For Quick Alerts
ALLOW NOTIFICATIONS  
For Daily Alerts

ಋತುಚಕ್ರದ ವೇಳೆ ಆಗುವ ಬದಲಾವಣೆಗಳು

By Super
|

ಪ್ರತಿಯೊಬ್ಬ ಮಹಿಳೆಗೂ ಇಂತಹ ಅನುಭವ ಆಗಿಯೇ ಆಗುತ್ತದೆ. ನಿಮ್ಮ ತಾಯಿಯಿಂದ ಹಿಡಿದು ನೆರೆಮನೆಯ ಆಂಟಿಯ ತನಕ ಪ್ರತಿಯೊಬ್ಬರು, ನೀವು ಮೈನೆರೆಯುವಾಗ ಏನು ಮಾಡಬೇಕು ಮತ್ತು ಆ ಸಮಯದಲ್ಲಿ ಏನು ಮಾಡಬಾರದು ಎನ್ನುವುದರ ಬಗ್ಗೆ ಸಲಹೆಗಳನ್ನು ನೀಡಿದ ಅನುಭವ ನಿಮಗೂ ಆಗಿರಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೆರಿಗೆಯ ನಂತರ ತಿನ್ನಬೇಕಾದ ಆಹಾರಗಳು

ಆದಾಗ್ಯೂ ಏನು ನಿರೀಕ್ಷಿಸಬೇಕು ಎಂದು ಯಾರೂ ಹೇಳುವುದಿಲ್ಲ. ಇದು ಕೇವಲ ಮೈನೆರೆಯುವ ಸಮಯ ಮಾತ್ರವಲ್ಲ, ಋತುಚಕ್ರದ ಬಗ್ಗೆ ಕೂಡ ತುಂಬಾ ಹೇಳಿಕೊಡಬೇಕಾಗಿದೆ. ಋತುಚಕ್ರವೆನ್ನುವುದು ಹುಡುಗಿ ಮಹಿಳೆಯಾಗಿ ಪರಿವರ್ತಿತವಾಗುವ ಅತ್ಯಂತ ದೊಡ್ಡ ದೈಹಿಕ ಚಿಹ್ನೆ. ಋತುಚಕ್ರ ತುಂಬಾ ಗೊಂದಲವನ್ನುಂಟು ಮಾಡುತ್ತದೆ. ಇದರ ಬಗ್ಗೆ ಹಲವಾರು ಕಟ್ಟುಕತೆಗಳಿವೆ ಮತ್ತು ಅನುಭವದಿಂದ ಮಾತ್ರ ಇದನ್ನು ನೀವು ತಿಳಿದುಕೊಳ್ಳಬಹುದು.

ಮೈನೆರೆಯುವುದು ಸಾಮಾನ್ಯವಾಗಿ ಹುಡುಗಿಯರಲ್ಲಿ 9ರಿಂದ 17ರ ಹರೆಯದವರೆಗೆ ನಡೆಯುತ್ತದೆ. ಕೆಲವು ಹುಡುಗಿಯರು ಇದಕ್ಕಾಗಿ ಕಾದುಕುಳಿತರೆ, ಮತ್ತೆ ಕೆಲವರಿಗೆ ಇದು ದುಸ್ವಪ್ನವಿದ್ದಂತೆ. ಇದನ್ನು ಎದುರಿಸಲು ಅವರು ತುಂಬಾ ಭಯಪಡುತ್ತಾರೆ. ಕೆಲವು ಹುಡುಗಿಯರಿಗೆ ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆ ಬಗ್ಗೆ ಮತ್ತು ಬೆಳೆಯುತ್ತಿರುವ ವಯಸ್ಸಿನೊಂದಿಗೆ ಆಗುವ ಬದಲಾವಣೆ ಬಗ್ಗೆ ತುಂಬಾ ಅಜ್ಞಾನವಿರುತ್ತದೆ.

ಇದರಿಂದಾಗಿ ಋತುಚಕ್ರ ಮತ್ತು ಮೈನೆರೆಯುವುದು ಅವರಿಗೆ ನಿಗೂಢ ಅನುಭವ. ಮೈನೆರೆಯುವುದರಿಂದ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತದೆ. ಈ ಸಮಯದಲ್ಲಿ ಹೊರಗಿನ ಜಗತ್ತು ನಿಮ್ಮನ್ನು ತುಂಬಾ ಭಿನ್ನವಾಗಿ ನೋಡುತ್ತದೆ. ನಿಮ್ಮನ್ನು ಭಿನ್ನ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ಋತುಚಕ್ರದ ವೇಳೆ ಆಗುವ ಬದಲಾವಣೆ ಬಗ್ಗೆ ತಿಳಿದುಕೊಳ್ಳಲು ನೀವು ಆಸಕ್ತಿಯಿಂದ ಇದ್ದೀರಾ? ಹಾಗಾದರೆ ಈ ಲೇಖನ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರಸವದ ನಂತರದ ಒತ್ತಡ ಕಡಿಮೆ ಮಾಡುವ ಮಾರ್ಗಗಳು

1. ಹೊಸ ನೋಟ

1. ಹೊಸ ನೋಟ

ನಿಮ್ಮ ದೇಹವು ಹೊಸ ನೋಟ ಪಡೆಯಬಹುದು. ಋತುಚಕ್ರದಿಂದ ನಿಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಬಹುದು. ಇದೇ ವೇಳೆ ನಿಮ್ಮ ಸ್ತನಗಳು ಬೆಳೆಯಬಹುದು. ಸಂಪೂರ್ಣ ದೇಹದ ವಿನ್ಯಾಸದಲ್ಲಿ ಬದಲಾವಣೆಯಾಗಿ ಬೆಳವಣಿಗೆಯಾಗಬಹುದು. ಕೂದಲು ಕೂಡ ಬೆಳೆಯಬಹುದು. ಇದು ಋತುಚಕ್ರದ ವೇಳೆ ಆಗುವ ಬದಲಾವಣೆಗಳು.

2. ಮೊಡವೆಗಳು

2. ಮೊಡವೆಗಳು

ಋತುಚಕ್ರದ ವೇಳೆ ಕೆಲವು ಮಹಿಳೆಯರಲ್ಲಿ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಋತುಚಕ್ರದ ವೇಳೆ ನಡೆಯುವ ಒಂದು ಬದಲಾವಣೆ. ಮೊಡವೆಗಳು ಒಂದು ವಾರ ತನಕ ಇರಬಹುದು ಬಳಿಕ ಕಡಿಮೆಯಾಗಬಹುದು. ಆದಾಗ್ಯೂ ಇದು ಎಲ್ಲಾ ಮಹಿಳೆಯರ ಅನುಭವಕ್ಕೆ ಬರುವುದಿಲ್ಲ.

3. ಪಿಎಂಎಸ್

3. ಪಿಎಂಎಸ್

ಪಿಎಂಎಸ್ ಅಥವಾ ರಜಸ್ರವಪೂರ್ವದ ಲಕ್ಷಣಗಳನ್ನು ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಅನುಭವಿಸುತ್ತಾರೆ. ಋತುಚಕ್ರವು ಹಾರ್ಮೋನು ಬದಲಾವಣೆಯ ಸಮಯ ಮತ್ತು ಇದೇ ವೇಳೆ ಹಲವಾರು ಬದಲಾವಣೆಗಳಾಗುತ್ತದೆ. ಮಹಿಳೆಯರು ಅನುಭವಿಸುವಂತಹ ರಜಸ್ರವಪೂರ್ವದ ಲಕ್ಷಣಗಳು ಇಲ್ಲಿವೆ.

* ಸ್ತನ ಮೃದುತ್ವ ಅಥವಾ ಸ್ತನ ನೋವು

* ಕಿರಿಕಿರಿ ಅಥವಾ ಅಕಾರಣ ಕೋಪ

* ಬೇಸರದ ಭಾವನೆ

* ಖಿನ್ನತೆ/ಆತಂಕ

* ಆಹಾರದ ಕಡುಬಯಕೆ

* ಹೊಟ್ಟೆ ಉಬ್ಬರ

ಇದು ಋತುಚಕ್ರದ ವೇಳೆ ನಿಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳು. ಕೆಲವು ಮಹಿಳೆಯರಿಗೆ ಋತುಚಕ್ರದ ವೇಳೆ ವಾಕರಿಕೆ ಮತ್ತು ವಾಂತಿ ಬರುತ್ತದೆ. ಋತುಚಕ್ರದ ವೇಳೆ ಆಗುವಂತಹ ಬದಲಾವಣೆಗಳು ಆನಂದಿಸುವಂತಹದಲ್ಲ. ಇದು ಆ ದಿನಗಳನ್ನು ಮಹಿಳೆಯರಿಗೆ ತುಂಬಾ ಕಠಿಣವಾಗಿಸುತ್ತದೆ. ನೀವು ಮನೆ ಮತ್ತು ಕಚೇರಿ ಎರಡನ್ನೂ ನಿಭಾಯಿಸಬೇಕಿದ್ದರೆ ಆಗ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತದೆ.

ಸೆಳೆತ

ಸೆಳೆತ

ಋತುಚಕ್ರದ ಸೆಳೆತ ಯುವ ಮಹಿಳೆಯರು ಹೆಚ್ಚಾಗಿ ಅನುಭವಿಸುತ್ತಾರೆ. ಯುವ ಮಹಿಳೆಯಲ್ಲಿ ಕೇಳಿನೋಡಿ ಋತುಚಕ್ರದ ವೇಳೆ ಸೆಳೆತ ಏನೆಂದು ಆಕೆ ನಿಮಗೆ ಹೇಳುತ್ತಾಳೆ. ಆಕೆ ಇದರಿಂದ ತುಂಬಾ ಕಷ್ಟ ಅನುಭವಿಸುತ್ತಾಳೆ. ಇದರಿಂದ ಆಕೆಗಿದು ತಿಳಿದಿದೆ. ಋತುಚಕ್ರದ ವೇಳೆ ಆಗುವ ಬದಲಾವಣೆ ತಪ್ಪಿಸಲು ಸಾಧ್ಯವಿಲ್ಲ. ಋತುಚಕ್ರದ ವೇಳೆ ಆಗುವಂತಹ ಬದಲಾವಣೆಯು ಕೆಲವೊಂದು ಸಲ ಜೀವನ ಶೈಲಿ ಮತ್ತು ಆಧುನಿಕ ಜಗತ್ತಿನ ಆಹಾರ ಕ್ರಮದ ಪರಿಣಾಮವಾಗಿದೆ. ಆದಾಗ್ಯೂ ಋತುಚಕ್ರದ ಆ ದಿನಗಳು ಮಹಿಳೆಗೆ ದುಸ್ವಪ್ನವಾಗಿರುತ್ತದೆ.

ಆರೋಗ್ಯವಾಗಿರಿ

ಆರೋಗ್ಯವಾಗಿರಿ

ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಜಾಗೃತೆಯಿಂದ ಋತುಚಕ್ರದ ವೇಳೆ ಆಗುವಂತಹ ಬದಲಾವಣೆಗಳನ್ನು ನಿಭಾಯಿಸಬಹುದು. ಈ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಹಸಿರೆಳೆ ತರಕಾರಿಗಳು ಮತ್ತು ಕ್ಯಾಲ್ಸಿಯಂ, ಪ್ರೋಟಿನ್, ಕಬ್ಬಿನಾಂಶವಿರುವ ಆಹಾರ ಸೇವನೆಯಿಂದ ನಿಮ್ಮ ಸಮಸ್ಯೆ ಬಗೆಹರಿಬಹುದು. ವಿಟಮಿನ್ ಇ ಮಾತ್ರೆ ಸೇವನೆಯಿಂದ ಋತುಚಕ್ರದ ಮೊದಲಿನ ಲಕ್ಷಣಗಳ ಪರಿಣಾಮ ಕಡಿಮೆ ಮಾಡಬಹುದು. ಋತುಚಕ್ರದ ವೇಳೆ ಆಗುವಂತಹ ಬದಲಾವಣೆಗಳನ್ನು ಎದುರಿಸಲು ಸಿದ್ಧರಾಗಿ. ಋತುಚಕ್ರ ಏನೆಂಬುವುದು ನಿಮಗೆ ತಿಳಿದಿರುತ್ತದೆ. ಮಹಿಳೆಯ ಶಕ್ತಿಯೊಂದಿಗೆ ಇದನ್ನು ಎದುರಿಸಿ. ಇದು ಋತುಚಕ್ರದ ಬದಲಾವಣೆಗಳು. ಇದನ್ನು ನೀವು ಎದುರಿಸದೆ ಬೇರೆ ಯಾರು ಎದುರಿಸಬೇಕು?

English summary

Changes that happen during periods

Every woman has to go through it! From your moms to neighborhood aunts, you could have experienced everyone flocking to you with advices on puberty and what not to do during those times.However, no one gets ready to say what to expect. It is not just the phase of puberty in girls, but menstruation has got a lot to tell to a woman.
Story first published: Friday, March 7, 2014, 15:10 [IST]
X
Desktop Bottom Promotion