ಮಗು ಗರ್ಭಾವಸ್ಥೆಯಲ್ಲಿಯೆ ಬೆರಳು ಚೀಪುತ್ತೆ

Fourth Month Pregnancy Symptoms
3ನೇ ತಿಂಗಳ ಗರ್ಭಾವಸ್ಥೆ ನಂತರ ಎರಡನೇ ತ್ರೈಮಾಸಿಕ ಅಂದರೆ ನಾಲ್ಕನೇ ತಿಂಗಳು ಹಿಡಿಯುತ್ತದೆ. ಈ ತಿಂಗಳಿನಲ್ಲಿ ಹೊಟ್ಟೆ ಮತ್ತಷ್ಟು ದೊಡ್ಡದಾಗುತ್ತದೆ. ಈ ತಿಂಗಳಿನಲ್ಲಿ ಕಾಣಿಸುವ ಲಕ್ಷಣಗಳ ಬಗ್ಗೆ ತಿಳಿಯೋಣ.

4ನೇ ತಿಂಗಳಿನಲ್ಲಿ ಕಾಣಿಸುವ ಲಕ್ಷಣಗಳು:

ಮೊದಲನೇ ವಾರದಲ್ಲಿ:
* ಭ್ರೂಣದ ಮಗುವಿನಾಕಾರ ಸ್ಪಷ್ಟವಾಗಿ ಗೋಚರವಾಗುತ್ತದೆ.
* ಕಾಲಿನ ಮತ್ತು ಕೈಯ ಬೆರಳುಗಳು ಮೂಡಲಾರಂಭಿಸುತ್ತವೆ.
* ಹೊಟ್ಟೆ ತುಂಬಾ ಹಸಿವು ಆಗುತ್ತದೆ. ಅಲ್ಲದೆ ಏನಾದರು ತಿನ್ನುತ್ತಲೇ ಇರಬೇಕೆನಿಸುತ್ತದೆ.

ಎರಡನೇ ವಾರ:
* ಹೊಟ್ಟೆಯಲ್ಲಿ ಸ್ಟ್ರಚ್ ಮಾರ್ಕ್ಸ್ ಬೀಳುತ್ತದೆ. ದೇಹದ ತೂಕ ಸ್ವಲ್ಪ ಹೆಚ್ಚಾಗುತ್ತದೆ.
* ಭ್ರೂಣಕ್ಕೆ ಸಂಪೂರ್ಣ ಮನುಷ್ಯ ಆಕಾರ ಬರಲಾರಂಭಿಸುತ್ತದೆ.

3ನೇ ವಾರ:
* ಮಗುವಿನಲ್ಲಿ ಚಲನೆಯು ಅನುಭವಕ್ಕೆ ಬರುತ್ತದೆ.
* ಮಲಗುವಾಗ ಎಡ ಭಾಗದಲ್ಲಿ ತಿರುಗಿ ಮಲಗಿ.
* ಮಗು ಹೊಟ್ಟೆಯಲ್ಲಿಯೆ ಹೆಬ್ಬೆರಳನ್ನು ಚೀಪುತ್ತದೆ, ಆಕಳಿಸುತ್ತದೆ ಈ ಚಲನೆಯನ್ನು ಅಲ್ಟ್ರಾ ಸೌಂಡ್ ನಲ್ಲಿ ನೋಡಿ ಗೊತ್ತಾಗುತ್ತೆ.

4ನೇ ವಾರ:
* ಮೂತ್ರವಿಸರ್ಜನೆಗೆ ಸ್ವಲ್ಪ ಕಷ್ಟವಾಗಬಹುದು.
* ಕಾಲುಗಳಲ್ಲಿ ನೋವು ಕಂಡು ಬರುವುದು.
* ಈ ಸಂದರ್ಭದಲ್ಲಿ ಗರ್ಭಿಣಿಯರಿಗಾಗಿ ತಯಾರಿಸಿದ ಶೂ ಬಳಸಿ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.