For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಮಹಿಳೆ ಪಡುವ ಕಷ್ಟ, ಅನುಭವಿಸಿದವರಿಗೆಯೇ ಗೊತ್ತು!

ಮಹಿಳೆಯರಿಗೆ ಗರ್ಭಧಾರಣೆಯಿಂದ ಹಿಡಿದು ಹೆರಿಗೆಯ ತನಕ ದೇಹದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತದೆ..ದೈಹಿಕ ಮಾನಸಿಕ ಬದಲಾವಣಿಗಳು ಸೇರಿವೆ, ಆದರೆ ಇವೆಲ್ಲವನ್ನೂ ಧೈರ್ಯದಿಂದ ಎದುರಿಸಿ ಸಾಮಾನ್ಯ ಸ್ಥಿತಿಗೆ ಬರುವ ತನಕ ತಾಳ್ಮೆಯಿಂದ ಇರಬೇಕು.

By Hemanth
|

ಹೆರಿಗೆ ಬಳಿಕ ಮಹಿಳೆಯರಿಗೆ ದೈಹಿಕವಾಗಿ ಹಲವಾರು ರೀತಿಯ ಬದಲಾವಣೆಗಳು ಕಂಡುಬರುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾಗುವುದು, ಮನಸ್ಥಿತಿ ಬದಲಾಗುವುದು ಮತ್ತು ಮಾಸಿಕ ಮುಟ್ಟಿನಲ್ಲಿ ಏರುಪೇರಾಗುವುದು ಪ್ರಮುಖವಾಗಿದೆ. ಇದರಿಂದ ಗೊಂದಲ ನಿರ್ಮಾಣವಾಗಬಹುದು. ಪರಿಸ್ಥಿತಿ ಹಿಂದಿನಂತೆ ಇಲ್ಲದೆ ಇರುವ ಕಾರಣದಿಂದ ಮಾನಸಿಕವಾಗಿಯು ಸಮಸ್ಯೆಯಾಗಬಹುದು. ಹೆರಿಗೆಯ ನಂತರ ಇದೆಲ್ಲಾ ಮಾಮೂಲು-ಏನೂ ಭಯ ಪಡದಿರಿ!

ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಾಣಂತಿಯ ದೇಹದಲ್ಲಿ ಉತ್ಪತ್ತಿಯಾಗುವ ತಾಯಿಹಾಲು ಹಾಗೂ ಇದಕ್ಕಾಗಿ ಸ್ರವಿಸುವ ಹಾರ್ಮೋನುಗಳು ಅಥವಾ ರಸದೂತಗಳು. ಈ ರಸದೂತಗಳ ಪ್ರಭಾವ ಮಾಸಿಕ ದಿನಗಳ ಅವಧಿಯ ಮೇಲೆ ನೇರವಾಗಿ ಆಗುವುದರಿಂದ ಇದು ಬದಲಾಗುವುದು ಮಾತ್ರವೇ ಅಲ್ಲ, ದೈಹಿಕವಾಗಿಯೂ ಕೆಲವಾರು ಬದಲಾವಣೆಗಳಾಗುತ್ತವೆ. ಹೆರಿಗೆ ಬಳಿಕ ಆಗುವ ದೈಹಿಕ ಬದಲಾವಣೆಗೆ ತಯಾರಾಗಿ!

ಅದರಲ್ಲೂ ಕೆಲವು ಮಹಿಳೆಯರಿಗೆ ಮಾಸಿಕ ದಿನಗಳ ಹೊರತಾದ ದಿನಗಳಲ್ಲಿಯೂ ರಕ್ತಭರಿತ ಸ್ರಾವ ಕಾಣಿಸಿಕೊಂಡು ಇದನ್ನು ಮಾಸಿಕದಿನಗಳೆಂದು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ ಇದು ಗರ್ಭನಾಳದ ಒಳಗಣ ಲೋಳೆ ಅಥವಾ ಕಫವಾಗಿದ್ದು ಇದನ್ನು ಸಡಿಲಿಸಿ ಹೊರದೂಡಲು ಸ್ರವಿಸುವ ರಕ್ತ ಜೊತೆಗೂಡಿ ರಕ್ತಮಿಶ್ರಿತ ಸ್ರಾವವಾಗುತ್ತದೆ. ಹಾಗಾಗಿ ಈ ಬಗ್ಗೆ ಆತಂಕಗೊಳ್ಳುವ ಯಾವುದೇ ಕಾರಣವಿಲ್ಲ. ಬನ್ನಿ, ಹೆರಿಗೆಯ ಬಳಿಕ ಬದಲಾಗುವ ಋತುಚಕ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.....

ಮೊದಲ ಮುಟ್ಟು ಹೆರಿಗೆಯ 6-7 ವಾರಗಳ ಬಳಿಕ

ಮೊದಲ ಮುಟ್ಟು ಹೆರಿಗೆಯ 6-7 ವಾರಗಳ ಬಳಿಕ

ಮಗುವಿನ ಜನನದ ಬಳಿಕ ಮಾಸಿಕ ಮುಟ್ಟಿನಲ್ಲಿ ಬದಲಾವಣೆಗಳಾಗುವುದನ್ನು ಕಾಣಬಹುದು. ಅನಿರೀಕ್ಷಿತವಾಗಿಯಾದರೂ ಮಾಸಿಕ ಮುಟ್ಟು ಈ ಸಂದರ್ಭಗಳಲ್ಲಿ ಸಾಮಾನ್ಯವಾಗಿರುತ್ತದೆ. ಮೊದಲ ಮುಟ್ಟು ಹೆರಿಗೆಯ 6-7 ವಾರಗಳ ಬಳಿಕ ಉಂಟಾಗುವುದು. ಆ ಸಮಯದ ತನಕ ಮಾಸಿಕ ಮುಟ್ಟಿನಲ್ಲಿ ಏನಾದರೂ ಏರುಪೇರಾಗಿದೆಯಾ ಎಂದು ಆತಂಕವಾಗುವುದು ಸಹಜ.

ಅತಿಯಾಗಿ ರಕ್ತಸ್ರಾವ....

ಅತಿಯಾಗಿ ರಕ್ತಸ್ರಾವ....

ಮಾಸಿಕ ಮುಟ್ಟು ಏರುಪೇರಾಗುವುದರೊಂದಿಗೆ ಮತ್ತೊಂದು ಸಮಸ್ಯೆಯೆಂದರೆ ಅತಿಯಾಗಿ ರಕ್ತಸ್ರಾವವಾಗುವುದು. ಹೆಚ್ಚಿನ ಬಾಣಂತಿಯರಲ್ಲಿ ಇದು ಸಾಮಾನ್ಯವಾಗಿರುತ್ತದೆ. ಆದರೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

ಅತಿಯಾಗಿ ರಕ್ತಸ್ರಾವ....

ಅತಿಯಾಗಿ ರಕ್ತಸ್ರಾವ....

ಹೆರಿಗೆಯ ಬಳಿಕ ಮಾಸಿಕ ದಿನಗಳ ಅವಧಿಯಲ್ಲಿ ಭಾರೀ ಹೆಚ್ಚು ಕಡಿಮೆಯಾಗುತ್ತದೆ. ಅಂದರೆ ಇದು ತುಂಬಾ ಹೆಚ್ಚಿನ ದಿನಗಳಿಗೂ ಅಥವಾ ತುಂಬಾ ಕಡಿಮೆ ದಿನಗಳಿಗೂ ಸಾಧ್ಯವಾಗಬಹುದು. ಕೆಲವು ಪರೀಕ್ಷೆಗಳನ್ನು ಮಾಡಿ ಇಡಿಯ ದೇಹದ ತಪಾಸಣೆಯ ಬಳಿಕವೇ ವೈದ್ಯರು ಈ ಬಗ್ಗೆ ಸೂಕ್ತ ಚಿಕಿತ್ಸೆಯನ್ನು ನೀಡಬಲ್ಲರು. ಕೆಲವು ಮಹಿಳೆಯರಿಗೆ ಹೆರಿಗೆಯ ಹಿಂದಿನ ದಿನಗಳ ಋತುಚಕ್ರದ ಅವಧಿಯ ದುಪ್ಪಟ್ಟು ದಿನಗಳಷ್ಟು ತಡವಾಗಿ ಈಗ ಆಗಬಹುದು.

ನೋವು, ಸುಸ್ತು, ತಲೆ ತಿರುಗುವಿಕೆ ಜಾಸ್ತಿಯಾಗಬಹುದು!

ನೋವು, ಸುಸ್ತು, ತಲೆ ತಿರುಗುವಿಕೆ ಜಾಸ್ತಿಯಾಗಬಹುದು!

ಕೆಲವು ಬಾಣಂತಿಯರಲ್ಲಿ ಋತುಸ್ರಾವ ಬಹಳ ನೋವಿನಿಂದ ಕೂಡಿರಬಹುದು. ಇದರೊಂದಿಗೆ ವಾಕರಿಕೆ, ಊದಿಕೊಳ್ಳುವುದು, ಭಾವನೆಗಳಲ್ಲಿ ಭಾರೀ ಬದಲಾವಣೆ, ಸಿಡುಕುತನ, ಕೆಳಹೊಟ್ಟೆಯ ನೋವು, ಸುಸ್ತು, ತಲೆ ತಿರುಗುವಿಕೆ ಮೊದಲಾದವೂ ಕಾಣ ಬರಬಹುದು.

ಸ್ತನಪಾನದ ಸಮಸಯದಲ್ಲಿ....

ಸ್ತನಪಾನದ ಸಮಸಯದಲ್ಲಿ....

ಸ್ತನಪಾನವನ್ನು ಮಾಡಿಸುತ್ತಿರುವ ಮಹಿಳೆಯರಲ್ಲಿ ತಿಂಗಳ ಮುಟ್ಟು ವಿಳಂಬವಾಗಬಹುದು. ಆದರೆ ಸ್ತನಪಾನ ಮಾಡಿಸುವುದನ್ನು ನಿಲ್ಲಿಸಿದ ತಕ್ಷಣ ಮುಟ್ಟು ಸಾಮಾನ್ಯವಾಗಬಹುದು.

ಇದಕ್ಕೆಲ್ಲಾ ಹಾರ್ಮೋನುಗಳ ಬದಲಾವಣೆಯೇ ಸಾಧ್ಯ

ಇದಕ್ಕೆಲ್ಲಾ ಹಾರ್ಮೋನುಗಳ ಬದಲಾವಣೆಯೇ ಸಾಧ್ಯ

ಹೆರಿಗೆ ಬಳಿಕ ಮುಟ್ಟಿನಲ್ಲಿ ಬದಲಾವಣೆಯಾಗಲು ಹಾರ್ಮೋನು ಬದಲಾವಣೆ ಮತ್ತು ಸ್ತನಪಾನ ಪ್ರಮುಖ ಕಾರಣವಾಗಿದೆ.

ಪ್ರೊಲ್ಯಾಕ್ಟಿನ್ ಎನ್ನುವ ಹಾರ್ಮೋನು....

ಪ್ರೊಲ್ಯಾಕ್ಟಿನ್ ಎನ್ನುವ ಹಾರ್ಮೋನು....

ಸ್ತನಪಾನ ಮಾಡಿಸುತ್ತಿರುವ ಸಮಯದಲ್ಲಿ ಪ್ರೊಲ್ಯಾಕ್ಟಿನ್ ಎನ್ನುವ ಹಾರ್ಮೋನು ಸ್ರವಿಸುತ್ತದೆ. ಇದು ಅಂಡೋತ್ಪತ್ತಿಯನ್ನು ತಡೆಯುತ್ತದೆ. ಈ ಹಾರ್ಮೋನು ಮುಟ್ಟಿನ ಮೇಲೆ ಪರಿಣಾಮ ಉಂಟು ಮಾಡುತ್ತದೆ.

English summary

Why Period Might Change After Having a Baby

Childbirth and lactation cause several changes in the body and this could impact the periods first. Some women who see vaginal discharge in red, may mistake it to be the period. But that could actually be blood and mucous. Here are some facts about the reasons behind the changes in periods after childbirth.
X
Desktop Bottom Promotion