For Quick Alerts
ALLOW NOTIFICATIONS  
For Daily Alerts

ಹೆರಿಗೆಯ ವೇಳೆ ಎಷ್ಟೇ ಧೈರ್ಯ ಮಾಡಿಕೊಂಡರೂ, ಕಾಡುವ ಭಯ....

ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ..ಆದರೂ ಆಕೆಗೆ ಆ ಅನಿರೀಕ್ಷಿತ ವಿಷಯಗಳ ಭಯ ಇದ್ದೇ ಇರುತ್ತದೆ

By Suma
|

ಮಹಿಳೆಯರಿಗೆ ಜೀವನದಲ್ಲಿ ಅತೀ ದೊಡ್ಡ ಸವಾಲೆಂದರೆ ಗರ್ಭಧಾರಣೆ ಮತ್ತು ಮಗುವಿಗೆ ಜನ್ಮ ನೀಡುವುದು. ಮಗುವಿಗೆ ಜನ್ಮ ನೀಡುವ ವೇಳೆ ಮಹಿಳೆಯು ಮತ್ತೊಂದು ಜನ್ಮವನ್ನು ಪಡೆದಂತೆ. ಯಾಕೆಂದರೆ ಆ ನೋವು ಸಹಿಸಲು ಅಸಾಧ್ಯವಾಗಿರುವಂತದ್ದಾಗಿರುತ್ತದೆ.

During Childbirth

ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ. ಪ್ರೀತಿಪಾತ್ರರು ಹಾಗೂ ಸಂಬಂಧಿಕರು ಆಕೆಗೆ ಬೆಂಬಲವಾಗಿ ನಿಂತುಕೊಂಡು ಹೆರಿಗೆಯ ಪ್ರಕ್ರಿಯೆಯು ಸುಲಭವಾಗಿ ಆಗುವಂತೆ ನೋಡಿಕೊಳ್ಳಬೇಕು. ಹೆರಿಗೆ ವೇಳೆ ಆಗುವಂತಹ ಕೆಲವೊಂದು ಅನಿರೀಕ್ಷಿತ ವಿಷಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಹೆರಿಗೆ ಬಳಿಕ ಬಾಣಂತಿಯರಿಗೆ ಕಾಡುವ ಆ ನರಕಯಾತನೆ...

ಪ್ರತಿಯೊಬ್ಬ ಮಹಿಳೆಯು ಸಾಮಾನ್ಯ ಹೆರಿಗೆಯಾಗಬೇಕೆಂದು ಬಯಸುತ್ತಾ ಇರುತ್ತಾಳೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅಂತಿಮವಾಗಿ ಸಿಸೇರಿಯನ್ ಮಾಡಲೇಬೇಕಾಗುತ್ತದೆ.

ಮಗುವಿನ ಜನನದ ಬಳಿಕವೂ ಕುಗ್ಗುವಿಕೆಯು ಕೆಲವೊಂದು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು. ಹೆರಿಗೆ ಬಳಿಕ ದೇಹವು ಮತ್ತೆ ತನ್ನ ಹಳೆಯ ಸ್ಥಿತಿಗೆ ಬರಲು ಪ್ರಯತ್ನ ಮಾಡುವ ಕಾರಣದಿಂದಾಗಿ ಗರ್ಭಕೋಶದಲ್ಲಿ ಕೆಲವೊಂದು ಹೊಂದಾಣಿಕೆಗಳು ಆಗುತ್ತಿರುತ್ತದೆ. ಹೆರಿಗೆಯ ಬಳಿಕ ಇದೆಲ್ಲಾ ಮಾಮೂಲು, ಭಯ ಪಡದಿರಿ...

ಮತ್ತೊಂದು ಅನಿರೀಕ್ಷಿತ ಸಂಗತಿಯೆಂದರೆ ಕೆಲವೊಂದು ಮಹಿಳೆಯರಲ್ಲಿ ಹೆರಿಗೆ ತುಂಬಾ ವೇಗವಾಗಿ ಹಾಗೂ ಹೆಚ್ಚು ನೋವಿಲ್ಲದೆ ನಡೆದುಬಿಡುತ್ತದೆ. ಇದು ತುಂಬಾ ಹೆಚ್ಚು ಸಮಾಧಾನವನ್ನು ನೀಡುತ್ತದೆ. ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?

ಕೈ ಹಾಗೂ ಕಾಲುಗಳಲ್ಲಿ ಯಾವುದೇ ಸಂವೇದನ ಇಲ್ಲದೆ ಇರುವಂತಹ ಅನುಭವವು ಆಗುತ್ತಾ ಇದ್ದರೆ ತಕ್ಷಣ ವೈದ್ಯರನ್ನು ಕರೆಸಿ ಇದನ್ನು ತಿಳಿಸಬೇಕು. ಯಾಕೆಂದರೆ ಇದಕ್ಕೆ ವೈದ್ಯರ ಚಿಕಿತ್ಸೆ ಅಗತ್ಯವಾಗಿರುತ್ತದೆ.

English summary

Unexpected Things That Could Happen During Childbirth

Childbirth is almost like a rebirth to any woman as the process isn't easy to handle. In fact, pregnancy is one challenge and childbirth is another challenge that a woman has to face. And during such an important moment, the reason why family members and loved ones should be around to support is because there are certain unexpected things that might happen during labour.
X
Desktop Bottom Promotion