For Quick Alerts
ALLOW NOTIFICATIONS  
For Daily Alerts

ಹೆರಿಗೆ ಬಳಿಕ ಆಗುವ ದೈಹಿಕ ಬದಲಾವಣೆಗೆ ತಯಾರಾಗಿ!

By Super
|

ಹೆರಿಗೆ ನೋವೆಂದರೆ ಅದೊಂದು ಅತೀವ ವೇದನೆ. ಈ ನೋವಿನ ಬಳಿಕ ಮಗುವಿನ ಮುಖವನ್ನು ನೋಡಿದಾಗ ಸಿಗುವ ಸಂತೋಷವೇ ಬೇರೆ. ಆದರೆ ಸಂತಸದಂತೆ ಕೆಲವೊಮ್ಮೆ ಭಾವನಾತ್ಮಕ ಹಾಗೂ ದೈಹಿಕವಾಗಿ ಕೆಲವು ಅನಾನುಕೂಲ ಹಾಗೂ ನಿತ್ರಾಣವಾಗುವಂತಹ ಪರಿಸ್ಥಿತಿ ಬರುತ್ತದೆ. ಹಿಂದಿನ ಉಡುಪುಗಳಿಗೆ ನಿಮ್ಮ ದೇಹ ಹೊಂದಿಕೊಳ್ಳುತ್ತದೆಯಾ ಎನ್ನುವುದನ್ನು ಚಿಂತಿಸಬೇಕಾಗುತ್ತದೆ.

ನೀವು ಹೆರಿಗೆ ಬಳಿಕದ ಮೊದಲ ಕೆಲವು ವಾರಗಳಲ್ಲಿ ಆಗುವ ದೈಹಿಕ ಏರುಪೇರುಗಳಿಗೆ ತಯಾರಾಗಿರಬೇಕಾಗುತ್ತದೆ. ಮಗುವಿಗೆ ಜನ್ಮ ನೀಡಿದ ಬಳಿ ದೈಹಿಕ ಹಾಗೂ ಭಾವನಾತ್ಮಕವಾಗಿ ಕೆಲವೊಂದು ಬದಲಾವಣೆಗಳಾಗುತ್ತದೆ.

ಹೆರಿಗೆಯ ನಂತರ ಪ್ರತಿಯೊಂದು ಸ್ತ್ರೀ ಈ ದೈಹಿಕ ಬದಲಾವಣೆಗೆ ಹೊಂದಿಕೊಳ್ಳಬೇಕಾಗುತ್ತದೆ:

* ಸ್ತನಗಳ ನೋವು

* ಸ್ತನಗಳ ನೋವು

ನಿಮ್ಮ ಸ್ತನಗಳು ಮೊದಲ ಕೆಲವು ದಿನ ಹಾಲು ಬರುವಾಗ ನೋವಾಗಬಹುದು. ಸ್ತನದ ತೊಟ್ಟು ಕೂಡ ನೋಯುತ್ತಿರಬಹುದು.

* ಮಲಬದ್ಧತೆ

* ಮಲಬದ್ಧತೆ

ರಕ್ತ ಸ್ರಾವದ ನಂತರದ ಕೆಲವು ದಿನ ಕರುಳಿನ ಚಲನೆಗಳು ಬದಲಾಗಬಹುದು. ಸೂಕ್ಷ್ಮ ಮೂಲವ್ಯಾಧಿ, ಅಪಿಜಿಟಮಿ ಮತ್ತು ಸ್ನಾಯು ಸೆಳೆತ ನೋವನ್ನು ಉಂಟು ಮಾಡುತ್ತದೆ.

* ಅಪಿಜಿಟಮಿ

* ಅಪಿಜಿಟಮಿ

ನಿಮ್ಮ ಮೂಲಾಧಾರವನ್ನು(ಯೋನಿ ಮತ್ತು ಗುದದ ನಡುವಿನ ಚರ್ಮದ ಪ್ರದೇಶ) ವೈದ್ಯರು ತುಂಡರಿಸಿದ್ದರೆ ಅಥವಾ ಹೆರಿಗೆ ವೇಳೆ ಇದು ಹರಿದು ಅದನ್ನು ಹೊಲಿದಿದ್ದರೆ ಇದು ವಾಸಿಯಾಗುವ ತನಕ ಕುಳಿತುಕೊಳ್ಳುವಾಗ ಅಥವಾ ನಡೆಯುವಾಗ ತುಂಬಾ ನೋವಾಗುತ್ತದೆ. ಕೆಮ್ಮುವಾಗ ಅಥವಾ ಸೀನುವಾಗಲೂ ಇದು ನೋವಾಗುತ್ತದೆ.

* ಮೂಲವ್ಯಾಧಿ:

* ಮೂಲವ್ಯಾಧಿ:

ಇದು ಸಾಮಾನ್ಯ. ಮೂಲವ್ಯಾಧಿ(ಗುದನಾಳದಲ್ಲಿ ಊದಿಕೊಂಡ ರಕ್ತನಾಳಗಳು) ಆಗಾಗ ಅನಿರೀಕ್ಷಿತವೂ ಆಗಿರುತ್ತದೆ.

* ಉಷ್ಣ ಮತ್ತು ಶೀತ ಹೊಳಪು

* ಉಷ್ಣ ಮತ್ತು ಶೀತ ಹೊಳಪು

ಹೊಸ ಹಾರ್ಮೋನ್ ಮತ್ತು ರಕ್ತಕ್ಕೆ ನಿಮ್ಮ ದೇಹ ಹೊಂದಿಕೊಳ್ಳುವಾಗ ಆಂತರಿಕ ಥರ್ಮೊಸ್ಪಾಟ್ ಗೆ ತೊಂದರೆಯಾಗಬಹುದು.

* ಮೂತ್ರವಿಸರ್ಜನೆ ಅಥವಾ ಅಸಂಯಮ:

* ಮೂತ್ರವಿಸರ್ಜನೆ ಅಥವಾ ಅಸಂಯಮ:

ಹೆರಿಗೆ ವೇಳೆ ನಿಮ್ಮ ಸ್ನಾಯುಗಳು ಎಳೆತಕ್ಕೊಳಗಾಗುವುದರಿಂದ ಕೆಮ್ಮುವಾಗ, ನಗುವಾಗ ನಿಮಗರಿವಿಲ್ಲದಂತೆ ಮೂತ್ರ ವಿಸರ್ಜನೆಯಾಗಬಹುದು ಅಥವಾ ಮಲವಿಸರ್ಜನೆಯನ್ನು ತಡೆದುಕೊಳ್ಳಲು ಕಷ್ಟವಾಗಬಹುದು. ಹೆರಿಗೆ ವೇಳೆ ತುಂಬಾ ದೀರ್ಘ ಸಮಯ ಬೇಕಾದರೆ ಇಂತಹ ಸಮಸ್ಯೆ ಕಾಡುತ್ತದೆ.

* ನೋವು

* ನೋವು

ಹೆರಿಗೆ ಬಳಿಕ ಕೆಲವು ದಿನಗಳ ಕಾಲ ಗರ್ಭಕೋಶದಲ್ಲಿ ಕುಗ್ಗುವಿಕೆ ಉಂಟಾಗುತ್ತದೆ. ರಕ್ತಸ್ರಾವ ಕಡಿಮೆ ಮಾಡಲು ಔಷಧಿಗಳನ್ನು ನೀಡಲಾಗಿದ್ದರೆ ಇದು ಸಹಜ.

* ಯೋನಿ ಹೊರಹಾಕುವಿಕೆ(ಪ್ರಸವ ಸೆಲೆ)

* ಯೋನಿ ಹೊರಹಾಕುವಿಕೆ(ಪ್ರಸವ ಸೆಲೆ)

ಅವಧಿಯ ಆರಂಭದಲ್ಲಿ ತೂಕ ಮತ್ತು ಹೆಚ್ಚಾಗಿ ಹೆಪ್ಪುಗಟ್ಟಿಸುವ ಯೋನಿಯಿಂದ ಬಿಳಿ ಅಥವಾ ಹಳದಿ ಕ್ರಮೇಣ ಮಂಕಾಗಿ ಅನೇಕ ವಾರಗಳಲ್ಲಿ ಇದು ನಿಲ್ಲುತ್ತದೆ.

ಭಾರ: ನಿಮ್ಮ ದೇಹದ ತೂಕಕ್ಕಿಂತ ಪ್ರಸವಾನಂತರದ ತೂಕ ಸುಮಾರು 12ರಿಂದ 13 ಪೌಂಡ್(ಮಗುವಿನ ತೂಕ, ಪ್ಲಾಸೆಟ್ ಮತ್ತು ಆಮ್ನಿಯೋಟಿಕ್ ದ್ರವ ಕಳಕೊಂಡು) ಕಡಿಮೆಯಾಗುತ್ತದೆ. ಹೆಚ್ಚುವರಿ ನೀರಿನ ತೂಕ ಮೊದಲ ವಾರದಲ್ಲೇ ಕಡಿಮೆಯಾಗಿ ನಿಮ್ಮ ದೇಹ ಸಮತೋಲನಕ್ಕೆ ಬರುತ್ತದೆ.

English summary

What to Expect Physically After The Delivery

Your baby's finally here, and you're thrilled — but you're also exhausted, uncomfortable, on an emotional roller coaster, and wondering whether you'll ever fit into your jeans again. Childbirth classes helped prepare you for giving birth, but you weren't prepared for all of this!
X
Desktop Bottom Promotion