For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬಾರದ 10 ಔಷಧಿಗಳು

By Super
|

ಗರ್ಭಾವಸ್ಥೆಯಲ್ಲಿ ಇರುವ ಮಹಿಳೆ ತಿನ್ನುವ ಎಲ್ಲಾ ವಸ್ತುಗಳ ಮೇಲೆ ಗಮನವಿರಿಸಬೇಕಾಗಿದೆ. ತಾಯಿ ತೆಗೆದುಕೊಳ್ಳುವ ಪ್ರತಿ ಆಹಾರ ಮತ್ತು ಮಾತ್ರೆ ಔಷದಿಗಳಿಂದಾಗಿ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ತಲೆನೋವು,ಹೊಟ್ಟೆನೋವು ಈ ರೀತಿಯ ವಿಷಯಗಳಿಗೆ ವೈದ್ಯರನ್ನು ಕಂಡು ಅದಕ್ಕೆ ಅವರು ಸೂಚಿಸಿದಂತೆ ನಡೆದುಕೊಳ್ಳುವುದು ಸೂಕ್ತ.

ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗರ್ಭಪಾತವಾಗುವ ಸಂಭವ ಹೆಚ್ಚು. ಆದ್ದರಿಂದ ಗರ್ಭಿಣಿಯಾದಾಗ ಆರೈಕೆಯ ಜೊತೆಗೆ ಈ ಕೆಳಗಿನ ಔಷಧಿಗಳಿಂದ ದೂರವಿರುವುದು ಒಳ್ಳೆಯದು.

ನೋವು ನಿವಾರಕ ಮಾತ್ರೆ

ನೋವು ನಿವಾರಕ ಮಾತ್ರೆ

ನೋವು ನಿವಾರಕ ಔಷಧಿಗಳಾದ ಆಸ್ಪಿರಿನ್ ಮತ್ತು ಇಬುಪ್ರೋಫೇನ್ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.ಆದ್ದರಿಂದ ತಾಯಿಗೆ ತಲೆನೋವು ಬಂದರೆ ನೈಸರ್ಗಿಕ ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು.

ಆಂಟಿಫಂಗಲ್ ಔಷಧಿಗಳು

ಆಂಟಿಫಂಗಲ್ ಔಷಧಿಗಳು

ಗರ್ಭಿಣಿಯಾದಾಗ ಶಿಲೀಂಧ್ರಗಳ ತೊಂದರೆ ಸಾಮಾನ್ಯವಾದುದು.ಆದರೆ ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ.

ಮೊಡವೆ ಚಿಕಿತ್ಸೆ

ಮೊಡವೆ ಚಿಕಿತ್ಸೆ

ಗರ್ಭಧಾರಣೆ ಸಂದರ್ಭದಲ್ಲಿ ಹಾರ್ಮೋನ್ ಗಳ ಏರುಪೇರಿನಿಂದಾಗಿ ಮೊಡವೆ ಆಗಬಹುದು.ಆ ದರೆ ಇದಕ್ಕೆ ಚಿಕಿತ್ಸೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಅದು ಹಾಗೆಯೇ ಕಡಿಮೆ ಆಗಲು ಅವಕಾಶ ಕೊಡಿ.

ಜ್ವರದ ಮಾತ್ರೆ

ಜ್ವರದ ಮಾತ್ರೆ

ಪ್ಯಾರಾಸಿಟಮಾಲ್ ಅಂಶವಿರುವ ಜ್ವರದ ಮಾತ್ರೆಗಳನ್ನು ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳುವುದನ್ನು ತಡೆಯಿರಿ.ಹೈ ಡೋಸ್ ಇರುವ ಪ್ಯಾರಸಿಟಮಾಲ್ ಅಂಶ ಮೊದಲ ಮೂರು ತಿಂಗಳಲ್ಲಿ ಭ್ರೂಣದ ಬೆಳವಣಿಗೆಗೆ ಅಡಚಣೆ ನೀಡುತ್ತದೆ.

ಖಿನ್ನತೆಗೆ ಔಷಧಿ

ಖಿನ್ನತೆಗೆ ಔಷಧಿ

ಖಿನ್ನತೆ ತಡೆಯಲು ಗರ್ಭಾವಸ್ಥೆಯಲ್ಲಿ ಮಾತ್ರೆ ಅಥವಾ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ.ಇದು ಹುಟ್ಟಿನ ನ್ಯೂನ್ಯತೆ ತರಬಹುದು. ಆದ್ದರಿಂದ ಖಿನ್ನತೆಯನ್ನು ಮತ್ತು ಒತ್ತಡವನ್ನು ತಡೆಯಲು ಯೋಗ ಮತ್ತು ಧ್ಯಾನ ಮಾಡುವುದು ಒಳ್ಳೆಯದು.

ಅಲರ್ಜಿ ಔಷಧಿಗಳು

ಅಲರ್ಜಿ ಔಷಧಿಗಳು

ಆಂಟಿ ಫಂಗಸ್ ನಂತೆ ಆಂಟಿ ಅಲೆರ್ಜಿ ಡ್ರಗ್ಸ್ ಅನ್ನು ಕೂಡ ತೆಗೆದುಕೊಳ್ಳುವುದನ್ನು ತಡೆಯಬೇಕು.ಸ್ವಾಭಾವಿಕವಾಗಿ ಅಲರ್ಜಿಯಿಂದ ಹೊರಬರುವ ಪ್ರಯತ್ನ ಮಾಡಬೇಕು.ಉದಾಹರೆಣೆಗೆ ಧೂಳಿನಿಂದ ದುರವಿರಬೇಕು, ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಉತ್ತಮ ಪೋಷಣೆ ನೀಡುವ ಆಹಾರ ತಿನ್ನುವ ಮೂಲಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು.

ಆಂಟಿಬಯೋಟಿಕ್ಸ್(Antibiotics)

ಆಂಟಿಬಯೋಟಿಕ್ಸ್(Antibiotics)

ಗರ್ಭಿಣಿ ಮಹಿಳೆಗೆ ಯಾವುದೇ ಆಂಟಿಬಯೋಟಿಕ್ಸ್ ತಿನ್ನುವುದು ಒಳ್ಳೆಯದಲ್ಲ. ಆದರೆ ಅನಿವಾರ್ಯವಾದಲ್ಲಿ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ನಡೆದುಕೊಳ್ಳಿ.

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಔಷಧಿಗಳು

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಔಷಧಿಗಳು

ಗರ್ಭಿಣಿ ಇರುವಾಗ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಡಿ. ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.ಇದಕ್ಕೆ ಬೇರೆ ರೀತಿಯ ಪರಿಹಾರವನ್ನು ಕಂಡುಕೊಳ್ಳಿರಿ.

ಸ್ಲೀಪಿಂಗ್ ಮಾತ್ರೆ

ಸ್ಲೀಪಿಂಗ್ ಮಾತ್ರೆ

ಪುರುಷರಾಗಲಿ ಅಥವಾ ಮಹಿಳೆಯರು, ಸ್ಲೀಪಿಂಗ್ ಮಾತ್ರೆಯನ್ನು ಪ್ರತಿದಿನ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಅದರಲ್ಲೂ ಗರ್ಭಿಣಿ ಮಹಿಳೆಯರು ತೆಗೆದುಕೊಳ್ಳಲೇಬಾರದು.

 ಗಿಡ ಮೂಲಿಕೆಗಳು

ಗಿಡ ಮೂಲಿಕೆಗಳು

ಇದು ನೈಸರ್ಗಿಕ ಸಸ್ಯಗಳು ಮತ್ತು ಪ್ರಕೃತಿದತ್ತ ಆದರೂ ಕೂಡ ಔಷಧೀಯ ಸಸ್ಯಗಳ ಮೂಲಿಕೆಗಳನ್ನು ಗರ್ಭಿಣಿ ಇರುವಾಗ ಸೇವಿಸುವುದು ಸೂಕ್ತವಲ್ಲ.ಉದಾಹರಣೆಗೆ ಆಲೋವೆರ,ರೋಸ್ಮರಿ ಇನ್ನಿತರ ಮೂಲಿಕೆಗಳು.

ಇವುಗಳು ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಲು ನಿರಾಕರಿಸಬೇಕಾದ ವಿವಿಧ ಔಷಧಿಗಳು.

English summary

10 Drugs that should be avoided during pregnancy

Everything that is consumed by pregnant women need to be considered properly. Like drugs, because it influence not only on the mother but also the baby. Consider the drugs that should be avoided during pregnancy, as reported by Mag for Women below.
X
Desktop Bottom Promotion