For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಬಗೆಯ ಸುಳ್ಳು ಕಲ್ಪನೆಗಳ ಗುಟ್ಟು ಬಯಲು

By Super
|

ಪ್ರತಿಯೊಂದು ಹೆಣ್ಣಿನ ಜೀವನದಲ್ಲಿ ಗರ್ಭಾವಸ್ಥೆ ಎಂಬುದು ಪ್ರಮುಖ ಹಂತ. ಅದು ಒಂದು ಸೂಕ್ಷ್ಮವಾದ ಘಟ್ಟವು ಹೌದು. ಹೆಣ್ಣಿನ ಪ್ರತಿ ಹೆರಿಗೆಯನ್ನು ಆಕೆಯ ಪುನರ್ಜನ್ಮ ಎಂದೇ ಭಾವಿಸಲಾಗುತ್ತದೆ. ಹೆರಿಗೆ ಎಂಬುದು ಪ್ರಾಕೃತಿಕ ಕ್ರಿಯೆ ಆದರೂ, ಅದರ ಕುರಿತು ನಾವು ಎಷ್ಟು ಕಾಳಜಿಯನ್ನು ತೆಗೆದುಕೊಂಡರು ಕಡಿಮೆಯೇ. ಒಂದು ಹೊಸ ಜೀವಕ್ಕೆ ಜನ್ಮ ಕೊಡುವುದೆಂದರೇ ಸಾಮಾನ್ಯ ಕೆಲಸವೇ?

ಒಂದು ಹೆಣ್ಣು ಗರ್ಭಿಣೆಯಾಗಿರುವಾಗ ಆಕೆಯನ್ನ ಎಲ್ಲರೂ ವಿಶೇಷ ದೃಷ್ಟಿಯಿಂದಲೇ ನೋಡುತ್ತಾರೆ. ಅನೇಕ ಸಲಹೆ ಸೂಚನೆಗಳನ್ನು ಕೊಡಲು ಆರಂಭಿಸುತ್ತಾರೆ. ಒಂದೊಂದು ಸಲ ಈ ಸಲಹೆ ಸೂಚನೆಗಳು ಎಷ್ಟಾಗುತ್ತವೆ ಎಂದರೆ ಸ್ವತಃ ಗರ್ಭಿಣೆ ಸ್ತ್ರೀಯರಿಗೆ ಈ ಕುರಿತು ಗೊಂದಲ ಆಗುವುದುಂಟು.

ಗರ್ಭಿಣೆಯರಿಗೆ ಇದು ಮಾಡು. ಅದನ್ನು ಮಾಡಬೇಡ ಎನ್ನುವಂತಹ ಅನೇಕ ಸಲಹೆ ಸೂಚನೆಗಳು ಗರ್ಭಾವಸ್ಥೆಯ ಸಮಯದಲ್ಲಿ ಸಿಗುತ್ತವೆ. ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು, ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂದು ನಿರ್ಧರಿಸುವುದು ಕಷ್ಟ. ಆದರೆ ನೆನೆಪಿನಲ್ಲಿಡಿ. ಪ್ರತಿಯೊಂದು ಗರ್ಭಾವಸ್ಥೆಯು ವಿಭಿನ್ನವಾಗಿರುತ್ತದೆ. ಆದ್ದರಿಂದ ನೀವು ವೈದ್ಯರ ಆದೇಶಗಳನ್ನು ಅಗತ್ಯವಾಗಿ ಪಾಲಿಸಬೇಕು. ಇಲ್ಲಿ ನೀವು ಗರ್ಭಾವಸ್ಥೆಯಲ್ಲಿರುವಾಗ ಪದೇ ಪದೇ ಕೇಳುವ ಕೆಲವು ವಿಷಯಗಳಿವೆ. ಅವು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದನ್ನು ಪರಿಶೀಲಿಸಿ.

ಕಲ್ಪನೆ 1

ಕಲ್ಪನೆ 1

ಒಂದು ಸಾಮಾನ್ಯ ಕಲ್ಪನೆಯ ಪ್ರಕಾರ ಗರ್ಭಿಣೆಯ ಹೊಟ್ಟೆಯ ರಚನೆಯನ್ನು ಮಗುವಿನ ಲಿಂಗವು ನಿರ್ಧರಿಸುತ್ತದೆ. ಒಂದು ವೇಳೆ ಗರ್ಭಿಣೆಯ ಹೊಟ್ಟೆಯು ಹೆಚ್ಚಾಗಿದ್ದರೆ, ಅದು ಹೆಣ್ಣು ಮಗುವೆಂದು, ಹೊಟ್ಟೆಯು ಸಣ್ಣಗಿದ್ದರೆ ಅದು ಗಂಡ ಮಗುವೆಂದು ಭಾವಿಸಲಾಗುತ್ತದೆ.

ವಾಸ್ತವಾಂಶ : ಅನುಭವಿ ತಜ್ಞರ ಪ್ರಕಾರ ಈ ಊಹೆಗೆ ಯಾವುದೇ ರೀತಿಯ ವೈಜ್ಞಾನಿಕ ಆಧಾರವಿಲ್ಲ. ಗರ್ಭಿಣೆ ಮಹಿಳೆಯ ಮೂಳೆ ಮಾಂಸಗಳ ಗಾತ್ರ, ರಚನೆ ಮತ್ತು ಭ್ರೂಣದ ಸ್ಥಾನ, ಅದರ ಭಂಗಿ ಮತ್ತು ಅವಳ ಕಿಬ್ಬೊಟ್ಟೆಯ ಸುತ್ತಲೂ ಶೇಖರವಾಗಿರುವ ಕೊಬ್ಬಿನ ಪ್ರಮಾಣಗಳು ಅವಳ ಹೊಟ್ಟೆ ಗಾತ್ರ ಮತ್ತು ರಚನೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕಲ್ಪನೆ 2

ಕಲ್ಪನೆ 2

ನೀವು ಗರ್ಭಿಣೆ ಆಗಿರುವಾಗ ಉಪ್ಪು ಮತ್ತು ಹುಳಿಯಾದ ಆಹಾರ ಪದಾರ್ಥಗಳನ್ನು ಸೇವಿಸಲು ಇಷ್ಟ ಪಟ್ಟರೆ ನಿಮಗೆ ಗಂಡು ಮಗು ಆಗುವುದೆಂದು, ಒಂದು ವೇಳೆ ನೀವು ಗರ್ಭಿಣೆ ಆಗಿರುವಾಗ ಸಿಹಿಯಾದ ಆಹಾರ ಪದಾರ್ಥಗಳನ್ನು ಸೇವಿಸಲು ಇಷ್ಟ ಪಟ್ಟರೆ ನಿಮಗೆ ಹೆಣ್ಣು ಮಗು ಆಗುವುದೆಂಬ ನಿರೀಕ್ಷೆ ಇರುತ್ತದೆ.

ವಾಸ್ತವಾಂಶ: ಇದು ಸುಳ್ಳು. ಸಂಶೋಧನೆಗಳ ಪ್ರಕಾರ ನಿಮ್ಮ ಯಾವುದೇ ರೀತಿಯ ಆಹಾರ ಕ್ರಮವು ನಿಮ್ಮ ಮಗುವಿನ ಲಿಂಗವನ್ನು ನಿರ್ಧರಿಸುವುದಿಲ್ಲ.

ಕಲ್ಪನೆ 3

ಕಲ್ಪನೆ 3

ಗರ್ಭದಲ್ಲಿರುವ ಮಗುವಿನ ಲಿಂಗವನ್ನು ಊಹಿಸುವುದು. ಒಂದು ಉಂಗುರದ ಸಹಾಯದೊಂದಿಗೆ ತಂತಿಯನ್ನು ಹಿಡಿದು ಗರ್ಭಿಣೆಯ ಹೊಟ್ಟೆಯ ಮೇಲೆ ಆಡಿಸಿದಾಗ ಅದು ಹಿಂದೆ ಮುಂದೆ ಚಲಿಸಿದರೆ ಅದು ಗಂಡೆಂದು, ಅದು ವೃತ್ತಾಕಾರವಾಗಿ ಚಲಿಸಿದರೆ ಅದು ಹೆಣ್ಣೆಂದು ನಿರ್ಧರಿಸುವುದು ಅಥವಾ ಊಹಿಸುವುದು.

ವಾಸ್ತವಾಂಶ: ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನೀವು ನಗುವಿಗಾಗಿ ಮತ್ತು ವಿನೋದಕ್ಕಾಗಿ ಈಗ ಪ್ರಯೋಗವನ್ನು ಮಾಡಬಹುದು.

ಕಲ್ಪನೆ 4

ಕಲ್ಪನೆ 4

ನೀವು ಗರ್ಭಿಣೆಯಾಗಿದ್ದಾಗ ಎದೆಯುರಿಯಿಂದ ಬಳಲುತ್ತಿದ್ದರೆ, ಆಗ ನಿಮಗ ಅತಿ ಹೆಚ್ಚು ಕೂದಲು ಉಳ್ಳ ಮಗು ಜನಿಸುತ್ತದೆ. ಗರ್ಭಿಣೆ ಸ್ತ್ರೀಯರಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದ್ದು, ನಿಮ್ಮ ಮಗುವಿನ ಅತಿಯಾದ ಕೂದಲುಗಳಿಗೆ ಏನು ಮಾಡಲು ಬರುವುದಿಲ್ಲ.

ವಾಸ್ತವಾಂಶ: ಅತಿಯಾದ ಎದೆಯುರಿಯಿಂದ ಬಳಲಿದ ಗರ್ಭಿಣೆ ಸ್ತ್ರೀಯರು ಬಕ್ಕ ತಲೆಯ ಶಿಶುಗಳಿಗೆ ಜನ್ಮ ನೀಡಿದ ಸಾಕಷ್ಟು ಉದಾಹರಣೆಗಳಿವೆ.

ಕಲ್ಪನೆ 5

ಕಲ್ಪನೆ 5

ನಿಮ್ಮ ತಾಯಿಗೆ ಸುಲಭದ ಗರ್ಭಧಾರಣೆ ಮತ್ತು ಹೆರಿಗೆ ಆಗಿದ್ದರೆ, ನಿಮಗೂ ಸಹ ಅದೇ ರೀತಿ ಆಗುತ್ತದೆ

ವಾಸ್ತವಾಂಶ: ಅನುವಂಶಿಕ ಗುಣಗಳು ನಿಮ್ಮ ಗರ್ಭಧಾರಣೆಯ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ನಿಮ್ಮ ಹೆರಿಗೆ ಕಷ್ಟಕರವಾಗುತ್ತದೆ ಮತ್ತು ಸುಲಭವಾಗುತ್ತದೆ ಎಂಬ ಅಂಶಗಳನ್ನು ನಿರ್ಧರಿಸುವುದಿಲ್ಲ. ಇಲ್ಲಿ ಯಾವುದೇ ಊಹೆಗಳಿಗೆ ಅವಕಾಶ ಇರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಿಮ್ಮ ಗರ್ಭದಲ್ಲಿರುವ ಮಗುವಿನ ಭಂಗಿ, ಅದರ ಗಾತ್ರ ಮತ್ತು ನಿಮ್ಮ ಆಹಾರ ಮತ್ತು ಜೀವನ ಶೈಲಿ ನಿಮ್ಮ ಗರ್ಭಧಾರಣೆ ಮತ್ತು ಹೆರಿಗೆಯ ಪ್ರಕ್ರಿಯೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ.

ಕಲ್ಪನೆ 6

ಕಲ್ಪನೆ 6

ನೀವು ಕುಳಿತುಕೊಂಡು ಒಂದು ಸಣ್ಣ ನಿದ್ದೆ ಮಾಡಿದರೆ ನಿಮ್ಮ ಮಗುವಿಗೆ ಅಪಾಯವಾಗುತ್ತದೆ.

ವಾಸ್ತವಾಂಶ: ನೀವು ನಿಮಗೆ ಅನುಕೂಲಕರವಾದ ಮಗ್ಗುಲಲ್ಲಿ ಈ ಸ್ಥಿತಿಯಲ್ಲಿ ಕುಳಿತುಕೊಂಡು ಒಂದು ಸಣ್ಣ ನಿದ್ದೆ ಮಾಡುವುದರಿಂದ ನಿಮ್ಮ ಮಗುವಿಗೆ ಯಾವುದೇ ರೀತಿಯ ಅಪಾಯವು ಉಂಟಾಗುವುದಿಲ್ಲ. ತಜ್ಞರ ಪ್ರಕಾರ ನೀವು ಎಡ ಮಗ್ಗುಲಲ್ಲಿ ಕಿರು ನಿದ್ದೆಯನ್ನು ಮಾಡಿದರೆ ನಿಮ್ಮ ರಕ್ತ ಚಲನೆಯು ನಿಮ್ಮ ಗರ್ಭಾಶಯ ಮತ್ತು ಗರ್ಭವೇಷ್ಟನದ (ಪ್ಲಾಸೆಂಟಾ) ಕಡೆಗೆ ಸುಗಮವಾಗಿ ಹರಿಯುತ್ತದೆ.

ಕಲ್ಪನೆ 7

ಕಲ್ಪನೆ 7

ಲೈಂಗಿಕ ಕ್ರಿಯೆ ನಡೆಸುವುದರಿಂದ ನಿಮ್ಮ ಗರ್ಭದಲ್ಲಿರುವ ಮಗುವಿಗೆ ಅಪಾಯವಾಗಬಹುದು.

ವಾಸ್ತವಾಂಶ: ಇದು ಸುಳ್ಳು. ನಿಮ್ಮ ಗರ್ಭದಲ್ಲಿರುವ ಮಗುವನ್ನು ರಕ್ಷಿಸಲು ಕಿಬ್ಬೊಟ್ಟೆಯಿಂದ ಗರ್ಭ ಕವಚದ ಒಳಗಡೆವರೆಗೂ ಏಳು ಪದರದ ಚರ್ಮವಿದೆ. ಇದು ನಿಮ್ಮ ಗರ್ಭದಲ್ಲಿರುವ ಮಗುವಿಗೆ ಎಲ್ಲ ರೀತಿಯಿಂದಲೂ ರಕ್ಷಣೆಯನ್ನು ನೀಡುತ್ತವೆ. ನಿಮ್ಮ ಗರ್ಭಕೋಶವು ಉದ್ದ ಮತ್ತುಗಟ್ಟಿಯಾಗಿದ್ದು, ಇದು ಗರ್ಭಾಶಯದ ಒಳಗಡೆ ಏನನ್ನು ಹೋಗಲು ಬಿಡುವುದಿಲ್ಲ. ಮತ್ತು ಇದು ಗರ್ಭಾಶಯದ ಪ್ರದೇಶವನ್ನು ಶುದ್ದವಾಗಿರಿಸಲು ಮತ್ತು ಸೋಂಕುರಹಿತವನ್ನಾಗಿಸಲು ಲೋಳೆಯನ್ನು ಉತ್ಪಾದಿಸುತ್ತದೆ. ಹೀಗಾಗಿ ನೀವು ಮಾಡುವ ಲೈಂಗಿಕ ಕ್ರಿಯಿಯಿಂದ ನಿಮ್ಮ ಮಗುವಿಗೆ ಯಾವುದೇ ರೀತಿಯ ಹಾನಿ ಆಗದು. ಅದು ನಿಮ್ಮ ಮಗುವಿನವರೆಗೂ ತಲುಪುವುದಿಲ್ಲ ಮತ್ತು ಸ್ಪರ್ಶಿಸುವುದಿಲ್ಲ. ಬೇರೆ ಕಾರಣಗಳಿಗಾಗಿ ನಿಮ್ಮ ವೈದ್ಯರು ನಿಮಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಕೊಳ್ಳಬೇಡಿ ಎಂದು ಸಲಹೆ ನೀಡದಿದ್ದರೆ, ನೀವು ಆತಂಕರಹಿತರಾಗಿ ಲೈಂಗಿಕತೆಯ ಸಂತೋಷವನ್ನು ಅನುಭವಿಸಿ.

ಕಲ್ಪನೆ 8

ಕಲ್ಪನೆ 8

ಮೊದಲ ಶಿಶುಗಳು ಯಾವಾಗಲೂ ತಡವಾಗಿ ಜನನವಾಗುತ್ತವೆ.

ವಾಸ್ತವಾಂಶ: ಇದು ಕೆಲಮಟ್ಟಿಗೆ ನಿಜ. ಶೇಕಡ 60 ರಷ್ಟು ಮೊದಲ ಶಿಶುಗಳು ಯಾವಾಗಲೂ ತಡವಾಗಿ ಜನನವಾಗುತ್ತವೆ. ಅದರಲ್ಲಿ ಶೇಕಡ 5 ರಷ್ಟು ಶಿಶುಗಳು ಸರಿಯಾದ ಸಮಯಕ್ಕೆ ಜನನವಾದರೆ, ಶೇಕಡ 35 ರಷ್ಟು ಶಿಶುಗಳು ಅವಧಿಯ ಮುಂಚೆ ಹುಟ್ಟುತ್ತವೆ. ನಿಜ ಹೇಳಬೆಕೆಂದರೆ ನಿಮ್ಮ ಋತು ಚಕ್ರವು ನಿಮ್ಮ ಮಗುವಿನ ಆಗಮನದ ಸಮಯವನ್ನು ನಿರ್ಧರಿಸುತ್ತದೆ. ಒಂದು ವೇಳೆ ನಿಮ್ಮ ಋತು ಚಕ್ರವು ಕಡಿಮೆ ಅವಧಿಯದ್ದಾಗಿದ್ದರೆ, ನೀವು ಮಗುವಿಗೆ ಬೇಗನೆ ಜನ್ಮ ಕೊಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಒಂದು ವೇಳೆ ನಿಮ್ಮ ಋತು ಚಕ್ರವು ಹೆಚ್ಚಿನ ಅವಧಿಯದ್ದಾಗಿದ್ದರೆ, ನೀವು ಮಗುವಿಗೆ ತಡವಾಗಿ ಜನ್ಮ ಕೊಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ನೀವು ಋತು ಚಕ್ರವು ಸರಿಯಾಗಿ 28 ದಿವಸಕ್ಕೆ ಆರಂಭವಾಗುತ್ತಿದ್ದರೆ, ನೀವು ಮಗುವಿಗೆ ಸರಿಯಾದ ಸಮಯಕ್ಕೆ ಜನ್ಮ ಕೊಡುವ ಸಾಧ್ಯತೆಗಳು ಹೆಚ್ಚಿರುತ್ತವೆ

ಕಲ್ಪನೆ 9

ಕಲ್ಪನೆ 9

ನೀವು ಗರ್ಭಿಣೆಯಾಗಿರುವಾಗ ಮೊದಲ ಹಾಗೂ ಕೊನೆಯ ಮೂರು ತಿಂಗಳುಗಳಲ್ಲಿ ವಾಯುಯಾನ ಪ್ರಯಾಣವನ್ನು ಕೈಗೊಳ್ಳುವಂತಿಲ್ಲ.

ವಾಸ್ತವಾಂಶ: ಇದು ಸುಳ್ಳು. ನೀವು ಗರ್ಭಿಣೆ ಆಗಿರುವ ಯಾವುದೇ ಸಮಯದಲ್ಲಿ ವಾಯುಯಾನ ಪ್ರಯಾಣವನ್ನು ಕೈಗೊಳ್ಳಬಹುದು. ಆದರೆ ಕೆಲವೊಂದು ವಿಮಾನ ಸಂಸ್ಥೆಗಳು ನಿಮಗೆ ಕೊನೆಯ ಮೂರು ತಿಂಗಳಲ್ಲಿ ವಾಯುಯಾನ ಪ್ರಯಾಣವನ್ನು ಕೈಗೊಳ್ಳಲು ಅವಕಾಶ ಕೊಡುವುದಿಲ್ಲ. ಇದಕ್ಕೆ ಕಾರಣ ಏನೆಂದರೆ, ನೀವು ಮಧ್ಯದಲ್ಲಿ ಎಲ್ಲಿ ವಿಮಾನವನ್ನು ಎಲ್ಲಿ ನಿಲ್ಲಿಸು ಅಂತ ಹೇಳುತ್ತಿರಿ. ಯಾವ ಸಮಯದಲ್ಲಿ ನಿಮಗೆ ಹೆರಿಗೆ ನೋವು ಕಾಣಿಸುತ್ತದೆ ಎಂಬ ಭಯ ಆ ಸಂಸ್ಥೆಗಳಿಗಿರುತ್ತದೆ. ಕೆಲ ವಿಮಾನಯಾನ ಸಂಸ್ಥೆಗಳಿಗೆ ಗರ್ಭಿಣೆಯರು ಬಂದರೆ ಅಲ್ಲಿನ ಕೆಲವು ವಸ್ತುಗಳು ಹಾಳಾಗುತ್ತವೆ ಎಂಬ ನಂಬಿಕೆ ಇದೆ.

ಕಲ್ಪನೆ 10

ಕಲ್ಪನೆ 10

ನೀವು ಗರ್ಭಿಣೆಯಾಗಿರುವಾಗ ಬಿಸಿ ನೀರಿನ ಸ್ನಾನವನ್ನು ಮಾಡಬಾರದು.

ವಾಸ್ತವಾಂಶ: ಇದು ಸತ್ಯ. ನೀವು ಗರ್ಭಿಣೆಯಾಗಿರುವಾಗ ಆವಿ ತೊಟ್ಟಿ ಸ್ನಾನ, ಜಕುಝಿಗಳನ್ನು ಜೊತೆಗೆ ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವ ಅಂದರೆ 102 ಡಿಗ್ರಿ ತಾಪಮಾನವನ್ನು ಮೀರಿಸುವ ಯಾವುದೇಅಥವಾ ಸ್ನಾನದ ವಿಧಾನವನ್ನು ತ್ಯಜಿಸಬೇಕು.

English summary

10 Common Pregnancy Myths Busted

Every pregnancy is different, so follow your doctor's orders above all else. Here are some things you often hear when the stork has decided to pay a visit.
X
Desktop Bottom Promotion