For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?

By Super
|

ನವಮಾಸದ ಗರ್ಭಾವಸ್ಥೆಯ ಬಳಿಕ ನಸುಗಂದ ಮನೆಗೆ ಬಂದ ಕೂಡಲೇ ಸಂಭ್ರಮ ಮನೆಯಲ್ಲಿ ತುಂಬಿ ತುಳುಕುತ್ತದೆ. ಆತ್ಮೀಯರು, ನೆಂಟರಿಷ್ಟರು, ಸ್ನೇಹಿತರು ಆಗಮಿಸಿ ಮಗುವಿಗೆ ಶುಭ ಹಾರೈಸುತ್ತಾರೆ. ಹೆರಿಗೆಯ ಕೆಲವು ದಿನಗಳವರೆಗಿನ ಬಾಣಂತನದ ಅವಧಿಯಲ್ಲಿ ಆರೈಕೆಗೆ ಯಾರಾದರೂ ಇರುವ ಕಾರಣ ತಾಯಿಗೆ ಸೂಕ್ತ ವಿಶ್ರಾಂತಿ ಮತ್ತು ಚೈತನ್ಯ ನಿಧಾನವಾಗಿ ಲಭಿಸಲು ಪ್ರಾರಂಭವಾಗುತ್ತದೆ. ಕೆಲದಿನಗಳ ನಂತರ

ತಾಯಂದಿರು ತಮ್ಮ ಕೆಲಸವನ್ನು ಮಾಡಲು ಶಕ್ತರಾದ ಬಳಿಕ ಉಳಿದವರು ತಮ್ಮ ಕೆಲಸಗಳಿಗೆ ಹಿಂದಿರುಗುತ್ತಾರೆ. ತಾಯಿಗೆ ನಿಜವಾದ ಕಿರಿಕಿರಿ ಪ್ರಾರಂಭವಾಗುವುದು ಇಲ್ಲಿಂದ! ಮದುವೆಗೂ ಮೊದಲು ಮತ್ತು ಮದುವೆಯ ಬಳಿಕ ಆಕೆಯ ನಡವಳಿಕೆ ಮತ್ತು ದೈಹಿಕ ಆಕಾರ ಬಹುವಾಗಿ ಬದಲಾಗುತ್ತದೆ. ಕೆಲವೊಮ್ಮೆ ಮಗುವನ್ನು ಕುರಿತಾದ ಅತಿ ಹೆಚ್ಚಿನ ಕಾಳಜಿ ಹುಚ್ಚು ಹಿಡಿಯುವಷ್ಟರ ಮಟ್ಟಿಗೆ ಹೆಚ್ಚುತ್ತದೆ.

ತಜ್ಞರ ಪ್ರಕಾರ ಗರ್ಭಾವಸ್ಥೆ ಮತ್ತು ಹೆರಿಗೆಯ ಬಳಿಕ ತಾಯಿಯಾದವಳ ದೇಹದಲ್ಲಿ ಆಂತರಿಕವಾಗಿ ಸ್ರವಿಸಿರುವ ವಿವಿಧ ರಸದೂತಗಳು ಮತ್ತು ವಿವಿಧ ಹಾರ್ಮೋನುಗಳ ಪರಿಣಾಮವಾಗಿ ಮಾನಸಿಕವಾಗಿಯೂ ದೈಹಿಕವಾಗಿಯೂ ಅವರಲ್ಲಿ ಬಹಳ ಬದಲಾವಣೆ ಬಂದಿರುತ್ತದೆ. ಇದು ಆಕೆಯ ಶರೀರದ ಸೌಷ್ಟವ ಮತ್ತು ಸೌಂದರ್ಯವನ್ನು ಕುಗ್ಗಿಸುವುದು ಮಾತ್ರವಲ್ಲ, ನಡವಳಿಕೆಯಲ್ಲಿಯೂ ಬಹಳ ಬದಲಾವಣೆ ಕಾಣಬಹುದು. ಈ ಬದಲಾವಣೆಗಳು ಕೊಂಚ ವಿಚಿತ್ರವಾಗಿದ್ದು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದು. ಪ್ರಥಮ ಹೆರಿಗೆಯ ಬಳಿಕ ಕಂಡುಬರುವ ಮುಟ್ಟಿನ ಲಕ್ಷಣಗಳೇನು?

ಆದರೆ ಮನೆಯವರು, ಅದರಲ್ಲೂ ವಿಶೇಷವಾಗಿ ಪತಿಯರು ತಮ್ಮ ಪತ್ನಿಯರ ಈ ನಡವಳಿಕೆಯನ್ನು ಸಹಿಸಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ. ತಾಯಿಯಾಗುವ ಮೊದಲು ಪತಿಯರಿಗೆ ನೀಡುತ್ತಿದ್ದ ಸಮಯ ಈಗ ಬಹುಪಾಲು ಮಗುವಿಗಾಗಿ ಮೀಸಲಾಗುತ್ತದೆ. ಮಗುವನ್ನು ಕಾರಣವಾಗಿಸಿ ಆಕೆ ಹಲವಾರು ಪತಿಯ ಬೇಡಿಕೆಗಳಿಗೆ 'ಇಲ್ಲ', 'ಬರುವುದಿಲ್ಲ' ಮೊದಲಾದ ಉತ್ತರಗಳನ್ನು ನೀಡುತ್ತಾಳೆ. ಹಳೆಯ ಬಟ್ಟೆಗಳೆಲ್ಲಾ ಬಿಗಿಯಾಗಿ ಮೂಲೆಸೇರುತ್ತವೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ತಾಯಿಯಾದವಳು ಸದಾ ನಿದ್ದೆಯ ಮಂಪರಿನಲ್ಲಿರುತ್ತಾಳೆ

ತಾಯಿಯಾದವಳು ಸದಾ ನಿದ್ದೆಯ ಮಂಪರಿನಲ್ಲಿರುತ್ತಾಳೆ

ಹುಟ್ಟಿದ ಮಗುವಿಗೆ ಇರುವುದು ಎರಡೇ ಕೆಲಸಗಳು, ಅಳುವುದು ಮತ್ತು ಮಲಗುವುದು. ಸುಮಾರು ಮೂರು ತಿಂಗಳಾಗುವವರೆಗೂ ಮಗುವಿಗೆ ಹಾಲು ಕುಡಿಸಲು ರಾತ್ರಿಯಿಡೀ ಹಲವಾರು ಬಾರಿ ಏಳುತ್ತಲೇ ಇರಬೇಕಾದುದರಿಂದ ನಿದ್ದೆ ಸರಿಯಾಗದೇ ದಿನದಲ್ಲಿಯೂ ಆಕೆ ನಿದ್ದೆಯ ಮಂಪರಿನಲ್ಲಿರುತ್ತಾಳೆ. ಅಂತೆಯೇ ಹಗಲಿನಲ್ಲಿ ನಡೆದಾಡುವಾಗ ನಿದ್ದೆಯ ಮಂಪರು ಇರುವುದು ಸಾಮಾನ್ಯ. ಮನೆಯವರು ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಕೆಯಿಂದ ಹೆಚ್ಚಿನ ನೆರವನ್ನು ಅಪೇಕ್ಷಿಸದೇ, ಆಕೆ ನಡೆದಾಡುವಲ್ಲಿ ತೊಡರುಗಳಿರದಂತೆ ನೋಡಿಕೊಳ್ಳುವ ಮೂಲಕ ಸಹಕರಿಸುವುದು ಉತ್ತಮ.

ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ

ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ

ಹೆರಿಗೆಯ ಬಳಿಕ ಆಗುವ ದೈಹಿಕ ಬದಲಾವಣೆಗಳಲ್ಲಿ ಕಣ್ಣುಗಳ ಕಪ್ಪು ವರ್ತುಲವೂ ಒಂದು. ಅಷ್ಟೇ ಅಲ್ಲ, ಕಣ್ಣುಗಳ ಕೆಳಭಾಗದಲ್ಲಿ ಕೊಂಚ ಊದಿಕೊಂಡಂತಿರುವುದು ಇನ್ನೊಂದು ಲಕ್ಷಣ. ಮದುವೆಗೂ ಮುನ್ನ ಕಾಳಜಿಯಿಂದ ಕಾಪಾಡಿಕೊಂಡು ಬಂದಿದ್ದ ವದನ ಈಗ ಕಳಾಹೀನವಾಗಿರುತ್ತದೆ.

ಸದಾ ಅಳುವ ಮಗು, ಸದಾ ಗೊಂದಲದಲ್ಲಿರುವ ತಾಯಿ

ಸದಾ ಅಳುವ ಮಗು, ಸದಾ ಗೊಂದಲದಲ್ಲಿರುವ ತಾಯಿ

ಹೆರಿಗೆಯ ಬಳಿಕ ತಾಯಿಯಾದವಳು ಸದಾ ತನ್ನ ಮಗುವಿನತ್ತ ಒಂದು ಗಮನವಿರಿಸಿರಲೇ ಬೇಕಾಗುತ್ತದೆ. ಮಗುವೇನಾದರೂ ಅಳುತ್ತಿದೆಯೋ ಎಂದು ಮೈಯೆಲ್ಲಾ ಕಿವಿಯಾಗಿ ಕೇಳುತ್ತಿರಬೇಕಾಗುತ್ತದೆ. ಒಂದರ್ಥದಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಯೂ ಒಂದು ರೀತಿಯ ಕಾವಲುಗಾರನಾಗಬೇಕಾಗುತ್ತದೆ. ಮಗುವಿನ ಅಳು ಕೇಳಿಸಿತೋ, ತಾಯಿ ಎಲ್ಲವನ್ನೂ ಬಿಟ್ಟು ಮಗುವಿನ ಬಳಿ ಓಡುತ್ತಾಳೆ. ಇದು ಕೊಂಚ ವಿಚಿತ್ರವೆಂದೆನಿಸಿದರೂ ನಿಸರ್ಗ ತಾಯಿಯರನ್ನು ಈ ರೀತಿಯೇ ನಿರ್ಮಿಸಿದೆ. ಈ ಪರಿಯ ಗಮನದ ಕಾರಣ ಇತರ ಕೆಲಸಗಳು ಬಾಧೆಗೊಳಗಾಗುತ್ತವೆ. ಮನೆಯವರು ಇದನ್ನು ಅರಿತುಕೊಂಡು ಆಕೆಯ ಕೆಲಸಗಳಲ್ಲಿ ಸಹಕರಿಸುವುದು ಉತ್ತಮ.

ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ

ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ

ಸಾಮಾನ್ಯ ಅಥವಾ ಸಿಸೇರಿಯನ್ ಹೆರಿಗೆಯಾದರೂ ಹೆರಿಗೆಯ ಬಳಿಕ ಕೆಲವು ವಾರಗಳವರೆಗೆ ತಾಯಂದಿರ ಮನದಲ್ಲಿ ಲೈಂಗಿಕ ಬಯಕೆಗಳು ಮೂಡುವುದೇ ಇಲ್ಲ. ಇದಕ್ಕೆ ಪ್ರೊಲಾಕ್ಟಿನ್ (prolactin) ಎಂಬ ಹಾರ್ಮೋನು ಕಾರಣ. ಮಗುವಿಗೆ ಊಡಿಸಲು ಹಾಲಿನ ಉತ್ಪನ್ನಕ್ಕೆ ಪ್ರಚೋದನೆ ನೀಡುವ ಈ ಹಾರ್ಮೋನು ಲೈಂಗಿಕ ಬಯಕೆಗಳನ್ನು ಕುಂಠಿತಗೊಳಿಸುತ್ತದೆ. ವಾಸ್ತವವಾಗಿ ಇದು ನಿಸರ್ಗದ ಒಂದು ಸುರಕ್ಷಾ ವ್ಯವಸ್ಥೆಯಾಗಿದೆ. ಹೆರಿಗೆಯ ಬಳಿಕ ಸಡಿಲಗೊಂಡಿದ್ದ ಗರ್ಭಕೋಶ ಸಂಬಂಧಿತ ಅಂಗಗಳು ತಮ್ಮ ಯಥಾಸ್ಥಾನ ಪಡೆಯಲು ಕೆಲವು ವಾರಗಳಾದರೂ ಬೇಕಾಗುತ್ತದೆ. ಈ ಅವಧಿಯಲ್ಲಿ ರಕ್ಷಣೆ ಪಡೆಯಲು ಪ್ರೊಲಾಕ್ಟಿನ್ ನೆರವಾಗುತ್ತದೆ.

ಹೊಟ್ಟೆಬಾಕತನ ಹೆಚ್ಚುತ್ತದೆ

ಹೊಟ್ಟೆಬಾಕತನ ಹೆಚ್ಚುತ್ತದೆ

ಹೆರಿಗೆಯ ಬಳಿಕ ಬಹುತೇಕ ತಾಯಂದಿರು ತೂಕ ಹೆಚ್ಚಿಸಿಕೊಳ್ಳುತ್ತಾರೆ. ಏಕೆಂದರೆ ಅವರಿಗೆ ನಿಯಂತ್ರಣವೇ ಸಾಧ್ಯವಿಲ್ಲದ ಹಸಿವು ಪ್ರಾರಂಭವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕಂದನಿಗೆ ನೀಡುವ ಹಾಲು. ಹಾಲಿನ ಉತ್ಪಾದನೆಗೆ ಹೆಚ್ಚಿನ ಪೌಷ್ಟಿಕಾಂಶಗಳ ಅಗತ್ಯವಿದ್ದು ದೇಹ ಈ ಅಗತ್ಯವನ್ನು ಹಸಿವಿನ ಮೂಲಕ ಪೂರೈಸಿಕೊಳ್ಳಲು ಯತ್ನಿಸುತ್ತದೆ. ಪರಿಣಾಮವಾಗಿ ಇಡಿಯ ದಿನ ಹೊಟ್ಟೆಬಾಕರಂತೆ ತಿನ್ನುವ ತಾಯಂದಿರ ದೇಹದಲ್ಲಿ ಕೊಂಚ ಭಾಗ ಮಾತ್ರ ಹಾಲಿನ ಉತ್ಪಾದನೆಗೆ ಬಳಕೆಯಾದರೆ ಉಳಿದದ್ದು ಕೊಬ್ಬಾಗಿ ಸೊಂಟದ ಸುತ್ತಳತೆಯನ್ನು ಹೆಚ್ಚಿಸುತ್ತದೆ.

ಸ್ಥೂಲಕಾಯ ಆವರಿಸುತ್ತದೆ

ಸ್ಥೂಲಕಾಯ ಆವರಿಸುತ್ತದೆ

ಸಾಮಾನ್ಯವಾಗಿ ಉತ್ತಮ ಮೈಕಟ್ಟನ್ನು ಉಳಿಸಿಕೊಂಡು ಬಂದಿದ್ದ ದೇಹ ಹೆರಿಗೆಯ ಬಳಿಕ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಬೆಳೆಯತೊಡಗುತ್ತದೆ. ವಿಶೇಷವಾಗಿ ಸಿಸೇರಿಯನ್ ಹೆರಿಗೆಯ ಬಳಿಕ ಹೊಟ್ಟೆಯ ಭಾಗ ದೊಡ್ಡದಾಗಿದ್ದು ನಿತಂಬಗಳೂ ಹೆಚ್ಚು ದೊಡ್ಡದಾಗುತ್ತವೆ. ಸ್ತನಗಳು ವಿಪರೀತ ಸೂಕ್ಷ್ಮಸಂವೇದಿಯಾಗುತ್ತವೆ. ಕೆಳಹೊಟ್ಟೆಯಲ್ಲಿ ಚಿತ್ತಾರದಂತೆ ಚರ್ಮ ಹಿಸಿದ ಗುರುತುಗಳು ಕಾಣಿಸಿಕೊಳ್ಳುತ್ತವೆ. (strech marks) ತಾಯಿಯ ಚರ್ಮ ಬೆಳ್ಳಗಿದ್ದರೆ ಈ ಗುರುತುಗಳು ಗುಲಾಬಿ ಬಣ್ಣದಲ್ಲಿರುತ್ತವೆ, ತಾಯಿಯ ಬಣ್ಣ ಗೋಧಿ ಅಥವಾ ಅದಕ್ಕೂ ಗಾಢವಾಗಿದ್ದರೆ ಈ ಗುರುತುಗಳು ಗೋಧಿಬಣ್ಣದಲ್ಲಿಯೇ ತಿಳಿಯಾಗಿರುತ್ತವೆ. ಈ ತೊಂದರೆ ಶೇಖಡಾ ತೊಂಬತ್ತರಷ್ಟು ತಾಯಂದಿರಲ್ಲಿ ಕಂಡುಬರುತ್ತದೆ. ಈ ಗುರುತುಗಳನ್ನು ಮರೆಮಾಚಲು ಹೊಕ್ಕಳಿನ ಮಟ್ಟಕ್ಕೆ ಸೀರೆ ಉಡುವುದು ಅನಿವಾರ್ಯವಾಗುತ್ತದೆ.

English summary

Strange Things That Happen To Women After Pregnancy

When a baby is born, there is endless joy, celebration, friends, family and well-wishers all around the arrival of your little one. But, as soon as you head home, it is a different story, and the word ‘joy' flies out of the window in no time. Here below are some of the strange things that happen to women right after pregnancy. One look at these things, it might make one think that the woman has gone insane.
X
Desktop Bottom Promotion