For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಫಲಪ್ರದ ಸಲಹೆ

By Super
|

ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಅದು ಜೀವನದ ಅತೀ ಶ್ರೇಷ್ಠ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಹೆಣ್ಣಿಗೆ ಗರ್ಭಧಾರಣೆಯೇ ಒಂದು ಅದ್ಭುತ ಅನುಭವ, ಅದರಲ್ಲೂ ಮಗುವಿಗೆ ಹಾಲುಣಿಸುವ ಸಮಯ ವಿಶೇಷವಾಗಿರುವಂತಹದ್ದು. ಎದೆ ಹಾಲು ಮಗುವಿನ ಸಿಗುವ ಅತೀ ಶ್ರೇಷ್ಠ ನೈಸರ್ಗಿಕ ಆಹಾರ. ಇದು ಕೇವಲ ಮಗುವಿಗೆ ಆಹಾರ ಮಾತ್ರವಲ್ಲದೆ, ಹಲವಾರು ರೀತಿಯ ಅನಾರೋಗ್ಯದಿಂದ ಮಗುವನ್ನು ಕಾಪಾಡುತ್ತದೆ. ಯಾಕೆಂದರೆ ಎದೆ ಹಾಲು ರಕ್ತಕ್ಕೆ ವಿವಿಧ ರೀತಿಯ ರೋಗನಿರೋಧಕಗಳನ್ನು ಪೂರೈಸುತ್ತದೆ.

ಅದಾಗ್ಯೂ, ಕಡಿಮೆ ಹಾಲನ್ನು ಉತ್ಪತ್ತಿ ಮಾಡಿದರೆ ಆಥವಾ ಮಗುವಿಗೆ ಹಾಲುಣಿಸಲು ಸಾಧ್ಯವಾಗದಿದ್ದರೆ ಮೊಲೆ ಹಾಲುಣಿಸುವುದು ದೊಡ್ಡ ಸಮಸ್ಯೆಯಾಗಲಿದೆ. ಮೊಲೆ ಹಾಲುಣಿಸಲು ಮೂರು ನಿಯಮಗಳಿವೆ ಅಥವಾ ಇದನ್ನು ನೀವು ತ್ರೀ ಬಿ' ಎಂದು ಕರೆಯಬಹುದು. ಈ ಮೂರು ಬಿ ಗಳೆಂದರೆ ಬೇಬಿ(ಮಗು), ಬ್ರೆಸ್ಟ್(ಮೊಲೆ) ಮತ್ತು ಬ್ರೈನ್(ಮೆದುಳು)

ಸಾಮಾನ್ಯವಾಗಿ ಹಾಲು ಉತ್ಪತ್ತಿಯಾಗಲು ಮಗು ಮೊಲೆಯನ್ನು ಉತ್ತೇಜನ ಮಾಡಬೇಕಾಗುತ್ತದೆ. ಹಾಲುಣಿಸುವ ಪ್ರಕ್ರಿಯೆ ಪುನರಾವರ್ತನೆ ಹೆಚ್ಚಾದಂತೆ ಹಾಲಿನ ಉತ್ಪತ್ತಿಯೂ ಹೆಚ್ಚುತ್ತದೆ. ನಿಮ್ಮ ಮನಸ್ಸು ಉಲ್ಲಾಸಿತಗೊಳ್ಳುತ್ತದೆ ಮತ್ತು ಇದರಿಂದ ಯಾವುದೇ ಒತ್ತಡವಿರುವುದಿಲ್ಲ. ನೈಸರ್ಗಿಕವಾಗಿ ಮೊಲೆಹಾಲನ್ನು ಅಥವಾ ಎದೆ ಹಾಲನ್ನು ಹೆಚ್ಚಿಸಲು ಕೆಲವೊಂದು ಪ್ರಾಮುಖ್ಯ ವಿಚಾರಗಳು ಇಲ್ಲಿವೆ. ಎದೆ ಹಾಲನ್ನು ಹೆಚ್ಚಿಸುವ 10 ಮನೆಮದ್ದುಗಳು

 Tricks To Increase Breast Milk Naturally

ಹಾಲುಣಿಸುವ ಆವರ್ತನ ಹೆಚ್ಚಿಸಿ
ದಿನದಲ್ಲಿ ಮೂರು ಗಂಟೆಗೊಮ್ಮೆ ನೀವು ಮಗುವಿಗೆ ಹಾಲುಣಿಸಬೇಕಾಗುತ್ತದೆ. ಇದರಿಂದ ಎದೆ ಹಾಲು ಹೆಚ್ಚಾಗಲು ನೆರವಾಗುತ್ತದೆ. ಮಗು ಮಲಗಿದ್ದರೆ ಅದನ್ನು ಎಬ್ಬಿಸಿ ಹಾಲುಣಿಸಿ.

ಮಗುವಿನೊಂದಿಗೆ ಹೆಚ್ಚಿನ ಸ್ಪರ್ಶದಿಂದ ಇರಿ
ಮೊಲೆ ಹಾಲುಣಿಸುವಾಗ ನೀವು ಮಗುವಿನ ಆರೈಕೆ ಮಾಡುತ್ತೀರಿ ಮತ್ತು ಅದರೊಂದಿಗೆ ಮೈಯ ಸಂಪರ್ಕ ಸಾಧಿಸುತ್ತೀರಿ. ಈ ಪ್ರಕ್ರಿಯೆಯನ್ನು ರೂಪುಗೊಳ್ಳುವಿಕೆ ಎನ್ನಲಾಗುತ್ತದೆ. ಇದರಿಂದ ಮೊಲೆಯಿಂದ ಹಾಲು ಹೊರಬರುವುದನ್ನು ಉತ್ತೇಜಿಸುತ್ತದೆ ಮತ್ತು ಹಾಲು ಹೊರಬರುವುದು ಹೆಚ್ಚುತ್ತದೆ.

ಉಪಶಾಮಕಗಳನ್ನು ಕಡೆಗಣಿಸಿ
ಉಪಶಾಮಕಗಳನ್ನು ಬಳಸುವುದರಿಂದ ಮಗು ಹೆಚ್ಚು ಹೊತ್ತು ನಿಮ್ಮ ಮೊಲೆಯನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಹಾಲಿನ ಉತ್ಪತ್ತಿ ಕೂಡ ಕಡಿಮೆಯಾಗುತ್ತದೆ. ಎದೆ ಹಾಲಿನ ಉತ್ಪತ್ತಿ ಹೆಚ್ಚಿಸಬೇಕಾದರೆ ಮಗುವಿಗೆ ನೀವು ಉಪಶಾಮಕಗಳನ್ನು ನೀಡಬೇಡಿ.

ನಿಮ್ಮ ಬಗ್ಗೆ ನಿಗಾ ವಹಿಸಿ


ಅತಿಯಾದ ಒತ್ತಡಕ್ಕೆ ಒಳಗಾಗುವುದು ಮತ್ತು ಮನೆಯ ಹೆಚ್ಚಿನ ಕೆಲಸಗಳನ್ನು ಮಾಡುವುದರಿಂದ ನೀವು ತುಂಬಾ ಬಳಲುತ್ತೀರಿ. ಇದರಿಂದ ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಮಗುವಿಗೆ ಸರಿಯಾದ ರೀತಿಯಲ್ಲಿ ಹಾಲುಣಿಸಲು ಸಾಧ್ಯವಾಗುವುದಿಲ್ಲ ಮತ್ತು ಈ ಎಲ್ಲಾ ಅಂಶಗಳು ಮೊಲೆ ಹಾಲಿನ ಉತ್ಪತ್ತಿ ಕಡಿಮೆಯಾಗಲು ಕಾರಣವಾಗಬಹುದು.
English summary

Tricks To Increase Breast Milk Naturally

After the wonderful experience of your pregnancy, you are again blessed with the great experience of breast feeding your baby. Breast milk is nature's best food for your baby. It not only feeds the baby but also protects him from various diseases as it supplies various antibodies to his blood.
Story first published: Thursday, June 25, 2015, 19:53 [IST]
X
Desktop Bottom Promotion