಗಿ ಶುಚಿಯಾಗಿ ಮತ್ತು ಪರಿಪೂರ್ಣವಾಗಿ ಅಡುಗೆ ಮಾಡಿದ ಆಹಾರವನ್ನೆ ಸೇವಿಸಿ. ಬ್ಯಾಕ್ಟೀರಿಯಾ ಮತ್ತು ವೈರಸ್ ಸುಲಭವಾಗಿ ಸೇರುವಂತಹ ಆಹಾರಗಳನ್ನು ಸೇವಿಸುವುದನ್ನು ನಿಯಂತ್ರಿಸಿ.

3. ಪಾಶ್ಚರೀಕರಣಗೊಳ್ಳದ ಪಾನೀಯಗಳನ್ನು ಸೇವಿಸಬೇಡಿ

3. ಪಾಶ್ಚರೀಕರಣಗೊಳ್ಳದ ಪಾನೀಯಗಳನ್ನು ಸೇವಿಸಬೇಡಿ

ಗರ್ಭಿಣಿಯು ಪಾಶ್ಚರೀಕರಣಗೊಳ್ಳದ ಹೈನು ಪದಾರ್ಥಗಳನ್ನು ಸೇವಿಸುವುದನ್ನು ನಿಯಂತ್ರಿಸಬೇಕು. ಕೆನೆ ಭರಿತ ಹಾಲನ್ನು ಬೇಕಾದರೆ ನೀವು ಸೇವಿಸಬಹುದು. ಆದರೆ ಫೆಟ ಅಥವಾ ಬೈನಂತಹ ಚೀಸ್‍ಗಳನ್ನು ಸೇವಿಸಬೇಡಿ.

ಇವುಗಳನ್ನು ತಿನ್ನಬಹುದು

ಇವುಗಳನ್ನು ತಿನ್ನಬಹುದು

ಆದರೆ ಹಾಲು ಅಥವಾ ಮೊಸರನ್ನು ನೀವು ಸೇವಿಸಬಹುದು. ಏಕೆಂದರೆ ಇವುಗಳು ಆರೋಗ್ಯಕಾರಿ ಮತ್ತು ಪಾಶ್ಚರೀಕರಣ ಪ್ರಕ್ರಿಯೆಗೆ ಒಳಪಟ್ಟಿರುತ್ತವೆ.

4. ತೊಳೆಯದೆ ಇರುವ ಹಣ್ಣು ಮತ್ತು ತರಕಾರಿಗಳು

4. ತೊಳೆಯದೆ ಇರುವ ಹಣ್ಣು ಮತ್ತು ತರಕಾರಿಗಳು

ಗರ್ಭಿಣಿಯಾದಾಗ ಆದಷ್ಟು ಬೇಯಿಸಿದ ಆಹಾರವನ್ನು ಸೇವಿಸುವುದು ಉತ್ತಮ. ಹಾಗಾಗಿ ಬೇಯಿಸದ ಕಚ್ಛಾ ಆಹಾರಗಳನ್ನು ಸೇವಿಸುವುದನ್ನು ನಿಯಂತ್ರಿಸಿ. ಜೊತೆಗೆ ತೊಳೆಯದೆ ಇರುವ ತರಕಾರಿ ಮತ್ತು ಹಣ್ಣುಗಳನ್ನು ಸಹ ಸೇವಿಸಬೇಡಿ.

5. ಕೇಫಿನ್, ಟೀ ಮತ್ತು ಆಲ್ಕೋಹಾಲ್

5. ಕೇಫಿನ್, ಟೀ ಮತ್ತು ಆಲ್ಕೋಹಾಲ್

ಗರ್ಭಿಣಿಯಾದಾಗ ಕೇಫಿನ್, ಟೀ ಮತ್ತು ಆಲ್ಕೋಹಾಲ್‍ಗಳನ್ನು ಸೇವಿಸುವುದನ್ನು ನಿಯಂತ್ರಿಸಿ. ಏಕೆಂದರೆ ಇವುಗಳು ನಿಮ್ಮ ಗರ್ಭದ ಮೇಲೆ ಅಥವಾ ಹೆರಿಗೆಯ ಸಮಯದಲ್ಲಿ ನಿಮಗೆ ಅಪಾಯವನ್ನು ತಂದೊಡ್ಡಬಹುದು. ಈ ಮೂರು ಬಗೆಯ ಪಾನೀಯಗಳನ್ನು ಅತಿಯಾಗಿ ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಸಹ ಇದೆ ಎಂಬುದನ್ನು ಮರೆಯಬೇಡಿ.

ಡಯಟ್ ಬಗ್ಗೆ ಎಚ್ಚರ

ಡಯಟ್ ಬಗ್ಗೆ ಎಚ್ಚರ

ಈ ಎಲ್ಲಾ ಬಗೆಯ ಆಹಾರಗಳನ್ನು ನೀವು ಗರ್ಭಿಣಿಯಾದಾಗ ಸೇವಿಸಬೇಡಿ. ಅದಕ್ಕಾಗಿ ನಿಮ್ಮ ವೈದ್ಯರ ಬಳಿ ಇಂದೇ ಹೋಗಿ ನಿಮಗೆ ಯಾವ ಬಗೆಯ ಆಹಾರವು ಸೂಕ್ತವೆಂದು ಕೇಳಿ ತಿಳಿದುಕೊಳ್ಳಿ. ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಆರೋಗ್ಯವಂತವನ್ನಾಗಿ ಮಾಡಲು ಇಂದೇ ನಿರ್ಧರಿಸಿ.

English summary

Avoid these 5 foods when pregnant!

During pregnancy, the mother must be very advisable to eat foods that are nutritious. But in addition to eating a healthy diet, expectant mothers should also avoid some certain foods.
X
Desktop Bottom Promotion