For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಕಾಡುವ ಮೂತ್ರದ ಸಮಸ್ಯೆ! ಕಾರಣವೇನು?

By Suma
|

Urinary Incontinence ಅಥವಾ ಮೂತ್ರವನ್ನು ತಡೆದು ಹಿಡಿಯಲು ಅಸಮರ್ಥತೆ ಹೆರಿಗೆಯ ಬಳಿಕ ಕೊಂಚಕಾಲ ಸಾಮಾನ್ಯವಾದ ತೊಂದರೆಯಾಗಿದೆ. ಅಲ್ಲದೇ ಗರ್ಭಾವಸ್ಥೆಯ ದಿನಗಳು ಮೂಂದುವರೆಯುತ್ತಾ ಹೋದಂತೆ ಈ ಅಸಮರ್ಥತೆ ಹೆಚ್ಚುತ್ತಾ ಹೋಗುತ್ತದೆ. ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರಲ್ಲಿ ಈ ಅಸಮರ್ಥತೆ ಹೆಚ್ಚಾಗಿರುವುದು ಕಂಡುಬರುತ್ತದೆ.

Childbirth

ಗರ್ಭಾವಸ್ಥೆಗೂ ಮುನ್ನ ಈ ತೊಂದರೆಯನ್ನು ಅನುಭವಿಸಿದ ಮಹಿಳೆಯರು ಹೆರಿಗೆಯ ಬಳಿಕ ಇನ್ನಷ್ಟು ಹೆಚ್ಚು ಅನುಭವಿಸುತ್ತಾರೆ. ಒಂದು ಸಂಶೋಧನೆಯಲ್ಲಿ ವಿವಿಧ ವಯಸ್ಸಿನ ಸುಮಾರು 2000 ಮಹಿಳೆಯರ ಆರೋಗ್ಯದ ಅಂಕಿ ಅಂಶಗಳನ್ನು ಕಲೆಹಾಕಿದ ಬಳಿಕ ತಜ್ಞರು ಕೆಳಗೆ ವಿವರಿಸಿರುವ ತೀರ್ಮಾನಗಳಿಗೆ ಬಂದಿದ್ದಾರೆ.

55 ಕ್ಕೂ ಹೆಚ್ಚಿನ ಮತ್ತು 35ಕ್ಕೂ ಹೆಚ್ಚಿನ BMI, ಅಂದರೆ ಎತ್ತರಕ್ಕೆ ತಕ್ಕ ಇರುವಷ್ಟಕ್ಕಿಂತಲೂ ಹೆಚ್ಚು ತೂಕ ಇರುವ ಮಹಿಳೆಯರು ಈ ತೊಂದರೆಯನ್ನು ಹೆಚ್ಚು ಎದುರಿಸುತ್ತಾರೆ. ಇವರಿಗೆ ರಾತ್ರಿ ಮಲಗಿದ ಬಳಿಕ ಬೆಳಿಗ್ಗೆ ಏಳುವ ಮುನ್ನ ಕನಿಷ್ಠ ಎರಡು ಬಾರಿಯಾದರೂ ಮೂತ್ರಕ್ಕೆ ಅವಸರವಾಗುತ್ತದೆ.

ಸಿಜೇರಿಯನ್ ಹೆರಿಗೆಯಾದ ಮಹಿಳೆಯರಿಗಿಂತಲೂ ಸಹಜ ಹೆರಿಗೆಯಾದ ಮಹಿಳೆಯರಿಗೆ ಈ ಸ್ಥಿತಿ ಹೆಚ್ಚು ಕಾಡುತ್ತದೆ. ಆದರೆ ಸಿಜೇರಿಯನ್ ಹೆರಿಗೆಯಾದ ಮಹಿಳೆಯರಲ್ಲಿಯೂ ಕೆಲವರಿಗೆ ಈ ತೊಂದರೆ ಎದುರಾಗಿದೆ.


ಸ್ಥೂಲಕಾಯ, ರಜೋನಿವೃತ್ತಿಯ ಕಾಲ, ಧೂಮಪಾನ ಹಾಗೂ ಕೆಲವರಲ್ಲಿ ಅನುವಂಶಿಕವಾಗಿ ಬಂದಿರುವ ಗುಣಗಳು ಈ ಸ್ಥಿತಿಯನ್ನು ಹೆಚ್ಚಿಸುತ್ತವೆ.
English summary

Urinary Incontinence After Childbirth

A new study claims that women suffering from urinary incontinence may experience the problem more after giving birth to a child. This study claims that pregnant women are more likely to suffer urinary incontinence compared to unmarried women.
Story first published: Sunday, November 13, 2016, 10:12 [IST]
X
Desktop Bottom Promotion