For Quick Alerts
ALLOW NOTIFICATIONS  
For Daily Alerts

ಲೈಂಗಿಕ ಆಸಕ್ತಿ ವೃದ್ಧಿಸುವ ಪರಿಣಾಮಕಾರಿಯಾದ ತೈಲಗಳು

By Super
|

ಸೆಕ್ಸ್ ಎಂಬುದು ಜೀವನದ ಒಂದು ಭಾಗ. ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದಿದ್ದಲ್ಲಿ ಸಮಸ್ಯೆ ಎದುರಾಗಬಹುದು.ಪುರಾತತ್ವ ಕಾಲದಿಂದಲೂ ಇವುಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತಲೇ ಬಂದಿವೆ. ಕಾಮಸೂತ್ರದ ಸಾಹಿತ್ಯದಲ್ಲಿ ಅತ್ತರ್ ಮತ್ತು ಸುಗಂಧ ಪೂರಿತ ತೈಲಗಳ ಆಳವಾದ ಬಳಕೆಯ ಬಗ್ಗೆ ಉಲ್ಲೇಖಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಭಾವನೆಗಳನ್ನು ಜಾಗೃತಗೊಳಿಸಲು ಮತ್ತು ಇಂದ್ರಿಯಯಗಳ ಆಸೆಗಳನ್ನು ಕೆರಳಿಸಲು ತೈಲಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಈ ಸುವಾಸಿತ ತೈಲಗಳು ಪಿಟ್ಯುಟರಿ ಗ್ರಂಥಿ ಹಾರ್ಮೋನ್ ಅನ್ನು ಪ್ರಚೋದಿಸಿ ಲೈಂಗಿಕ ಆಸಕ್ತಿ ಕೆರಳುವಂತೆ ಮಾಡುತ್ತವೆ.ಉದಾಹರಣೆಗ ನಮ್ಮ ವೇದದ ವಾಜೀಕರಣ ತಂತ್ರದಲ್ಲಿ(ಬಂಜೆತನ ಮತ್ತು ಪುರುಷತ್ವ ವಿಧಾನ)ಕೆಲವು ತೈಲಗಳ ಬಳಕೆಯಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಲಾಗಿದೆ.

ಇಲ್ಲಿ ಕಾಮೋತ್ತೇಜಿತ ಆಗುವ ಕೆಲವು ತೈಲಗಳ ಬಗ್ಗೆ ಮಾಹಿತಿ ನೀಡಲಾಗಿದೆ.

1.ರೋಸ್ ಎಣ್ಣೆ

1.ರೋಸ್ ಎಣ್ಣೆ

ನಿಮಗೆ ಕಾಮ ದೇವತೆ ಎಂದೇ ಪರಿಗಣಿಸಲಾದ,ಅವಳ ಪ್ರೀತಿಯನ್ನು ಗುಲಾಬಿ ದಳಗಳಿಂದ ಅಲಂಕರಿಸಿದ ಅಫ್ರೋಡೈಟ್ ಬಗ್ಗೆ ತಿಳಿದಿದೆಯೇ?.ಈಜಿಪ್ಟ್ ನ ಸೌಂದರ್ಯವತಿ ಕ್ಲಿಯೋಪಾತ್ರ ಕೂಡ ಸ್ನಾನಕ್ಕೆ ಗುಲಾಬಿ ದಳಗಳನ್ನು ಉಪಯೋಗಿಸುತ್ತಿದ್ದಳು.ಇದರ ಹಿಂದೆ ಕಾರಣ ಇಲ್ಲದಿಲ್ಲ.ಗುಲಾಬಿ ಎಣ್ಣೆಯಲ್ಲಿ ಲೈಂಗಿಕತೆಯನ್ನು ಸಾರಭೂತ ಮಾಡುವ ಇಂದ್ರಿಯಗಳ ಆತಂಕವನ್ನು ಶಮನಗೊಳಿಸುವ ಗುಣವಿದೆ ಎನ್ನಲಾಗಿದೆ.ಇದು ಹೃದಯ ಚಕ್ರದ ಮೂಲಕ ಕಾರ್ಯ ನಿರ್ವಹಿಸಿ ಮಾನಸಿಕ ಮತ್ತು ಭೌತಿಕ ಪ್ರೀತಿ ಹೆಚ್ಚುವಂತೆ ಮಾಡುತ್ತದೆ.

2.ಮಲ್ಲಿಗೆ ಎಣ್ಣೆ

2.ಮಲ್ಲಿಗೆ ಎಣ್ಣೆ

ಮಲ್ಲಿಗೆ ಎಣ್ಣೆಯನ್ನು,ಅದರಲ್ಲಿರುವ ಇತರರನ್ನು ಸೆಳೆಯುವ ಸುವಾಸಿತ ಪರಿಮಳಕ್ಕಾಗಿ ಕಾಮೋತ್ತೇಜಕ ಎಣ್ಣೆ ಎಂದೇ ಕರೆಯಲಾಗಿದೆ.ಮಲ್ಲಿಗೆ ಹೂವು ದೀರ್ಘ ಕಾಲದ ಪರಿಮಳ ಹೊಂದಿರುತ್ತದೆ.ಈ ಹೂವಿನ ಎಣ್ಣೆ ಭಾವನಾತ್ಮಕವಾಗಿ ಕೆರಳಿಸಿ,ಶ್ರೀಮಂತ ಸೌಗಂಧ ಹೊಂದಿರುವುದರಿಂದ ಆತ್ಮವಿಶ್ವಾಸ ಹೆಚ್ಚಿಸಿ,ಲೈಂಗಿಕ ಆಸಕ್ತಿ ಮೂಡಿಸುತ್ತದೆ ಎನ್ನಲಾಗಿದೆ.

3.ಸುಗಂಧ ದ್ರವ್ಯ ತೈಲ(ಯ್ಲಾಂಗ್ ಎಣ್ಣೆ)

3.ಸುಗಂಧ ದ್ರವ್ಯ ತೈಲ(ಯ್ಲಾಂಗ್ ಎಣ್ಣೆ)

ಇದು ಕೂಡ ಜಾಜಿ ಮಲ್ಲಿಗೆ ಪರಿಮಳವನ್ನು ಹೋಲುವ ಒಂದು ಸುಗಂಧ ತೈಲ.ಇದೊಂದು ವಿದೇಶಿ ಗಿಡವಾಗಿದ್ದು ಇದರಿಂದ ಹೊರಹೊಮ್ಮುವ ಒಂದು ರೀತಿಯ ಅದ್ಭುತ ಸುವಾಸನೆಯು ಸಂತೋಷವನ್ನು ನೀಡುತ್ತದೆ.ಈ ಎಣ್ಣೆ ಶಕ್ತಿ ತುಂಬಿ ಸಂಗಾತಿಗಳ ನಡುವಿನ ಆಕರ್ಷಣೆಯನ್ನು ಹೆಚ್ಚಿಸುತ್ತದೆ.ಈ ತೈಲದ ಒಂದು ಹನಿಯನ್ನು ಹತ್ತಿ ಬಟ್ಟೆಗೆ ಹಾಕಿ ನಿಮ್ಮ ಮಂಚದ ಬುಡದಲ್ಲಿ ಇಟ್ಟರೆ ಅದರಿಂದ ಜಾದೂ ನಡೆದುಬಿಡಬಹುದು.

4.ಜೀರಿಗೆ ಎಣ್ಣೆ

4.ಜೀರಿಗೆ ಎಣ್ಣೆ

ಜೀರಿಗೆ ಎಣ್ಣೆ ಕಾಮೋತ್ತೇಜನಕ್ಕೆ ಅಷ್ಟೊಂದು ಜನಪ್ರಿಯತೆ ಪಡೆದಿಲ್ಲ, ಆದರೂ ಕೂಡ ಇದು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಹಾಯಕವಾಗುತ್ತದೆ. ಜೀರಿಗೆ ಎಣ್ಣೆ ಮಹಿಳೆಯರಲ್ಲಿ ಅಂಡಾಣು ಹೆಚ್ಚಿಸುತ್ತದೆ ಮತ್ತು ಪುರುಷರಲ್ಲಿ ಆಕರ್ಷಣೆಯ ಭಾವನೆಯನ್ನು ಮೂಡಿಸುತ್ತದೆ.

5.ಸುಗಂಧ ಭರಿತ ಮೂಲಿಕೆಯ ಎಣ್ಣೆ

5.ಸುಗಂಧ ಭರಿತ ಮೂಲಿಕೆಯ ಎಣ್ಣೆ

ಮೂಲಿಕೆಯ ಎಣ್ಣೆ ಉಳಿದ ಎಣ್ಣೆಗಳಿಗಿಂತ ಹೆಚ್ಚು ಕಾಲ ತನ್ನ ಸುಗಂಧವನ್ನು ಹರಡುವುದರಿಂದ ಇದು ಉಳಿದ ಎಣ್ಣೆಗಳಿಗಿಂತ ಭಿನ್ನವಾಗಿದೆ.ಮೂಲಿಕೆ ಎಣ್ಣೆ ಆರಾಮದಾಯಕ ಅನಿಸುವುದರ ಜೊತೆಗೆ ಭ್ರಮಾಧೀನ ಭಾವನೆ ಮೂಡಿಸುತ್ತದೆ. ಆದಾಗ್ಯೂ ನೀವು ಗರ್ಭವತಿ ಆಗಲು ಪ್ರಯತ್ನಿಸುತ್ತಿದ್ದಲ್ಲಿ ಈ ಎಣ್ಣೆ ಬಳಕೆ ಸೂಕ್ತವಲ್ಲ.

6.ಲವಂಗದ ಎಣ್ಣೆ

6.ಲವಂಗದ ಎಣ್ಣೆ

ಈ ಎಣ್ಣೆ ಖಿನ್ನತೆಯನ್ನು ಹೋಗಲಾಡಿಸಲು ಸೂಕ್ತವಾದ ಎಣ್ಣೆ.ಲವಂಗ ಎಣ್ಣೆ ಯು ಉತ್ತೇಜಕದ ರೀತಿಯಲ್ಲಿ ಕೆಲಸ ಮಾಡುತ್ತದೆ.ಹೆಚ್ಚು ಭಾವೋದ್ರಿಕ್ತರಾಗಿ ಆನಂದ ಅನುಭವಿಸುವಂತೆ ಮಾಡುತ್ತದೆ.

7.ಪಚ್ಚೆತೆನೆ ತೈಲ

7.ಪಚ್ಚೆತೆನೆ ತೈಲ

ಈ ತೈಲವು ಒಂದು ರೀತಿಯ ಘಾಟನ್ನು ಹೊಂದಿದ ಸುವಾಸನೆಯನ್ನು ನೀಡುತ್ತದೆ.ಇದು ಮಹಿಳೆಯರಿಗೆ ಮತ್ತು ಪುರುಷರಿಗೆ ಇಬ್ಬರಿಗೂ ಉತ್ತಮವಾದುದು. ಇದನ್ನು ಸುಗಂಧ ಭರಿತ ಮೂಲಿಕೆ,ಜರೇನಿಯಂ ಮತ್ತು ಲ್ಯಾವೆಂಡರ್ ಎಣ್ಣೆಗಳೊಂದಿಗೆ ಮಿಶ್ರಣ ಮಾಡಿ ಬಳಸಬಹುದು. ಇದು ಖಿನ್ನತೆ ಮತ್ತು ಒತ್ತಡವನ್ನು ಹೋಗಲಾಡಿಸಿ ಸ್ವಾಭಾವಿಕವಾಗಿ ಉತ್ತೇಜಿತಗೊಳ್ಳಲು ಸಹಕರಿಸುತ್ತದೆ.

ಎಚ್ಚರಿಕೆ:

ಎಚ್ಚರಿಕೆ:

ನಿಮಗೆ ಉಸಿರಾಟದ ತೊಂದರೆ, ರಕ್ತದೊತ್ತಡ ಮತ್ತಿತರ ಆರೋಗ್ಯದ ಸಮಸ್ಯೆಗಳು ಇದ್ದಲ್ಲಿ ವೈದ್ಯರ ಸಲಹೆ ಪಡೆದ ನಂತರವಷ್ಟೇ ಇದನ್ನು ಉಪಯೋಗಿಸಿ. ಜೊತೆಗೆ ಈ ತೈಲಗಳನ್ನು ದೂರದಲ್ಲಿ ಇಟ್ಟು ಸುವಾಸನೆಗಷ್ಟೇ ಬಳಸಬೇಕೇ ಹೊರತು ಯಾವುದೇ ರೀತಿಯಲ್ಲಿ ಆಂತರಿಕವಾಗಿ ಬಳಸಬಾರದು.

English summary

8 Essential Oils to Boost Your Physical Intimacy

Kamasutra often referred to as the Bible of sexuality, has mentioned profound use of ittar and aromatic oils in its literature. Since ancient times, these oils have been used widely to awaken desires and sensuous feelings.
X
Desktop Bottom Promotion