For Quick Alerts
ALLOW NOTIFICATIONS  
For Daily Alerts

ಹೆರಿಗೆ ಬಳಿಕ ಬಾಣಂತಿಯರಿಗೆ ಕಾಡುವ ಆ ನರಕಯಾತನೆ...

By Hemanth
|

ಭೂಮಿ ಮೇಲೆ ಹೆಣ್ಣು ಜೀವಕ್ಕೆ ಮಾತ್ರ ಮತ್ತೊಂದು ಜೀವವನ್ನು ಭೂಮಿ ಮೇಲೆ ತರುವಂತಹ ಶಕ್ತಿಯಿರುವುದು. ಅದರಕ್ಕಾಗಿ ಭೂಮಿಯನ್ನು ಕೂಡ ನಾವು ತಾಯಿಯೆನ್ನುವುದು. ಭೂಮಿ ಮೇಲೆ ಹಲವಾರು ಮರಗಳು ಹಾಗೂ ಜೀವಿಗಳು ಜೀವಿಸುತ್ತಾ ಇರುತ್ತದೆ. ಪ್ರತೀ ಸಲ ಗರ್ಭಧರಿಸುವಾಗ ಹೆಣ್ಣು ಜೀವವು ಹಲವಾರು ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?

ದೈಹಿಕ ಹಾಗೂ ಮಾನಸಿಕ ಬದಲಾವಣಿಗಳು ಇದರಲ್ಲಿ ಸೇರಿವೆ. ಮಗುವನ್ನು ತುಂಬಾ ಆರೋಗ್ಯವಾಗಿಡುವಂತೆ ನೋಡಿಕೊಳ್ಳುವುದು ಮತ್ತು ದೇಹದಲ್ಲಿ ಆಗುವ ಬದಲಾವಣೆಗಳನ್ನು ಎದುರಿಸುವುದು ಪ್ರಮುಖ ಎರಡು ಸವಾಲುಗಳಾಗಿವೆ. ಹೆರಿಗೆಯ ನಂತರ ಸೊಂಟ ನೋವಿನ ಸಮಸ್ಯೆಯೇ?

ಗರ್ಭಧಾರಣೆಯಿಂದ ಹಿಡಿದು ಹೆರಿಗೆಯ ತನಕ ದೇಹವು ಹಲವಾರು ಬದಲಾವಣೆಗಳು ದೇಹದಲ್ಲಿ ಕಂಡುಬರುತ್ತದೆ. ಆದರೆ ನೀವು ಸಾಮಾನ್ಯ ಸ್ಥಿತಿಗೆ ಬರುವ ತನಕ ತಾಳ್ಮೆಯಿಂದ ಇರಬೇಕು. ಗರ್ಭಧಾರಣೆ ಬಳಿಕ ನೀವು ಎದುರಿಸಬಹುದಾದ ಕೆಲವೊಂದು ನೋವಿನ ಕ್ಷಣಗಳ ಬಗ್ಗೆ ಮುಂದಕ್ಕೆ ತಿಳಿದುಕೊಳ್ಳಿ.....

ಹಾರ್ಮೋನುಗಳ ಬದಲಾವಣೆ

ಹಾರ್ಮೋನುಗಳ ಬದಲಾವಣೆ

ಶೇ.75ರಷ್ಟು ಮಹಿಳೆಯರಿಗೆ ಹೆರಿಗೆಯ ನಂತರ ಸಮಸ್ಯೆ, ಭಾವನೆಗಳ ಬದಲಾವಣೆ, ಖಿನ್ನತೆ, ಆಲಸ್ಯ, ಕಿರಿಕಿರಿ, ಹತಾಶೆ, ನಿದ್ರಾಹೀನತೆ ಇತರ ಕೆಲವೊಂದು ಸಮಸ್ಯೆಗಳು ಕಾಡಬಹುದು. ಹಾರ್ಮೋನು ಮತ್ತು ಅದರಲ್ಲಿ ಆಗುವಂತಹ ಕೆಲವೊಂದು ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣವಾಗಿದೆ.

ಜನನಾಂಗದ ಸಮಸ್ಯೆ

ಜನನಾಂಗದ ಸಮಸ್ಯೆ

ಹೆರಿಗೆ ಬಳಿಕ ಜನನಾಂಗದಲ್ಲಿ ಒಣಗುವಿಕೆ ತಾತ್ಕಾಲಿಕವಾಗಿ ಕಂಡುಬರಲಿದೆ. ಹಾರ್ಮೋನು ಬದಲಾವಣೆ ಮತ್ತು ಸ್ತನ ಹಾಲುಣಿಸುವುದು ಒಣಗುವಿಕೆಗೆ ಪ್ರಮುಖ ಕಾರಣವಾಗಿರಬಹುದು.

ಹೊಟ್ಟೆ ದೊಡ್ಡದಾಗುವುದು

ಹೊಟ್ಟೆ ದೊಡ್ಡದಾಗುವುದು

ಹೆರಿಗೆ ಬಳಿಕ ಎದುರಿಸಬೇಕಾದ ಪ್ರಮುಖ ಸಮಸ್ಯೆಯೆಂದರೆ ಹೊಟ್ಟೆ ದೊಡ್ಡದಾಗುವುದು. ಹೊಟ್ಟೆ ಮತ್ತೆ ಹಿಂದಿನ ಗಾತ್ರಕ್ಕೆ ಬರಲು ಕೆಲವು ಸಮಯ ಬೇಕಾಗುತ್ತದೆ. ಹೆರಿಗೆ ನಂತರ ಹೊಟ್ಟೆ ಹೀಗೆ ಕರಗಿಸಿ

ಸ್ತನವು ಊದಿಳ್ಳಬಹುದು

ಸ್ತನವು ಊದಿಳ್ಳಬಹುದು

ಸ್ತನವು ಊದಿಕೊಂಡು ನೋವು ಕಾಣಿಸಿಕೊಳ್ಳಬಹುದು. ಸೂಕ್ಷ್ಮವಾಗಿರುವಂತಹ ಮೊಲೆತೊಟ್ಟುಗಳು ಹಾಲುಣಿಸುವಾಗ ನೋವನ್ನು ಉಂಟುಮಾಡುತ್ತದೆ.

ಕೂದಲು ಉದುರುವಿಕೆಯ ಸಮಸ್ಯೆ

ಕೂದಲು ಉದುರುವಿಕೆಯ ಸಮಸ್ಯೆ

ಪ್ರಸವದ ಬಳಿಕ ಕೆಲವು ಮಹಿಳೆಯರಲ್ಲಿ ಕೂದಲು ಉದುರುವಿಕೆ ಕಾಣಿಸಿಕೊಳ್ಳುತ್ತದೆ. ಈಸ್ಟ್ರೋಜನ್ ಮಟ್ಟವು ಕುಸಿಯುವುದು ಇದಕ್ಕೆ ಕಾರಣವಾಗಿದೆ.

ಜೀರ್ಣಕ್ರಿಯೆಯ ಸಮಸ್ಯೆ

ಜೀರ್ಣಕ್ರಿಯೆಯ ಸಮಸ್ಯೆ

ಈ ಸಮಯದಲ್ಲಿ ಜೀರ್ಣಕ್ರಿಯೆಯೂ ತುಂಬಾ ನಿಧಾನಗತಿಯದ್ದಾಗಿರುವ ಕಾರಣದಿಂದ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಮಲಬದ್ಧತೆ ಸಮಸ್ಯೆ ಕಾಣಿಸಬಹುದು. ಕೆಲವೊಂದು ಔಷಧಿಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು.

ಹೊಟ್ಟೆ ಮತ್ತು ಕಿಬ್ಬೊಟ್ಟೆಯಲ್ಲಿ ನೋವು

ಹೊಟ್ಟೆ ಮತ್ತು ಕಿಬ್ಬೊಟ್ಟೆಯಲ್ಲಿ ನೋವು

ಕೆಲವೊಂದು ಮಹಿಳೆಯರಿಗೆ ತಮ್ಮ ಜನನಾಂಗ, ಹೊಟ್ಟೆ ಮತ್ತು ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಗರ್ಭಕೋಶವು ತನ್ನ ಹಿಂದಿನ ಆಕಾರಕ್ಕೆ ಬರುವ ತನಕ ನೋವು ಇರುತ್ತದೆ. ಸಿಸೇರಿಯನ್ ನಿಂದ ಹೊರಬರುವುದು ತುಂಬಾ ನೋವಿನ ಸ್ಥಿತಿಯಾಗಿರುತ್ತದೆ.

English summary

Painful Things To Handle After Pregnancy

Pregnancy isn't easy! And then pregnancy could result in several changes in the biochemistry. These changes could affect the health even after pregnancy. On one side, you may need to face the challenges of raising the baby in the healthiest way possible and on the other side, you may have to deal with your body's changes.
X
Desktop Bottom Promotion