ಅಧ್ಯಯನ ವರದಿ: ಎದೆಹಾಲು ಮಗುವಿಗೆ ಅಮೃತ ಸಮಾನ

ತಾಯಿಯ ಎದೆಹಾಲು ಕೆಲವೊಂದು ಸೋಂಕುಗಳೊಂದಿಗೆ ಹೋರಾಡುವ ದಿವ್ಯ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದು ಸಂರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಇದನ್ನು "ಪ್ಯಾಸೀವ್ ಇಮ್ಯುನಿಟಿ" ಎಂಬುದಾಗಿ ಕರೆಯಲಾಗಿದೆ.

By: Jaya subramanya
Subscribe to Boldsky

ತಾಯಿಯ ಎದೆಹಾಲು ಅಮೃತ ಸಮಾನ ಎಂಬ ಮಾತಿದೆ. ಜನಿಸಿದ ಮಗುವಿಗೆ ಈ ಎದೆಹಾಲು ಮೊದಲ ಆಹಾರವಾಗಿದ್ದು
ಹಲವಾರು ರೋಗಗಳಿಂದ ಕಂದಮ್ಮನನ್ನು ಕಾಪಾಡುವ ದಿವ್ಯ ಅಮೃತ ಔಷಧ ಎಂದೆನಿಸಿದೆ. ಟಿಬಿಯಂತಹ ಕಾಯಿಲೆಗೆ ಹೇಗೆ ಲಸಿಕೆಗಳು ಅಥವಾ ಚುಚ್ಚುಮದ್ದು ಕೆಲಸ ಮಾಡುತ್ತದೆ ಅಂತೆಯೇ ಎದೆಹಾಲು ಕೂಡ ಎಂಬುದಾಗಿ ಹೊಸ ಸಂಶೋಧನೆಯೊಂದು ತಿಳಿಸಿದೆ. 

breastfeeding
 

ಕೆಲವೊಂದು ಲಸಿಕೆಗಳನ್ನು ಕಂದಮ್ಮನಿಗೆ ನೀಡಲಾಗುವುದಿಲ್ಲ ಅಂತೆಯೇ ಇದು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬುದಾಗಿ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಪ್ರೊಫೆಸರ್ ಅಮೇ ವಾಕರ್ ತಿಳಿಸಿದ್ದಾರೆ. ತಾಯಿಗೆ ಲಸಿಕೆಗಳನ್ನು ನೀಡಿ ಅಥವಾ ಆಕೆ ಗರ್ಭಿಣಿಯಾಗುವುದಕ್ಕೆ ಮುನ್ನ ಆಕೆಯ ಲಸಿಕೆಯನ್ನು ವರ್ಧಿಸಿದಲ್ಲಿ ಈ ರೋಗನಿರೋಧಕವು ಕೋಶಗಳಿಗೆ ವರ್ಗಾವಣೆಗೊಂಡು ಮಗುವಿಗೆ ಹಾಲುಣಿಸುವಾಗ ಮಗುವುದು ಪೂರ್ವದಲ್ಲೇ ಸಂರಕ್ಷಿತವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದವರು ನುಡಿದಿದ್ದಾರೆ. 

breastfeeding
 

ತಾಯಿಯ ಎದೆಹಾಲು ಕೆಲವೊಂದು ಸೋಂಕುಗಳೊಂದಿಗೆ ಹೋರಾಡುವ ದಿವ್ಯ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದು
ಸಂರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಇದನ್ನು "ಪ್ಯಾಸೀವ್ ಇಮ್ಯುನಿಟಿ" ಎಂಬುದಾಗಿ ಕರೆಯಲಾಗಿದೆ. ಮಗುವಿನಲ್ಲೂ
ರೋಗನಿರೋಧಕ ಸಾಮರ್ಥ್ಯವನ್ನು ತುಂಬುವಲ್ಲಿ ಎದೆಹಾಲಿನಲ್ಲಿರುವ ಅಂಶಗಳು ಸಹಕಾರಿಯಾಗಿದೆ ಎಂಬುದಾಗಿ
ಸಂಶೋಧನೆಯು ತಿಳಿಸಿದೆ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು  

breastfeeding
 

ಎದೆಹಾಲಿನಲ್ಲಿರುವ ನಿರ್ದಿಷ್ಟ ರೋಗನಿರೋಧಕ ಕೋಶಗಳು ಮಗುವಿನ ಕರುಳಿನ ಗೋಡೆಯನ್ನು ಬೇಧಿಸಿ ರೋಗನಿರೋಧಕ ಅಂಗವಾದ ಥೈಮಸ್ ಅನ್ನು ಪ್ರವೇಶಿಸುತ್ತದೆ. ತದನಂತರ ಈ ಕೋಶಗಳು ಬೆಳವಣಿಗೆಯನ್ನು ಕಂಡುಕೊಳ್ಳುತ್ತವೆ.

ವಿಜ್ಞಾನಿಗಳು ಈ ಸಂಶೋಧನೆಯನ್ನು ಕೈಗೊಳ್ಳಲು ಇಲಿಯನ್ನು ಬಳಸಿಕೊಂಡಿದ್ದು ಮಗುವಿನ ದೇಹದಲ್ಲಿ ಹಾಲಿನ ಕೋಶಗಳು ಅವಶ್ಯಕವಾಗಿವೆ ಎಂಬುದನ್ನು ಇದು ತಿಳಿಯಪಡಿಸಿದೆ. ಈ ಸಂಶೋಧನೆಯು ತಾಯಿಯನ್ನು ವ್ಯಾಸಿನೇಟ್ ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದು ಇದರಿಂದ ಮಗುವಿಗೂ ವ್ಯಾಸಿನೇಶನ್ (ಚುಚ್ಚುಮದ್ದು) ಶಕ್ತಿ ದೊರೆಯುತ್ತದೆ ಎಂಬುದು ತಿಳಿದು ಬಂದಿದೆ. ಎದೆ ಹಾಲು vs ಬಾಟಲಿ ಹಾಲು, ಮಗುವಿಗೆ ಯಾರು ಹಿತವರು?   

breastfeeding
 

ನೇರವಾಗಿ ಮಗುವಿಗೆ ಚುಚ್ಚುಮದ್ದು ನೀಡುವುದರಿಂದ ಕೂಡ ಟಿಬಿಗೆ ಸೂಕ್ತ ಉಪಚಾರ ದೊರೆತಿಲ್ಲದೇ ಇರುವುದು ಕಂಡುಬಂದಿದೆ. ಆದರೆ ತಾಯಿಗೆ ವ್ಯಾಸಿನೇಶನ್ ಮಾಡುವುದು ಮಗುವಿಗೆ ಎಲ್ಲಾ ರೀತಿಯಲ್ಲೂ ಸಂರಕ್ಷಣೆಯನ್ನು ನೀಡುತ್ತದೆ. ಎದೆ ಹಾಲನ್ನು ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು ಎದೆ ಹಾಲನ್ನು ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು ಚುಚ್ಚು ಮದ್ದು ಮಾಡಿದ ತಾಯಿಯು ಮಗುವಿಗೆ ನಿತ್ಯವೂ ಹಾಲುಣಿಸುವುದರಿಂದ ಮಗುವಿನ ರೋಗನಿರೋಧಕ ಶಕ್ತಿಯನ್ನು ಟಿಬಿಗೆ ವಿರುದ್ಧವಾಗಿ ಬೆಳೆಸಲು ಸಹಾಯಕವಾಗುತ್ತದೆ ಎಂಬುದಾಗಿ ವಾಕರ್ ತಿಳಿಸಿದ್ದಾರೆ.

Story first published: Wednesday, November 16, 2016, 11:03 [IST]
English summary

Mother's Milk May Work As Well As Vaccination For Newborns

Mother's milk may boost the immunity of a newborn in such a way that it may work against certain diseases like tuberculosis (TB) just as vaccination does, suggests new research. "Some vaccines are not safe to give a newborn baby and others just don't work very well in newborns," said lead researcher Ameae Walker, Professor at the University of California, Riverside School of Medicine in the US.
Please Wait while comments are loading...
Subscribe Newsletter