For Quick Alerts
ALLOW NOTIFICATIONS  
For Daily Alerts

ಗರ್ಭಪಾತವಾದಾಗ ತಿನ್ನಬಾರದ ಆಹಾರಗಳು

|

ಗರ್ಭಪಾತವಾದಾಗ ಮಹಿಳೆಯರು ಗರ್ಭಿಣಿಯಾಗಿದ್ದಾಗ ಇರುವುದಕ್ಕಿಂತಲೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆದರೆ ಹೆಚ್ಚಿನವರು ಈ ಸಮಯದಲ್ಲಿ ಖಿನ್ನತೆಯಿಂದಾಗಿ ತಮ್ಮ ದೇಹದ ಆರೈಕೆ ಬಗ್ಗೆ ಗಮನ ಕೊಡುವುದೇ ಇಲ್ಲ. ಗರ್ಭಪಾತವಾದಾಗ ದೇಹದ ಆರೈಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಮಾತ್ರ ದೇಹ ಮುಂದೆ ಗರ್ಭಧಾರಣೆಯಾಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು, ಇಲ್ಲದಿದ್ದರೆ ಮತ್ತೊಮ್ಮೆ ಗರ್ಭಿಣಿಯಾದಾಗ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.

ಗರ್ಭಪಾತವಾದಾಗ ಮಾನಸಿಕವಾದ ಹಾಗೂ ದೈಹಿಕವಾದ ನೋವಿನಿಂದ ಹೊರಬರಲು ಸರಿಯಾದ ಆಹಾರಕ್ರಮ ಪಾಲಿಸಬೇಕು. ಕೆಲವೊಂದು ಆಹಾರಗಳನ್ನು ಕಮ್ಮಿಯೆಂದರೂ ಎರಡು ತಿಂಗಳವರೆಗೆ ಮುಟ್ಟಲೇಬಾರದು. ಗರ್ಭಪಾತವಾದಾಗ ಯಾವ ಆಹಾರವನ್ನು ತಿನ್ನುವುದು ಒಳ್ಳೆಯದಲ್ಲ ಎಂದು ತಿಳಿಯಲು ಮುಂದೆ ಓದಿ:

 ಜಂಕ್ ಫುಡ್ಸ್

ಜಂಕ್ ಫುಡ್ಸ್

ಈ ಸಮಯದಲ್ಲಿ ಅಧಿಕ ವಿಟಮಿನ್ಸ್ ಇರುವ ಆಹಾರಗಳನ್ನು ತಿನ್ನಬೇಕು, ಜಂಕ್ ಫುಡ್ಸ್ ನಿಂದ ದೂರವಿರಬೇಕು.

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು

ಸೋಯಾದಲ್ಲಿ ತುಂಬಾ ಆರೋಗ್ಯಕರ ಅಂಶವಿದ್ದರೂ ಗರ್ಭಪಾತವಾದಾಗ ಇದರ ಸೇವನೆ ಒಳ್ಳೆಯದಲ್ಲ. ಗರ್ಭಪಾತವಾದಾಗ ದೇಹಕ್ಕೆ ಹೆಚ್ಚಿನ ಕಬ್ಬಿಣದಂಶದ ಅಗತ್ಯವಿರುತ್ತದೆ. ಆದರೆ ಈ ಸಮಯದಲ್ಲಿ ಸೋಯಾ ತಿಂದರೆ ರಕ್ತದ ಉತ್ಪತ್ತಿಯನ್ನು ಕಮ್ಮಿ ಮಾಡುತ್ತದೆ.

 ಫಾಸ್ಟ್ ಫುಡ್ಸ್

ಫಾಸ್ಟ್ ಫುಡ್ಸ್

ಎ ಬಿಗ್ ನೋ ಟು ಫಾಸ್ಟ್ ಫುಡ್ಸ್. ನಮ್ಮ ದೇಹದಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳಿಗೆ ಜಂಕ್ ಫುಡ್ಸ್ ಕಾರಣ. ಗರ್ಭಪಾತದ ಖಿನ್ನತೆಯಿಂದ ಹೊರಬರಲು ಜಂಕ್ ಫುಡ್ಸ್ ದೂರವಿಡುವುದು ಒಳ್ಳೆಯದು.

ಕಾರ್ಬೋಹೈಡ್ರೇಟ್ ಆಹಾರಗಳು

ಕಾರ್ಬೋಹೈಡ್ರೇಟ್ ಆಹಾರಗಳು

ದೇಹ ಬಳಲಿರುವಾಗ ಅಧಿಕ ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನು ತಿನ್ನಬೇಡಿ. ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ಅನ್ನು ಜೀರ್ಣಗೊಳಿಸುವ ಶಕ್ತಿ ಇರುವುದಿಲ್ಲ. ಈ ಸಮಯದಲ್ಲಿ ವಿಟಮಿನ್ ಮತ್ತು ಅಮೈನೋ ಆಸಿಡ್ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನಿ.

ಶೀತಲೀಕರಿಸಿದ ಆಹಾರಗಳು

ಶೀತಲೀಕರಿಸಿದ ಆಹಾರಗಳು

ಈಗೆಲ್ಲಾ ಶೀತಲೀಕರಿಸಿದ ಆಹಾರಗಳು ಹೆಚ್ಚಾಗಿ ದೊರೆಯುತ್ತದೆ, ಆದರೆ ಇವುಗಳಿಂದ ದೂರವಿದ್ದು, ತಾಜಾ ಆಹಾರವನ್ನು ಮಾತ್ರ ತಿನ್ನಿ. ತಣ್ಣನೆಯ ಆಹಾರವನ್ನೂ ಮುಟ್ಟಬೇಡಿ.

ಕಾಫಿ

ಕಾಫಿ

ಕಾಫಿಯಲ್ಲಿ ಕೆಫೀನ್ ಹೆಚ್ಚಾಗಿರುವುದರಿಂದ ಗರ್ಭಪಾತವಾದಾಗ ಇದನ್ನು ಕುಡಿಯುವುದು ಯೂಟ್ರಸ್ ಗೆ ಒಳ್ಳೆಯದಲ್ಲ.

 ಶೀತಲೀಕರಿಸಿದ ಮಾಂಸ

ಶೀತಲೀಕರಿಸಿದ ಮಾಂಸ

ಮಾಂಸ ತಿನ್ನುವುದಾದರೆ ತೆಳು ಮಾಂಸವನ್ನು ತಿನ್ನಿ. ಆದರೆ ಶೀತಲೀಕರಿಸಿದ ಮಾಂಸ ತಿನ್ನಬೇಡಿ.

English summary

Foods To Avoid After Miscarriage

When a woman goes through a miscarriage it is one of the most painful experiences in her lifetime. When she is going through this phase, it is important you take good care after miscarriage, here are some of the foods you must avoid when coping with miscarriage.
X
Desktop Bottom Promotion