For Quick Alerts
ALLOW NOTIFICATIONS  
For Daily Alerts

ಹೆರಿಗೆ ನಂತರ ಹೊಟ್ಟೆ ಹೀಗೆ ಕರಗಿಸಿ

|

ನೀವು ಏನೇ ಹೇಳಿ ಈ ಹೊಟ್ಟೆ ಸುತ್ತ ಬೆಳಿಯೋ ಕೊಬ್ಬಿನ ಟೈರ್ ಇದೆಯಲ್ಲ ಅದು ಭಲೇ ಕಿರಿಕ್ ಮಾಡುತ್ತೆ. ಹೊಟ್ಟೆ ಸುತ್ತ ಕೊಬ್ಬು ಬೆಳೆಸ್ಕೊಳೋದು ಬಹಳ ಸುಲಭ ಆದರೆ ಅದನ್ನ ಕರಗಿಸೋದಕ್ಕೆ ಮಾತ್ರ ಹರಸಾಹಸ ಪಡಬೇಕು. ದೇಹದ ಬೇರೆ ಯಾವ ಭಾಗದ ಕೊಬ್ಬನ್ನ ಬೇಕಾದರೂ ಕರಗಿಸಬಿಡಬಹುದು ಆದರೆ ಈ ಕೊಬ್ಬು ಮಾತ್ರ ಸುಲಭಕ್ಕೆ ಕರಗುವಂತಹದ್ದಲ್ಲ! ಗರ್ಭಾವಸ್ಥೆಯಲ್ಲಿ ಬೆಳೆದ ಹೊಟ್ಟೆಯನ್ನ ಹೆರಿಗೆಯ ನಂತರ ಕರಗಿಸೋದಕ್ಕೆ ಪಾಪ ಅಮ್ಮಂದಿರು ಪಡೋ ಪಾಡು ಒಂದೇ ಎರಡೇ! ಹೆರಿಗೆಯಾಗಿ ಬಾಣಂತನ ಮುಗೀತಿದ್ದ ಹಾಗೇ ಅವರ ತಲೆ ಬಿಸಿ ಶುರುವಾಗೋದೆ ಈ ಹೊಟ್ಟೆನ್ನ ಕರಗಿಸೋದು ಹೇಗಪ್ಪ ಅನ್ನೋ ಪ್ರಶ್ನೆಯಿಂದ.

ಈ ಹೊಟ್ಟೆ ಸುತ್ತ ಬೆಳಿಯೋ ಕೊಬ್ಬು ಎರಡು ರೀತಿ ಇರುತ್ತೆ. ಒಂದು ನಿಮ್ಮ ಹೊಟ್ಟೆಯ ಒಳಗಿನ ಅಂಗಗಳಲ್ಲಿ ಶೇಖರಣೆಯಾಗುವ ಕೊಬ್ಬು ಇದನ್ನ ನೀವು ನೋಡೋದಿಕ್ಕೆ ಆಗೋದಿಲ್ಲ. ಇನ್ನೊಂದು ಹೊಟ್ಟೆಯ ಚರ್ಮದಡಿಯಲ್ಲಿನ ಕೊಬ್ಬು ಇದು ನಮ್ಮ ಕಣ್ಣಿಗೆ ರಾಚುವಂತೆ ಕಾಣುತ್ತೆ. ಹೊಟ್ಟೆಯ ಒಳಗಡೆ ಶೇಖರವಾಗುವ ಕೊಬ್ಬು ತುಂಬಾ ಅಪಾಯಕಾರಿ. ಇದು ನಿಮ್ಮ ಹೊಟ್ಟೆಯನ್ನ ದಪ್ಪಗೆ ಕಾಣುವಂತೆ ಮಾಡುತ್ತೆ.

ಹೊಟ್ಟೆಯ ಸುತ್ತ ಈ ಕೊಬ್ಬು ಹೇಗೆ ಮತ್ತು ಯಾಕೆ ಶೇಖರಣೆಯಾಗುತ್ತೆ? ಇದಕ್ಕೆ ಹಲವು ಕಾರಣಗಳಿವೆ. ಗರ್ಭಾವಸ್ಥೆಯಲ್ಲಿ ನಮ್ಮ ದೇಹದ ತೂಕ ಹೆಚ್ಚುವುದರೊಂದಿಗೆ ಕೊಬ್ಬು ಕೂಡ ಹೆಚ್ಚುತ್ತೆ. ಇದನ್ನ ನೀವು ಬೇರೆ ಎಲ್ಲಿಗೂ ಶಿಫ್ಟ್ ಮಾಡಕ್ಕೆ ಆಗಲ್ಲ. ಇದು ಹೆರಿಗೆಯ ನಂತರ ಸಮಸ್ಯೆಯಾಗಿ ಕಾಡುತ್ತೆ. ನಾವಿಲ್ಲಿ ಈ ಹೊಟ್ಟೆ ಕೊಬ್ಬಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಮತ್ತು ಹೊಟ್ಟೆ ಕರಗಿಸಲು ಕೆಲವು ಉಪಾಯಗಳನ್ನು ಕೊಟ್ಟಿದ್ದೀವಿ. ನೋಡಿ ಮಾಡಲು ಪ್ರಯತ್ನಿಸಿ. ಹೊಟ್ಟೆ ಕರಗಿಸುವ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ:

1. ತಾಜಾ ಹಣ್ಣುಗಳು

1. ತಾಜಾ ಹಣ್ಣುಗಳು

ನೀವು ಹಣ್ಣುಗಳನ್ನು ತಿನ್ನುವಾಗ ಒಂದು ವಿಷಯ ಯಾವಾಗಲೂ ನೆನಪಿಡಿ. ಎಂದೂ ಕೂಡ ರೆಫ್ರಿಜರೇಟರ್ನಲ್ಲಿ ಹಣ್ಣುಗಳನ್ನು ತುಂಬಾ ದಿನಗಳವರೆಗೆ ಇಟ್ಟು ಬಳಸಬೇಡಿ.

2. ತಾಜಾ ಆಹಾರ

2. ತಾಜಾ ಆಹಾರ

ಸಾಧ್ಯವಾದಷ್ಟು ಆಹಾರವನ್ನು ಫ್ರೆಷ್ ಆಗಿ ತಯಾರಿಸಿ ತಿನ್ನಿರಿ. ಕೃತಕ ಸಂರಕ್ಷಕಗಳನ್ನು ಬಳಸಿದ ಆಹಾರ ಮತ್ತು ಸಂಸ್ಕರಿಸಿದ ಆಹಾರಗಳನ್ನು ತಿನ್ನಬೇಡಿ.

3. ಆಯಾ ಕಾಲದಲ್ಲಿ ಸಿಗುವ ತರಕಾರಿಗಳ ಬಳಕೆ

3. ಆಯಾ ಕಾಲದಲ್ಲಿ ಸಿಗುವ ತರಕಾರಿಗಳ ಬಳಕೆ

ಪ್ರಕೃತಿ ಒಂದೊಂದು ಕಾಲಕ್ಕೆ ಒಂದೊಂದು ರೀತಿಯ ತರಕಾರಿ ಮತ್ತು ಹಣ್ಣುಗಳನ್ನು ನಮಗೆ ನೀಡುತ್ತದೆ. ನಾವು ಕೂಡ ಪ್ರಕೃತಿ ಆಯಾ ಕಾಲದಲ್ಲಿ ಒದಗಿಸುವ ಹಣ್ಣು ತರಕಾರಿಗಳನ್ನೇ ಬಳಸುವುದು ಒಳ್ಳೆಯದು. ಇದರಿಂದ ನಿಮ್ಮ ಡಯಟ್ನಲ್ಲಿ ಕೂಡ ವೈವಿಧ್ಯತೆಯಿರುತ್ತದೆ. ಯಾವುದೋ ಒಂದೇ ರೀತಿಯ ಆಹಾರವನ್ನು ಪ್ರತಿದಿನ ತಿನ್ನುವುದು ಮತ್ತು ಒಂದೇ ಆಹಾರವನ್ನು ಹೆಚ್ಚಾಗಿ ತಿನ್ನುವುದು ಎರಡೂ ಕೂಡ ಒಳ್ಳೆಯದಲ್ಲ.

4. ಪಾರ್ಕಿಗೆ ಹೋಗುವುದನ್ನು ರೂಢಿಸಿಕೊಳ್ಳಿ

4. ಪಾರ್ಕಿಗೆ ಹೋಗುವುದನ್ನು ರೂಢಿಸಿಕೊಳ್ಳಿ

ದೇಹ ಶೇಖರಿಸಿದ ಕೊಬ್ಬನ್ನು ಕರಗಿಸಿ ಮಾಮೂಲು ಸ್ಥಿತಿಗೆ ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವೇಗದ ನಡಿಗೆ ಒಂದು ಒಳ್ಳೆಯ ವ್ಯಾಯಾಮ. ಇದರಿಂದಲೇ ವ್ಯಾಯಾಮವನ್ನು ಆರಂಭಿಸಿ. ಯಾವುದೇ ರೀತಿಯ ಪದ್ಧತಿಯ ಮೂಲಕ ಕೊಬ್ಬು ಕರಗಿಸಲು ಆರಂಭಿಸುವ ಮುನ್ನ ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.

5. ಯೋಗಾಭ್ಯಾ ಸ

5. ಯೋಗಾಭ್ಯಾ ಸ

ಸರಿಯಾದ ಆಸನಗಳು ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ತೂಕವನ್ನು ಇಳಿಸಿಕೊಳ್ಳಬಹುದು. ಯೋಗ ತರಗತಿಗಳಿಗೆ ಸೇರಿ ಪ್ರಾಥಮಿಕ ಪಾಠಗಳನ್ನು ಮೊದಲು ಕಲಿಯಿರಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

6. ಆಹಾರವನ್ನು ಜಗಿದು ತಿನ್ನಿ

6. ಆಹಾರವನ್ನು ಜಗಿದು ತಿನ್ನಿ

ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವುದು ಬಹಳ ಮುಖ್ಯ. ಇದು ಬಾಯಿಗೆ ಒಳ್ಳೆಯ ವ್ಯಾಯಾಮ ಜೊತೆಗೆ ನಿಮ್ಮ ದೇಹದ ಆಕಾರ ಮೊದಲಿನಂತಾಗಲೂ ಕೂಡ ನೆರವು ನೀಡುತ್ತದೆ.

7. ಸ್ತನಪಾನ

7. ಸ್ತನಪಾನ

ಸ್ತನ ಪಾನ ಮಗು ಮತ್ತು ತಾಯಿ ಇಬ್ಬರಿಗೂ ಒಳ್ಳೆಯದು. ಇದು ಸ್ತನದ ಕ್ಯಾನ್ಸರ್ ತಡೆಗಟ್ಟುವುದರೊಂದಿಗೆ ದೇಹದ ಕೊಬ್ಬನ್ನು ಕರಗಿಸುವಲ್ಲಿ ಕೂಡ ಸಹಕಾರಿ.

English summary

Simple ways to lose belly fat after pregnancy

Stomach fat is tricky. It can be stubborn to shift and because it is easily gained, it can be one of the most frustrating types of fat.
Story first published: Tuesday, December 3, 2013, 13:49 [IST]
X
Desktop Bottom Promotion