For Quick Alerts
ALLOW NOTIFICATIONS  
For Daily Alerts

ಹೊಸ ತಾಯಂದಿರಿಗೆ ಶುಶ್ರೂಷೆಯ ಸರಳ ಟಿಪ್ಸ್‌ಗಳು

By Hemanth P
|

ತಾಯಿಯಾಗುವುದು ಮಹಿಳೆಯರಿಗೆ ಭೂಮಿ ಮೇಲಿನ ಅಮೋಘ ಭಾವನೆಗಳಲ್ಲಿ ಒಂದು. ಈ ಭಾವನೆಗಾಗಿ ಪ್ರತಿಯೊಬ್ಬ ಮಹಿಳೆಯು ಹಂಬಲಿಸುತ್ತಾಳೆ. ಆದರೆ ಮೊದಲ ಸಲ ತಾಯಿಯಾಗುವಾಗ ಸಂಭ್ರಮದೊಂದಿಗೆ ಕೆಲವೊಂದು ಸವಾಲುಗಳು ಕೂಡ ನಿಮಗಿರುತ್ತದೆ. ಆರಂಭದಲ್ಲಿ ಕೆಲವೊಂದು ವಿಷಯಗಳನ್ನು ನಿಭಾಯಿಸುವುದು ನಿಮಗೆ ತುಂಬಾ ಕಠಿಣವೆನಿಸಬಹುದು.

ಶುಶ್ರೂಷೆಯ ಆರಂಭಿಕ ದಿನಗಳಲ್ಲಿ ನಿಮಗೆ ಕೆಲವೊಂದು ವಿಷಯಗಳು ನಿಮ್ಮನ್ನು ದೂರ ಎಸೆದ ಭಾವನೆ ಮೂಡಿಸಬಹುದು. ಆದರೆ ಇದಕ್ಕೆ ಹೊಂದಿಕೊಳ್ಳಲು ನಿಮಗೆ ಸಮಯ ಹಾಗೂ ತಾಳ್ಮೆಯ ಅಗತ್ಯವಿದೆ. ಶುಶ್ರೂಷೆ ಮತ್ತು ಮಗು ಪ್ರತಿಯೊಂದು ಮಹಿಳೆಗೂ ಭಿನ್ನವಾಗಿರುತ್ತದೆ.

ಕೆಲವೊಂದು ವಿಧಾನಗಳಲ್ಲಿ ನಿಮಗೆ ಅತ್ಯುತ್ತಮವಾಗಿರುವುದನ್ನು ಆಯ್ಕೆ ಮಾಡಬಹುದು. ಯಾವುದು ಸರಿ ಮತ್ತು ಇದನ್ನು ಹೇಗೆ ನಿರ್ವಹಿಸಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳಲು ನಿಮಗೆ ಕೆಲವು ದಿನ ಅಥವಾ ವಾರಗಳು ಬೇಕಾಗಬಹುದು. ಹೊಸ ತಾಯಿಯ ಬಿರುದನ್ನು ಆನಂದಿಸುತ್ತಿದ್ದರೆ ಮತ್ತು ಕೆಲವೊಂದು ಉಪಯುಕ್ತ ಟಿಪ್ಸ್ ಗಳಿಗಾಗಿ ನೀವು ಹುಡುಕುತ್ತಿದ್ದರೆ ಇಲ್ಲಿ ಶುಶ್ರೂಷೆಯ ಕೆಲವೊಂದು ಟಿಪ್ಸ್ ಗಳಿವೆ.

ಸ್ತನದಲ್ಲಿ ನೋವಿರುವಾಗ ಮಗುವಿಗೆ ಹೀಗೆ ಹಾಲುಣಿಸಿ

Simple nursing tips for new mums

ನೀರು:
ನೀರು ಅತೀ ಪ್ರಾಮುಖ್ಯ ಅಂಶ ಮತ್ತು ಇದನ್ನು ನೀವು ಕಡೆಗಣಿಸುವಂತಿಲ್ಲ. ನೀವು ಗರ್ಭಿಣಿಯಾಗಿರುವಾಗ ಹೆಚ್ಚು ನೀರು ಕುಡಿಯಬೇಕು. ನೀವು ಮೊಲೆಹಾಲು ನೀಡುವಾಗ ನೀರು ತನ್ನ ಪ್ರಾಮುಖ್ಯತೆ ಕಳಕೊಳ್ಳುವುದಿಲ್ಲ. ಹಾಲು ಹೆಚ್ಚಿಸಲು ನೀರು ಕುಡಿಯುವುದು ತುಂಬಾ ಮುಖ್ಯ. ಇದರಿಂದ ಪ್ರತೀ ದಿನ ಹೆಚ್ಚು ನೀರು ಕುಡಿಯಿರಿ. ಇದು ಹೊಸ ತಾಯಿಯಂದಿರಿಗೆ ಶುಶ್ರೂಷೆಯ ಟಿಪ್ಸ್.

ಹಾಲಿನ ನಾಳಗಳು ಬಂದ್ ಆಗಿರುವುದು:
ಹಾಲಿನ ನಾಳಗಳು ಬಂದ್ ಆಗುವುದು ಹೆಚ್ಚಿನ ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆ. ನಿಮ್ಮ ಹಾಲಿನ ನಾಳಗಳು ಬಂದ್ ಆಗಿದ್ದರೆ ಆಗ ಬಿಸಿನೀರಿನ ಶಾಖ ನೀಡಿ. ಮಗುವಿಗೆ ಹಾಲುಣಿಸುವಾಗ ಇದನ್ನು ಮಾಡಬಹುದು. ಎರಡು ಮೂರು ಸಲ ಹಾಲುಣಿಸಿದ ಬಳಿಕ ಇದು ಸರಿಯಾಗುತ್ತದೆ. ಇದು ಹೊಸ ತಾಯಂದರಿಗೆ ಅತ್ಯುತ್ತಮ ಹಾಲುಣಿಸುವ ಟಿಪ್ಸ್.

ತಾಯಿ ಹಾಲು ಮಗುವಿಗೆ ಅತ್ಯಗತ್ಯ ಏಕೆ?

ಹಾಲುಣಿಸುವಾಗ ನೋವಾಗುವುದು:
ಮೊದಲ ಕೆಲವು ದಿನಗಳವರೆಗೆ ಹಾಲುಣಿಸುವುದು ನೋವುಂಟು ಮಾಡಬಹುದು. ಹೊಸ ತಾಯಂದಿರಿಗೆ ಹಾಲುಣಿಸಲು ಒಳ್ಳೆಯ ಟಿಪ್ಸ್ ಎಂದರೆ ಹಾಲುಣಿಸುವಾಗ ತಂಪಾದ ನೀರು ಕುಡಿಯಿರಿ ಅಥವಾ ಇದೇ ವೇಳೆ ನಿಮ್ಮ ಇಷ್ಟದ ಸಂಗೀತ ಕೇಳಿ.

ಮೊಲೆತೊಟ್ಟು ಊದುವುದು:
ಮಗುವಿಗೆ ಹಾಲುಣಿಸುವಾಗ ಕೆಲವು ಸಲ ನಿಮ್ಮ ಮೊಲೆತೊಟ್ಟು ಊದಿಕೊಳ್ಳಬಹುದು. ಮೊಲೆತೊಟ್ಟು ಊದಿಕೊಳ್ಳುವುದಕ್ಕೆ ನೀವು ಕೆಲವೊಂದು ಮುಲಾಮು ಹಚ್ಚಬಹುದು. ಆದ್ಯಾಗೂ ಹೊಸ ತಾಯಂದಿರಿಗೆ ಶುಶ್ರೂಷೆಯ ಒಳ್ಳೆಯ ಟಿಪ್ಸ್ ಎಂದರೆ ಸ್ವಲ್ಪ ಪ್ರಮಾಣದ ಹಾಲನ್ನು ಮೊಲೆತೊಟ್ಟಿಗೆ ಹಾಕುವುದು. ಇದು ಒಣ ಮತ್ತು ಸೀಲಿರುವ ತೊಟ್ಟಿಗೆ ಒಳ್ಳೆಯದು. ಕೆಲವೊಂದು ಸಂದರ್ಭಗಳಲ್ಲಿ ಹೊಸ ತಾಯಂದಿರು ಏನು ಮಾಡಬೇಕೆಂದು ಗಾಬರಿಗೊಳಗಾಗುವ ಕಾರಣ ಶುಶ್ರೂಷೆಯ ಟಿಪ್ಸ್ ತುಂಬಾ ಮುಖ್ಯವಾಗಲಿದೆ.

ಋತುಚಕ್ರದ ವೇಳೆ ಆಗುವ ಬದಲಾವಣೆಗಳು

ಮೊಲೆಹಾಲುಣಿಸುವ ದಿಂಬು:
ಆರಂಭದಲ್ಲಿ ನಿಮ್ಮ ಮಗುವನ್ನು ಸರಿಯಾಗಿ ಮಲಗಿಸಿಕೊಂಡು ಹಾಲುಣಿಸುವುದು ತುಂಬಾ ಕಠಿಣ. ಮೊಲೆಹಾಲುಣಿಸುವ ದಿಂಬು ಖರೀದಿಸಿದರೆ ಪ್ರತಿಯೊಂದು ಸರಿಯಾಗಲಿದೆ. ಹೊಸ ತಾಯಂದಿರಿಗೆ ಶುಶ್ರೂಷೆಯ ಈ ಟಿಪ್ಸ್ ಹೆಚ್ಚು ಕೆಲಸ ಮಾಡಲಿದೆ. ಮೊಲೆಹಾಲುಣಿಸುವ ದಿಂಬು ನಿಮ್ಮ ಮಗು ಸರಿಯಾಗಿ ಮಲಗುವಂತೆ ಮಾಡಿ ನಿಮಗೆ ಹಾಲುಣಿಸಲು ನೆರವಾಗಲಿದೆ.

ಒಂದು ಕಿಟ್ ತಯಾರಿಸಿ:
ಹೊಸ ತಾಯಂದಿರಿಗೆ ಇದು ಅತೀ ಮುಖ್ಯ ಮತ್ತು ಅತ್ಯುತ್ತಮ ಮೊಲೆಹಾಲುಣಿಸುವ ಟಿಪ್ಸ್. ನಿಮ್ಮ ಕಿಟ್ ನಲ್ಲಿ ಮರುತುಂಬಿಸಬಹುದಾದ ನೀರಿನ ಬಾಟಲಿ, ಓದಲು ಪುಸ್ತಕ, ಶಕ್ತಿ ನೀಡುವ ಆಹಾರ, ಬಟ್ಟೆ ಇತ್ಯಾದಿ. ಹೊಸ ತಾಯಂದಿರಿಗೆ ಶುಶ್ರೂಷೆಯ ಈ ಟಿಪ್ಸ್ ನೆರವಾಗಲಿದೆ.

English summary

Simple nursing tips for new mums

Being a mom could be one of the best feelings on earth! And every woman craves for that feeling! However, as a new mom boss, it is no exaggeration that you will have a lot on your plate. Managing things may seem a herculean task in the beginning.
Story first published: Friday, May 30, 2014, 17:28 [IST]
X
Desktop Bottom Promotion