For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ ಕಾಡುವ ಮಲಬದ್ಧತೆಗೆ ಪರಿಹಾರ

|

ಗರ್ಭಿಣಿಯಾದಾಗ ಹಾಗೂ ಹೆರಿಗೆಯ ನಂತರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತದೆ. ಆದ್ದರಿಂದ ಗರ್ಭಿಣಿಯಾಗಿರುವಾಗ ದೇಹದ ಆರೈಕೆಗೆ ಎಷ್ಟು ಗಮನ ಕೊಡುತ್ತೇವೋ ಅಷ್ಟೇ ಗಮನವನ್ನು ಹೆರಿಗೆಯಾಗಿ 6 ತಿಂಗಳವರೆಗೆ ಕೊಡಬೇಕಾಗುತ್ತದೆ, ಆದರೆ ಆರೈಕೆಯ ವಿಧಾನ ಮಾತ್ರ ಬದಲಾಗಿರುತ್ತದೆ.

ಹೆರಿಗೆಯ ನಂತರ ಮಲಬದ್ಧತೆಯ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಸಿಸೇರಿಯನ್ ಆದವರಂತೂ ಮಲವಿಸರ್ಜನೆಗೆ ಹೋಗುವಾಗ ತುಂಬಾ ಒತ್ತಡ ಹಾಕಬಾರದು. ಮಲಬದ್ಧತೆ ಸಮಸ್ಯೆ ತಾಯಿಗೆ ಇದ್ದರೆ ಮಗುವಿಗೆ ಎದೆ ಹಾಲು ಕೊಡಬಾರದೆಂದು ಹೇಳುತ್ತಾರೆ. ಈ ಬಗ್ಗೆ ವೈದ್ಯರನ್ನು ಕೇಳಿ ಖಚಿತ ಪಡಿಸಿಕೊಳ್ಳಿ.

ಮಲಬದ್ಧತೆ ಸಮಸ್ಯೆಯಿಂದ ಹೊರಬರಲು ಹೆರಿಗೆಯ ನಂತರ ಈ ಕೆಳಗಿನ ಆಹಾರಗಳನ್ನು ತಿನ್ನುವುದು ಒಳ್ಳೆಯದು:

ಸಬ್ಬಸಿಗೆ ಸೊಪ್ಪು

ಸಬ್ಬಸಿಗೆ ಸೊಪ್ಪು

ಈ ಸೊಪ್ಪನ್ನು ಬಳಸಿ ಮಾಡಿದ ಸಾರು ಅಥವಾ ಸೂಪ್ ಕುಡಿದರೆ ಎದೆ ಹಾಲು ಹೆಚ್ಚಾಗುವುದು ಹಾಗೂ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.

ಸೊಪ್ಪು

ಸೊಪ್ಪು

ಹೆರಿಗೆಯ ನಂತರ ಸೊಪ್ಪು ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

ಜೀರಿಗೆ ಮತ್ತು ತುಪ್ಪ

ಜೀರಿಗೆ ಮತ್ತು ತುಪ್ಪ

ಇದು ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ತುಪ್ಪ ಹಾಕಿ ಜೀರಿಗೆಯನ್ನು ಹುರಿದು ಪುಡಿ ಮಾಡಿ ಅನ್ನದ ಜೊತೆ ಕಲೆಸಿ ತಿಂದರೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.

ನಾರಿನಂಶವಿರುವ ಹಣ್ಣುಗಳು

ನಾರಿನಂಶವಿರುವ ಹಣ್ಣುಗಳು

ಹಣ್ಣುಗಳಲ್ಲಿ ನಾರಿನಂಶ ಅಧಿಕವಿರುವ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.

ಆಮ್ಲ ಜ್ಯೂಸ್

ಆಮ್ಲ ಜ್ಯೂಸ್

ಆಮ್ಲ ಜ್ಯೂಸ್ ಕೂಡ ಮಲಬದ್ಧತೆ ಸಮಸ್ಯೆ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಇದು ತುಂಬಾ ಸಮಯದಿಂದ ಇರುವ ಮಲಬದ್ಧತೆ ಸಮಸ್ಯೆಯನ್ನು ಕೂಡ ಗುಣ ಪಡಿಸುತ್ತದೆ.

 ಗೋಧಿ

ಗೋಧಿ

ಗೋಧಿಯಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಬರದಂತೆ ತಡೆಯಬಹುದು.

 ಒಣ ಹಣ್ಣುಗಳು

ಒಣ ಹಣ್ಣುಗಳು

ಒಣ ಹಣ್ಣುಗಳಲ್ಲಿ ವಿಟಮಿನ್ಸ್ ಮತ್ತು ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೊಸರು

ಮೊಸರು

ಮೊಸರು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವುದು ಮಾತ್ರವಲ್ಲ ಮೂತ್ರ ಉರಿ ಉಂಟಾಗದಂತೆ ತಡೆಯುತ್ತದೆ. ಆದ್ದರಿಂದ ಎದೆ ಹಾಲು ಕೊಡುವ ತಾಯಿ ಇದನ್ನು ಪ್ರತೀದಿನ ತಿನ್ನುವುದು ಒಳ್ಳೆಯದು.

ಬಿಸಿ ನೀರು

ಬಿಸಿ ನೀರು

ಊಟದ ನಂತರ ಒಂದು ಲೋಟ ಬಿಸಿ ನೀರು ಕುಡಿಯುವುದು ಒಳ್ಳೆಯದು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಮಲಬದ್ಧತೆ ಉಂಟಾಗುವುದು ಆದ್ದರಿಂದ ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳಿ.

English summary

Foods To Prevent Postnatal Constipation | Tips For Women | ಹೆರಿಗೆಯ ನಂತರ ಕಾಡುವ ಮಲಬದ್ಧತೆ ಸಮಸ್ಯೆಗೆ ಪರಿಹಾರ | ಮಹಿಳೆಯರಿಗೆ ಕೆಲ ಸಲಹೆಗಳು

Pregnancy in itself is a phenomenon that changes the biology of a woman's body. Postpartum or postnatal care is of utmost importance. Here are a few foods that women in postnatal stage can eat to promote digestion and prevent constipation
X
Desktop Bottom Promotion