For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ನಂತರ ಅಪ್ಪಿತಪ್ಪಿಯೂ ಹೊಟ್ಟೆಯ ಬೊಜ್ಜನ್ನು ಕರಗಿಸಬೇಡಿ!

|

ಗರ್ಭಾವಧಿಯು ಹೆಣ್ಣಿನ ಬಾಳಿನ ಅತ್ಯಂತ ಸವಾಲಿನ ದಿನಗಳಾಗಿರುತ್ತವೆ. ಒಂದು ವೇಳೆ ನೀವು ಸಿ ಸೆಕ್ಷನ್ ಅಥವಾ ಸಿಸೇರಿಯನ್ ಮಾಡಿಸಿಕೊಂಡಲ್ಲಿ, ನಿಮ್ಮ ಹೊಟ್ಟೆಯು ಸ್ಥೂಲ ದೇಹಿಗಳ ತರಹ ಊದಿಕೊಂಡಿರುತ್ತದೆ. ಆಗ ಇದನ್ನು ಹೇಗೆ ಕರಗಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡಬಹುದು. ಸಿಸೇರಿಯನ್ ಮಾಡಿಸಿಕೊಂಡರೆ ಸ್ವಾಭಾವಿಕವಾಗಿ ಗರ್ಭಧಾರಣೆಯ ಜೊತೆಗೆ ಬಂದಿರುವ ಅಧಿಕ ತೂಕವನ್ನು ಕರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಕೆಲವೊಂದು ಪರಿಹಾರಗಳನ್ನು ನಾವು ಬಳಸುವುದರಿಂದ ಇದನ್ನು ಸುಲಭ ಮಾಡಿಕೊಳ್ಳಬಹುದು. ಬನ್ನಿ ಆ ಪರಿಹಾರಗಳ ಕಡೆಗೆ ಒಮ್ಮೆ ಗಮನ ಹರಿಸೋಣ. ಸಿಸೇರಿಯನ್ ಹೆರಿಗೆಯ ಅಡ್ಡಪರಿಣಾಮಗಳು

ತಾಳ್ಮೆಯನ್ನು ಕಾಪಾಡಿಕೊಳ್ಳಿ
ಸಿಸೇರಿಯನ್ ಆದ ಕೆಲ ದಿನಗಳಲ್ಲೆ ನಿಮ್ಮ ಹೊಟ್ಟೆಯನ್ನು ಕರಗಿಸಲು ಪ್ರಯತ್ನ ಮಾಡಬೇಡಿ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ನೀವು ಗುಣಮುಖರಾಗಲು ಸಹ ಇದರಿಂದ ತೊಂದರೆಯಾಗುತ್ತದೆ. ನೀವು ಇದೀಗ ತಾನೇ ಒಂದು ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೀರಿ ಎಂಬುದನ್ನು ಮರೆಯಬೇಡಿ. ಸರೀನಾ?

How to Get a Flat Tummy after C-Section – Tips for You

ಧನಾತ್ಮಕವಾಗಿ ಆಲೋಚಿಸಿ
ಸಿಸೇರಿಯನ್ ಆದ ಕೆಲ ದಿನಗಳ ಕಾಲ ನೀವು ವ್ಯಾಯಾಮವನ್ನು ಸಹ ಮಾಡಲು ಆಗುವುದಿಲ್ಲ. ಇದರರ್ಥ ನೀವು ಶಾಶ್ವತವಾಗಿ ಸ್ಥೂಲಕಾಯವನ್ನು ಹೊಂದಿರಬೇಕು ಎಂದರ್ಥವಲ್ಲ. ಆದರೆ ಸ್ವಲ್ಪ ಧನಾತ್ಮಕ ಮನೋಭಾವವನ್ನು ಹೊಂದಿ. ಧನಾತ್ಮಕ ಮನೋಭಾವವು ನಿಮ್ಮ ದೇಹದ ಆಕಾರದ ಮೇಲೆ ಸಹ ಪ್ರಭಾವ ಬೀರುತ್ತದೆ. ಇಂದಲ್ಲ ನಾಳೆ ನೀವು ಬಯಸಿದ ರೂಪವನ್ನು ನೀವು ಪಡೆಯುವಿರಿ. ಹೆರಿಗೆಯ ನಂತರ ಕಾಡುವ ಎಮೋಷನಲ್ ಪ್ರಾಬ್ಲಂ

ಮೊದಲು ಪ್ರತಿಕ್ರಿಯಿಸಿ
ಈ ಅವಧಿಯಲ್ಲಿ ನೀವು ಸಾಮಾನ್ಯವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಶಸ್ತ್ರ ಚಿಕಿತ್ಸೆ ಆದ 6 ತಿಂಗಳ ಒಳಗೆ ನೀವು ನಿಮ್ಮ ದೇಹದ ಸ್ವರೂಪ ಬದಲಾಯಿಸಿಕೊಳ್ಳಲು ಪ್ರಯತ್ನಿಸಬಹುದು. ಈ ಅವಧಿಯ ನಂತರ ನಿಮ್ಮ ಗರ್ಭಧಾರಣೆಯ ಹಾರ್ಮೋನುಗಳು ಸ್ರವಿಸಿ, ದೇಹದಲ್ಲಿರುವ ಕೊಬ್ಬು ಗಟ್ಟಿಯಾಗುತ್ತದೆ. ಈ ಅವಧಿ ಮೀರಿದರೆ, ನಿಮ್ಮ ಕಾರ್ಯ ಮತ್ತಷ್ಟು ಕಷ್ಟವಾಗಬಹುದು. ಹೆರಿಗೆಯ ನಂತರ ಕಾಡುವ ಮಲಬದ್ಧತೆಗೆ ಪರಿಹಾರ

ಹೆಚ್ಚು ನೀರನ್ನು ಕುಡಿಯಿರಿ
ಸಿಸೇರಿಯನ್ ಆದ ನಂತರ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದರಿಂದ ನಿಮ್ಮ ದೈಹಿಕ ವ್ಯವಸ್ಥೆಯನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಇದು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹೆರಿಗೆ ಬಳಿಕ ಕಂಡುಬರುವ ಸಾಮಾನ್ಯ ಸಮಸ್ಯೆಗಳು

ನಿಮ್ಮ ಮಗುವಿಗೆ ಎದೆಹಾಲು ಕುಡಿಸುತ್ತ ಇರಿ
ನಿಮ್ಮ ಮಗುವಿಗೆ ಕನಿಷ್ಠ 6 ತಿಂಗಳವರೆಗೆ ಎದೆಹಾಲನ್ನು ಕುಡಿಸುತ್ತ ಇರಿ. ಇದು ನಿಮ್ಮ ಹೊಟ್ಟೆಯ ಭಾಗವನ್ನು ಕರಗಿಸಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.

English summary

How to Get a Flat Tummy after C-Section – Tips for You

Pregnancy is certainly an extremely challenging phase in every woman’s life. But if you need to go through a C-section or cesarean section for the delivery of the baby, keep the following tips in mind and abide by them, you will be quite a few steps ahead in your way. Check them out:
Story first published: Wednesday, February 25, 2015, 17:08 [IST]
X
Desktop Bottom Promotion