For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಹೇಗೆ?

By Deepak M
|

ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿಗು ಅತ್ಯಂತ ಆನಂದಮಯ ಸಮಯ. ತನ್ನ ಜನ್ಮ ಸಾರ್ಥಕವಾಯಿತು ಎಂಬ ಭಾವನೆಯನ್ನು ಪ್ರತಿಯೊಬ್ಬ ಹೆಣ್ಣು ಈ ಸಂದರ್ಭದಲ್ಲಿ ತನ್ನಾದಾಗಿಸಿಕೊಳ್ಳುತ್ತಾಳೆ. ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಯು ಒಂದು ದೈಹಿಕ ಕ್ರಿಯೆಯಾಗಿದ್ದು, ಪ್ರಸವದ ನಂತರ ನಮ್ಮ ದೇಹ ಯಥಾಸ್ಥಿತಿಗೆ ಬರಲು ಹಲವಾರು ದಿನಗಳು ಬೇಕಾಗುತ್ತದೆ.

ನಿಮ್ಮ ದೇಹವು ಯಥಾಸ್ಥಿತಿಗೆ ಬರಲು ಆರೋಗ್ಯ, ಪಥ್ಯ ಮತ್ತು ನಿಮ್ಮ ದೇಹದ ಶಕ್ತಿ ಮತ್ತು ತಾಳಿಕೆಗೆ ಸಂಬಂಧಿಸಿದಂತೆ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಹಾಗು ನೀವು ಈ ವಿಚಾರಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಾದದ್ದು ಅತ್ಯಾವಶ್ಯಕ.

ಮಗುವಿಗೆ ಜನನ ನೀಡುವುದು ಸೃಷ್ಟಿಯ ಅದ್ಭುತ ಘಟನೆ. ಆದರೆ ಈ ಸಂದರ್ಭದ ನಂತರ ಹೆಣ್ಣಿನ ಜೀವನದಲ್ಲಿ ಕೆಲವಾರು ಬದಲಾವಣೆಗಳನ್ನುಂಟು ಮಾಡುತ್ತದೆ. ಜನನಾಂಗ ಮತ್ತು ಮೂತ್ರಾಶಯದ ಸಮಸ್ಯೆ ಮುಂತಾದವು ಪ್ರಸವದ ನಂತರ ಹೆಂಗಸರನ್ನು ಕಾಡುತ್ತದೆ. ಜೊತೆಗೆ ಇವರ ದೇಹದಲ್ಲಿ ಸಹ ಕೆಲವೊಂದು ಬದಲಾವಣೆಗಳು ಕಂಡು ಬರುತ್ತವೆ. ಪ್ರಸವದ ನಂತರ ಬಾಣಂತನದ ಅವಧಿಯಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಕಂಡುಬರುವುದಿಲ್ಲ.

ಹಾಗೆಂದು ಶುಚಿಯಾದ ಆಹಾರ ಮತ್ತು ಪಥ್ಯ ಹಾಗು ವಿಶ್ರಾಂತಿಯನ್ನು ಕಡೆಗಣಿಸಬೇಡಿ. ಇದರ ಜೊತೆಗೆ ನಿಮ್ಮ ವೈಯುಕ್ತಿಕ ಶುಚಿತ್ವಕ್ಕು ಸಹ ಗಮನ ನೀಡಿ. ಪ್ರಸವ ಪೂರ್ವ ಅವಧಿಯಲ್ಲಿ ಅಂದರೆ ಗರ್ಭಿಣಿಯಾಗಿರುವಾಗ ಹೆಂಗಸರು ವೈಧ್ಯರು ನೀಡುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸುತ್ತಿರುತ್ತಾರೆ. ಆದರೆ ಮಗುವಾದ ನಂತರ ಅವರು ಮಗುವಿನ ಲಾಲನೆ ಪಾಲನೆಯಲ್ಲಿ ತಮ್ಮ ಕಾಳಜಿಯನ್ನು ಮರೆತು ಬಿಡುತ್ತಾರೆ.

ಹಾಗಾಗಿ ಮಗುವಾದ ನಂತರ ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದು ಅತ್ಯಗತ್ಯ. ಇಲ್ಲಿ ನಾವು ನಿಮಗೆ ಮತ್ತು ನಿಮ್ಮ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಶುಚಿತ್ವದ ಸಲಹೆಗಳನ್ನು ನೀಡಿದ್ದೇವೆ. ಓದಿ ತಿಳಿದುಕೊಳ್ಳಿ. ಇದರಿಂದ ಮುಂದೆ ಒದಗಬಹುದಾದ ಆಪತ್ತಿನಿಂದ ಪಾರಾಗಲು ಇಂದೇ ಮನಸ್ಸು ಮಾಡಿ.

ಗರ್ಭಾವಸ್ಥೆಯ ಸಂದರ್ಭದಲ್ಲಿ ಯೋನಿ ವಿಸರ್ಜನೆ ಬಗ್ಗೆ ಕೇಳಿದಿರಾ?

ಕೈ ತೊಳೆಯಿರಿ

ಕೈ ತೊಳೆಯಿರಿ

ತಾಯಿಯಾದವರು ಮೊದಲು ರೂಢಿಸಿಕೊಳ್ಳಲೇ ಬೇಕಾದ ಅಭ್ಯಾಸವೆಂದರೆ ಕೈತೊಳೆಯುವುದು. ನೆಗಡಿ, ಫ್ಲೂ ಮತ್ತು ಜಠರದ ಸಮಸ್ಯೆಗಳು ಉಂಟಾಗುವುದನ್ನು ಈ ಸುಲಭದ ಕೆಲಸದ ಮೂಲಕ ತಡೆಗಟ್ಟಬಹುದು. ನಿಮ್ಮ ಸಂಪರ್ಕಕ್ಕೆ ಬರುವ ಕೀಟಾಣುಗಳಿಂದ ಮುಕ್ತರಾಗಲು ಕೈತೊಳೆಯುವ ಹವ್ಯಾಸವನ್ನು ಇಂದಿನಿಂದಲೆ ಬೆಳೆಸಿಕೊಳ್ಳಿ.

ಯಾವಾಗ ಕೈ ತೊಳೆಯಬೇಕು?

ಯಾವಾಗ ಕೈ ತೊಳೆಯಬೇಕು?

ಕೈ ತೊಳೆದುಕೊಳ್ಳಲು ಎರಡು ಪ್ರಶ್ನೆಗಳು ಎದುರಾಗುತ್ತವೆ. " ಯಾವಾಗ ಕೈ ತೊಳೆಯಬೇಕು" ಮತ್ತು "ಹೇಗೆ ಕೈ ತೊಳೆಯಬೇಕು? " ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ನೀವು ಆಹಾರ ಸ್ವೀಕರಿಸಿದ ನಂತರ ಕೈತೊಳೆಯಿರಿ. ನಿಮ್ಮ ಗಾಯಕ್ಕೆ ಮುಲಾಮು ಹಾಕಿದ ನಂತರ ಮತ್ತು ಔಷಧಿಯನ್ನು ಸ್ವೀಕರಿಸಿದ ನಂತರ ಕೈತೊಳೆಯಿರಿ. ನಿಮ್ಮ ಮಗುವನ್ನು ಎತ್ತಿಕೊಳ್ಳುವ ಮೊದಲು ಮತ್ತು ಡೈಪರ್ ಬದಲಾಯಿಸಿದ ನಂತರ ಕೈತೊಳೆಯಿರಿ.

ಹೇಗೆ ತೊಳೆಯುವುದು?

ಹೇಗೆ ತೊಳೆಯುವುದು?

ನಿಮ್ಮ ಕೈಗೆ ಸೋಪ್ ಹಾಕಿಕೊಂಡು ನೊರೆ ಬರುವವರೆಗು ಉಜ್ಜಿ. 20 ಸೆಕೆಂಡ್‍ ಆಗುವವರೆಗು ಉಗುರು, ಬೆರಳು ಮತ್ತು ಹಸ್ತ ಎಲ್ಲವನ್ನು ಸ್ವಚ್ಛವಾಗಿ ಉಜ್ಜಿ ತೊಳೆಯಿರಿ. ಇಡೀ ಕೈಯನ್ನು ಪೂರ್ತಿಯಾಗಿ ಉಜ್ಜಿ ನಂತರ ವೇಗವಾಗಿ ಸುರಿಯುವ ನೀರಿನ ಕೆಳಗೆ ಮತ್ತೆ ತೊಳೆಯಿರಿ.

ಯೋನಿ ಪೊರೆಗೆ ಆರೈಕೆ ನೀಡಿ.

ಯೋನಿ ಪೊರೆಗೆ ಆರೈಕೆ ನೀಡಿ.

ಪ್ರಸವದ ಸಮಯದಲ್ಲಿ ಯೋನಿ ಪೊರೆಯು ಹರಿಯುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ವೈಧ್ಯರ ಬಳಿ ಈ ಕುರಿತು ಚರ್ಚಿಸಿ, ಧೃಡಪಡಿಸಿಕೊಳ್ಳಿ. ಇದರಿಂದ ಆಗುವ ಗಾಯವು ಕೆಲವು ವಾರಗಳವರೆಗೆ ಇರುತ್ತದೆ. ಅದಕ್ಕೆ ಐಸ್ ಪ್ಯಾಕ್‍ನ ಆರೈಕೆ ನೀಡಿ. ಇದರ ಜೊತೆಗೆ ಕೀವನ್ನು ತಡೆಯಲು ಫ್ರೊಜೆನ್ ವಿಚ್ ಹಾಜೆಲ್ ಪ್ಯಾಡ್‍ಗಳನ್ನು ಬಳಸಿ. ಈ ಪ್ಯಾಡ್‍ಗಳನ್ನು ನಿಮ್ಮ ಋತು ಸ್ರಾವದ ಅವಧಿಯಲ್ಲಿ ಬಳಸುವ ಪ್ಯಾಡ್‍ಗಳ ಮಧ್ಯೆ ಇಟ್ಟು ಬಳಸಿ. ಇದರಿಂದಾಗಿ ವಿಚ್ ಹಾಜೆಲ್ ಎಪಿಸಿಯೊಟೊಮಿ ಭಾಗದ ಸಂಪರ್ಕಕ್ಕೆ ಬರುತ್ತದೆ.

ಮೂತ್ರದ ಸಮಸ್ಯೆ

ಮೂತ್ರದ ಸಮಸ್ಯೆ

ಪ್ರಸವದ ನಂತರದಲ್ಲಿ ಮೂತ್ರಾಶಯದ ಸಮಸ್ಯೆಯು ತಾಯಂದಿರಲ್ಲಿ ಸಾಮಾನ್ಯ. ಏಕೆಂದರೆ ನಿಮ್ಮ ಗರ್ಭಾಶಯವು ಮೂತ್ರಾಶಯದ ಮೇಲೆ ಬೀಳುವುದರಿಂದ ನೀವು ಮೂತ್ರವನ್ನು ತಡೆಯಲು ಅಸಾಧ್ಯವಾಗುತ್ತದೆ. ಮುಂದೆ ಇದು ಪ್ರಸವದ ನಂತರ ಸಣ್ಣದಾಗುತ್ತ ಸಾಗುತ್ತದೆ. ಅದರಲ್ಲು ನೀವು ಕೆಮ್ಮಿದಾಗ ಮತ್ತು ನಕ್ಕಾಗ ಸ್ವಲ್ಪ ಮೂತ್ರವು ಸೋರಿಕೆಯಾಗುತ್ತದೆ. ಅದಕ್ಕಾಗಿ ಬಾಣಂತಿಯಾಗಿದ್ದಾಗ ಶುಚಿತ್ವವನ್ನು ಕಾಪಾಡಲು ಪ್ರೆಸ್ ಪ್ಯಾಡ್‍ಗಳನ್ನು ಬಳಸಿ, ಮೂತ್ರವನ್ನು ಹೀರುವಂತೆ ಮಾಡಿ. ಈ ಮೂತ್ರ ಸಮಸ್ಯೆಯು ಕೆಲವು ವಾರಗಳ ನಂತರವು ನಿಲ್ಲದಿದ್ದರೆ, ಸೂಕ್ತ ವೈಧ್ಯರನ್ನು ಕಂಡು ನಿಮ್ಮ ಸಮಸ್ಯೆಗೆ ಪರಿಹಾರ ಕಾಣಿರಿ.

ಬ್ಲಾಡ್ಡರ್ ಇನ್‍ಫೆಕ್ಷನ್

ಬ್ಲಾಡ್ಡರ್ ಇನ್‍ಫೆಕ್ಷನ್

ಪ್ರಸವದ ನಂತರ ಬ್ಲಾಡ್ಡರ್ ಒಳಗಿನ ಟಿಶ್ಯೂಗಳಲ್ಲಿ ಕೀವು ತುಂಬಿಕೊಂಡು ಮೂತ್ರ ಮಾಡಲು ತೊಂದರೆಯನ್ನುಂಟು ಮಾಡುತ್ತದೆ. ಇದನ್ನು ಗುರುತಿಸುವುದು ಸುಲಭ. ನೀವು ಮೂತ್ರವನ್ನು ಮಾಡುವಾಗ ಉರಿ ಅಥವಾ ನೋವು ಕಂಡು ಬಂದರೆ ಬ್ಲಾಡ್ಡರ್ ಇನ್‍ಫೆಕ್ಷನ್ ಆಗಿದೆಯೆಂದರ್ಥ. ಇದಕ್ಕೆ ಸುಲಭವಾದ ಪರಿಹಾರವು ಸಹ ಇದೆ. ಅದಕ್ಕಾಗಿ ಹೆಚ್ಚಿಗೆ ನೀರನ್ನು ಸೇವಿಸಿ ಮತ್ತು ನಿಯಮಿತವಾಗಿ ಮೂತ್ರವನ್ನು ವಿಸರ್ಜಿಸುವ ಮೂಲಕ ಈ ಇನ್‍ಫೆಕ್ಷನ್ ಅನ್ನು ನಿಯಂತ್ರಣದಲ್ಲಿಡಬಹುದು.

ಇನ್‍ಫೆಕ್ಷನ್ ಅನ್ನು ಕಡಿಮೆ ಮಾಡಿ

ಇನ್‍ಫೆಕ್ಷನ್ ಅನ್ನು ಕಡಿಮೆ ಮಾಡಿ

ಪ್ರತಿ ಬಾರಿಯು ನೀವು ಮೂತ್ರ ವಿಸರ್ಜಿಸಿದಾಗ ಒಂದು ಬಾಟಲಿನಲ್ಲಿ ನೀರನ್ನು ಇಟ್ಟು ಕೊಂಡು ನಿಮ್ಮ ಏನಸ್ ( ಪೆರಿನಿಯಂ ಭಾಗ ಅಥವಾ ಯೋನಿ ಪ್ರದೇಶ) ಅನ್ನು ಅಥವಾ ಭಾದಿತ ಪ್ರದೇಶವನ್ನು ತೊಳೆಯಿರಿ ಹಾಗು ಅದನ್ನು ಚೆನ್ನಾಗಿ ಒರೆಸಿ. ಇದರಿಂದಾಗಿ ನಿಮಗುಂಟಾಗುವ ನೋವು ಮತ್ತು ಇನ್‍ಫೆಕ್ಷನ್ ಕಡಿಮೆಯಾಗುತ್ತದೆ.

ಪೆರಿನಿಯ ಭಾಗವನ್ನು ಸ್ವಚ್ಛವಾಗಿಡಿ.

ಪೆರಿನಿಯ ಭಾಗವನ್ನು ಸ್ವಚ್ಛವಾಗಿಡಿ.

ಪೆರಿನಿಯ ( ಯೋನಿ ಪ್ರದೇಶ) ಭಾಗವನ್ನು ಸ್ವಚ್ಛವಾಗಿಡಿ. ಇಲ್ಲವಾದಲ್ಲಿ ಎಪಿಸಿಯೊಟೊಮಿ ಮತ್ತು ಬ್ಲಾಡ್ಡರ್ ಇನ್‍ಫೆಕ್ಷನ್ ಸಂಭವಿಸಬಹುದು. ಪ್ರಸವದ ನಂತರ ಕೆಲವು ವಾರಗಳ ಕಾಲ ಯೋನಿಯಿಂದ ದ್ರವವು ಸ್ರವಿಸುತ್ತಿರುತ್ತದೆ. ಅದಕ್ಕಾಗಿ ಪೆರಿನಿಯ ಭಾಗವನ್ನು ಒಣರಕ್ತವಿರದಂತೆ ಸ್ವಚ್ಛಗೊಳಿಸಿ ಕಾಪಾಡಿ. ಇದಕ್ಕಾಗಿ ಟ್ಯಾಂಪನ್‍ಗಳನ್ನು ಬಳಸುವ ಬದಲು ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸಿ. ಪ್ರತಿ 4 ಗಂಟೆಗಳಿಗೆ ಒಮ್ಮೆ ನಿಮ್ಮ ಸ್ಯಾನಿಟರಿ ಪ್ಯಾಡನ್ನು ಬದಲಾಯಿಸಿ. ಪ್ರತಿ ಬಾರಿ ಮೂತ್ರ ವಿಸರ್ಜಿಸುವಾಗ ಮತ್ತು ಪ್ಯಾಡ್‍ಗಳನ್ನು ಬದಲಾಯಿಸುವಾಗ ನಿಮ್ಮ ಪೆರಿನಿಯ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ. ಈ ಭಾಗವು ಕೆಂಪು ಬಣ್ಣಕ್ಕೆ ಬದಲಾದಾಗ ಅಥವಾ ದುರ್ವಾಸನೆಯನ್ನು ಸೂಸಲು ಆರಂಭಿಸಿದಾಗ ತಡ ಮಾಡದೆ ವೈಧ್ಯರನ್ನು ಕಾಣಿರಿ.

ಶುಚಿತ್ವವನ್ನು ಕಾಪಾಡಿರಿ

ಶುಚಿತ್ವವನ್ನು ಕಾಪಾಡಿರಿ

ಒಂದು ವೇಳೆ ಸಿಸೇರಿಯನ್ ಆದ ನಂತರ ನಿಮಗೆ ಹೊಲಿಗೆ ಹಾಕಿದ ಭಾಗದಲ್ಲಿ ಏನಾದರು ಸಮಸ್ಯೆ ಇದ್ದಲ್ಲಿ ಅದರ ಬಗ್ಗೆ ಎಚ್ಚರವಹಿಸಿ. ಹೊಟ್ಟೆಯ ಭಾಗದಲ್ಲಿ ಯಾವಾಗಲು ಶುಚಿತ್ವವನ್ನು ಕಾಯ್ದುಕೊಳ್ಳಿ. ಯಾವುದೇ ರೀತಿಯ ಗಾಯ ಮತ್ತು ಇನ್‍ಫೆಕ್ಷನ್ ಈ ಭಾಗವನ್ನು ಕಾಡದಂತೆ ಕಾಪಾಡಿಕೊಳ್ಳಿ. ಒಟ್ಟಾರೆಯಾಗಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿ.

ಎದೆಯ ಭಾಗದಲ್ಲಿ ಇನ್‍ಫೆಕ್ಷನ್ ಉಂಟಾಗದಂತೆ ತಡೆಯಿರಿ.

ಎದೆಯ ಭಾಗದಲ್ಲಿ ಇನ್‍ಫೆಕ್ಷನ್ ಉಂಟಾಗದಂತೆ ತಡೆಯಿರಿ.

ನಿಮ್ಮ ಸ್ತನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಏಕೆಂದರೆ ಮಗುವಿನ ಜೊಲ್ಲು ನಿಮ್ಮ ಸ್ತನಕ್ಕೆ ಅಂಟಿಕೊಂಡಿರಬಹುದು. ಅದಕ್ಕಾಗ್ ಮಗುವಿಗೆ ಎದೆ ಹಾಲು ಕುಡಿಸಿದ ನಂತರ ಸ್ತನಗಳನ್ನು ಸ್ವಚ್ಛಗೊಳಿಸಿ. ಯಾವಾಗಲು ಸ್ವಲ್ಪ ಎದೆ ಹಾಲನ್ನು ತೆಗೆದುಕೊಂಡು ಮೊಲೆ ತೊಟ್ಟು ಮತ್ತು ಅದರ ಪಕ್ಕದ ಕಪ್ಪು ಭಾಗಕ್ಕೆ ಹಚ್ಚಿ, ಒಣಗಲು ಬಿಡಿ. ಎದೆ ಭಾಗಕ್ಕೆ ಗಾಳಿಯಾಡದಂತೆ ತಡೆಯುವ ಯಾವುದೇ ಬಟ್ಟೆಯನ್ನು ಧರಿಸಬೇಡಿ. ಗಾಳಿಯಾಡುವಂತಹ ಬಟ್ಟೆಗಳನ್ನು ಮಾತ್ರವೇ ಧರಿಸಿ. ನೀವು ಎದೆ ಹಾಲು ಕುಡಿಸುವಾಗ ಆದಷ್ಟು ಕಾಟನ್ ಬ್ರಾಗಳನ್ನೆ ಧರಿಸಿ. ಏಕೆಂದರೆ ಇವುಗಳು ಕೀಟಾಣುಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ಒಂದು ವೇಳೆ ನಿಮ್ಮ ಸ್ತನಗಳಿಂದ ಹಾಲು ಒಸರುತ್ತಿದ್ದರೆ ಬ್ರೀಸ್ಟ್ ಪ್ಯಾಡ್‍ಗಳನ್ನು ಧರಿಸಿ. ಆದರೆ ನಿಯಮಿತವಾಗಿ ಇವುಗಳನ್ನು ಬದಲಾಯಿಸುತ್ತ ಇರಿ. ಇಲ್ಲವಾದಲ್ಲಿ ಇವುಗಳು ಕೀಟಾಣುಗಳ ಆವಾಸ ಸ್ಥಾನವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ಕಾರಣಕ್ಕು ಪ್ಲಾಸ್ಟಿಕ್ ಪ್ಯಾಡ್‍ಗಳನ್ನು ಬಳಸಬೇಡಿ.

English summary

Top Hygiene tips to follow after delivery

Giving birth to a beautiful bundle of joy is one of the most important moments in a woman’s life, but it can also turn out to be distressing as your body goes through various changes. So Following postnatal hygiene care tips is important to ensure that you and your baby are in good health. 
X
Desktop Bottom Promotion