For Quick Alerts
ALLOW NOTIFICATIONS  
For Daily Alerts

ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಕೆ?

|

ಮಗುವಿನ ತಾಯಿಯ ಎದೆ ಹಾಲಿನಲ್ಲಿ ದೊರೆಯುವ ಪೋಷಕಾಂಶ ಬೇರೆ ಯಾವ ಹಾಲಿನಲ್ಲೂ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ಕನಿಷ್ಠ ಒಂದು ವರ್ಷದವರೆಗಾದರೂ ಎದೆ ಹಾಲು ಕೊಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಒಂದರಿಂದ ಎರಡು ವರ್ಷದವರೆಗೆ ಮಗುವಿಗೆ ಎದೆ ಹಾಲು ಕುಡಿಸುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ, ತಾಯಿಯ ಆರೋಗ್ಯದ ದೃಷ್ಟಿಯಿಂದ ಕೂಡ ಒಳ್ಳೆಯದು, ಮಗುವಿಗೆ ಎದೆ ಹಾಲು ಕುಡಿಸುವುದರಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದೆಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಮಗುವಿಗೆ ಒಂದು ಅಥವಾ ಎರಡು ವರ್ಷ ತುಂಬಿದ ಬಳಿಕ ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಕೆಂದು ತಾಯಿ ಬಯಸುವುದು ಸಹಜ. ಆದರೆ ತಕ್ಷಣ ಎದೆ ಹಾಲು ಕೊಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಮಗುವಾಗಿಯೇ ಎದೆ ಹಾಲು ಬೇಡ ಅನ್ನುವಂತೆ ಮಾಡಬೇಕು. ಅದಕ್ಕಾಗಿ ಕೆಲವರು ಸ್ತನಕ್ಕೆ ಲೋಳೆಸರ ಹಚ್ಚುತ್ತಾರೆ. ಮಗುವಿನ ಬಾಯಿಗೆ ಕಹಿಯ ಅನುಭವಾದಾಗ ಮಗು ಎದೆ ಹಾಲು ಕುಡಿಯುವುದನ್ನು ನಿರಾಕರಿಸಲಾರಂಭಿಸುತ್ತದೆ.

ಆದರೆ ಇಲ್ಲಿಯೇ ಇರುವುದು ತಾಯಿಂದಿರಿಗೆ ಕಷ್ಟ. ಮಗುವೇನೋ ಎದೆ ಹಾಲು ಕುಡಿಯುವುದು ನಿಲ್ಲಿಸುತ್ತದೆ, ಆದರೆ ಎದೆಯಲ್ಲಿ ಹಾಲು ಉತ್ಪತ್ತಿಯಾಗುವುದು ನಿಂತಿರುವುದಿಲ್ಲ. ಹಾಲು ಉತ್ಪತ್ತಿಯಾಗಿ ಮಗು ಕುಡಿಯದಿದ್ದರೆ ಸ್ತನ ತುಂಬಾ ನೋಯುವುದು. ಮಗು ಹಾಲು ಕುಡಿಯುವುದು ನಿಲ್ಲಿಸಿದ ಬಳಿಕ ಎದೆ ಹಾಲು ಉತ್ಪತ್ತಿಯಾಗುವುದನ್ನು ಈ ಕೆಳಗಿನ ವಿಧಾನದಿಂದ ತಡೆಯಬಹುದು.

ಕ್ಯಾಬೇಜ್

ಕ್ಯಾಬೇಜ್

ತಾಜಾ ಕ್ಯಾಬೇಜ್ ನ ಒಂದು ಎಲೆಯನ್ನು ತೆಗೆದುಕೊಂಡು ಸ್ತನದ ಮೇಲೆ ಇಡಿ. ಈ ರೀತಿ ಕೆಲವು ದಿನ ಇಡುವುದರಿಂದ ಎದೆ ಹಾಲಿನ ಉತ್ಪತ್ತಿಯನ್ನು ತಡೆಯಬಹುದು.

Sage ಟೀ

Sage ಟೀ

Sage teaಯನ್ನು ದಿನದಲ್ಲಿ ಎರಡರಿಂದ -3 ಬಾರಿ ಕುಡಿದರೆ ಎದೆ ಹಾಲಿನ ಉತ್ಪತ್ತಿ ಕಡಿಮೆಯಾಗುವುದು.

 ಪುದೀನಾ

ಪುದೀನಾ

ಪುದೀನಾ ಟೀ ಕುಡಿದರೆ ಎದೆ ಹಾಲಿನ ಉತ್ಪತ್ತಿ ಕಡಿಮೆಯಾಗುವುದು, ಅಲ್ಲದೆ ಈ ಟೀ ಕುಡಿಯುವುದರಿಂದ ಹೆರಿಗೆಯ ನಂತರ ಕಾಣಿಸಿಕೊಳ್ಳುವ ಸಮಸ್ಯೆಯಿಂದಲೂ ಹೊರಬರಲು ಸಹಾಯ ಮಾಡುತ್ತದೆ (ಆದರೆ ಮಗುವಿಗೆ ಎದೆ ಹಾಲು ಕೊಡುತ್ತಿರುವ ತಾಯಿಂದಿರು ಪುದೀನಾ ಟೀ ಕುಡಿಯಬೇಡಿ).

ಐಸ್

ಐಸ್

ಎದೆ ಹಾಲು ಬತ್ತುವ ಸಮಯದಲ್ಲಿ ಸ್ತನದಲ್ಲಿ ತುಂಬಾ ನೋವು ಕಂಡು ಬರುತ್ತದೆ. ಐಸ್ ನಿಂದ ಮಸಾಜ್ ಮಾಡಿದರೆ ನೋವು ಕಮ್ಮಿಯಾಗುವುದು.

 ಮಲ್ಲಿಗೆ ಹೂ

ಮಲ್ಲಿಗೆ ಹೂ

ಮಲ್ಲಿಗೆ ಹೂವಿನ ಪೇಸ್ಟ್ ಮಾಡಿ ಎದೆಗೆ ಹಚ್ಚಿದರೆ ಎದೆ ಹಾಲು ಬತ್ತುವುದು.

 ಬಟ್ಟೆ

ಬಟ್ಟೆ

ಈ ಸಮಯದಲ್ಲಿ ಸಡಿಲವಾದ, ನಿಪ್ಪಲ್ ಎದ್ದು ಕಾಣದಂತಹ ಬಟ್ಟೆ ಧರಿಸಿ. ಈ ಸಮಯದಲ್ಲಿ ನರ್ಸಿಂಗ್ ಪ್ಯಾಡ್ ಧರಿಸುವುದು ಒಳ್ಳೆಯದು. ಇದು ಹಾಲು ಲೀಕ್ ಆಗಿ ಬಟ್ಟೆ ಒದ್ದೆಯಾಗುವುದನ್ನು ತಡೆಗಟ್ಟುತ್ತದೆ.

ಪ್ರೆಸ್ ಮಾಡಿ ಹಾಲನ್ನು ಹೊರಹಾಕಬೇಡಿ

ಪ್ರೆಸ್ ಮಾಡಿ ಹಾಲನ್ನು ಹೊರಹಾಕಬೇಡಿ

ಉತ್ಪತ್ತಿಯಾದ ಹಾಲನ್ನು ಕೈಯಿಂದ ಪ್ರೆಸ್ ಮಾಡಿ ಹೊರಹಾಕಬೇಡಿ. ಈ ರೀತಿ ಮಾಡಿದರೆ ಎದೆ ಹಾಲಿನ ಉತ್ಪತ್ತಿ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುವುದು.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಈ ಸಮಯದಲ್ಲಿ ತುಂಬಾ ನೀರು ಕುಡಿಯಿರಿ, ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಹಾಲಿನ ಉತ್ಪತ್ತಿ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಆದ್ದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.

ಮಾನಸಿಕವಾಗಿ ಸಿದ್ಧರಾಗಿ

ಮಾನಸಿಕವಾಗಿ ಸಿದ್ಧರಾಗಿ

ಮನಸ್ಸು ಕೂಡ ನಮ್ಮ ದೇಹದ ಮೇಲೆ ಪ್ರಭಾವ ಬೀಳುತ್ತದೆ. ಎದೆ ಹಾಲು ನಿಲ್ಲುವ ಸಮಯದಲ್ಲಿ ಕೆಲವರಲ್ಲಿ ಎಮೋಷನಲ್ ಪ್ರಾಬ್ಲಂ ಕಂಡು ಬರುತ್ತದೆ. ಇದನ್ನು ತಪ್ಪಿಸಲು ಧ್ಯಾನ ಮಾಡಿ.

English summary

How To Dry N Stop Breast Milk?

It is important to know that nature will eventually succeed in drying up your milk supply, but there are things you can do to speed up the process and keep you comfortable. Here is a list of natural ways for you to stop milk production and to dry up your breast milk supply.
X
Desktop Bottom Promotion