ಚೀಸ್ ತಿಂದರೂ ಗರ್ಭಪಾತವಾಗಬಹುದು ಜೋಪಾನ!

By:
Subscribe to Boldsky

ಗರ್ಭಿಣಿಯಾಗಿ ಮೊದಲ ಮೂರು ತಿಂಗಳವರೆಗೆ ಮಹಿಳೆಯರು ತುಂಬಾ ಜೋಪಾನವಾಗಿರಬೇಕೆಂದು ಹೇಳುವುದನ್ನು ಕೇಳಿರಬಹುದು. ಏಕೆಂದರೆ ಈ ಸಂದರ್ಭದಲ್ಲಿ ಗರ್ಭಪಾತವಾಗುವ ಸಾಧ್ಯತೆ ಅಧಿಕ.

ಗರ್ಭಿಣಿಗೆ ಯಾವುದೇ ಮಾನಸಿಕ ಒತ್ತಡ ಬೀಳಬಾರದು, ಭಾರದ ವಸ್ತುಗಳನ್ನು ಎತ್ತಬಾರದು, ನಡೆದಾಡುವಾಗ ಎಚ್ಚರವಾಗಿರಬೇಕು, ತುಂಬಾ ದೂರ ಪ್ರಯಾಣ ಮಾಡಬಾರದು ಹೀಗೆ ಮುನ್ನೆಚ್ಚರಿಕೆಯಿಂದ ಇರಬೇಕು. ಗರ್ಭಾವಸ್ಥೆಯ ಮೊದಲನೇ ಹಂತದಲ್ಲಿರುವವರು ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು:

Avoid Miscarriage In The First Trimester

ಚೀಸ್ ತಿನ್ನಬೇಡಿ: ಪಪ್ಪಾಯಿ ತಿನ್ನಬಾರದೆಂದು ಹೆಚ್ಚಿನವರಿಗೆ ಗೊತ್ತಿರುತ್ತದೆ. ಆದರೆ ಚೀಸ್ ಕೂಡ ತಿನ್ನಬಾರದೆನ್ನುವುದು ಗೊತ್ತೇ? ಚೀಸ್ ತಿಂದರೆ ಫುಡ್ ಪಾಯಿಸನ್ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ತಿನ್ನದಿರುವುದು ಒಳ್ಳೆಯದು.

ಸಮವಾಗಿಲ್ಲದ ರಸ್ತೆಯಲ್ಲಿ ಪ್ರಯಾಣ ಕೂಡ ಒಳ್ಳೆಯದಲ್ಲ
ದೂರದ ಪ್ರಯಾಣ ಪಾತ್ರವಲ್ಲ, ತುಂಬಾ ಗುಂಡಿಗಳಿರುವ ಕಡೆ ಗಾಡಿಯಲ್ಲಿ ಪ್ರಯಾಣ ಮಾಡಿದರೆ ದೇಹ ಅಲುಗಾಡುವುದರಿಂದ ಇಂತಹ ಪ್ರಯಾಣವನ್ನು ತಡೆಗಟ್ಟಿ.

ಶೀಥಲೀಕರಣ ಮಾಡಿದ ಆಹಾರ
ಶೀಥಲೀಕರಣ ಮಾಡಿದ ಹಣ್ಣು, ಮಾಂಸಾಹಾರ, ತರಕಾರಿ ಮುಟ್ಟಬೇಡಿ. ಇವು ಕೂಡ ಗರ್ಭಪಾತಕ್ಕೆ ಕಾರಣವಾಗಬಹುದು ಜೋಕೆ.

ಅಧಿಕ ಕೆಫೀನ್
ಕೆಫೀನ್ ಅಧಿಕವಿರುವ ಆಹಾರಗಳು ದೇಹವನ್ನು ಸೇರಿದರೆ ಗರ್ಭಪಾತವಾಗುತ್ತದೆ. ಆದ್ದರಿಂದ ಗರ್ಭಿಣಿಯರು ಈ ರೀತಿಯ ಆಹಾರ ವಸ್ತುಗಳಿಂದ ದೂರವಿರುವುದು ಒಳ್ಳೆಯದು.

ಒತ್ತಡ
ಈ ಮೊದಲೇ ಹೇಳಿದಂತೆ ಅಧಿಕ ಮಾನಸಿಕ ಒತ್ತಡ ಕೂಡ ಗರ್ಭಪಾತಕ್ಕೆ ಕಾರಣವಾಗಿದೆ. ಆದ್ದರಿಂದ ಗರ್ಭಿಣಿಯರು ಮನಸ್ಸಿನಲ್ಲಿ ಯಾವುದೇ ಮಾನಸಿಕ ಒತ್ತಡವನ್ನು ಇಟ್ಟುಕೊಳ್ಳದಿರುವುದು ಒಳ್ಳೆಯದು.

Story first published: Monday, April 1, 2013, 17:08 [IST]
English summary

Avoid Miscarriage In The First Trimester | ಮೊದಲ ತ್ರೈ ಮಾಸಿಕದಲ್ಲಿ ಗರ್ಭಪಾತವನ್ನು ತಡೆಯಲು ಟಿಪ್ಸ್

It is most common to have miscarriage in the first trimester of pregnancy. This is because the implantation of the foetus is not complete during the first 3 months of pregnancy. However, the fact remains that you must try to avoid miscarriages in the first trimester of pregnancy.
Please Wait while comments are loading...
Subscribe Newsletter