For Quick Alerts
ALLOW NOTIFICATIONS  
For Daily Alerts

ಈ ಪರಿಸ್ಥಿತಿಗಳಿದ್ದರೆ ಅಬಾರ್ಷನ್ ಅವಶ್ಯಕ

|

ಗರ್ಭಪಾತ ಮಾಡಿಸುವುದು ಕಾನೂನಿನ ಪ್ರಕಾರ ತಪ್ಪು. ಆದರೆ ಗರ್ಭದಲ್ಲಿರುವ ಮಗು ಸರಿಯಾಗಿ ಬೆಳವಣಿಗೆ ಹೊಂದದಿದ್ದರೆ, ತಾಯಿಗೆ ಏನಾದರೂ ಆರೋಗ್ಯದ ಸಮಸ್ಯೆ ಇದ್ದರೆ ಗರ್ಭಪಾತ ಮಾಡಿಸಬಹುದು ಎಂಬ ಕಾನೂನು ಇದೆ.

ಅದರಲ್ಲೂ ಈ ಕೆಳಗಿನ ಸಂದರ್ಭದಲ್ಲಿ ಅಬಾರ್ಷನ್ ಮಾಡಿಸದಿದ್ದರೆ ತಾಯಿಯ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಒಂದು ವೇಳೆ ಮಗು ಹುಟ್ಟಿದರೂ ಅಂತಹ ಮಗು ಆರೋಗ್ಯದಿಂದ ಕೂಡಿರುವುದಿಲ್ಲ. ಆದ್ದರಿಂದ ಈ ಕೆಳಗಿನ ಸಂದರ್ಭಗಳಲ್ಲಿ ಅಬಾರ್ಷನ್ ಒಳ್ಳೆಯದು:

7 Reasons You May Need An Abortion

ಗರ್ಭಿಣಿಯಾಗಿದ್ದಾಗ ಚಿಕನ್ ಫಾಕ್ಸ್ ಬಂದರೆ
ಗರ್ಭಿಣಿಯಾಗಿದ್ದಾಗ ಚಿಕನ್ ಫಾಕ್ಸ್ ಬಂದರೆ ಕೂಡಲೇ ಅಬಾರ್ಷನ್ ಮಾಡಿಸುವುದು ಒಳ್ಳೆಯದು. ಏಕೆಂದರೆ ಚಿಕನ್ ಪಾಕ್ಸ್ ವೈರಸ್ ದೇಹದಲ್ಲಿ ಕಡಿಮೆಯೆಂದರೂ 3 ತಿಂಗಳಕಾಲ ಇರುತ್ತದೆ. ಇವು ಗರ್ಭದಲ್ಲಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಅಬಾರ್ಷನ್ ಮಾಡಿಸಿದರೆ ಒಳ್ಳೆಯದು.

ಕ್ಯಾನ್ಸರ್
ಗರ್ಭಿಣಿಯಾಗಿದ್ದಾಗ ಕ್ಯಾನ್ಸರ್ ಎಂದು ಗೊತ್ತಾದರೆ ಕೂಡಲೇ ಅಬಾರ್ಷನ್ ಮಾಡಿಸಬೇಕು. ಇಲ್ಲದಿದ್ದರೆ ಕ್ಯಾನ್ಸರ್ ಗೆ ತೆಗೆದುಕೊಳ್ಳುವ ಚಿಕಿತ್ಸೆ ಮಗುವಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಮಗುವಿನಲ್ಲಿ ನ್ಯೂನತೆ ಇದ್ದರೆ
ಸ್ಕ್ಯಾನಿಂಗ್ ಮಾಡಿಸಿದಾಗ ಮಗುವಿನಲ್ಲಿ ನ್ಯೂನತೆ ಇದ್ದರೆ ಗರ್ಭಪಾತ ಮಾಡಿಸುವುದು ಒಳ್ಳೆಯದು.

ಗರ್ಭಪಾತವಾಗುವ ಸಾಧ್ಯತೆ ಇದ್ದರೆ
ಅನಾರೋಗ್ಯದ ಕಾರಣದಿಂದ ಗರ್ಭಪಾತವಾಗುವ ಸಾಧ್ಯತೆ 99% ಇದ್ದರೆ ಅಬಾರ್ಷನ್ ಮಾಡಿಸಬೇಕು. ಇಲ್ಲದಿದ್ದರೆ ಗರ್ಭಪಾತವಾಗಿ ಮಹಿಳೆಯ ಸ್ಥಿತಿ ಚಿಂತಾಜನಕವಾಗುವುದು.

ಲೈಂಗಿಕ ಕಾಯಿಲೆ ಇದ್ದರೆ
ಲೈಂಗಿಕ ಕಾಯಿಲೆ ಇದ್ದರೆ ಅದು ಮಗುವಿಗೆ ಬರುವ ಸಾಧ್ಯತೆ ಹೆಚ್ಚು. ಮಗುವಿಗೆ ಕೂಡ ಆ ಕಾಯಿಲೆ ಬರಬಹುದೆಂದು ವೈದ್ಯರು ಹೇಳಿದರೆ ಅಬಾರ್ಷನ್ ಮಾಡಿಸುವುದು ಒಳ್ಳೆಯದು.

ಮಧುಮೇಹವಿದ್ದರೆ
ಮಧುಮೇಹಿ ಗರ್ಭಿಣಿಯ ರಕ್ತದಲ್ಲಿ ಸಕ್ಕರೆಯಂಶ ಅಧಿಕವಾದರೆ ಅಬಾರ್ಷನ್ ಮಾಡಿಸುವುದು ತಾಯಿಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಥೈರಾಯ್ಡ್ ಅಧಿಕವಾದರೆ
ಥೈರಾಯ್ಡ್ ಕಾಯಿಲೆ ಅಧಿಕವಾದರೆ ಗರ್ಭಪಾತವಾಗುವುದು, ಇದರ ಬದಲು ಗರ್ಭಪಾತ ಮಾಡಿಸಿದರೆ ಮಹಿಳೆಯ ಪ್ರಾಣವನ್ನು ಕಾಪಾಡಬಹುದು.

English summary

7 Reasons You May Need An Abortion | Tips For Pregnant Women | ಈ 7 ಸಮಸ್ಯೆಗಳಿದ್ದರೆ ಅಬಾರ್ಷನ್ ಮಾಡಿಸಲೇಬೇಕು | ಗರ್ಭಿಣಿಯರಿಗೆ ಕೆಲ ಸಲಹೆಗಳು

Women also need an abortion when the child has some serious genetic defects that can never be corrected. So let us see what medical conditions can deem an abortion necessary.
X
Desktop Bottom Promotion