For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಈ ಅಂಶಗಳು ತಿಳಿದಿರಲಿ

By Super
|

ಗರ್ಭಿಣಿಯಾದಾಗ ಗಮನದಲ್ಲಿರಿಸಬೇಕಾದ, ಕಾಳಜಿವಹಿಸಬೇಕಾದ, ಹಲವಾರು ವಿಚಾರಗಳಿದ್ದು, ಅಂತಹ ಎಲ್ಲಾ ವಿಚಾರಗಳ ಕುರಿತು ಪ್ರಸ್ತಾಪಿಸಲು ಕೇವಲ ಒಂದು ಪಟ್ಟಿಯು ಸಾಕಾಗಲಿಕ್ಕಿಲ್ಲ. ಆದರೆ ಈಗ ಮುಂದೆ ನೀಡಲಾಗಿರುವ ಕೆಲವು ಸೂತ್ರಗಳು ಸ್ವತಃ ನಾನೇ ಗರ್ಭಿಣಿಯಾಗಿದ್ದಾಗ ಕಂಡುಕೊಂಡ ಕೆಲವು ಸಂಗತಿಗಳಾಗಿದ್ದು, ಇವು ನಾನು ಗರ್ಭಿಣಿಯಾಗಿದ್ದ ಕಾಲದಲ್ಲಿನ ಕ್ಲಿಷ್ಟಕರ ಸಂದರ್ಭಗಳಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಿದ್ದವು.

ಅಷ್ಟು ಮಾತ್ರವಲ್ಲದೇ, ಮುಂದಿನ ದಿನಗಳಲ್ಲಿ ನಾನು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಸಾಕಷ್ಟು ಮೊದಲೇ ತಿಳಿದುಕೊoಡು ಸನ್ನಧ್ಧರಾಗಿರುವಂತೆ ಮಾಡಿದವು. ಗರ್ಭಿಣಿಯಾದಾಗಿನ ದಿನಗಳಲ್ಲಿ ನಿಮ್ಮ ಶರೀರವು ಒಳಪಡುವ ಹಲವಾರು ಬದಲಾವಣೆಗಳ ಕುರಿತು ನೀವು ಚಕಿತರಾಗಬಹುದು. ಆದರೂ ಕೂಡ ಈ ಬದಲಾವಣೆಗಳು ಸಹಜವಾದ್ದರಿಂದ ಭಯ ಪಡಬೇಕಾದ ಅವಶ್ಯಕತೆ ಇರುವುದಿಲ್ಲ. ನೀವು ಗರ್ಭಿಣಿಯರಾಗಿದ್ದಾಗ ನಿಮಗೆ ತಿಳಿದಿರಲೇಬೇಕಾದ ಕೆಲವು ವಿಚಾರಗಳ ಕುರಿತು ಅರಿಯಲು ಈ ಸೂತ್ರಗಳನ್ನು ಓದಿರಿ.

1. ಮಂಜುಗಡ್ಡೆಗಳನ್ನು ಸಿದ್ಧಪಡಿಸಿಡಿ

1. ಮಂಜುಗಡ್ಡೆಗಳನ್ನು ಸಿದ್ಧಪಡಿಸಿಡಿ

ಗರ್ಭಿಣಿಯಾಗಿದ್ದಾಗ ನೀವು ತಿಳಿದಿರಬೇಕಾದ ಸಂಗತಿಗಳಲ್ಲೊಂದು ಯಾವುದೆಂದರೆ, ನಿಮ್ಮ ಶರೀರ ಮತ್ತು ಗರ್ಭಸ್ಥವಾಗಿರುವ ನಿಮ್ಮ ಶಿಶುವಿನ ಶರೀರವು ಸಾಕಷ್ಟು ನೀರಿನoಶದಿoದ ಒಡಗೂಡಿರುವoತೆ ಮಾಡಲು, ನೀವು ಕುಡಿಯಬೇಕಾದ ನೀರಿನ ಪ್ರಮಾಣ ಹಾಗೂ ಅಷ್ಟು ಪ್ರಮಾಣದ ನೀರನ್ನು ಕುಡಿಯುವುದು ಎಷ್ಟು ಪ್ರಯಾಸಕರ ಎಂಬುದನ್ನು ಅರಿತುಕೊಳ್ಳುವುದು. ಈ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಾ ನೀವು ಮೊದಲೆರಡು ತಿಂಗಳುಗಳನ್ನು ಕಳೆಯುತ್ತಲೇ, ನಿಮಗೆ ಮುಂದಿನ ನೀರಿನ ಬಾಟಲಿಯನ್ನು ಕಣ್ಣೆತ್ತಿ ನೋಡಲೂ ಸಹ ಮನಸ್ಸಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಾನೇನು ಮಾಡಿದೆ ಎಂದು ನಿಮಗೆ ಹೇಳುತ್ತೇನೆ. ನೀವು ನಿಮ್ಮ ಅಚ್ಚುಮೆಚ್ಚಿನ ಸ್ವಾದದ ತಂಪು ಪಾನೀಯದ ಸ್ವಲ್ಪ ಭಾಗವನ್ನು ಹೆಪ್ಪುಗಟ್ಟುವಂತೆ ಘನೀಕರಿಸಿರಿ. ನಂತರ ಇವುಗಳನ್ನು ನೀರಿಗೆ ಬೆರೆಸಿ ಚೆನ್ನಾಗಿ ಕಲಕಿರಿ. ಹೀಗೆ ಮಾಡುವುದರ ಬೋನಸ್ ಅಂಶವೆಂದರೆ, ಇದು ನಿಮ್ಮ ಬೆಳಗಿನ ಅಸೌಖ್ಯತೆಯನ್ನು ಎದುರಿಸಲು ಸಹಕರಿಸುತ್ತದೆ. ಮಾತ್ರವಲ್ಲದೇ, ನೀವು ಮುಂದೆ ಮೊಲೆಯೂಡಿಸುವಾಗಲೂ ಸಹ, ನೀರಿನ ವಿಷಯದ ಕುರಿತಾದ ನಿಮ್ಮ ಜಿಗುಪ್ಸೆಯನ್ನು ದೂರೀಕರಿಸಲು ಇದೊಂದು ಅತ್ಯುತ್ತಮ ಮಾರ್ಗವಾಗಿದೆ.

2 . ಅಂಡರ್ ವೈರ್ ಬ್ರಾ ಗಳನ್ನು ಧರಿಸುವುದನ್ನು ಬಿಟ್ಟುಬಿಡಿ

2 . ಅಂಡರ್ ವೈರ್ ಬ್ರಾ ಗಳನ್ನು ಧರಿಸುವುದನ್ನು ಬಿಟ್ಟುಬಿಡಿ

ನಮಗೆಲ್ಲಾ ತಿಳಿದಿರುವಂತೆ, ಸ್ತ್ರೀಯರು ಗರ್ಭಿಣಿಯರಾದಾಗ, ಅವರ ಎದೆಯಳತೆಯು ಹಿಗ್ಗುತ್ತದೆ. ಆದರೆ, ಈ ಸಂದರ್ಭದಲ್ಲಿ ದಯವಿಟ್ಟು underwire ಬ್ರಾ ಗಳ ಮೊರೆ ಹೋಗಬೇಡಿರಿ. ಈ ವಿಧದ ಬ್ರಾಗಳು ಹಿಗ್ಗಿರುವ ಸ್ತನಗಳ ಆಧಾರಕ್ಕೆ ಉತ್ತಮ ಆಯ್ಕೆಯಂತೆ ಕಂಡುಬಂದರೂ ಸಹ ಅವು ನಿಮ್ಮ ಕ್ಷೀರೋತ್ಪಾದನೆಯನ್ನು ಕುoಠಿತಗೊಳಿಸಬಹುದು. ಇಂತಹ ಬ್ರಾಗಳಿಗೆ ಬದಲಾಗಿ, ಅತಿ ಹೆಚ್ಚಿನ ಅಧಾರಕ್ಕಾಗಿಯೇ ರೂಪಿಸಲಾಗಿರುವ ನರ್ಸಿಂಗ್ ಬ್ರಾಗಳು ಅಥವಾ ಸ್ಪೋರ್ಟ್ಸ್ ಬ್ರಾಗಳನ್ನೂ ಕೂಡ ಬಳಸಬಹುದು.

3 . ಬಾದಾಮಿ ಎಣ್ಣೆಯನ್ನು ಬಳಸಿರಿ

3 . ಬಾದಾಮಿ ಎಣ್ಣೆಯನ್ನು ಬಳಸಿರಿ

ನೀವು ಪೂರ್ವಯೋಜಿತ ಸಿಸೇರಿಯನ್ ಹೆರಿಗೆಯ ಒಲವಿಲ್ಲದವರಾಗಿದ್ದರೆ, ನೀವು ಕೈಗೊಳ್ಳುವ ಸ್ವಲ್ಪ ಪೂರ್ವ ತಯಾರಿಯು ಹೆರಿಗೆಯ ಕಾಲದಲ್ಲಿ ಉಪಯೋಗವಾಗುತ್ತದೆ. ನೀವು ಗರ್ಭಾವಸ್ಥೆಯ 32 ವಾರಗಳನ್ನು ತಲುಪಿದ ನಂತರ, ಪ್ರತೀ ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ನಿಮ್ಮ ಜನನಾಂಗದ ಸುತ್ತಲೂ ಉಜ್ಜಲು ಆರಂಭಿಸಿರಿ. ಸಂಶೋಧನೆಗಳ ಪ್ರಕಾರ, ಹೆರಿಗೆಗೆ ಮುನ್ನ ದೇಹದ ಈ ಭಾಗವನ್ನು ಬಾದಾಮಿ ಎಣ್ಣೆಯಿಂದ ಮಾಲೀಸು ಮಾಡಿಕೊಂಡಿರುವ ಸ್ತ್ರೀಯರ ಹೆರಿಗೆಯ ಕಾಲದಲ್ಲಿ ಶಿಶುವನ್ನು ಮಾತೃ ಶರೀರದಿಂದ ಬೇರ್ಪಡಿಸುವುದು ಸುಲಭವಾಗುತ್ತದೆ ಮತ್ತು ಇದು ಅಂಗಾಂಗಗಳು ಒಟ್ಟಾರೆಯಾಗಿ ಹರಿದು ಹೋಗುವುದನ್ನು ತಡೆಯುತ್ತದೆ.

4 . Witch Hazel ಅನ್ನು ಉಪಯೋಗಿಸಿರಿ

4 . Witch Hazel ಅನ್ನು ಉಪಯೋಗಿಸಿರಿ

ಗರ್ಭಿಣಿಯಾಗಿದ್ದಾಗ Witch Hazel ನಿಮಗೆ ಹಲವಾರು ರೀತಿಯಲ್ಲಿ ವರದಾನವಾಗಬಹುದು. ಇದು ಸಂಪೂರ್ಣವಾಗಿ ಪ್ರಾಕೃತಿಕವಾದ್ದರಿಂದ, ಸಣ್ಣ ಗಾಯಗಳ ಚಿಕಿತ್ಸೆಗೆ ಮತ್ತು ತಿಗಣೆ ಕಡಿತಗಳಿಂದ ಮುಕ್ತಿ ಪಡೆಯಲು ಇದು ಅತ್ಯುತ್ತಮವಾಗಿದೆ. ಗರ್ಭಿಣಿಯಾಗಿರುವಾಗ, ಕೆಲವೊಮ್ಮೆ ಸಂಭವಿಸಬಹುದಾದ ಮೊಡವೆಗಳಿಗೂ ಕೂಡ ಇದು ಬಹಳ ಉತ್ತಮ. ಮಾತ್ರವಲ್ಲದೆ, ಇದರ ಬಳಕೆಯನ್ನು ಮಾಡುವವರು ಗುದದ್ವಾರದ ಉರಿಯೂತ, ಮೂಲವ್ಯಾಧಿಗಳ ಬಗ್ಗೆ ಚಿಂತಿಸಬೇಕಾಗಿರುವುದಿಲ್ಲ.

5 . ನೀವು ಗೊರಕೆ ಹೊಡೆಯಲು ಆರಂಭಿಸಬಹುದು

5 . ನೀವು ಗೊರಕೆ ಹೊಡೆಯಲು ಆರಂಭಿಸಬಹುದು

ಗರ್ಭಾವಸ್ಥೆಯು ಸ್ತ್ರೀಯೋರ್ವಳು ನಿದ್ರೆಯಲ್ಲಿ ಗೊರಕೆ ಹೊಡೆಯುವಂತೆ ಮಾಡುತ್ತದೆ ಎಂದು ತಿಳಿದಾಗ ನನಗೆ ಚಕಿತವಾಯಿತು. ನೀವು ಗರ್ಭಿಣಿಯಾದಾಗ , ಹೆಚ್ಚು ಕಡಿಮೆ ನಿಮ್ಮ ಶರೀರದ ಎಲ್ಲಾ ಅವಯವಗಳು ಮೆದುವಾದಂತಾಗಿ ಊದಿಕೊಳ್ಳುತ್ತವೆ (ನಿಮ್ಮ ಪಾದಗಳೂ ಸೇರಿದಂತೆ). ಅಂತೆಯೇ ನಿಮ್ಮ ನಾಸಿಕ ಮಾರ್ಗವೂ ಅಗಲಗೊಳ್ಳುವುದರಿಂದ ಪ್ರಾಯಶಃ ನಿಮಗೆ ಗೊರಕೆಯನ್ನು ತಡೆಹಿಡಿಯಲು ಸಾಧ್ಯವಾಗಲಾರದು. ನಿಮ್ಮ ಜೀವನ ಸಂಗಾತಿಗೆ ಇದರ ಕುರಿತು ಮುಂಚಿತವಾಗಿಯೇ ತಿಳಿಸಿಬಿಡುವುದು ಒಳ್ಳೆಯದು. ಈ ಗೊರಕೆಯು ಮಿತಿ ಮೀರಿ ತಡೆಯಲಸಾಧ್ಯವಾದಾಗ, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಇದನ್ನು ತಡೆಗಟ್ಟಲು ಏನಾದರೂ ಪರಿಹಾರೋಪಾಯವಿದೆಯೇ ಎಂಬುದನ್ನು ಸಮಾಲೋಚಿಸಬಹುದು.

6. Chiropractor ಅನ್ನು ನಿಯಮಿತವಾಗಿ ಸಂದರ್ಶಿಸಿರಿ

6. Chiropractor ಅನ್ನು ನಿಯಮಿತವಾಗಿ ಸಂದರ್ಶಿಸಿರಿ

ನೀವು ಗರ್ಭಿಣಿಯಾಗಿರುವಾಗ ನಿಮ್ಮ ಆರೋಗ್ಯದ ಕುರಿತು ಮತ್ತು ನಿಮ್ಮ ಬೆನ್ನು ನೋವನ್ನು ತಕ್ಕಮಟ್ಟಿಗೆ ಶಮನಗೊಳಿಸಲು ನೀವು ಮಾಡಬಹುದಾದ ಅತ್ಯುತ್ತಮ ಕಾರ್ಯಗಳಲ್ಲಿ ಒಂದು ಯಾವುದೆಂದರೆ, ನೀವು chiropractor ಓರ್ವರನ್ನು ನಿಯಮಿತವಾಗಿ ಸಂದರ್ಶಿಸುವುದು. ಈ ವೃತ್ತಿಪರ chiropractor ಗಳು ನಿಮ್ಮ ಬೆನ್ನುಹುರಿಯನ್ನು ಪರಿಸ್ಥಿತಿಗೆ ತಕ್ಕಂತೆ ಮರುಜೋಡಣೆಗೊಳಪಡಿಸುವುದರ ಮೂಲಕ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಮತ್ತು ಸ್ವತಃ ನಿಮಗೇ ಗೊತ್ತಿಲ್ಲದೇ ಇರುವ, ನೀವು ಹೊಂದಿರಬಹುದಾದ, ಯಾವುದೇ ಒತ್ತಡ ಅಥವಾ ನೋವನ್ನು ನಿವಾರಿಸಲು ಅಗತ್ಯವಿರುವ ತರಬೇತಿಯನ್ನು ಪಡೆದಿರುತ್ತಾರೆ. ನಿಮ್ಮ ಅರೋಗ್ಯ ವಿಮೆಯು ಈ ಅಂಶವನ್ನು ಒಳಗೊಂಡಿರಬಹುದಾದರೂ, ಒಂದು ವೇಳೆ ನಿಮಗೆ ಈ ಸೌಲಭ್ಯವು ಇಲ್ಲವೆಂದಾದರೆ, chiropractor ಗಳು ನಿಮಗೆ ಸುಲಭವಾಗಿ ಕೈಗೆಟುಕಬಲ್ಲರು.

7 . ಸರಳ ನಿರ್ವಹಣೆಯ ಕೇಶವಿನ್ಯಾಸವನ್ನು ಪಡೆಯಿರಿ

7 . ಸರಳ ನಿರ್ವಹಣೆಯ ಕೇಶವಿನ್ಯಾಸವನ್ನು ಪಡೆಯಿರಿ

ಮಾತೃತ್ವದ ಕಾಲದಲ್ಲಿ ನಿಮಗೆ ದೊರಕಬಹುದಾದ ಅತ್ಯುತ್ತಮ ಸಲಹೆಗಳಲ್ಲಿ ಮೇಲಿನದ್ದೂ ಕೂಡ ಒಂದು. ಮಗುವಿನ ಜನನದ ಕೆಲವು ವಾರಗಳ ಮುಂಚೆ, ನೀವು ಸರಳ ನಿರ್ವಹಣೆಯ ಕೇಶವಿನ್ಯಾಸ ಮತ್ತು ವರ್ಣವನ್ನು ಹೊಂದಿರುವುದು ಒಳ್ಳೆಯದು. ಯಾಕೆಂದರೆ, ಮಗುವಿನ ಜನನದ ನಂತರ ನಿಮಗೆ ಸಮಯ, ಶಕ್ತಿ, ಮತ್ತು ಹೆಚ್ಚಿನ ಹಣದ ನೆರವು ಸಿಗದೇ ಹೋಗಿ ನೀವು ನಿಮ್ಮ ಕೇಶ ನಿರ್ವಹಣೆಯ ವಿಷಯದಲ್ಲಿ ವಂಚಿತರಾಗಬಹುದು. ಹೆಚ್ಚಿನ ತಾಯಂದಿರಿಗೆ ಒಂದು ಉತ್ತಮ ಸ್ನಾನ ಮತ್ತು ನಂತರದ ಸರಳ ಅಲಂಕಾರವು ಸಾಕಾಗಬಹುದು.

8 . ಲವಲವಿಕೆಯಿಂದ ಇರಿ

8 . ಲವಲವಿಕೆಯಿಂದ ಇರಿ

ನೀವು ಗರ್ಭಿಣಿಯೆಂಬ ಒಂದೇ ಒಂದು ಕಾರಣಕ್ಕೆ, ನೀವು ಲವಲವಿಕೆಯಿಂದ ಇರಬಾರದು ಎಂದೇನೂ ಅರ್ಥವಲ್ಲ. ನೀವು ನಿಮ್ಮ ಕೆಲಸದೊತ್ತಡವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬೇಕಾಗಬಹುದೆoಬುದನ್ನು ಹೊರತುಪಡಿಸಿದರೆ, ನೀವು ಚಟುವಟಿಕೆಯಿಂದಲೇ ಇರಬೇಕು. ಅಂತಹ ನಿಮ್ಮ ಸ್ಥಿತಿಯು ವಾಸ್ತವದಲ್ಲಿ, ನೀವು ದೃಢ ಮತ್ತು ಆರೋಗ್ಯಯುತ ಗರ್ಭಿಣಿಯಾಗಿರುವುದನ್ನು ಖಚಿತಪಡಿಸುತ್ತದೆ. ನಿಮ್ಮ ಗರ್ಭಾವಸ್ಥೆಯ ಕಡೆಯ ಕೆಲವು ವಾರಗಳಲ್ಲಿ, ನೀವು ಕೇವಲ ನಡೆಯಲು ಮಾತ್ರ ಶಕ್ತರಾಗಿರಬಹುದು. ಆದರೂ ಸಹ ನಡಿಗೆಯು ಹೆರಿಗೆಯನ್ನು ಸುಲಭಗೊಳಿಸುವುದರಿoದ, ಅದರಿoದೇನೂ ಹಾನಿಯಿಲ್ಲ.

9 . ಹೆರಿಗೆಯಾದ ಮೇಲೂ ನಿಮ್ಮ ಮೊದಲಿನ ಆಹಾರಪದ್ಧತಿಯನ್ನೇ ಮುಂದುವರೆಸಿರಿ

9 . ಹೆರಿಗೆಯಾದ ಮೇಲೂ ನಿಮ್ಮ ಮೊದಲಿನ ಆಹಾರಪದ್ಧತಿಯನ್ನೇ ಮುಂದುವರೆಸಿರಿ

ಮೊಲೆಯೂಡಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳವಾಗಿಸುವ ಸೂತ್ರವೊoದು ಇಲ್ಲಿದೆ. ಶಿಶುವಿನ ಜನನಾನoತರ, ಸಾಧ್ಯವಾದಷ್ಟರಮಟ್ಟಿಗೆ ಗರ್ಭಾವಸ್ಥೆಯಲ್ಲಿದ್ದಾಗಿನ ನಿಮ್ಮ ಆಹಾರಪದ್ದತಿಯನ್ನೇ ಮುಂದುವರೆಸಿರಿ. ಇದು ಕಷ್ಟಕರ ಕೆಲಸ ಎಂಬುದು ನನಗೂ ಗೊತ್ತು. ವಿಶೇಷವಾಗಿ, ಬಹುಶಃ ಹುಳಿತೇಗಿನ ಕಾರಣಕ್ಕಾಗಿ, ನೀವು ಇಷ್ಟಪಟ್ಟಿರದ ಅಥವಾ ನಿಮಗೆ ಈ ಹಿಂದೆ ತಿನ್ನಲು ಅಸಾಧ್ಯವಾಗಿದ್ದ ಆಹಾರ ಪದಾರ್ಥಗಳಿರುವಾಗ ಇದು ಕಷ್ಟವೆನ್ನಿಸುವುದು ಸಹಜ. ಹಾಗೊಂದು ವೇಳೆ ನಿಮಗೆ ಮಾಡಲು ಸಾಧ್ಯವಾಗದೇ ಇದ್ದರೆ, ಅಂತಹ ಆಹಾರ ಪದಾರ್ಥಗಳನ್ನು ಕ್ರಮೇಣವಾಗಿ ನಿಮ್ಮ ಭೋಜನದಲ್ಲಿ ಸೇರಿಸಬಹುದು. ಇಲ್ಲವಾದರೆ, ನಿಮ್ಮ ಪುಟಾಣಿಯಿoದ ನಿಮಗೊದಗಬಹುದಾದ ಹೊಟ್ಟೆ ನೋವಿನ ಲಕ್ಷಣಗಳನ್ನು ನೀವು ಗಮನಿಸಬಹುದು.

ಪ್ರತಿಯೊಂದು ಗರ್ಭಾವಸ್ಥೆಯೂ ವಿಭಿನ್ನವಾಗಿರುತ್ತದೆ ಮತ್ತು ಪ್ರತೀ ತಾಯಿಯೂ ವಿಭಿನ್ನಳಾಗಿರುತ್ತಾಳೆ. ಅದ್ದರಿಂದ, ಈ ವಿಷಯವನ್ನು, ನಿಮ್ಮ ಗರ್ಭಾವಸ್ಥೆಯ ಅವಧಿಯಲ್ಲಿ ನೆನಪಿಟ್ಟುಕೊಳ್ಳಿ. ನೀವು ಚೊಚ್ಚಲ ಗರ್ಭಿಣಿಯೇ ? ಹಾಗಿದ್ದಲ್ಲಿ, ಈ ಮೇಲಿನ ಯಾವ ಸೂತ್ರವನ್ನು ನೀವು ಬಹುವಾಗಿ ಮೆಚ್ಚುವಿರಿ ?

English summary

9 Things You Should Be Aware Of When Pregnant

During pregnancy you may be surprised by all the changes your body is going through, but have no fear because most of it is normal. Read on to learn a few things you should be aware of when pregnant!
Story first published: Friday, September 13, 2013, 18:45 [IST]
X
Desktop Bottom Promotion