For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ ಆರೋಗ್ಯದ ಸಮಸ್ಯೆಯ ಬಗ್ಗೆ ಎಚ್ಚರವಿರಲಿ!

By Deepak
|

ಗರ್ಭಧಾರಣೆಯು ಹೆಣ್ಣಿನ ಜನ್ಮದ ಅತ್ಯಂತ ಸುಂದರವಾದ ಘಟ್ಟಗಳಲ್ಲಿ ಒಂದಾಗಿದೆ. ಇದರಲ್ಲಿ ಆರೋಗ್ಯ ಮತ್ತು ಆಯಾಸದ ಸಂಗತಿಗಳು ಇದ್ದರು, ಇದು ನಮಗೆ ಅತ್ಯಂತ ಆಹ್ಲಾದಕರವಾಗಿರುತ್ತದೆ. ಮಗುವಿನ ತಾಯಿಯಾಗುವ ಕುತೂಹಲ ಮತ್ತು ಸಂತೋಷದ ಮುಂದೆ ಇವೆಲ್ಲ ಲೆಕ್ಕಕ್ಕೆ ಬರುವುದಿಲ್ಲ.

ಒಂಭತ್ತು ತಿಂಗಳ ನಂತರ ನಿಮ್ಮ ಗರ್ಭದಿಂದ ಒಂದು ಮಗು ನಿಮ್ಮ ಕೈಗೆ ಬಂದ ಕೂಡಲೆ, ನೀವು ಇಷ್ಟು ದಿನ ಮಾಡಿದ ತಪಸ್ಸಿಗೆ ವರ ಸಿಕ್ಕಿದಷ್ಟು ಸಂತೋಷ ನಿಮಗಾಗುತ್ತದೆ. ಆಗ ಆ ಕ್ಷಣ ನೀವು ಒಬ್ಬ ಹೆಮ್ಮೆಯ ತಾಯಿಯಾಗಿ ಒಂದು ಮಗುವಿನ ಅಮ್ಮನಾಗಿ ಬಿಡುತ್ತೀರಿ. ಆದರೂ ಬಹುತೇಕ ಮಂದಿಗೆ ತಿಳಿದಿರದ ಒಂದು ವಿಚಾರ ಇಲ್ಲಿ ಅಡಗಿರುತ್ತದೆ. ಮಗುವಿನ ತಾಯಿಯಾದ ಕೂಡಲೆ ಸಮಸ್ಯೆಗಳು ಮುಗಿಯುವುದಿಲ್ಲ. ಅಲ್ಲಿಂದಲೂ ಸಹ ಸಮಸ್ಯೆಗಳು ಶುರುವಾಗುತ್ತವೆ.

ಮಗು ಜನಿಸಿದ ನಂತರವು ಸಹ ಹಲವಾರು ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಲು ಕಾಯುತ್ತವೆ. ಅವುಗಳನ್ನು ಉದಾಸೀನ ಮಾಡಿದರೆ, ನೀವು ಅಪಾಯಕ್ಕೆ ಸಿಲುಕಿಕೊಳ್ಳುತ್ತೀರಿ. ಇವುಗಳ ಲಕ್ಷಣಗಳು ತುಂಬಾ ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಬಹುತೇಕ ಮಂದಿಯಲ್ಲಿ ಇದು ತೀರಾ ಗಂಭೀರ ಸಮಸ್ಯೆಯಾಗುವವರೆಗೆ ಇದು ಗೊತ್ತೇ ಆಗುವುದಿಲ್ಲ. ಹೆರಿಗೆ ಬಳಿಕ ಕಂಡುಬರುವ ಸಾಮಾನ್ಯ ಸಮಸ್ಯೆಗಳು

ಇದಕ್ಕಾಗಿ ಮನೆಯಲ್ಲಿಯೇ ದೊರೆಯುವ ಮನೆ ಮದ್ದುಗಳ ಮೂಲಕ ಇವುಗಳನ್ನು ವಾಸಿ ಮಾಡಿಕೊಳ್ಳುವುದು ಉತ್ತಮ. ಆದರೂ ಮುಂಜಾಗರೂಕತೆಯ ಕ್ರಮವಾಗಿ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ. ನಿಮಗೆ ಅಲರ್ಜಿ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಹೆರಿಗೆಯ ನಂತರ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗೆ ಹೇಗೆ ಎಂದು ತಿಳಿದುಕೊಳ್ಳಲು ಮುಂದೆ ಓದಿ....

ಮಸಾಜ್

ಮಸಾಜ್

ಮಸಾಜ್ ಸ್ನಾಯು ನೋವು ಮತ್ತು ಹುಳುಕುಗಳನ್ನು ನಿವಾರಿಸಿಕೊಳ್ಳಲು ಇರುವ ಅತ್ಯುತ್ತಮ ವಿಧಾನವಾಗಿದೆ. ಜೊತೆಗೆ ಇದು ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಸಹ ನೀಡುತ್ತದೆ.ತ್ವಚೆಗೆ ನೀರಿನಂಶ ಒದಗಿಸಲು, ಸ್ನಾಯುಗಳಿಗೆ ಮತ್ತು ಮೂಳೆಗಳಿಗೆ ಆರಾಮವನ್ನು ಒದಗಿಸಲು, ತುರಿಕೆಯನ್ನು ನಿವಾರಿಸಿಕೊಳ್ಳಲು ಮತ್ತು ಚೆನ್ನಾಗಿ ನಿದ್ದೆ ಬರಲು ಇದು ಸಹಾಯ ಮಾಡುತ್ತದೆ.

ಕೋಲ್ಡ್ ಅಥವಾ ಹಾಟ್ ಪ್ಯಾಕ್‌ಗಳು

ಕೋಲ್ಡ್ ಅಥವಾ ಹಾಟ್ ಪ್ಯಾಕ್‌ಗಳು

ಸ್ತನಗಳ ಮೇಲೆ ಅಥವಾ ಸ್ಟ್ರೆಚ್ ಕಲೆಗಳ ಮೇಲೆ ಕೋಲ್ಡ್ ಪ್ಯಾಕ್ ಇರಿಸಿಕೊಳ್ಳುವುದರಿಂದ ಆರಾಮ ದೊರೆಯುತ್ತದೆ. ಜೊತೆಗೆ ಹೊಟ್ಟೆಗೆ ಮತ್ತೆ ಬಿಗಿತ ಬರುತ್ತದೆ ಮತ್ತು ನವೆ ಕಡಿಮೆಯಾಗುತ್ತದೆ. ಹಾಟ್ ಪ್ಯಾಕ್‌ಗಳನ್ನು ಹೊಟ್ಟೆಯ ಮೇಲೆ ಇರಿಸಿಕೊಳ್ಳುವುದರಿಂದ, ಗರ್ಭಾಶಯದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಅಧಿಕ ಫೈಬರ್ ಡಯಟ್

ಅಧಿಕ ಫೈಬರ್ ಡಯಟ್

ಅಧಿಕ ಫೈಬರ್ ಡಯಟ್ ಸೇವಿಸುವುದರಿಂದಾಗಿ ಮಲಬದ್ಧತೆಯನ್ನು ನಿವಾರಿಸಿಕೊಳ್ಳಬಹುದು. ಇದು ನಿಮ್ಮ ಮೂತ್ರಾಶಯವು ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ.

ಅಧಿಕ ಪೋಷಕಾಂಶಗಳು

ಅಧಿಕ ಪೋಷಕಾಂಶಗಳು

ಹೆರಿಗೆಯಾದ ನಂತರ ನಿಮ್ಮ ದೇಹವು ಸಿಕ್ಕಾಪಟ್ಟೆ ಸೊರಗಿ ಹೋಗುತ್ತದೆ. ಅದಕ್ಕೆ ಪೋಷಕಾಂಶಗಳು ಬೇಕಾಗುತ್ತವೆ. ಅದಕ್ಕಾಗಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನಿಶಿಯಂ ಮತ್ತು ವಿಟಮಿನ್‌ಗಳನ್ನು ಸೇವಿಸಿ. ಈ ವಿಟಮಿನ್‌ಗಳು ಹೆರಿಗೆಯಾದ ನಂತರ ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೆ ಒಳ್ಳೆಯದು.

ಆರೋಗ್ಯಕ್ಕಾಗಿ ಪಾನೀಯಗಳು

ಆರೋಗ್ಯಕ್ಕಾಗಿ ಪಾನೀಯಗಳು

ಹೆರಿಗೆಯಾದ ನಂತರದ ದಿನಗಳಲ್ಲಿ ಪಾನೀಯಗಳನ್ನು ಸೇವಿಸದೆ ಇದ್ದಲ್ಲಿ, ನಿಮ್ಮ ದೇಹವು ಮತ್ತೆ ಸುಸ್ಥಿತಿಗೆ ಬರುವುದಿಲ್ಲ. ತಾಜಾ ಹಣ್ಣಿನ ರಸಗಳು, ನೀರು ಮತ್ತು ಹಾಲು ಮುಂತಾದ ಆರೋಗ್ಯಕರ ಪಾನೀಯಗಳನ್ನು ಸೇವಿಸಿ. ಏಕೆಂದರೆ ಮಗುವಿಗೆ ಹಾಲು ಕುಡಿಸುವುದರಿಂದ ನಿಮ್ಮ ದೇಹದಲ್ಲಿರುವ ನೀರಿನಂಶ ಖಾಲಿಯಾಗುತ್ತ ಇರುತ್ತದೆ.

English summary

Taking Care Of Your Health After Delivery

Pregnancy is one of the most pleasant and beautiful phases in a woman’s life. Even though it is filled with many health problems and discomforts but, it is all compensated by the excitement of the future addition of a new member of the family.
X
Desktop Bottom Promotion