For Quick Alerts
ALLOW NOTIFICATIONS  
For Daily Alerts

ಮುಟ್ಟಿನಲ್ಲೂ ಗರ್ಭಧರಿಸಬಹುದು ಜೋಕೆ..!

|
Pregnant During Menstruation
ಮುಟ್ಟಿನ ಸಮಯದಲ್ಲಿ ಗರ್ಭಧಾರಣೆಯಾಗುವುದಿಲ್ಲ ಎಂದು ಅನೇಕ ಮಹಿಳೆಯರು ನಂಬುತ್ತಾರೆ. ಆದರೆ ಈ ಸಮಯದಲ್ಲೂ ಗರ್ಭಧರಿಸುವ ಸಾಧ್ಯತೆ ಇದೆ. ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆಗೆ ಅನುಸಾರವಾಗಿ ಕೆಲವರಿಗೆ ಗರ್ಭಧಾರಣೆಯಾಗಬಹುದು, ಇನ್ನು ಕೆಲವರಿಗೆ ಆಗುವುದಿಲ್ಲ.

ಸಾಮಾನ್ಯವಾಗಿ ಈ ಸಮಯದಲ್ಲಿ ಗರ್ಭಧಾರಣೆಯಾಗುವುದು ತುಂಬಾ ವಿರಳ. ಆದರೆ ಒವ್ಯೂಲೇಶನ್ ಸಮಯದಲ್ಲಿ ಗರ್ಭದಲ್ಲಿ ಅಧಿಕ ಅಂಡಾಣುಗಳು ಬಿಡುಗಡೆಯಾಗುತ್ತದೆ. ಮಹಿಳೆಯರಲ್ಲಿ ಈ ರೀತಿಯ ಒವ್ಯೂಲೇಶನ್ ಮುಟ್ಟುವಿಗೆ 14 ದಿನ ಮುಂಚಿತವಾಗಿ ಉಂಟಾಗುತ್ತದೆ. ಈ ಸಮಯದಲ್ಲಿ ಮಹಿಳೆ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು.

ಒವ್ಯೂಲೇಶನ್ ನಂತರ ಅಂಡಾಣುಗಳು ಯೂಟ್ರಸ್ ನಲ್ಲಿರುವ ವೀರ್ಯಾಣುನೊಂದಿಗೆ ಸೇರಿ ಭ್ರೂಣ ಉಂಟಾಗುತ್ತದೆ. ಕೆಲವರು ಮುಟ್ಟು ಆದ 28 ದಿನಕ್ಕೆ, ಇನ್ನು ಕೆಲವರು 22 ದಿನಕ್ಕೆ ಮುಟ್ಟಾಗುತ್ತಾರೆ. ಮುಟ್ಟಾಗುವ ಸ್ವಲ್ಪ ದಿನದ ಮುಂದೆ ಒವ್ಯೂಲೇಶನ್ ಪ್ರಾರಂಭವಾಗುತ್ತದೆ. ಈ ರೀತಿ ಉಂಟಾಗುವ ಸಮಯದಲ್ಲಿ ಯೂಟ್ರಸ್ ನಲ್ಲಿ ವೀರ್ಯಾಣುಗಳಿದ್ದರೆ ಮುಟ್ಟುವಿನ ಸಮಯದಲ್ಲೂ ಗರ್ಭ ಧರಿಸಬಹುದು.

ಆದ್ದರಿಂದ ಒವ್ಯೂಲೇಶನ್ ಮತ್ತು ಬಿಡುಗಡೆಯಾಗುವ ಅಡಾಣುಗಳ ಪ್ರೌಢತೆಗೆ ಅನುಸಾರವಾಗಿ ಮುಟ್ಟಿನಲ್ಲಿ ಕೂಡ ಗರ್ಭಧರಿಸಬಹುದು. ಗರ್ಭಿಣಿಯಾಗಲು ಬಯಸುವವರಿಗೆ ಈ ಒವ್ಯೂಲೇಶನ್ ಸಮಯ ಅತ್ಯುತ್ತಮವಾದ ಸಮಯವಾಗಿದೆ.

English summary

Can You Get Pregnant During Menstruation? | Pregnancy And Health | ಮುಟ್ಟುವಿನಲ್ಲಿ ಕೂಡ ಗರ್ಭ ಧರಿಸಬಹುದಾ? | ಗರ್ಭಧಾರಣೆ ಮತ್ತು ಆರೋಗ್ಯ

It is often believed that the best time to get pregnant is during the ovulation days. Women feel that they can't get pregnant during periods or menstruation but the fact is that you can get pregnant even at this time.
Story first published: Tuesday, January 24, 2012, 9:17 [IST]
X
Desktop Bottom Promotion