For Quick Alerts
ALLOW NOTIFICATIONS  
For Daily Alerts

ಜ್ವರ ಬಂದಾಗ ಎದೆಹಾಲೆಂಬ ಅಮೃತ ಕೂಡ ವಿಷವಾಗುವುದೇ?

|

ಹಾಲಿನಲ್ಲಿ ಎದೆ ಹಾಲು ಸರ್ವಶ್ರೇಷ್ಠವಾದುದು! ನಿಮ್ಮ ಮಗುವನ್ನು ಆರೋಗ್ಯವಾಗಿಡಲು ಎದೆ ಹಾಲು ಅತ್ಯುತ್ತಮವಾದ ಮತ್ತು ಸುರಕ್ಷಿತವಾದ ಮಾರ್ಗವಾಗಿದೆ. ನೀವು ಇದೇ ಮೊದಲ ಬಾರಿಗೆ ತಾಯಿಯಾಗಿದ್ದರು ಅಥವಾ ಎರಡನೆ ಬಾರಿಯಾಗಿದ್ದರು, ಎದೆ ಹಾಲು ಕುಡಿಸುವುದರಲ್ಲಿ ಯಾವುದೇ ವ್ಯತ್ಯಾಸಗಳು ಆಗುವುದಿಲ್ಲ. ನಮಗೆ ಸಾಮಾನ್ಯವಾಗಿ ಕೆಲವೊಂದು ಸಂಶಯಗಳು ಕಾಡುತ್ತವೆ. ಜ್ವರ ಬಂದಾಗ ಹಾಲು ಕುಡಿಸಬಹುದೇ, ಬೇಡವೆ ಎಂದು, ಈ ಸಂಶಯ ಏಕೆ ಕಾಡುತ್ತದೆ ಎಂದರೆ, ಇದರಿಂದ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೇನಾದರು ಆಗುತ್ತದೆಯೇ ಎಂಬ ಭಯವೇ ಇದಕ್ಕೆ ಮುಖ್ಯ ಕಾರಣ.

ಸಾಮಾನ್ಯವಾಗಿ ಜ್ವರ ಬಂದಾಗ ತಾಯಂದಿರು ತಮ್ಮ ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸುತ್ತಾರೆ. ಆದರೆ ವೈಧ್ಯರು ಜ್ವರವಿದ್ದರು ಮಗುವಿಗೆ ಹಾಲು ಕುಡಿಸುವುದನ್ನು ಬಿಡಬೇಡಿ, ಏಕೆಂದರೆ ಇದರಿಂದ ಮಗುವಿನ ಮೇಲೆ ಯಾವುದೇ ಪರಿಣಾಮಗಳಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವೊಂದು ವೈದ್ಯಕೀಯ ಸನ್ನಿವೇಶಗಳಲ್ಲಿ, ವೈಧ್ಯರ ಸಲಹೆ ನೀಡುವವರೆಗು ಹಾಲು ಕುಡಿಸುವುದರಲ್ಲಿ ತಪ್ಪೇನಿಲ್ಲ.

ನಿಮಗೆ ಜ್ವರ ಬಂದಾಗ, ನಿಮಗೆ ಗೊತ್ತೇ ಆಗದಂತೆ ನೀವು ನಿಮ್ಮ ದೇಹದಲ್ಲಿರುವ ಪ್ಯಾಥೊಜೆನ್‍ಗಳನ್ನು ಮಗುವಿಗೆ ವರ್ಗಾಯಿಸಿರುತ್ತೀರಿ. ತಾಯಿ ಕಾಯಿಲೆ ಬಿದ್ದಾಗ ಮಗುವಿಗು ಸಹ ಕಾಯಿಲೆ ಬರುವುದು ಸಹಜ. ಅದಕ್ಕಾಗಿ ನಿಮ್ಮ ಮಗುವಿಗೆ ಕೆಲವೊಂದು ಆಂಟಿ ಬಾಡಿಗಳನ್ನು ನೀಡಿ. ಈ ವಿಚಾರವಾಗಿ ಇಲ್ಲಿ ನಾವು ನಿಮಗಾಗಿ ಕೆಲವೊಂದು ಮುಖ್ಯ ಅಂಶಗಳನ್ನು ತಿಳಿಸುತ್ತಿದ್ದೇವೆ. ಶುಚಿತ್ವದ ಕಾಳಜಿ: ಮಹಿಳೆಯರ ಗುಪ್ತ ಸಮಸ್ಯೆಗೆ ಫಲಪ್ರದ ಸಲಹೆ

Is It Safe To Breast Feed During Flu?

ಕಲ್ಮಶಗಳನ್ನು ಹೊರಹಾಕಲು ಹಾಲು ಕುಡಿಸಿ
ಹೌದು ನಿಮಗೆ ಜ್ವರ ಬಂದಾಗ ಅದನ್ನು ನೀವು ಮಗುವಿಗು ಸಹ ವರ್ಗಾಯಿಸಿರುತ್ತೀರಿ. ನೀವು ಎಚ್ಚೆತ್ತುಕೊಳ್ಳುವ ಮೊದಲೆ ನಿಮ್ಮ ಮಗು ಬ್ಯಾಕ್ಟೀರಿಯಾಗಳ ದಾಳಿಗೆ ಗುರಿಯಾಗಿರುತ್ತದೆ. ಆಗ ಎದೆ ಹಾಲು ಕುಡಿಸುವುದರಿಂದ ನಿಮ್ಮ ಮಗುವಿನ ದೇಹದಲ್ಲಿರುವ ಕಲ್ಮಶಗಳು ಮತ್ತು ಬ್ಯಾಕ್ಟೀರಿಯಾಗಳು ಮಗು ವಿಸರ್ಜನೆ ಮಾಡಿದಾಗ ಹೊರ ಬರುತ್ತವೆ. ಇದರಿಂದ ಮಗುವಿಗೆ ಚೇತರಿಸಿಕೊಳ್ಳಲು ನೆರವಾಗುತ್ತದೆ. ಹಾಗಾಗಿ ಹಾಲು ಕುಡಿಸುವುದನ್ನು ಬಿಡಬೇಡಿ.

ಸುರಕ್ಷಿತವಾದ ಆಂಟಿ ಬಯೋಟಿಕ್ ತೆಗೆದುಕೊಳ್ಳಿ
ತಾಯಿಗೆ ಸಣ್ಣ ಜ್ವರ ಬಂದರೆ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ಅದಕ್ಕಾಗಿ ತಾಯಿ ಆಂಟಿ ಬಯೋಟಿಕ್‌ಗಳಿಗೆ ಮೊರೆ ಹೋಗುವ ಮುನ್ನ ಆಲೋಚಿಸುವುದು ಒಳ್ಳೆಯದು. ಹಾಲು ಕುಡಿಸುವಾಗ ಮಗುವಿನ ಆರೋಗ್ಯಕ್ಕೆ ಹಾನಿಯುಂಟು ಮಾಡುವಂತಹ ಯಾವುದೇ ಮಾತ್ರೆಗಳನ್ನು ಮತ್ತು ಔಷಧಿಗಳನ್ನು ತೆಗೆದುಕೊಳ್ಳಬೇಡಿ. ಇದನ್ನು ನಿಮ್ಮ ವೈಧ್ಯರಿಗೆ ತಪ್ಪದೆ ತಿಳಿಸಿ. ಆಹಾ ಎಳನೀರು, ನಿಜಕ್ಕೂ ಗರ್ಭಿಣಿಯರ ಪಾಲಿಗೆ ಪನ್ನೀರು!

ಜ್ವರ ಬರದಂತೆ ಮುನ್ನೆಚ್ಚರಿಕೆ ವಹಿಸಿ
ಹೌದು ನಿಮಗೆ ಜ್ವರ ಬಂದರೆ ನಿಮ್ಮ ಮಗುವಿಗು ಸಹ ಅದು ಬರುತ್ತದೆ. ಹಾಗಾಗಿ ಜ್ವರ ಬರದಂತೆ ಸ್ವಚ್ಛತೆಯ ಕುರಿತು ಕಾಳಜಿ ವಹಿಸಿ. ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಮಗುವಿಗೆ ತಿನ್ನಿಸಿ, ನಿಮಗೆ ಕೆಮ್ಮು ಮತ್ತು ಸೀನು ಬಂದಾಗ ಮಗುವಿಗೆ ಅದು ಹಾನಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಿ.

ವೈದ್ಯಕೀಯ ಸಲಹೆ ಪಡೆಯಿರಿ
ಜ್ವರ ಬಂದಾಗ ವೈಧ್ಯರನ್ನು ಕಾಣಲು ತಡಮಾಡಬೇಡಿ. ಇದರಿಂದ ಮುಂದಾಗಬಹುದಾದ ಅನಾಹುತಗಳನ್ನು ಮೊದಲೆ ತಡೆಯಬಹುದು. ಅದರಲ್ಲೂ ನೀವು ಎದೆ ಹಾಲು ಕುಡಿಸುವಾಗ ಇದು ತೀರಾ ಅತ್ಯಗತ್ಯ. ಜ್ವರ ಬಂದಾಗ ತಾಯಿಯಾದವಳು ಅಗತ್ಯ ವೈದ್ಯಕೀಯ ಸಲಹೆ ಪಡೆದುಕೊಂಡು ಮಗುವಿನ ಆರೈಕೆ ಮಾಡಬೇಕು. ಹೆರಿಗೆಯ ಅವಧಿಯಲ್ಲಿ ಭಾವೀ ತಾಯಿಗೆ ನೆರವಾಗುವ ಬಗೆ ಹೇಗೆ?

ಯಾವಾಗ ನೀವು ಎದೆ ಹಾಲು ಕುಡಿಸಬಾರದು
ಒಂದು ವೇಳೆ ನಿಮಗೆ ಜ್ವರ ಬಂದು, ವೈಧ್ಯಕೀಯ ಉಪಚಾರಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ನೀವು ನೀಡದಿದ್ದಲ್ಲಿ, ಆಗ ಮಗುವಿಗೆ ಎದೆಹಾಲು ಕುಡಿಸುವುದನ್ನು ನಿಲ್ಲಿಸಿ ಮತ್ತು ಹೆಚ್ಚಿನ ವೈಧ್ಯಕೀಯ ನೆರವನ್ನು ಪಡೆಯಿರಿ. ನಿಮ್ಮ ದೇಹದಲ್ಲಿ ಯಾವುದೇ ಕಾಯಿಲೆಗಳನ್ನು ಉದಾಸೀನ ಮಾಡಬೇಡಿ. ವೈಧ್ಯೋಪಚಾರಕ್ಕೆ ನೀವು ಪ್ರತಿಕ್ರಿಯಿಸದಿದ್ದರೆ ಮೊದಲು ಹಾಲು ಕುಡಿಸುವುದನ್ನು ನಿಲ್ಲಿಸಿ. ಹೆಚ್ಚಿನ ತಪಾಸಣೆ ಮಾಡಿಸಿಕೊಳ್ಳಿ. ಅದೇ ಸಮಯಕ್ಕೆ ಮಗುವಿಗೆ ಬೇರೆ ವ್ಯವಸ್ಥೆ ಮಾಡಿ. ಇದಕ್ಕೂ ವೈಧ್ಯರ ನೆರವನ್ನು ಪಡೆಯಲು ಮರೆಯಬೇಡಿ.

English summary

Is It Safe To Breast Feed During Flu?

Breast milk is the best milk! Breastfeeding is the easiest and cheapest methods to keep your children healthy. No matter whether you are a first time mother or not, when it comes to breastfeeding, it is common that you will be haunted by many doubts.
Story first published: Wednesday, March 4, 2015, 9:59 [IST]
X
Desktop Bottom Promotion