For Quick Alerts
ALLOW NOTIFICATIONS  
For Daily Alerts

ಈಗ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿಯೇ ಹೆರಿಗೆ ಸಾವು ಹೆಚ್ಚಳ!

By Hemanth
|

ಮುಂದುವರಿದಿರುವ ರಾಷ್ಟ್ರಗಳಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳು ಇರುತ್ತದೆ ಮತ್ತು ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ನಾವು ಅಂದುಕೊಳ್ಳುತ್ತೇವೆ. ಆದರೆ ನಿಜ ವಿಷಯವೇ ಬೇರೆ. ಆರ್ಥಿಕವಾಗಿ ಸದೃಢವಾಗಿರುವ ಅಮೆರಿಕಾದಲ್ಲೂ ಹೆರಿಗೆ ವೇಳೆ ಸಾವು ಸಂಭವಿಸುವು ಹೆಚ್ಚಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆರಿಗೆ ಸಂಭವಿಸುವ ಸಾವು ಕಡಿಮೆಯಾಗಿದ್ದರೂ ಅಮೆರಿಕಾದಲ್ಲಿ ಹೆರಿಗೆ ವೇಳೆ ಮತ್ತು ಗರ್ಭಧಾರಣೆ ಬಳಿಕ ಸಂಭವಿಸುವ ಸಾವು ಅಧಿಕವಾಗಿದೆ ಎಂದು ಅಮೆರಿಕಾದ ಹೊಸ ಅಧ್ಯಯನವೊಂದು ಕಂಡುಹಿಡಿದಿದೆ.

Maternal Death Rate Rising In US: Study

2000ದಿಂದ 2014ರ ತನಕ ಅಮೆರಿಕಾದಲ್ಲಿ ಹೆರಿಗೆ ವೇಳೆ ಸಂಭವಿಸಿದ ಸಾವು ಶೇ. 27ರಷ್ಟಿದೆ ಎಂದು ಮರ್ಯಲ್ಯಾಂಡ್ ವಿಶ್ವವಿದ್ಯಾನಿಲಯದ ಜನಸಂಖ್ಯಾ ಅಧ್ಯಯನ ಕೇಂದ್ರವು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಹೆರಿಗೆಯ ಬಳಿಕ ಇದೆಲ್ಲಾ ಮಾಮೂಲು, ಭಯ ಪಡದಿರಿ...

2014ರಲ್ಲಿ ಒಂದು ಲಕ್ಷ ಹೆರಿಗೆ ವೇಳೆ ಅಥವಾ ಹೆರಿಗೆಯಾದ 42 ದಿನಗಳ ಅಂತರದಲ್ಲಿ ಸುಮಾರು 24 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ. 2000ರಲ್ಲಿ ಒಂದು ಲಕ್ಷದಲ್ಲಿ ಸುಮಾರು 19 ಮಂದಿ ಸಾವನ್ನಪ್ಪುತ್ತಿದ್ದರು ಎಂದು ಅಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಜರ್ನಲ್‪ನಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೆರಿಗೆ ವೇಳೆ ಸಂಭವಿಸುವ ಸಾವು ತುಂಬಾ ಅಪರೂಪವಾಗಿದೆ. ಆದರೆ ಅಪರೂಪದಲ್ಲಿ ಹೆಚ್ಚಳವಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಸಂಶೋಧನೆ ನಡೆಸಿರುವ ಲೇಖಕಿ ಮರಿಯಾನ ಮೆಕ್ ಡೊರ್ಮನ್ ತಿಳಿಸಿದರು.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಗುಣಮಟ್ಟವನ್ನು ಅಳೆಯುವಲ್ಲಿ ಹೆರಿಗೆ ಸಾವಿನ ಪ್ರಮಾಣವು ತುಂಬಾ ಮಹತ್ವವನ್ನು ಪಡೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಅಮೆರಿಕಾಗೆ ತುಂಬಾ ಕಳವಳವನ್ನು ಉಂಟುಮಾಡುವ ಮತ್ತೊಂದು ವಿಷಯವೆಂದರೆ ಇತರ ದೇಶಗಳಲ್ಲಿ ಆಗುವಂತಹ ಹೆರಿಗೆ ಸಾವು ಇಲ್ಲಿ ವಿರುದ್ಧವಾಗುತ್ತಿದೆ. ಅಂದರೆ ಪ್ರಮಾಣವು ಹೆಚ್ಚಾಗುತ್ತಿದೆ ಎನ್ನುತ್ತಿದೆ ಅಧ್ಯಯನ. ಸಾಮಾಜಿಕ ಸಹಯೋಗ ಮತ್ತು ಅಭಿವೃದ್ಧಿ ಸಂಸ್ಥೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 31 ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾವು 30ನೇ ಸ್ಥಾನದಲ್ಲಿದೆ. ಮೆಕ್ಸಿಕೋ ಮಾತ್ರ ಇದರ ಬಳಿಕದ ಸ್ಥಾನದಲ್ಲಿದೆ.

ಅಮೆರಿಕಾದಲ್ಲಿ ಹೆರಿಗೆ ಸಾವಿನ ಪ್ರಮಾಣವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಹೆರಿಗೆ ವೇಳೆ ಸಂಭವಿಸುವ ಸಾವನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಪ್ರತೀ ವರ್ಷ ಮಗುವಿಗೆ ಜನ್ಮ ನೀಡುತ್ತಿರುವ ನಾಲ್ಕು ಲಕ್ಷ ಅಮೆರಿಕಾದ ಮಹಿಳೆಯರ ವೈದ್ಯಕೀಯ ಸವಲತ್ತಿನ ಬಗ್ಗೆ ತೀವ್ರ ಕಾಳಜಿ ವಹಿಸಬೇಕು ಎಂದು ಮೆಕ್ ಡೊರ್ಮನ್ ಹೇಳಿದರು.

ಅಮೆರಿಕಾದ ಎಲ್ಲಾ ರಾಜ್ಯಗಳಿಂದ ಅಂಕಿಅಂಶಗಳನ್ನು ತೆಗೆದುಕೊಂಡು ಈ ಅಧ್ಯಯನ ಮಾಡಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಹೆರಿಗೆ ಸಾವಿನ ಪ್ರಮಾಣ ಕಡಿಮೆಯಾಗುತ್ತಿದ್ದರೆ, ಟೆಕ್ಸಾಸ್‌ನಲ್ಲಿ 2011-2012ರಲ್ಲಿ ಇದು ಹೆಚ್ಚಾಗುತ್ತಾ ಇದೆ. ಹೆರಿಗೆ ವೇಳೆ ಆಗುತ್ತಿರುವ ಸಾವಿಗೆ ಯಾವುದೇ ಸ್ಪಷ್ಟ ಕಾರಣವನ್ನು ಈ ಅಧ್ಯಯನದಲ್ಲಿ ಹೇಳಿಲ್ಲ. ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?

2011ರಲ್ಲಿ ಮಹಿಳೆರ ಆರೋಗ್ಯ ಸೇವೆಯಲ್ಲಿ ಆಗಿರುವ ಕೆಲವೊಂದು ಬದಲಾವಣೆಗಳು ಇದಕ್ಕೆ ಕಾರಣವಾಗಿರಬಹುದು ಎಂದು ಸಂಶಯಿಸಲಾಗಿದೆ ಎಂದು ನ್ಯೂ ಸೈನ್ ಟಿಸ್ಟ್ ವರದಿ ಮಾಡಿದೆ. ಹೆರಿಗೆ ಸಾವಿನ ಪ್ರಮಾಣ ಜಾಸ್ತಿಯಾಗಿದ್ದ ಕೆಲವೊಂದು ರಾಷ್ಟ್ರಗಳು ಈ ಅದರಲ್ಲಿ ಸುಧಾರಣೆಯನ್ನು ಕಂಡಿದೆ.

2003ರಲ್ಲಿ ಅಮೆರಿಕಾದಲ್ಲಿ ಮರಣ ಪ್ರಮಾಣಪತ್ರದಲ್ಲಿ ಗರ್ಭಧಾರಣೆ ವೇಳೆ ನಡೆಯುವ ಸಾವಿಗೆ ನಿಖರ ಕಾರಣವನ್ನು ಕೇಳಲಾಗಿತ್ತು. ಈ ಎಲ್ಲಾ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡ ಬಳಿಕ ಶೇ.27ರಷ್ಟು ಹೆಚ್ಚಳವಾಗಿರುವುದು ಪತ್ತೆಯಾಗಿದೆ ಎಂದು ಡೊರ್ಮನ್ ಹೇಳಿದ್ದಾರೆ.

English summary

Maternal Death Rate Rising In US: Study

While maternal mortality rates are on the decline internationally, the number of women who die during or soon after pregnancy is on the rise in the US, new research has found.
X
Desktop Bottom Promotion