For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ ಸೊಂಟ ನೋವಿನ ಸಮಸ್ಯೆಯೇ?

|

ಹೆರಿಗೆಯ ನಂತರ ಹೆಚ್ಚಿನ ಮಹಿಳೆಯರಲ್ಲಿ ಸೊಂಟ ನೋವು ಕಂಡು ಬರುತ್ತದೆ. ಅನೇಕ ಕಾರಣಗಳಿಂದ ಸೊಂಟ ನೋವು ಕಂಡು ಬರುತ್ತದೆ. ಹೆರಿಗೆಯಾದಾಗ ಸರಿಯಾದ ಆರೈಕೆ ದೊರೆಯದಿದ್ದರೆ, ಬಾಣಂತಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳದೇ ಇದ್ದರೆ, ಸಿಸೇರಿಯನ್ ಹೆರಿಗೆಯಾಗಿದ್ದರೆ ಸೊಂಟ ನೋವು ಕಂಡು ಬರುವುದು.

ಹೆರಿಗೆಯ ನಂತರ ಕಾಡುವ ಸೊಂಟನೋವಿಗೆ ಕಾರಣ ಮತ್ತು ಅದಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

Struggling With Postnatal Back Pain?

ಬೆನ್ನಿನ ಮೇಲೆ ಒತ್ತಡ ಬಿದ್ದಾಗ
ಗರ್ಭಿಣಿಯಾಗಿದ್ದಾಗ ಹೊಟ್ಟೆ ಬೆಳೆದಂತೆ ಬೆನ್ನಿನ ಮೇಲೆ ಅಧಿಕ ಒತ್ತಡ ಬೀಳುವುದು. ಆದ್ದರಿಂದ ಗರ್ಭೀಣಿಯಾಗಿದ್ದಾಗ ಬೆನ್ನಿಗೆ ಸಪೋರ್ಟ್ ಕೊಟ್ಟು ಕೂರುವುದು ಒಳ್ಳೆಯದು.

ಹೆರಿಗೆ ಸಮಯದಲ್ಲಿ Epidural ಇಂಜೆಕ್ಷನ್ ಚುಚ್ಚಿದ್ದರೆ
ಹೆರಿಗೆ ಕಷ್ಟವಾದರೆ ವೈದ್ಯರು Epidural ಚುಚ್ಚುಮದ್ದು ನೀಡುತ್ತಾರೆ. ಈ ಚುಚ್ಚು ಮದ್ದು ಚುಚ್ಚಿಸಿದವರಿಗೆ ಹೆರಿಗೆ ನಂತರ ಸೊಂಟನೋವಿನ ಸಮಸ್ಯೆ ಕಂಡು ಬರುವುದು.

ಸಿ ಸೆಕ್ಷನ್ ಹೆರಿಗೆ

ಸಿ ಸೆಕ್ಷನ್ ಹೆರಿಗೆಯಾದರೆ ಕನಿಷ್ಠವೆಂದರೆ 3 ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬೆನ್ನು ನೋವು ಕಂಡು ಬರುವುದು. ಈ ಬೆನ್ನುನೋವು ಎಷ್ಟೇ ಔಷಧಿ ತೆಗೆದುಕೊಂಡರೂ ಆಗಾಗ ಕಾಡುತ್ತದೆ.

ಕೂತ ಭಂಗಿ

ಗರ್ಭಿಣಿಯಾಗಿದ್ದಾಗ ಕೂರುವ ಭಂಗಿ ಸರಿಯಿರಬೇಕು, ಇಲ್ಲದಿದ್ದರೆ ಸೊಂಟ ನೋವು ಬರುವುದು. ಬಾಣಂತಿಯಲ್ಲೂ ಅಷ್ಟೇ, ಬೆನ್ನಿಗೆ ಒತ್ತಡ ಬೀಳುವಂತೆ ಕೂರಬಾರದು.

ದೇಹದ ತೂಕ ಹೆಚ್ಚಾಗುವುದು
ದೇಹದ ತೂಕ ಹೆಚ್ಚಾದರೆ ಸೊಂಟ ನೋವು ಕಂಡು ಬರುವುದು.

ಬೆನ್ನು ನೋವನ್ನು ಹೋಗಲಾಡಿಸಲು ಟಿಪ್ಸ್

ಯೋಗ: ಯೋಗ ಮಾಡುವುದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಾಗುವುದು ಹಾಗೂ ಸೊಂಟ ನೋವೂ ಕಾಡುವುದಿಲ್ಲ.

ಮಸಾಜ್
ಹರಿಗೆಯ ನಂತರ ಮಾಡುವ ಮಸಾಜ್ ವಿಧಾನವಿದೆ. ಇದನ್ನು ಮಾಡಿಸಿದರೆ ಸೊಂಟನೋವು ಕಡಿಮೆಯಾಗುವುದು.

ದೇಹದ ತೂಕ ಕಡಿಮೆ ಮಾಡಿಕೊಳ್ಳಿ
ದೇಹದ ತೂಕ ಹೆಚ್ಚಾದರೆ ತೂಕ ಕಮ್ಮಿಯಾಗುವತ್ತ ಗಮನಹರಿಸಿ. ತೂಕ ಕಮ್ಮಿಯಾಗಲು ಕ್ರಾಷ್ ಡಯಟ್ ಮಾಡಬೇಡಿ, ವ್ಯಾಯಾಮದ ಮುಖಾಂತರ ಕಮ್ಮಿ ಮಾಡಿಕೊಳ್ಳಿ.

English summary

Struggling With Postnatal Back Pain? | Tips For Women | ಹೆರಿಗೆಯ ನಂತರ ಸೊಂಟ ನೋವಿನ ಸಮಸ್ಯೆಯೇ? | ಮಹಿಳೆಯರಿಗೆ ಕೆಲ ಸಲಹೆಗಳು

There are some ways to get relief from postnatal pain. However, none of these methods are full-proof. Several factors that contribute to the occurrence of postnatal back pain have been listed below.
X
Desktop Bottom Promotion