For Quick Alerts
ALLOW NOTIFICATIONS  
For Daily Alerts

ಎದೆಹಾಲು ಕುಡಿಸಲು ಉಪಾಯಗಳು ಮತ್ತು ಸಲಹೆಗಳು

By Deepak M
|

ಬಹುತೇಕ ಮಕ್ಕಳ ತಾಯಂದಿರು ಎದೆಹಾಲು ಕುಡಿಸುವ ಪ್ರಕ್ರಿಯೆಯು ಅತ್ಯಂತ ಸುಲಭವಾಗಿರಬೇಕು ಮತ್ತು ಸ್ವಾಭಾವಿಕವಾಗಿರಬೇಕು ಎಂದು ಆಶಿಸುತ್ತಾರೆ. ಸ್ವಾಭಾವಿಕ ಎಂಬ ಪದವು ಈ ಹಾಲುಡಿಸುವ ಪ್ರಕ್ರಿಯೆಯನ್ನು ತುಂಬಾ ಚೆನ್ನಾಗಿ ವಿವರಿಸುತ್ತದೆ. ಇಲ್ಲಿ ತಾಯಿಯ ಸ್ತನದಿಂದ ಮಗುವು ತಾನೇ ತಾನಾಗಿ ಹಾಲು ಕುಡಿಯುವ ಕ್ರಿಯೆಯು ನೋಡಿದಷ್ಟು ಸುಲಭವಲ್ಲ. ಅದಕ್ಕಾಗಿ ಪ್ರತಿಯೊಬ್ಬ ತಾಯಿಗೆ ಎದೆ ಹಾಲು ನೀಡುವ ಕ್ರಿಯೆಯನ್ನು ಆದಷ್ಟು ಸುಂದರಗೊಳಿಸಲು ಕೆಲವೊಂದು ಉಪಯುಕ್ತ ಸಲಹೆಗಳ ಅವಶ್ಯಕತೆಯಿರುತ್ತದೆ.

ಮಗುವು ಸಹಜವಾಗಿ ತಾಯಿಯಿಂದ ಮೊಲೆ ಹಾಲನ್ನು ಸವಿಯುವುದು ತೀರಾ ಮುಖ್ಯವಾದ ವಿಷಯ. ಅದಕ್ಕೆ ಬದಲಾಗಿ ಮಗುವನ್ನು ಬಲವಂತವಾಗಿ ಎದೆಹಾಲನ್ನು ನೀಡುವ ಕ್ರಿಯೆಯು ಮಗುವಿಗೆ ನೋವು ಮತ್ತು ಕಿರಿಕಿರಿಯನ್ನುಂಟು ಮಾಡುತ್ತದೆ. ಮಗುವು ಸಹಜವಾಗಿ ತಾಯಿಯ ಮೊಲೆಗಳಿಂದ ತಾನೇ ತಾನಾಗಿ ಹಾಲು ಕುಡಿಯಲು ಕೆಲವೊಂದು ಉಪಾಯಗಳಿವೆ.

ಮೊದಲಿಗೆ ಮಗುವಿಗೆ ಎತ್ತ ತಿರುಗಿ ಹಾಲು ಕುಡಿಯಬೇಕು ಎಂಬ ಗೊಂದಲವಿರುತ್ತದೆ. ತಾಯಿಯ ಮೊಲೆಯನ್ನು ನೋಡಿದ ಕ್ಷಣ ಮತ್ತು ಅದರ ವಾಸನೆಯಿಂದಲೇ ಮಗುವಿಗೆ ಸಂತೋಷವಾಗುತ್ತದೆ. ಒಂದು ವೇಳೆ ಮಗು ಹಾಲು ಕುಡಿಸಲು ಹೋದಾಗ ಅಡ್ಡಡ್ಡ ಮತ್ತು ಹಿಂದಕ್ಕೆ ತಲೆಯನ್ನು ಆಡಿಸಿದಾಗ ಸ್ವಲ್ಪ ಹೊತ್ತು ಸುಮ್ಮನಿರಿ. ನಂತರ ಮತ್ತೊಮ್ಮೆ ಹಾಲು ಕೊಡಲು ಪ್ರಯತ್ನಿಸಿ.

Breastfeeding: Tips and Tricks

ಬೇರೆ ಬೇರೆ ಭಂಗಿಗಳಲ್ಲಿ ಪ್ರಯತ್ನಿಸಿ: ಸಾಮಾನ್ಯವಾಗಿ ನಾಲ್ಕು ಹಾಲು ಕುಡಿಸುವ ಭಂಗಿಗಳು ಚಾಲ್ತಿಯಲ್ಲಿವೆ: ಅದನ್ನು ತೊಟ್ಟಿಲಿನಂತಹ ಭಂಗಿಯಲ್ಲಿ ಕುಳಿತು ಹಾಲುಡಿಸುವುದು , ಅನುಕೂಲಕ್ಕೆ ತಕ್ಕಂತೆ ಹಾಲುಡಿಸುವುದು, ಬಿಗಿಯಾಗಿ ಹಿಡಿದುಕೊಂಡು ಹಾಲುಡಿಸುವುದು ಮತ್ತು ಪಕ್ಕಕ್ಕೆ ವಾಲಿಕೊಂಡು ಹಾಲುಡಿಸುವುದು ಇವೇ ಆ ನಾಲ್ಕು ಬಗೆಗಳು.

ಎದೆಹಾಲು ಮತ್ತು ಋತುಚಕ್ರದ ಪ್ರಮುಖ ಸತ್ಯಗಳು

ಇದರಲ್ಲಿ ತೊಟ್ಟಿಲಿನಂತಹ ಭಂಗಿಯಲ್ಲಿ ಕುಳಿತು ಹಾಲು ಕುಡಿಸುವಾಗ ಕೈಗಳಲ್ಲಿ ಮಗುವನ್ನು ಎತ್ತಿಕೊಂಡು ಮಗುವು ಸಲೀಸಾಗಿ ಹಾಲು ಕುಡಿಯುವಂತೆ ಸ್ತನದ ಭಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಪರಿವರ್ತನೀಯ ಭಂಗಿ ತೊಟ್ಟಿಲಿನಂತಹ ಭಂಗಿಯಂತೆಯೇ ಇರುತ್ತದೆ. ಆದರೆ ಇಲ್ಲಿ ತಲೆಯ ಕೆಳಗೆ ಕೈ ಇಟ್ಟು ಹಾಲು ಕುಡಿಯಲು ನೆರವನ್ನು ನೀಡಲಾಗುತ್ತದೆ. ಹೀಗೆ ಕೈ ಇಡುವಾಗ ಎಡ ಭಾಗದಲ್ಲಿ ಮಗುವು ಹಾಲು ಕುಡಿಯುವಾಗ ಬಲಗೈಯನ್ನು ಮತ್ತು ಬಲ ಭಾಗದಲ್ಲಿ ಕುಡಿಯುವಾಗ ಎಡಗೈಯ ನೆರವನ್ನು ನೀಡಲಾಗುತ್ತದೆ.

ಇನ್ನು ಬಿಗಿಯಾಗಿ ಹಿಡಿದುಕೊಂಡು ಹಾಲು ಕುಡಿಸುವ ಭಂಗಿಯಲ್ಲಿ ಮಗುವು ತಾಯಿಯ ವಿರುದ್ಧ ದಿಕ್ಕಿಗೆ ಮುಖ ಮಾಡಿರುತ್ತದೆ. ಇಲ್ಲಿ ಮಗುವನ್ನು ಬೆನ್ನ ಹಿಂದಿನಿಂದ ಅಥವಾ ಪಕ್ಕದಿಂದ ತೆಗೆದುಕೊಂಡು ಹಾಲು ಕುಡಿಸಲಾಗುತ್ತದೆ. ಇದಕ್ಕೆ ಫುಟ್‍ಬಾಲ್ ಭಂಗಿ ಎಂದು ಸಹ ಕರೆಯುತ್ತಾರೆ. ಇನ್ನು ಕಡೆಯ ಭಂಗಿ ಅದು ಪಕ್ಕಕ್ಕೆ ವಾಲಿಕೊಂಡು ಹಾಲು ಕುಡಿಸುವುದು. ಇದು ತೀರಾ ಸರಳ ವಿಧಾನ. ಇದರಲ್ಲಿ ತಾಯಿ ಮತ್ತು ಮಗು ಇಬ್ಬರೂ ಮುಖಾ ಮುಖಿ ಮಲಗಿರುತ್ತಾರೆ. ಮಗುವಿನ ಬಾಯಿಗೆ ಮೊಲೆ ಸಿಗಲು ಅನುಕೂಲವಾಗುವಂತೆ ತಾಯಿ ಮಲಗಿಕೊಂಡು ಇಲ್ಲಿ ಹಾಲು ಕುಡಿಸುತ್ತಾಳೆ.

ಮಗುವಿಗೆ ಆಯಾಸವಾಗದಂತೆ ಸಹಾಯಮಾಡಿ: ಮಗುವನ್ನು ಸುಮಾರು 10 ಅಥವಾ 20 ನಿಮಿಷಗಳ ಕಾಲ ಎತ್ತಿ ಹಿಡಿದುಕೊಂಡು ಹಾಲು ಕುಡಿಸುವುದು ನಿಜಕ್ಕು ಕಷ್ಟದ ಕೆಲಸ. ಅದಕ್ಕಾಗಿ ಮಗುವಿನ ಸಹಾಯಕ್ಕೆ ಒಂದು ತಲೆದಿಂಬನ್ನು ಕೊಡಿ. ತಲೆದಿಂಬಿನ ಮೇಲೆ ಮಗುವನ್ನು ಮಲಗಿಸಿ ಹಾಲು ಕುಡಿಸುವುದರಿಂದ ತಾಯಿ ಮತ್ತು ಮಗು ಇಬ್ಬರಿಗು ಆಯಾಸ ತಪ್ಪುತ್ತದೆ. ಇದಕ್ಕೆಂದೆ ವಿಶೇಷವಾದ ತಲೆದಿಂಬುಗಳು ಬಂದಿವೆ. ಆದರೆ ಸಾಧಾರಣವಾದ ಒಂದು ತಲೆದಿಂಬು ಸಾಕು ಇದಕ್ಕೆ ಬೇಕಾದ ಸಹಾಯವನ್ನು ನೀಡಲು.

ಸ್ತನಗಳನ್ನು ತೊಳೆಯಿರಿ: ಮಗುವಿಗೆ ಹಾಲು ಕುಡಿಸಿದ ತಕ್ಷಣ ಮೊಲೆಗಳನ್ನು ತೊಳೆಯಲು ಮರೆಯಬೇಡಿ. ಇದರಿಂದ ಸ್ತನಗಳು ಆರೋಗ್ಯವಾಗಿರುವ ಜೊತೆಗೆ ಮೊಲೆ ತೊಟ್ಟುಗಳಿಗೆ ಇನ್‍ಫೆಕ್ಷನ್ ಆಗುವುದು ತಪ್ಪುತ್ತದೆ ಮತ್ತು ಆ ಇನ್‍ಫೆಕ್ಷನ್ ಮಗುವಿಗೆ ಹಾನಿಯನ್ನುಂಟು ಮಾಡುವುದು ತಪ್ಪುತ್ತದೆ.

ಬಿಸಿ ಎಂದರೆ ಇನ್‍ಫೆಕ್ಷನ್ ಎಂದರ್ಥ. ಒಂದು ವೇಳೆ ಮೊಲೆ ಹಾಲು ಕುಡಿಸುವುದು ನೋವನ್ನುಂಟು ಮಾಡುತ್ತಿದ್ದಲ್ಲಿ ಅಥವಾ ಒಂದು ಬಗೆಯ ವಿಚಿತ್ರವಾದ ಬಣ್ಣದಿಂದ ಕೂಡಿದ ಹಾಲು ನಿಮ್ಮ ಸ್ತನಗಳಿಂದ ಬರುತ್ತಿದ್ದಲ್ಲಿ ಅಥವಾ ನಿಮ್ಮ ಮೊಲೆ ಭಾಗವು ಸಾಧಾರಣಕ್ಕಿಂತ ಬಿಸಿಯಾಗಿದ್ದಲ್ಲಿ, ಖಂಡಿತ ಇನ್‍ಫೆಕ್ಷನ್ ಆಗಿರುತ್ತದೆ. ತಕ್ಷಣ ತಡಮಾಡದೆ ನಿಮ್ಮ ವೈಧ್ಯರನ್ನು ಕಾಣಿ. ಈ ಇನ್‍ಫೆಕ್ಷನ್ ವಾಸಿಯಾಗುವವರೆಗು ಮಗುವಿಗೆ ಹಾಲನ್ನು ಕುಡಿಸಲು ಹೋಗಬೇಡಿ.

ಮಗುವನ್ನು ಸ್ತನ್ಯಪಾನದಿಂದ ಬಿಡಿಸುವುದು ಹೇಗೆ?

ಎದೆಹಾಲು ಕುಡಿಸುವ ಪ್ರಕ್ರಿಯೆ: ಎದೆಹಾಲು ಕುಡಿಸುವುದು ಒಂದು ಸ್ವಾಭಾವಿಕ ಪ್ರಕ್ರಿಯೆ ಆದರೆ ಮೊದ ಮೊದಲು ಇದು ತೀರಾ ಕಷ್ಟದ ಕೆಲಸವಾಗಿರುತ್ತದೆ. ಹಾಲು ಕುಡಿಸುವಾಗ ಮಗು ಮತ್ತು ತಾಯಿ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅಪ್ಪಿಕೊಳ್ಳಬೇಕು. ಒಂದು ವೇಳೆ ಹಾಲು ಕುಡಿಸುವಾಗ ತೊಂದರೆಯಿದ್ದಲ್ಲಿ, ತಾಯಿಯು ತನ್ನ ಬಟ್ಟೆಯನ್ನು ಸಡಿಲ ಮಾಡಿ, ತನ್ನ ಮಗುವಿನ ಜೊತೆಗೆ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಇದು ತೀರಾ ಅತ್ಯಾವಶ್ಯಕ ಎಂಬುದನ್ನು ಮರೆಯಬೇಡಿ.

English summary

Breastfeeding: Tips and Tricks

Natural is the perfect word to describe the processes that lead to lactation and eventually latching of baby to breast. There is nothing easy about it though. Every mom needs a few helpful tips to make breastfeeding the beautiful experience it should be.
Story first published: Monday, July 7, 2014, 14:37 [IST]
X
Desktop Bottom Promotion