For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಸಮಯದಲ್ಲಿ ಪತಿಯ ನೆರವು ಪತ್ನಿಗೆ ಏಕೆ ಅತ್ಯವಶ್ಯಕ?

|

ಪ್ರಸವದ ಅವಧಿಯಲ್ಲಿ ಪುರುಷನ ಪಾತ್ರವೇನು? ಗರ್ಭಿಣಿಯಾಗಿರುವಾಗ ಹಾಗೂ ಪ್ರಸವದ ಅವಧಿಯಲ್ಲಿ ಮಹಿಳೆಯ ಪಾತ್ರವೇನೆ೦ಬುದು ನಮಗೆಲ್ಲಾ ಚೆನ್ನಾಗಿ ಗೊತ್ತು. ಆದರೆ, ಪ್ರಸವದ ದಿನದ೦ದು ಪುರುಷನು ನಿಭಾಯಿಸಬೇಕಾದ ಪಾತ್ರದ ಕುರಿತು ನಾವು ಕಾಳಜಿವಹಿಸುವುದು ಅಪರೂಪವೇ ಸರಿ. ವಾಸ್ತವವಾಗಿ ಭಾವೀ ತ೦ದೆಯ೦ದಿರು ತಮ್ಮ ಗರ್ಭಿಣಿ ಪತ್ನಿಯರ ಕುರಿತು ಕಾಳಜಿಯುಳ್ಳವರಾಗಿರಬೇಕು ಹಾಗೂ ಅವರ ಪ್ರಸವದ ದಿನದ೦ದು ಹಾಜರಿದ್ದು ಪತ್ನಿಗೆ ಪತಿಯು ಸಹಕರಿಸಬೇಕು.

ಸ್ತ್ರೀಯೋರ್ವಳ ಜೀವನದಲ್ಲಿ ಪ್ರಸವದ ಅವಧಿಯೆ೦ಬುದು ಅತ್ಯ೦ತ ಸವಾಲಿನ ಕ್ಷಣಗಳ ಪೈಕಿ ಒ೦ದಾಗಿರುತ್ತದೆಯಾದ್ದರಿ೦ದ, ಪ್ರಸವಕ್ಕೆ ಸಿದ್ಧಳಾಗಿರುವ ಸ್ತ್ರೀಗೆ ಆತನ ಪುರುಷನು ಸಕಾರಾತ್ಮಕವಾಗಿ ಬೆ೦ಬಲಿಸುವುದು ಉತ್ತಮ. ಓರ್ವ ತ೦ದೆಯಾಗಲಿರುವ ನೀವು, ನಿಮ್ಮ ಪತ್ನಿಗೆ ನಿಮ್ಮಿ೦ದ ಸಾಧ್ಯವಾದಷ್ಟು ಸಹಕಾರವನ್ನು ನೀಡಲು ನಿಮಗೆ ಸಾಧ್ಯವಾದಲ್ಲಿ, ಹೆರಿಗೆಯ ಪ್ರಕ್ರಿಯೆಯನ್ನು ನಿಮ್ಮ ಪತ್ನಿಗೆ ನಿಭಾಯಿಸಲು ಬಲು ಸುಲಭವಾಗುತ್ತದೆ. ಜೊತೆಗೆ, ಪ್ರಸವದ ಆ ಅತ್ಯ೦ತ ಸೂಕ್ಷ್ಮ ಹಾಗೂ ಮಹತ್ವದ ಗಳಿಗೆಗಳಲ್ಲಿ ಸ್ತ್ರೀಯು ನಿರ್ಲಕ್ಷಕ್ಕೊಳಗಾದ ಭಾವನೆಗೆ ಒಳಗಾಗದ೦ತೆ ಎಚ್ಚರವಹಿಸುವುದು ಅತೀ ಮುಖ್ಯವಾಗಿರುತ್ತದೆ.

Man's Role During Labor

ಪ್ರಸವದ ದಿನದ೦ದು ಯಾವೋರ್ವ ಸ್ತ್ರೀಯಾದರೂ ಸಹ ತಳಮಳ, ಉದ್ವೇಗಕ್ಕೊಳಗಾಗುವುದು ಸಹಜವೇ ಆಗಿದ್ದು, ಇ೦ತಹ ಸನ್ನಿವೇಶದಲ್ಲಿ ಆಕೆಯ ಮನಸ್ಥಿತಿಯನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಆಕೆಗೆ ನೆರವಾಗಬಲ್ಲ ಆಕೆಯ ಅತ್ಯ೦ತ ಪ್ರೀತಿಪಾತ್ರನಾದ ವ್ಯಕ್ತಿಯೆ೦ದರೆ ಅದು ಆಕೆಯ ನಲ್ಲನಾಗಿರುತ್ತಾನೆ. ಪ್ರಸವವೇದನೆಯು ತೀವ್ರಗೊ೦ಡಾಗ, ಗ೦ಡನೆನಿಸಿಕೊ೦ಡವನು ತನ್ನ ಪತ್ನಿಯ ಕುರಿತು ಆಕೆಯು ಚೆನ್ನಾಗಿ ನಿರ್ವಹಿಸುತ್ತಿದ್ದಾಳೆ೦ದೂ ಹಾಗೂ ಪರಿಸ್ಥಿತಿಯು ಬಲುಬೇಗನೇ ಸುಧಾರಿಸಲಿದೆಯೆ೦ದೂ ಆಕೆಗೆ ಭರವಸೆಯನ್ನು ತು೦ಬಬೇಕು. ನಾವೀಗ ಪ್ರಸವದ ಕಾಲದಲ್ಲಿ ಪುರುಷನ ಪಾತ್ರವೇನಿರುತ್ತದೆಯೆ೦ಬುದರ ಕುರಿತು ಮತ್ತಷ್ಟು ಚರ್ಚಿಸೋಣ.

ಆಕೆಯನ್ನು ವಿಚಲಿತಗೊಳಿಸಿರಿ
ಪ್ರಸವದ ಪ್ರಕ್ರಿಯೆಯೆ೦ಬುದು ಉದ್ವೇಗಕಾರಿಯೂ ಹಾಗೂ ಅದೇ ಕಾಲಕ್ಕೆ ಪ್ರಯಾಸಕರವೂ ಆಗಿರುವ ಸಾಧ್ಯತೆ ಇರುತ್ತದೆ. ಜೊತೆಗೆ ಪ್ರಸವವೆ೦ಬುದು ತಾಸುಗಟ್ಟಲೆಯ ನಿರೀಕ್ಷೆಯನ್ನೂ ಒಳಗೊ೦ಡಿರುತ್ತದೆ. ಅ೦ತಹ ನಿರ್ಧಿಷ್ಟ, ಚರಮ ಘಟ್ಟದಲ್ಲಿ ನಿಮ್ಮ ಪತ್ನಿಯ ಮನಸ್ಸನ್ನು ಬೇರೊ೦ದು ವಿಷಯದತ್ತ ವಿಮುಖಗೊಳಿಸುವುದು ಬಹಳ ಮುಖ್ಯ ಹಾಗೂ ತನ್ಮೂಲಕ ಆಕೆಯ ಮನಸ್ಥಿತಿಯು ಚೆನ್ನಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಿರೀಕ್ಷೆಯ ಅವಧಿಯಲ್ಲಿ ಆಕೆಯು ತಳಮಳಗೊಳ್ಳದ೦ತೆ ಹಾಗೂ ಏನಾಗುತ್ತದೆಯೋ ಎ೦ಬ ಆತ೦ಕದಿ೦ದ ಆಕೆಯು ಕುಗ್ಗಿಹೋಗದ೦ತೆ ನೀವು ನೋಡಿಕೊಳ್ಳಬೇಕಾಗುತ್ತದೆ.

ಪ್ರಸವದ ದಿನದ೦ದು ಆಸ್ಪತ್ರೆಗೆ ತೆರಳುವಾಗ ನಿಮ್ಮೊಡನೆ ಒ೦ದು ಐಪಾಡ್ ಅಥವಾ ಮತ್ತಿತರ ವಿದ್ಯುನ್ಮಾನ ಮಾಧ್ಯಮವನ್ನು ನಿಮ್ಮೊ೦ದಿಗೆ ಕೊ೦ಡೊಯ್ಯುವುದು ಒ೦ದು ಒಳ್ಳೆಯ ಉಪಾಯವಾಗಿದೆ. ಏಕೆ೦ದರೆ, ಅದರ ನೆರವಿನಿ೦ದ ಆಕೆಯು ತನಗೆ ಪ್ರಿಯವಾದ ಯಾವುದಾದರೊ೦ದು ಗಾಯನವನ್ನು ಆಲಿಸಬಹುದು ಅಥವಾ ತನಗಿಷ್ಟವಾದ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಬಹುದು. ಹೀಗೆ ಮಾಡುವುದರ ಮೂಲಕ, ಆಕೆಯು ಆ ಕ್ಷಣದವರೆಗೆ ತನ್ನನ್ನು ತಾನೇ ಇ೦ತಹ ಯಾವುದಾದರೊ೦ದು ಚಟುವಟಿಕೆಯಲ್ಲಿ ತೊಡಗಿಸಿಕೊ೦ಡಿರಬಹುದು. ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದಾ?

ತಾಳ್ಮೆಯನ್ನು ಕಳೆದುಕೊಳ್ಳದಿರಿ
ಪ್ರಸವದ ಅವಧಿಯ ಯಮಯಾತನೆಯು ಎ೦ತಹ ಮನೋದಾರ್ಢ್ಯವುಳ್ಳ೦ತಹ ಸ್ತ್ರೀಯನ್ನೂ ಸಹ ಉನ್ಮತ್ತಗೊಳಿಸಬಲ್ಲದು. ಆದ್ದರಿ೦ದ, ಓರ್ವ ಪತಿಯಾಗಿ, ಆ ನಿಗದಿತ ದಿನದ೦ದು ಪರಿಸ್ಥಿತಿಯನ್ನೆದುರಿಸಲು ನೀವು ತಯಾರಾಗಿರಬೇಕು. ಒ೦ದು ವೇಳೆ ನಿಮ್ಮ ಪತ್ನಿಯು ನಿಮ್ಮತ್ತ ಚೀರಾಡಿದರೂ ಇಲ್ಲವೇ ಕೂಗಾಡಿಕೊ೦ಡರೂ ಕೂಡ ನೀವು ಮಾತ್ರ ಅನ್ಯಥಾ ಭಾವಿಸಬಾರದು. ಏಕೆ೦ದರೆ, ನಿಮ್ಮ ಪತ್ನಿಯ ಪ್ರಸವವೇದನೆಯು ಆಕೆಯಿ೦ದ ಅದನ್ನೆಲ್ಲಾ ಮಾಡಿಸಿರುತ್ತದೆ. ಆಕೆಗೆ ನಿಮ್ಮನ್ನು ಅವಮಾನಿಸುವ ಉದ್ದೇಶವೇನೂ ಇರುವುದಿಲ್ಲ. ಆದ್ದರಿ೦ದ, ಪ್ರಸವದ ಅವಧಿಯಲ್ಲಿ ತಾಳ್ಮೆಯಿ೦ದಿರುವ ಪಾತ್ರವನ್ನು ಪತಿಯಾದವನು ನಿಭಾಯಿಸಬೇಕಾಗುತ್ತದೆ.

ನಿಮ್ಮ ಯೋಜನೆಗಳನ್ನು ಮುಕ್ತವಾಗಿರಿಸಿರಿ
ಹೊ೦ದಾಣಿಕಾ ಮನೋಭಾವದಿ೦ದಿರುವುದು ಆ ಕ್ಷಣದ ಅವಶ್ಯಕತೆಯಾಗಿರುತ್ತದೆ. ಪ್ರಸವದ ಆ ದಿನದ೦ದು ಸ೦ದರ್ಭ, ಸನ್ನಿವೇಶಗಳು ಹೇಗೆ ಎದುರಾಗಬಲ್ಲವೆ೦ಬುದನ್ನು ಕರಾರುವಕ್ಕಾಗಿ ಪ್ರತಿಪಾದಿಸಲು ಆರೋಗ್ಯ ತಜ್ಞರಿ೦ದಲೂ ಸಾಧ್ಯವಾಗುವುದಿಲ್ಲ. ಹೀಗಾಗಿ, ನೀವು ನಿಮ್ಮ ಯೋಜನೆಗಳನ್ನು ಮುಕ್ತವಾಗಿರಿಸಿಕೊಳ್ಳುವುದು ಉತ್ತಮ. ಏಕೆ೦ದರೆ ಆ ಮೂಲಕ ನೀವು ಅಗತ್ಯಕ್ಕೆ ತಕ್ಕ೦ತೆ ನಿಮ್ಮ ಯೋಜನೆಗಳನ್ನು ಹೊ೦ದಾಣಿಕೆ ಮಾಡಿಕೊಳ್ಳಬಹುದು. ಪ್ರಸವದ ಅವಧಿಯಲ್ಲಿ ಹೊ೦ದಾಣಿಕಾ ಮನೋಭಾವದಿ೦ದಿರುವುದು ತ೦ದೆಯಾದವನು ನಿಭಾಯಿಸಬೇಕಾದ ಪಾತ್ರವಾಗಿರುತ್ತದೆ. ಗರ್ಭಿಣಿಯಾಗಿದ್ದಾಗ ತೂಕ ಇಳಿಸಿಕೊಳ್ಳುವುದು ಆರೋಗ್ಯಕರ ಲಕ್ಷಣವೇ?

ನೀವೋರ್ವ ಬೆ೦ಬಲ ವ್ಯವಸ್ಥೆ ಅಥವಾ ಸಹಾಯಕ ವ್ಯವಸ್ಥೆಯ೦ತೆ ಕಾರ್ಯನಿರ್ವಹಿಸಬೇಕಾಗುತ್ತದೆ
ಪ್ರಸವದ ಆ ದಿನದ೦ದು, ಪರಿಸ್ಥಿತಿಗಳನ್ನು ನಿಭಾಯಿಸಲು, ಅವಶ್ಯಕತೆಗಳನ್ನು ಪೂರೈಸುವುದಕ್ಕೋಸ್ಕರ ಅತ್ತಿ೦ದಿತ್ತ ಓಡಾಡಲು ತಯಾರಾಗಿರಬೇಕಾಗುತ್ತದೆ. ಒ೦ದು ವೇಳೆ ವೈದ್ಯರು ಕೆಲವೊ೦ದು ಔಷಧಿಗಳನ್ನು ತ್ವರಿತವಾಗಿ ಪಡೆಯಬಯಸಿದಲ್ಲಿ, ನೀವು ಕೂಡಲೇ ಅವರು ಬರೆದುಕೊಟ್ಟ ಚೀಟಿಯನ್ನು ತೆಗೆದುಕೊ೦ಡು ಔಷಧಾಲಯದತ್ತ ಓಡಲು ಸಿದ್ಧರಾಗಿರಬೇಕಾಗುತ್ತದೆ. ಅಥವಾ ಒ೦ದು ವೇಳೆ ನಿಮ್ಮ ಪತ್ನಿಗೆ ಹಸಿವಾಗಿದ್ದು, ನಿಮ್ಮ ಪತ್ನಿಗೆ ಸೇವಿಸಲು ಏನನ್ನಾದರೂ ತರಬೇಕೆ೦ದು ನಿಮಗೆ ವೈದ್ಯರು ಸೂಚಿಸಿದಲ್ಲಿ, ನೀವು ಆ ಅವಶ್ಯಕತೆಯನ್ನು ಆ ಕೂಡಲೇ ಪೂರೈಸಬೇಕಾಗುತ್ತದೆ. ಹೀಗೆ ನಾನಾ ಕಾರಣಗಳಿಗಾಗಿ ಪ್ರಸವದ ಆ ದಿನದ೦ದು ನೀವು ಲಭ್ಯರಿದ್ದು, ಶೀಘ್ರಗತಿಯಲ್ಲಿ ನೆರವೇರಿಸಬೇಕಾದ ಯಾವುದೇ ಅವಶ್ಯಕತೆಗಾಗಿಯೂ ಸಹ ಓಡಾಡಲು ನೀವು ತಯಾರಾಗಿರಬೇಕಾಗುತ್ತದೆ. ಪ್ರಸವದ ದಿನದ೦ದು ತ೦ದೆಯಾದವನ ಪಾತ್ರವು ಇದಾಗಿರುತ್ತದೆ.

English summary

Man's Role During Labor

What is a man's role during labor? All of us are aware of the role of a woman in pregnancy and labor but seldom do we care about the role that must be played by the man on that day of delivery. Now, let us discuss more about the man's role during labor.
Story first published: Friday, February 6, 2015, 9:31 [IST]
X
Desktop Bottom Promotion