For Quick Alerts
ALLOW NOTIFICATIONS  
For Daily Alerts

ಆರೋಗ್ಯವಂತ ಮಗು ಬೇಕೆಂದರೆ ಈ ರೀತಿ ಮಾಡಿ

By Super
|

ಗರ್ಭಿಣಿ ಮಹಿಳೆ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾಳೆ. ತೂಕ ಹೆಚ್ಚಾಗುತ್ತಿರುವುದರ ಬಗ್ಗೆ, ಆಹಾರದ ಬಗ್ಗೆ,ಮಗುವಿನ ಜನನದ ಬಗ್ಗೆ ಹೀಗೆ ಸಾಕಷ್ಟು ವಿಚಾರಗಳು ಆಕೆಯನ್ನು ಒತ್ತಡಕ್ಕೆ ಒಳಪಡಿಸುತ್ತದೆ. ಇನ್ನು ಕೆಲಸಕ್ಕೆ ಹೋಗುತ್ತಿರುವವರಾದರೆ ಕೆಲಸಕ್ಕೆ ರಜೆ ತೆಗೆದುಕೊಳ್ಳುವ ಮೊದಲು ಎಲ್ಲಾ ಕೆಲಸವನ್ನು ಮುಗಿಸಬೇಕು ಎನ್ನುವ ಒತ್ತಡ. ಇನ್ನು ಮಗು ಜೊತೆಗೆ ಹೇಗೆ ಬಾಂಧವ್ಯ ಬೆಳೆಸಬೇಕು ಹೇಗೆ ನೋಡಿಕೊಳ್ಳಬೇಕು, ಮಗು ಅತ್ತಾಗ ಹಾಲು ಕುಡಿಸಬೇಕು ಇವೆಲ್ಲ ಒತ್ತಡಗಳು ಇರುತ್ತವೆ. ಈ ಸಂದರ್ಭದಲ್ಲಿ ಸ್ವಲ್ಪ ಒತ್ತಡ ಸಾಮಾನ್ಯವಾದುದು. ಬರುವ ಮಗುವಿಗೆ ಹೊಸ ವ್ಯವಸ್ಥೆ ಇವುಗಳೆಲ್ಲ ಒತ್ತಡ ನೀಡುತ್ತದೆ. ಇದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೇ ?ಎಂಬುದು ಕೂಡ ಮುಖ್ಯ.

ಒತ್ತಡ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೇ ಎಂದು ಕೂಡ ಗರ್ಭಿಣಿ ಮಹಿಳೆ ಚಿಂತಿಸುವುದು ಕೂಡ ಇನ್ನೊಂದು ರೀತಿಯ ಒತ್ತಡ. ತಿಳಿದವರು ಹೇಳುವುದೇನೆಂದರೆ ಈ ರೀತಿಯ ಒತ್ತಡಗಳು ಕೂಡ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಚಿಂತಿಸುವುದರಿಂದ ಕಡಿಮೆ ತೂಕದ ಮಗು ಮತ್ತು ಅವಧಿಗೆ ಮೊದಲೇ ಮಗು ಜನಿಸುವುದು ಇವುಗಳಿಗೆ ಕಾರಣವಾಗುತ್ತದೆ. ಬಹುಶ ಕೆಲವು ಒತ್ತಡಗಳನ್ನು ನೀವು ಕಡಿಮೆ ಮಾಡಿಕೊಳ್ಳಬಹುದು ಆದ್ದರಿಂದ ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

1) 5 ನಿಮಿಷ ಶಾಂತಿ ಯನ್ನು ಕಾಪಾಡಿಕೊಳ್ಳಿ

1) 5 ನಿಮಿಷ ಶಾಂತಿ ಯನ್ನು ಕಾಪಾಡಿಕೊಳ್ಳಿ

ನೀವು ಹೊಸ ಮಗುವಿನ ಆಗಮನಕ್ಕೆ ತಯಾರಿ ನಡೆಸುವಲ್ಲಿ ತುಂಬಾ ಸಮಯ ಕಳೆಯುತ್ತಿರಬಹುದು. ಆದರೆ ಬಿಡದೇ ಕೆಲಸ ಮಾಡುವುದು ಕೂಡ ಒಳ್ಳೆಯದಲ್ಲ.ಸ್ವಲ್ಪ ಸಮಯ ವಿಶ್ರಾಂತಿಯ ಅಗತ್ಯ ಇರುತ್ತದೆ. ದಿನದ ಕೊನೆಯಲ್ಲಿ ಒಮ್ಮೆ ಬಬಲ್ ಬಾತ್ ಮಾಡಿ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಇದು ನಿಮಗಾಗುತ್ತಿರುವ ಬೆನ್ನು ನೋವಿಗೂ ಕೂಡ ಒಳ್ಳೆಯದು. ನೀರಿಗೆ ಸ್ವಲ್ಪ ಲ್ಯಾವೆಂಡರ್ ಎಣ್ಣೆಯನ್ನು ಕೂಡ ಬಳಸಿ ಇದು ನಿಮ್ಮನ್ನು ಶಾಂತಗೊಳಿಸುತ್ತದೆ.

2)ಮಸಾಜ್ ತೆಗೆದುಕೊಳ್ಳಿ

2)ಮಸಾಜ್ ತೆಗೆದುಕೊಳ್ಳಿ

ದೈಹಿಕವಾಗಿ ಮತ್ತು ಒತ್ತಡವನ್ನು ಕಡಿಮೆ ಮಾಡಲು ಎರಡಕ್ಕೂ ಮಸಾಜ್ ಉತ್ತಮ ವಿಧಾನ. ಮಸಾಜ್ ಆದ ನಂತರ ನಿಮಗೆ ಒತ್ತಡ ಮುಕ್ತ ಮತ್ತು ಶಾಂತ ಅನುಭವ ಆಗುತ್ತದೆ.

3)ಲೈಟ್ ವ್ಯಾಯಾಮಗಳನ್ನು ಮಾಡಿ

3)ಲೈಟ್ ವ್ಯಾಯಾಮಗಳನ್ನು ಮಾಡಿ

ಸಣ್ಣಪುಟ್ಟ ವ್ಯಾಯಾಮ ಮಾಡುವುದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಒಂದು ವಾಕ್ ಹೋಗುವುದು ಅಥವಾ ಯೋಗ ತರಗತಿಗೆ ಸೇರಿಕೊಳ್ಳುವುದು ಅಥವಾ ಸ್ವಿಮ್ ಮಾಡುವುದು ನಿಮಗೆ ಒತ್ತಡದಿಂದ ದೂರ ಆಗುವಂತೆ ಮಾಡುತ್ತದೆ. ಯೋಗದಲ್ಲಿ ಹೇಳಿಕೊಡುವ ಉಸಿರಾಟದ ಪ್ರಾಣಾಯಾಮಗಳು ನಿಮಗೆ ಸಹಾಯಕವಾಗುತ್ತದೆ.

4)ಸೂಜಿ ಚಿಕಿತ್ಸೆ

4)ಸೂಜಿ ಚಿಕಿತ್ಸೆ

ಅಕ್ಯುಪಂಚರ್ ಒತ್ತಡವನ್ನು ಕಡಿಮೆ ಮಾಡಲು ಉತ್ತಮ ವಿಧಾನ ಎಂದು ಸಾಬೀತಾಗಿದೆ. ಅಕ್ಯುಪಂಚರ್ ನಿಮ್ಮ ರಕ್ತ ಸಂಚಲನವನ್ನು ಸುಲಭಮಾಡಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಸೂಜಿ ಚಿಕಿತ್ಸಕರನ್ನು ಭೇಟಿ ಮಾಡಿ ಮಾಹಿತಿ ಪಡೆಯಿರಿ.

5) ಧ್ಯಾನ

5) ಧ್ಯಾನ

ಕೆಲವು ಮಹಿಳೆಯರಿಗೆ ಧ್ಯಾನ ಒತ್ತಡ ತಡೆಯಲು ಉತ್ತಮ ಮಾರ್ಗ. ದಿನದ ಒತ್ತಡವನ್ನು 15 ನಿಮಿಷ ಸುಮ್ಮನೆ ಕುಳಿತು ನಿವಾರಿಸಿಕೊಳ್ಳಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

6)ಯಾರೊಂದಿಗಾದರೂ ಮಾತನಾಡಿ

6)ಯಾರೊಂದಿಗಾದರೂ ಮಾತನಾಡಿ

ನೀವು ಗರ್ಭಿಣಿ ಎಂದು ತಿಳಿದ ತಕ್ಷಣ ಇಡೀ ಜಗತ್ತಿಗೆ ನಿಮ್ಮ ಬಗ್ಗೆ ಕುತೂಹಲ ಮೂಡುತ್ತದೆ.ನಿಮಗೆ ಒತ್ತಡ ಹೆಚ್ಚಿದಾಗ ನಿಮ್ಮ ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಮಾತನಾಡಿ. ಬೇರೆಯವರೊಂದಿಗೆ ಹಂಚಿಕೊಂಡರೆ ಒತ್ತಡ ಕಡಿಮೆ ಆಗುತ್ತದೆ ಮತ್ತು ನಿಮಗೆ ಉತ್ತಮ ಸಲಹೆಯೂ ದೊರೆಯಬಹುದು.

7)ಹಂಚಿಕೆ ಮತ್ತು ಆರೈಕೆ

7)ಹಂಚಿಕೆ ಮತ್ತು ಆರೈಕೆ

ನೀವು ಕೆಲಸ ಮಾಡಬೇಕಾದ ಲಿಸ್ಟ್ ದೊಡ್ಡದಾಗುತ್ತ ಹೋದಂತೆ ನಿಮ್ಮ ಒತ್ತಡ ಹೆಚ್ಚುತ್ತದೆ. ನಿಮ್ಮ ಮಗುವಿನ ಅಜ್ಜ ಅಜ್ಜಿಯರ ಸಲಹೆ ಪಡೆಯಿರಿ.ನಿಮಗೆ ಒಬ್ಬರಿಗೆ ಕೆಲಸ ಮಾಡಿ ಮುಗಿಸಲು ಸಾಧ್ಯವಾಗದಿದ್ದಲ್ಲಿ ಕುಟುಂಬದವರ ಅಥವಾ ಸ್ನೇಹಿತರ ಸಹಾಯ ಪಡೆಯಿರಿ. ಕೆಲಸ ಹಂಚಿಕೊಳ್ಳಿ ಮತ್ತು ನಿಮ್ಮ ಆರೈಕೆ ಹೆಚ್ಚಿಸಿಕೊಳ್ಳಿ.

8)ಸಣ್ಣ ನಿದ್ದೆ ಮಾಡಿ

8)ಸಣ್ಣ ನಿದ್ದೆ ಮಾಡಿ

ಇದು ಸಮಾನ್ಯವೆನಿಸಬಹುದು. ಆದರೆ ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ನಿದ್ದೆ ಸಾಕಷ್ಟು ಸಹಾಯ ಮಾಡುತ್ತದೆ. ನಿಮ್ಮ ಮಾಡಬೇಕಾದ ಕೆಲಸದ ಲಿಸ್ಟ್ ಹೆಚ್ಚಿದ್ದಾಗ ಹೇಳುವುದು ಸುಲಭ ಆದರೆ ನಿದ್ದೆ ಬರುವುದು ಸ್ವಲ್ಪ ಕಷ್ಟ. ನಿಮಗೆ ನಿದ್ದೆ ಬರುತ್ತದೆ ಎಂದು ಅನ್ನಿಸಿದರೆ ಕೆಲಸ ಬಿಟ್ಟು ನಿದ್ದೆ ಮಾಡಿ ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಬೇಕಿದ್ದರೆ ನಿಮ್ಮ ಅಡಿಯಲ್ಲಿ ದಿಂಬುಗಳನ್ನು ಇಟ್ಟುಕೊಂಡು ಮಲಗಿ ನಿಮಗೆ ಹಾಯೆನಿಸಬಹುದು.

9)ಇಲ್ಲ ಎಂದು ಖಡಾಖಂಡಿತವಾಗಿ ಹೇಳಲು ಪ್ರಾರಂಭಿಸಿ

9)ಇಲ್ಲ ಎಂದು ಖಡಾಖಂಡಿತವಾಗಿ ಹೇಳಲು ಪ್ರಾರಂಭಿಸಿ

ನಿಮ್ಮ ಮಗು ಹೊರಬರಲು ಕೇವಲ 3 ದಿನಗಳಿರುತ್ತದೆ ಆದರೆ ಆಫಿಸ್ ನಲ್ಲಿ ಬಾಸ್ 40 ಪೇಜಿನ ಕೆಲಸ ಮುಗಿಸಲು ಹೇಳುತ್ತಾರೆ. ಇಂತಹ ಸಮಯದಲ್ಲಿ ಇಲ್ಲ ಆಗುವುದಿಲ್ಲ ಎಂಬುದನ್ನು ಹೇಳಿಬಿಡಿ. ಕೆಲವು ಒತ್ತಡವನ್ನು ತಡೆಯಲಾಗದಿದ್ದರೆ ಕೆಲವನ್ನಾದರೂ ತಡೆಯಬಹುದು.ನಿಮ್ಮ ಕೆಲಸದ ಲಿಮಿಟ್ ಬಗ್ಗೆ ನಿಮಗೆ ಅರಿವಿರಲಿ.

10) ಇನ್ನು ಹೆಚ್ಚು ತಡವಿಲ್ಲ

10) ಇನ್ನು ಹೆಚ್ಚು ತಡವಿಲ್ಲ

ನಿಮ್ಮ ಮಗು ಈ ಭೂಮಿಗೆ ಬರಲು ಇನ್ನು ಹೆಚ್ಚು ದಿನವಿಲ್ಲ ಎಂಬುದನ್ನು ಹೇಳಿಕೊಳ್ಳಿರಿ. ಮಗು ಬಂದ ನಂತರ ನಿಮಗೆ ಈ ಎಲ್ಲಾ ಒತ್ತಡಗಳು ಸಣ್ಣವು ಎನಿಸುತ್ತದೆ. ಸದಾ ಲವಲವಿಕೆಯಿಂದಿರಿ ಮತ್ತು ನಿಮ್ಮ ಮಗುವನ್ನು ಬರಮಾಡಿಕೊಳ್ಳಲು ಸಿದ್ಧರಾಗಿ.

ಒಂದು ವೇಳೆ ನಿಮಗೆ ನಿದ್ದೆ ಬಾರದಿರುವುದರ ಬಗ್ಗೆ ಅಥವಾ ತೂಕ ಹೆಚ್ಚುತ್ತಿರುವುದರ ಬಗ್ಗೆ ಒತ್ತಡ ಹೆಚ್ಚಾಗಿದ್ದರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

English summary

10 Tips For Dealing With Stress In Pregnancy

It’s natural to feel worried during pregnancy, and some level of stress seems almost inevitable. You are busy organising every detail for the newest member of your family, whilst also dealing with a level of exhaustion you previously didn’t know existed.Here are the tips for deal your stress.
X
Desktop Bottom Promotion