For Quick Alerts
ALLOW NOTIFICATIONS  
For Daily Alerts

ಎದೆ ಹಾಲುಣಿಸುವಿಕೆಯ ಅಹಿತಕರ ಸಂಗತಿ!

|

ನೀವು ಗರ್ಭಿಣಿಯಾಗಿರುವಾಗ, ನೀವು ಹಾಲೂಣಿಸುವಿಕೆಯನ್ನು ಆಯ್ಕೆ ಅಥವಾ ಅವಶ್ಯಕತೆಯಾಗಿರಿಸಿರಬಹುದು. ಆದರೆ ನಿಮ್ಮ ಮಗುವಿಗೆ ಮೊದಲು ನೀವು ಎದೆಹಾಲುಣಿಸುವಾಗ, ಹಾಲುಣಿಸುವ ಕೆಲವು ಭಂಗಿಗಳು ನಿಜಕ್ಕೂ ನಿಮಗೆ ಸವಾಲಾಗಿರಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಧಾರಣೆಯ ಹಂತದಲ್ಲಿ ಕಡೆಗಣಿಸಬೇಕಾದ ಆಹಾರಗಳು

ಎದೆಹಾಲುಣಿಸುವಿಕೆಯ ಕೆಲವೊಂದು ಸಂಗತಿಗಳನ್ನು ನಿಮಗೆ ಯಾರೂ ತಿಳಿಸಿರಲಾರರು. ಈ ಅಂಶಗಳ ಸಾಕಷ್ಟು ಸಮಗ್ರವಾಗಿರುವುದರಿಂದ ಅಹಿತಕರವಾದ್ದರಿಂದ ಯಾರೂ ಚರ್ಚಿಸುವುದಿಲ್ಲ. ಎದೆಹಾಲುಣಿಸುವಿಕೆಯ ಕೆಲವೊಂದು ಅಹಿತಕರ ಸಂಗತಿಗಳು ಅಸಹನೀಯವಾಗಿರುತ್ತವೆ.

ಈ ಅಂಶಗಳನ್ನು ನೀವು ತಿಳಿದುಕೊಂಡಾಗ ನಿಮ್ಮ ಅಹಿತಕರ ಭಾವನೆ ನಿಮ್ಮಿಂದ ದೂರಾಗಿ ಸಮಸ್ಯೆ ಪರಿಹಾರವಾಗುತ್ತದೆ. ಕೆಲವೊಂದು ಸಂಗತಿಗಳು ನಿಮ್ಮನ್ನು ಹಿಂಜರಿಯುವಂತೆ ಮಾಡಬಹುದು ಆದರೆ ನಿಮ್ಮ ಹಸುಗೂಸಿಗೆ ಎದೆಹಾಲುಣಿಸುವುದನ್ನು ಮಾತ್ರ ನಿಲ್ಲಿಸದಿರಿ. ಸಮಯದೊಂದಿಗೆ ಎದೆಹಾಲುಣಿಸುವಿಕೆಯನ್ನು ಸರಳವಾಗಿಸುವುದೆಂಬುದು ಹೊಸ ತಾಯಿಗೆ ಏಕೈಕ ಸಮಾಧಾನವಾಗಿದೆ.

ತಾಯಿಯ ಹಾಲಿಗಾಗಿ ಯಾವುದೇ ಪೂರಕವಿರುವುದಿಲ್ಲ. ಎದೆಹಾಲೂಣಿಸುವಿಕೆಯನ್ನು ಅಗಾಧವಾಗಿಸುವುದರಿಂದ ನಿಮ್ಮ ಮಗುವಿಗೆ ಪ್ರಯೋಜನವಾಗುತ್ತದೆ. ಅಲ್ಲದೆ, ನಿಮ್ಮ ಮಗುವಿಗೆ ಎದೆಹಾಲೂಣಿಸುವುದು ಆ ದಿನಗಳ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.ನಿಮ್ಮ ಮಗುವಿಗೆ ಎದೆಹಾಲನ್ನು ನೀವು ಬಿಡಿಸುವವರೆಗೆ ಮೊದಲ ದಿನದಿಂದಲೇ ಹಾಲೂಣಿಸುವಿಕೆಯ ಸಂಗತಿಗಳು ನೀವು ಎದುರಿಸುವ ಎಲ್ಲಾ ಸವಾಲುಗಳನ್ನು ಒಳಗೊಂಡಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೆರಿಗೆಯ ನಂತರ ತಿನ್ನಬೇಕಾದ ಆಹಾರಗಳು

ಪ್ರಾರಂಭದಲ್ಲಿ, ನಿಜವಾಗಿಯೂ ನೋವನ್ನುಂಟು ಮಾಡುತ್ತದೆ

ಪ್ರಾರಂಭದಲ್ಲಿ, ನಿಜವಾಗಿಯೂ ನೋವನ್ನುಂಟು ಮಾಡುತ್ತದೆ

ಮಗುವಿಗೆ ಜನ್ಮ ನೀಡಿದ ನಂತರ, ನಿಮ್ಮ ಸ್ತನಗಳಲ್ಲಿ ಹಾರ್ಮೋನ್ ಹಾಲನ್ನು ಉತ್ಪತ್ತಿ ಮಾಡಲು ಪ್ರಾರಂಭಿಸುತ್ತದೆ. ಆದರೆ ಇದು ಕೆಲವು ಸಮಯಗಳನ್ನು ತೆಗೆದುಕೊಳ್ಳಬಹುದು. ಆ ಸಮಯದಲ್ಲಿ ನಿಮ್ಮ ಮಗುವಿಗೆ ಬೇಕಾದ ಹಾಲನ್ನು ಒದಗಿಸಲು ನಿಮ್ಮ ಸ್ತನ ತೊಟ್ಟನ್ನು ಹಿಂಡಿ.

ಭಾರ ಉಂಟಾಗುವುದು

ಭಾರ ಉಂಟಾಗುವುದು

ನಿಮ್ಮ ಸ್ತನದಲ್ಲಿ ಹಾಲು ಉತ್ಪತ್ತಿಯಾದೊಡನೆ ಸ್ತನ ಭಾರವಾಗುತ್ತದೆ ಮತ್ತು ದೊಡ್ಡದಾಗುತ್ತದೆ. ನೀವು ಬೆಂಬಲ ಒದಗಿಸುವ ಬ್ರಾ ಹಾಕದಿದ್ದರೆ ಭಾರದಿಂದಾಗಿ ನಿಮ್ಮ ಸ್ತನ ಜೋತು ಬೀಳುತ್ತದೆ.

ಒದ್ದೆ ಗುರುತುಗಳು

ಒದ್ದೆ ಗುರುತುಗಳು

ಹಾರ್ಮೋನುಗಳ ಉತ್ತೇಜನೆಯನ್ನು ಹಾಲಿನ ಪೂರೈಕೆ ಅವಲಂಬಿಸುತ್ತದೆ. ನಿಮ್ಮ ಮಗುವಿಗೆ ಹಾಲೂಡಿಸುವ ಸಮಯ ಬಂದಾಗ, ನಿಮ್ಮ ಸ್ತನ ಹಾಲಿನಿಂದ ತುಂಬಿ ಹೊರಕ್ಕೆ ಬರಲಾರಂಭಿಸುತ್ತದೆ. ನಿಮ್ಮ ಎದೆಯ ಮೇಲೆ ಒದ್ದೆ ತೇಪೆಗಳನ್ನು ಇದು ಉಂಟುಮಾಡುತ್ತದೆ, ಕೆಲವೊಮ್ಮೆ ನಿಮ್ಮ ಬಟ್ಟೆ ಒದ್ದೆಯಾಗುತ್ತದೆ.

ನೋಯುತ್ತಿರುವ ಮೊಲೆ ತೊಟ್ಟುಗಳು

ನೋಯುತ್ತಿರುವ ಮೊಲೆ ತೊಟ್ಟುಗಳು

ಎದೆ ಹಾಲೂಣಿಸುವಾಗ ಉಂಟಾಗುವ ಒಂದು ನೋವಿನ ಅಂಶವೆಂದರೆ ನೋಯುತ್ತಿರುವ ಮೊಲೆ ತೊಟ್ಟಾಗಿದೆ.ತಪ್ಪಾದ ಹಾಲೂಣಿಸುವ ಭಂಗಿಗಳಿಂದಾಗಿ ತನ್ನ ಮೊಲೆ ತೊಟ್ಟುಗಳಿಗೆ ಪೆಟ್ಟಾಗುವಂತೆ ಹೊಸ ಮಗುವಿನ ತಾಯಿ ಮಾಡಿಕೊಳ್ಳಬಹುದು.

ಶ್ರಮವನ್ನುಂಟು ಮಾಡುತ್ತದೆ

ಶ್ರಮವನ್ನುಂಟು ಮಾಡುತ್ತದೆ

ಎದೆಯಲ್ಲಿ ಹಾಲು ಉತ್ಪತ್ತಿ ಮಾಡುವುದು ಸಾಕಷ್ಟು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ ಪ್ರತೀ ಎರಡು ಗಂಟೆಗಳಿಗೊಮ್ಮೆ ನಿಮ್ಮ ಮಗುವಿಗೆ ಹಾಲೂಣಿಸಬೇಕಾಗುತ್ತದೆ. ನೀವು ಸರಿಯಾಗಿ ತಿನ್ನದಿದ್ದರೆ ಮತ್ತು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಮಗು ಜನಿಸಿದ ನಂತರದ ಅವಧಿಯಲ್ಲಿ ಆಯಾಸಕ್ಕೆ ಕಾರಣವಾಗುತ್ತದೆ.

ಮಗುವಿನ ಮೆಚ್ಚಿನ ಸ್ತನ

ಮಗುವಿನ ಮೆಚ್ಚಿನ ಸ್ತನ

ಹೆಚ್ಚಿನ ಮಕ್ಕಳು ಮೆಚ್ಚಿನ ಸ್ತನವನ್ನು ಹೊಂದಿರುತ್ತಾರೆ. ನಿಮ್ಮ ಮಗು ಒಂದು ಭಾಗದ ಸ್ತನದಿಂದ ಮಾತ್ರ ಹೆಚ್ಚಾಗಿ ಹಾಲು ಕುಡಿಯುವುದನ್ನು ನೀವು ಗಮನಿಸಿರಬಹುದು. ಇನ್ನೊಂದು ಹಾಲಿನಿಂದ ತುಂಬಿ ಹೋಗುತ್ತಿರುತ್ತದೆ.

ಮೊಲೆ ತೊಟ್ಟಿನ ಗಾತ್ರ

ಮೊಲೆ ತೊಟ್ಟಿನ ಗಾತ್ರ

ನಿಮ್ಮ ಮೊಲೆ ತೊಟ್ಟು ತುಂಬಾ ಸಣ್ಣದು ಅಥವಾ ದೊಡ್ಡದಾಗಿದ್ದರೆ, ನಿಮ್ಮ ಮೊಲೆಯನ್ನು ಚೀಪುವಲ್ಲಿ ಮಗುವಿಗೆ ತೊಂದರೆಯಾಗಬಹುದು.

ಹಾನಿಗೊಳಗಾದ ಸ್ತನ

ಹಾನಿಗೊಳಗಾದ ಸ್ತನ

ಅವ್ಯವಸ್ಥೆಯಿಂದಾಗಿ ಎದೆಹಾಲೂಣಿಸುವುದು ನಿಮ್ಮ ಸ್ತನಗಳನ್ನು ಹಾನಿಗೊಳಪಡಿಸಬಹುದು. ನಿಮ್ಮ ಸ್ತನದಲ್ಲಿನ ಹಾಲು ಗಟ್ಟಿಯಾಗಿ ನೋವನ್ನುಂಟು ಮಾಡಬಹುದು. ನೀವು ಈ ಸಮಯದಲ್ಲಿ ಸ್ತನದ ಹಾಲನ್ನು ಹಿಂಡಬೇಕು ಇಲ್ಲವೇ ನಿಮ್ಮ ಮಗುವಿಗೆ ಕುಡಿಸಬೇಕು ಆಗ ಮಾತ್ರವೇ ನಿಮಗೆ ನೋವಿನಿಂದ ಮುಕ್ತಿ ಸಿಗುತ್ತದೆ.

ಸೊಂಟ ನೋವು

ಸೊಂಟ ನೋವು

ತಪ್ಪಾದ ಭಂಗಿಯಲ್ಲಿ ಮಗವಿಗೆ ಹಾಲು ಉಣಿಸುವುದು ಸೊಂಟ ನೋವಿಗೆ ಕಾರಣವಾಗುತ್ತದೆ. ಹೆಚ್ಚಿನ ಹೊಸ ತಾಯಂದಿರು ಬಾಗಿ ಮಗುವಿಗೆ ಹಾಲುಣಿಸುತ್ತಾರೆ ಇದರಿಂದಾಗಿ ಮಗು ಜನಿಸಿದ ಸಂದರ್ಭದಲ್ಲೇ ಇರುವಂತಹ ಸೊಂಟ ನೋವು ಅಧಿಕಗೊಳ್ಳುತ್ತದೆ.

ಹಲ್ಲುಗಳಿರುವ ಮಗು

ಹಲ್ಲುಗಳಿರುವ ಮಗು

6 ತಿಂಗಳಿನವರೆಗೆ ನಿಮ್ಮ ಮಗುವಿಗೆ ಚೆನ್ನಾಗಿ ಹಾಲುಣಿಸಬೇಕೆಂಬುದು ಒಂದು ಸಲಹೆಯಾಗಿದೆ. ಆದರೆ ನಿಮ್ಮ ಮಗುವಿಗೆ ಹಲ್ಲು ಬಂದೊಡನೆ ನಿಮ್ಮ ಮೊಲೆ ತೊಟ್ಟನ್ನು ಕಚ್ಚುವ ಮೂಲಕ ಮಗು ಅದಕ್ಕೆ ನೋವನ್ನುಂಟು ಮಾಡುವ ಅಭ್ಯಾಸ ಬೆಳೆಸಿಕೊಳ್ಳಬಹುದು.

ವಿಶೇಷ ರೀತಿಯ ಬಟ್ಟೆ

ವಿಶೇಷ ರೀತಿಯ ಬಟ್ಟೆ

ನಿಮ್ಮ ಮಗುವಿಗೆ ಹಾಲೂಣಿಸುತ್ತಿರುವ ಸಂದರ್ಭದಲ್ಲಿ, ಸ್ತನಗಳು ಮಗುವಿಗೆ ಎಟಕುವಂತಿರುವ ವಿಶೇಷ ಬಟ್ಟೆಗಳನ್ನು ನೀವು ಧರಿಸಬೇಕು.

ನಿದ್ದೆ ಇಲ್ಲದ ರಾತ್ರಿಗಳು

ನಿದ್ದೆ ಇಲ್ಲದ ರಾತ್ರಿಗಳು

ಎದೆಯ ಹಾಲು 80 ಶೇಕಡದಷ್ಟು ನೀರನ್ನು ಒಳಗೊಂಡಿರುತ್ತದೆ ಮತ್ತು ನಿಮ್ಮ ಮಗು ಅದನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳುತ್ತದೆ. ನಿಮ್ಮ ಮಗು ಪ್ರತ್ಯೇಕವಾಗಿ ಎದೆಹಾಲು ಸೇವಿಸಿದ್ದರೆ, ರಾತ್ರಿ ಪೂರ್ತಿ ನಿಮ್ಮ ಮಗು ನಿದ್ದೆ ಮಾಡುವುದಿಲ್ಲ.

ಕೆಲಸಕ್ಕೆ ಹಿಂತಿರುಗುವುದು ನೋವಿನ ಸಂಗತಿಯಾಗಿರುತ್ತದೆ

ಕೆಲಸಕ್ಕೆ ಹಿಂತಿರುಗುವುದು ನೋವಿನ ಸಂಗತಿಯಾಗಿರುತ್ತದೆ

ನೀವು ಎದೆಹಾಲು ಉಣಿಸಲು ಪ್ರಾರಂಭಿಸಿದ ನಂತರ, 3 ಅಥವಾ 4 ಗಂಟೆಗಳಿಗಿಂತ ಹೆಚ್ಚು ಸಮಯ (ನೀವು ನಿಮ್ಮ ಹಾಲನ್ನು ಸಂಗ್ರಹಿಸಿಟ್ಟಿದ್ದರೂ) ದೈಹಿಕವಾಗಿ ನಿಮ್ಮ ಮಗುವನ್ನು ಬಿಟ್ಟಿರಲು ನಿಮಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಉದ್ಯೋಗ ನಿರತ ಮಹಿಳೆಯರಿಗೆ ಮರಳಿ ಉದ್ಯೋಗಕ್ಕೆ ಹಿಂತಿರುಗುವುದು ತೊಂದರೆಯ ವಿಷಯವಾಗಿದೆ.

English summary

Ugly Breastfeeding Facts That No One Tells

There are some breastfeeding facts that no one talks about. The reason these breastfeeding problems are never discussed is that they are quite gross.he ugly facts about breastfeeding are not intolerable. However, if you are aware of these common breastfeeding problems you will be better prepared to face them.
X
Desktop Bottom Promotion