For Quick Alerts
ALLOW NOTIFICATIONS  
For Daily Alerts

ಬಾಣಂತಿಯಲ್ಲಿ ವಾಕರಿಕೆ ಬರಲು ಕಾರಣಗಳು

|

ಗರ್ಭಾವಸ್ಥೆಯಲ್ಲಿ ತಲೆಸುತ್ತು, ಓಕರಿಕೆ ಕಂಡು ಬರುವುದು ಸಾಮಾನ್ಯ. ಆದರೆ ಹೆರಿಗೆಯ ನಂತರವೂ ತಲೆಸುತ್ತು ಕಂಡು ಬಂದರೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದರ್ಥ. ಆದ್ದರಿಂದ ತಲೆ ಸುತ್ತು ಬಂದಾಗ ನಿರ್ಲಕ್ಷ್ಯ ತೋರಬೇಡಿ.

ಹೆರಿಗೆಯ ನಂತರ ತಲೆಸುತ್ತು ಕಾಣಿಸಿದರೆ ಈ ಕೆಳಗಿನ ಕಾರಣಗಳಿಂದ ಇರಬಹುದು.

Simple Causes Of Nausea After Childbirth

ಆಕ್ಸಿಟೋಕ್ಸಿನ್ ಹಾರ್ಮೋನ್ ಬಿಡುಗಡೆಯಾದಾಗ

ಹೆರಿಗೆಯ ನಂತರ 8 ವಾರಗಳವರೆಗೆ ಕೆಲವರಿಗೆ ತಲೆ ಸುತ್ತು ಕಂಡು ಬರುವುದು. ಇದಕ್ಕೆ ಕಾರಣ ಎದೆ ಹಾಲು ಉತ್ಪತ್ತಿಯಾಗುವ ಆಕ್ಸಿಟೋಕ್ಸಿನ್(Oxytoxin) ಎಂಬ ಹಾರ್ಮೋನ್ ಬಿಡುಗಡೆಯಾಗುವುದು. ಇದರಿಂದಾಗಿ ಕೆಲವರಿಗಷ್ಟೇ ತಲೆಸುತ್ತು ಕಂಡು ಬರುವುದು. ಈ ರೀತಿಯ ತಲೆಸುತ್ತು 8 ವಾರಗಳ ಬಳಿಕ ಮಾಯವಾಗುವುದು.

ದೇಹದಲ್ಲಿ ನೀರಿನಂಶ ಕಡಿಮೆಯಾದರೆ
ಎದೆ ಹಾಲು ಕುಡಿಸುವ ತಾಯಿಂದಿರು ಸಾಕಷ್ಟು ನೀರು ಕುಡಿಯಬೇಕು, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ತಲೆ ಸುತ್ತು ಕಂಡು ಬರುವುದು.

ಖಿನ್ನತೆ ವಿರುದ್ಧ ಮಾತ್ರೆ ನುಂಗಿದರೆ
ಕೆಲವರು ಹೆರಿಗೆಯ ನಂತರ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅಂತವರಿಗೆ ಚಿಕಿತ್ಸೆ ಕೊಡಿಸಿದರೆ ಸರಿ ಹೋಗುವುದು, ಖಿನ್ನತೆ ಹೋಗಲಾಡಿಸಲು ಮಾತ್ರೆ ತೆಗೆದುಕೊಳ್ಳುವವರಲ್ಲಿ ತಲೆಸುತ್ತು ಕಂಡು ಬರುವದು.

ಕಬ್ಬಿಣದಂಶದ ಕೊರತೆ ಉಂಟಾದರೆ
ಹೆರಿಗೆಯ ನಂತರ ರಕ್ತ ಹೀನತೆಯ ಸಮಸ್ಯೆ ಉಂಟಾದರೆ ಕೂಡ ತಲೆಸುತ್ತು ಕಂಡು ಬರುವುದು. ಈ ರೀತಿಯ ತಲೆಸುತ್ತನ್ನು ಪೌಷ್ಠಿಕ ಆಹಾರಗಳನ್ನು ತಿನ್ನುವುದರ ಮುಖಾಂತರ ಗುಣ ಪಡಿಸಬಹುದು.

ರೋಗ ನಿರೋಧಕ ಶಕ್ತಿ ಕಮ್ಮಿಯಾದರೆ
ಕೆಲ ಮಹಿಳೆಯರಿಗೆ ಹೆರಿಗೆಯ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ urinary tract infections ಉಂಟಾಗುವುದು. ಈ ರೀತಿ ರೀತಿ ಉಂಟಾದರೆ ವಾಕರಿಕೆ, ಜ್ವರ ಕಂಡು ಬರುವುದು, ಈ ರೀತಿ ಕಂಡು ಬಂದ ತಕ್ಷಣ ವೈದ್ಯರನ್ನು ಕಾಣಿರಿ.

English summary

Simple Causes Of Nausea After Childbirth

It is normal to have mild nausea for almost eight weeks after childbirth, no matter you have undergone a vaginal delivery or a C- section. But, if you experience severe nausea, if it persists longer or if nausea is associated with some other symptoms; you have to seek medical attention.
X
Desktop Bottom Promotion