For Quick Alerts
ALLOW NOTIFICATIONS  
For Daily Alerts

ಹೊಸ ತಾಯಂದಿರ ಸರ್ವತೋಮುಖ ಆರೈಕೆಗೆ 6 ಸೂಪರ್ ಆಹಾರಗಳು

By Super
|

ತೊಟ್ಟಿಲ ಮಗುವಿಗೆ ಸರ್ವ ರೀತಿಯ ಪೋಷಕಾಂಶ ದೊರೆತು ಉತ್ತಮ ಬೆಳವಣಿಗೆಯಾಗಬೇಕಿದ್ದರೆ ಹಾಲುಣಿಸುವ ತಾಯಿ ಕೂಡ ಸಮತೋಲಿತ ಆಹಾರ ಸೇವಿಸಬೇಕು. ಇದರ ಜೊತೆಗೆ, ಸಮತೋಲಿತ ಆಹಾರ ಎದೆಯ ಹಾಲು ಉತ್ಪಾದಿಸಲು ಮತ್ತು ಕಳೆದುಕೊಂಡ ಪೋಷಕಾಂಶ ದೊರಕಿಸಲು ಕೂಡ ಸಹಾಯ ಮಾಡುತ್ತದೆ.

ಸ್ತನ್ಯಪಾನ ಮಾಡಿಸುವುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಆರು ತಿಂಗಳ ಕಾಲ ಹಾಲುಣಿಸುವುದು ಸಾಕು ಎಂದು ಶಿಫಾರಸು ಮಾಡಿದ್ದರೂ ಕನಿಷ್ಠ ಒಂದು ವರ್ಷವಾದರೂ ಸ್ತನ್ಯಪಾನ ಮಾಡಿಸುವುದು ಉತ್ತಮ.

ಬಾಣಂತನದಲ್ಲಿ ನೀವು ಮತ್ತು ನಿಮ್ಮ ಮಗುವಿಗೆ ಸಾಧ್ಯವಾದಷ್ಟು ಪೋಷಕಾಂಶ ದೊರೆಯಬೇಕಿದ್ದರೆ ಕೆಲ ಪೋಷಕಾಂಶವಿರುವ ಆಹಾರ ಸೇವಿಸುವುದು ಅಗತ್ಯ. ಬನ್ನಿ ಹಾಗಾದರೆ ಆ ಆರು ಸೂಪರ್ ಫುಡ್ ಯಾವುವೆಂದು ನೋಡೋಣ ಪ್ರತಿಯೊಂದು ಮಗುವೂ ತಿಳಿದುಕೊಳ್ಳಬೇಕಾದ ಪ್ರಮುಖ ಕೌಶಲ್ಯಗಳು

ಮೊಟ್ಟೆ


ಅಮೈನೋ ಆಮ್ಲ ಹೊಂದಿರುವ ಮೊಟ್ಟೆಯಲ್ಲಿ ಅತ್ಯಧಿಕ ಪ್ರೋಟೀನ್ ಇರುತ್ತದೆ. ಇದು ನಮ್ಮ ಮತ್ತು ಮಗುವಿನ ಆರೈಕೆಗೆ ಸಾಕಷ್ಟು ಶಕ್ತಿ ನೀಡುತ್ತದೆ. ಮೊಟ್ಟೆಯ ಯೋಕ್ ಅಂದರೆ ಹಳದಿ ಭಾಗದಲ್ಲಿ ವಿಟಮಿನ್ ಡಿ ಇರುತ್ತದೆ. ಇದು ತಾಯಿಯ ಮೂಳೆಗೆ ಶಕ್ತಿ ನೀಡುವುದಲ್ಲದೆ, ಮಗುವಿನ ಮೂಳೆ ಬೆಳೆಯಲು ಸಹಕಾರಿಯಾಗಿರುತ್ತದೆ. ಅದಲ್ಲದೆ, ಮೊಟ್ಟೆಯಲ್ಲಿರುವ ನೀರಿನಂತಹ ಅಂಶ ಮಗುವಿನ ಮಿದುಳಿನ ನೆನಪಿನ ಕೇಂದ್ರ ಅಭಿವೃದ್ಧಿಯಾಗಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಅಥವಾ ಎರಡು ಮೊಟ್ಟೆ ತಿನ್ನಬಹುದು. ಅದನ್ನು ಹಸಿಯಾಗಿ, ಬೇಯಿಸಿ ಅಥವಾ ಆಮ್ಲೇಟ್ ಮಾಡಿ ಸೇವಿಸಬಹುದು.

ಓಟ್ ಮೀಲ್


ಲ್ಯಾಕ್ಟೋಜನ್ ಅತ್ಯಧಿಕ ಪ್ರಮಾಣದಲ್ಲಿರುವ ಇರುವಂಥ ಓಟ್ ಮೀಲ್ ಅತ್ಯಂತ ಜನಪ್ರಿಯ ಆಹಾರ. ಹೆಚ್ಚು ಫೈಬರ್ ಅಂಶವಿರುವ ಈ ಪರಿಪೂರ್ಣ ಆಹಾರ ಸುಲಭವಾಗಿಯೂ ಜೀರ್ಣವಾಗುತ್ತದೆ. ಹೆರಿಗೆಯ ನಂತರ ಮಲಬದ್ಧತೆಯಿಂದ ಬಳಲುವ ತಾಯಂದಿರಿಗೆ ಇದು ಸಹಕಾರಿ.
ನವ ತಾಯಂದಿರಿಗೆ ಕಾಡುವ ಕಬ್ಬಿಣದ ಕೊರತೆಯನ್ನು ಕೂಡ ಓಟ್ ಮೀಲ್ಸ್ ನೀಗಿಸುತ್ತದೆ. ಅಲ್ಲದೆ, ಓಟ್ ಮೀಲ್ಸ್ ಮೊಲೆ ಹಾಲಿನ ಪೂರೈಕೆಯನ್ನೂ ಹೆಚ್ಚಿಸುತ್ತದೆ. ತಾಜಾ ಆಗಿ ಬೇಯಿಸಿದ ಓಟ್ ಮೀಲ್ಸ್ ಜೊತೆ ಒಂದು ಚಮಚ ಜೇನು, ಸ್ವಲ್ಪ ಏಲಕ್ಕಿ, ಕೇಸರ ಅಥವಾ ತಾಜಾ ಹಣ್ಣುಗಳನ್ನು ಸೇರಿಸಿ ಸೇವಿಸಬಹುದು. ಬಿಸಿಬಿಸಿಯಾದ ಓಟ್ ಮೀಲ್ಸ್ ಚೈತನ್ಯವನ್ನು ನೀಡಿ ದೇಹಕ್ಕೆ ವಿಶ್ರಾಂತಿಯನ್ನೂ ನೀಡುತ್ತದೆ.

ಸಾಲ್ಮನ್ ಮೀನು


ವಿಸ್ಮಯಗೊಳಿಸುವಂತಹ ಪೋಷಕಾಂಶ ಇರುವ ಸಾಲ್ಮನ್ ಮೀನು ಹೊಸ ತಾಯಂದಿರಿಗೆ ಅತ್ಯುತ್ತಮ ಆಹಾರ. ಇದರಲ್ಲಿ ಡೊಕೋಸಹೆಕ್ಸೇನೋಯಿಕ್ ಆಸಿಡ್ ಎಂಬ ಕೊಬ್ಬಿನಂಶವಿರುತ್ತದೆ. ಇದು ಮಗುವಿನ ನರವ್ಯೂಹದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಸಾಲ್ಮನ್ ನಲ್ಲಿ ಅತ್ಯಧಿಕ ಪ್ರೊಟೀನ್ ಮತ್ತು ವಿಟಮಿನ್ ಬಿ12 ಇರುತ್ತದೆ. ಅಲ್ಲದೆ, ಇದು ಖಿನ್ನತೆಯನ್ನೂ ತೊಲಗಿಸುತ್ತದೆ ಎಂಬುದನ್ನು ಕಂಡುಹಿಡಿಯಲಾಗಿದೆ. ಪ್ರತಿವಾರ ಎರಡು ಬಾರಿ ಸಾಲ್ಮನ್ ಸೇವಿಸಿ.

ಕುಚ್ಚಲಕ್ಕಿ


ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಕುಚ್ಚಲಕ್ಕಿಯನ್ನು ಪ್ರತಿ ತಾಯಂದಿರು ತಮ್ಮ ಡಯಟ್ ನಲ್ಲಿ ಸೇರಿಸಲೇಬೇಕು. ಇದು ತಾಯಂದಿರ ಶಕ್ತಿವರ್ಧನೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸಲು ಸಹಕಾರಿಯಾಗಿರುತ್ತದೆ. ಬಿಳಿ ಅಕ್ಕಿಯಲ್ಲಿದ್ದಕ್ಕಿಂತ ಹೆಚ್ಚು ಫೈಬರ್ ಅಂಶ ಕುಚ್ಚಲಕ್ಕಿಯಲ್ಲಿ ಇರುತ್ತದೆ. ಇದರ ಮತ್ತೊಂದು ಪ್ರಯೋಜನವೆಂದರೆ, ಇದು ಮೊಲೆ ಹಾಲಿನ ಗುಣಮಟ್ಟ ಮತ್ತು ಪೂರೈಕೆಯನ್ನು ಹೆಚ್ಚಿಸುತ್ತದೆ. ಇದರ ಅನ್ನವನ್ನು ತಯಾರಿಸುವ ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಯಿಡಬೇಕು. ಇದರಿಂದ ಸುಲಭವಾಗಿ ಜೀರ್ಣಿಸಿಕೊಳ್ಳಲು ಅನುವಾಗುತ್ತದೆ.

ಬ್ಲೂಬೆರಿ ಹಣ್ಣುಗಳು


ಪ್ರತಿ ತಾಯಂದಿರು ತಮ್ಮ ಆಹಾರದಲ್ಲಿ ಬ್ಲೂಬೆರಿಯನ್ನು ಸೇರಿಸಿಕೊಳ್ಳಲೇಬೇಕು. ಇದರಲ್ಲಿರುವ ಆಂಟಿಆಕ್ಸಿಡೆಂಟ್ಸ್ ವಿಷಕಾರಕಗಳನ್ನು ನಾಶಮಾಡಿ ಮಗುವಿಗೆ ರೋಗ ಬರದಂತೆ ತಡೆಯುತ್ತದೆ. ಬಾಣಂತಿಗೆ ಅವಶ್ಯಕವಾಗಿ ಬೇಕಾದ ಎಲ್ಲ ಬಗೆಯ ವಿಟಮಿನ್ ಮತ್ತು ಮಿನರಲ್ ಗಳು ಇದರಲ್ಲಿ ಲಭ್ಯವಿರುತ್ತದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್ ತಾಯಿಗೆ ಚೈತನ್ಯ ನೀಡುತ್ತದೆ. ರಸದಿಂದ ತುಂಬಿರುವ ಬ್ಲೂಬೆರಿಯನ್ನು ದಿನಕ್ಕೆರಡು ಬಾರಿ ಸೇವಿಸಿದರೆ, ತಾಯಂದಿರಲ್ಲಿ ಸಹಜವಾಗಿ ಇರುವ ಒತ್ತಡ ದೂರವಾಗುತ್ತದೆ. ಮಗುವಿನ ಬೆಳವಣಿಗೆಗೆ ಅತ್ಯಗತ್ಯವಾಗಿರುವ ವಿಟಮಿನ್‌ಗಳು

ಬಸಳೆಸೊಪ್ಪು


ನವತಾಯಂದಿರಿಗೆ ಎಲ್ಲ ಬಗೆಯ ಹಸಿರು ಸೊಪ್ಪುಗಳು ಅವಶ್ಯಕವಾದರೂ ಬಸಳೆಸೊಪ್ಪಿನ ಮಹತ್ವವೇ ವಿಭಿನ್ನವಾದುದು. ಇದರಲ್ಲಿ ಅತ್ಯಧಿಕ ವಿಟಮಿನ್ ಎ ಇರುತ್ತದೆ. ಇದು ತಾಯಿಗೆ ಮಾತ್ರವಲ್ಲ ಮಗುವಿಗೂ ಅಗತ್ಯ. ಅಲ್ಲದೆ, ಹೆರಿಗೆ ಸಮಯದಲ್ಲಿ ತಾಯಂದಿರುವ ರಕ್ತ ಕಳೆದುಕೊಳ್ಳುವುದರಿಂದ ಇದರಲ್ಲಿರುವ ಫಾಲಿಕ್ ಆಮ್ಲ ರಕ್ತದ ಹೊಸ ಕೋಶಗಳು ಬೆಳೆಯಲು ಸಹಾಯ ಮಾಡುತ್ತದೆ. ಇದು ಸ್ತನದಲ್ಲಿ ಹಾಲು ಉತ್ಪತ್ತಿಯಾಗಲೂ ಸಹಾಯ ಮಾಡುತ್ತದೆ. ಬಸಳೆಸೊಪ್ಪಿನಲ್ಲಿರುವ ಮ್ಯಾಂಗನೀಸ್ ಅಂಶ ಮೂಳೆಯ ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯ. ಅಲ್ಲದೆ, ಇದರಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್ ಸಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ.
English summary

Top 6 Superfoods for New Mothers

A good diet is especially important if you are breastfeeding to ensure that your baby gets all the important nutrients required for proper growth and development. A good diet is especially important if you are breastfeeding to ensure that your baby gets all the important nutrients required for proper growth and development.
X
Desktop Bottom Promotion