For Quick Alerts
ALLOW NOTIFICATIONS  
For Daily Alerts

2ನೇ ಬಾರಿ ಗರ್ಭಧಾರಣೆಯಾಗದಿರಲು ಕಾರಣಗಳಿವು

By ವಿವೇಕ್
|

ಸಾಕಷ್ಟು ಜನರಿಗೆ ಮೊದಲ ಗರ್ಭಧಾರಣೆಯ ಬಳಿಕ ಮತ್ತೆ ಗರ್ಭಧಾರಣೆಯಾಗುವುದಿಲ್ಲ. ಆದ್ದರಿಂದಲೇ ಹೆಚ್ಚಿನವರು ಹೇಳುವುದನ್ನು ಕೇಳಿರಬಹುದು. ಮೊದಲ ಬಾರಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಬಾರದೆಂದು. ಎರಡನೇ ಬಾರಿ ಗರ್ಭಧಾರಣೆ ಆಗದಿರಲು ಕೆಲವೊಮ್ಮೆ ಪುರುಷರಲ್ಲಿ ಕಂಡು ಬರುವ ನ್ಯೂನತೆಗಳು ಕೂಡ ಕಾರಣವಾಗಿರಬಹುದು.

ಆದ್ದರಿಂದ ಎರಡನೇಯ ಬಾರಿಗೆ ಗರ್ಭಿಣಿಯಾಗ ಬಯಸಿ, ಗರ್ಭಧಾರಣೆಯಾಗದಿದ್ದರೆ ಈ ಕೆಳಗಿನ ಕಾರಣಗಳಲ್ಲಿ ಒಂದಾಗಿರಬಹುದು ಗಮನಿಸಿ:

ವಯಸ್ಸು

ವಯಸ್ಸು

ವಯಸ್ಸು ಹೆಚ್ಚಾದಂತೆ ಗರ್ಭಧಾರಣೆಯಾಗುವ ಸಾಧ್ಯತೆ ಕಡಿಮೆಯಾಗುವುದು. 30 ವರ್ಷ ದಾಟಿದಂತೆ ಮಹಿಳೆಯರಲ್ಲಿ ಅಂಟಾಣುಗಳ ಉತ್ಪತ್ತಿ ಕಡಿಮೆಯಾಗುವುದು. ಇದರಿಂದ ಗರ್ಭಧಾರಣೆಯಾಗುವ ಸಾಧ್ಯತೆ ಕಡಿಮೆಯಾಗುತ್ತಾ ಬರುತ್ತದೆ. ಆದ್ದರಿಂದ ಗರ್ಭಧಾರಣೆಯಾಗದಿದ್ದರೆ ವಯಸ್ಸು ಕೂಡ ಪ್ರಮುಖವಾದ ವಿಷಯ.

ಸಿಸೇರಿಯನ್

ಸಿಸೇರಿಯನ್

ಮೊದಲ ಹೆರಿಗೆ ಸಿಸೇರಿಯನ್ ಆಗಿದ್ದು, ತುಂಬಾ ಕಷ್ಟದ ಹೆರಿಗೆಯಾಗಿದ್ದರೆ ಎರಡನೆ ಬಾರಿ ಮಕ್ಕಳಾಗದಿರಬಹುದು. ಈ ರೀತಿಯಾಗುವುದು ತುಂಬಾ ವಿರಳ.

 ಪಾಲಿ ಸಿಸ್ಟಿಕ್ ಓವರಿ

ಪಾಲಿ ಸಿಸ್ಟಿಕ್ ಓವರಿ

ಈ ಸಮಸ್ಯೆ ಒಂದು ಮಗುವಾಗುವವರೆಗೆ ಇರಲಿಲ್ಲ ಅಂತ ಮತ್ತೆ ಉಂಟಾಗುವುದಿಲ್ಲ ಅಂತ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಎರಡನೇಯ ಬಾರಿ ಗರ್ಭಧಾರಣೆಯಾಗದಿರಲು ಇದು ಕೂಡ ಒಂದು ಕಾರಣವಿರಬಹುದು.

ಗರ್ಭಕೋಶದಲ್ಲಿ ಗಡ್ಡೆ ಬರುವುದು

ಗರ್ಭಕೋಶದಲ್ಲಿ ಗಡ್ಡೆ ಬರುವುದು

Fibroids (ಗರ್ಭಕೋಶದಲ್ಲಿ ಗಡ್ಡೆ ಬರುವುದು) ವಯಸ್ಸಾದಂತೆ ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದನ್ನು ಚಿಕಿತ್ಸೆಯ ಮುಖಾಂತರ ಗುಣ ಪಡಿಸಬಹುದು.

 ವೀರ್ಯಾಣುಗಳ ಸಂಖ್ಯೆ ಕಡಿಮೆಯಾದರೆ

ವೀರ್ಯಾಣುಗಳ ಸಂಖ್ಯೆ ಕಡಿಮೆಯಾದರೆ

ಮಾನಸಿಕ ಒತ್ತಡ, ಜೀವನ ಶೈಲಿ, ಚಟ ಇವೆಲ್ಲಾ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುತ್ತದೆ. ವೀರ್ಯಾಣುಗಳ ಸಂಖ್ಯೆ ಕಮ್ಮಿಯಾದರೆ ಮಕ್ಕಳಾಗುವುದಿಲ್ಲ.

ಅಸಾಧಾರಣ ಗರ್ಭಧಾರಣೆ(ectopic pregnancy)

ಅಸಾಧಾರಣ ಗರ್ಭಧಾರಣೆ(ectopic pregnancy)

ಇದರಲ್ಲಿ ಅಂಡಾಣುಗಳು ಯೂಟ್ರಸ್ ನಿಂದ ಹೊರಗೆ ಬಂದು ಗರ್ಭದಾರಣೆಯಾಗುವುದು. ಆದರೆ ಈ ಗರ್ಭಧಾರಣೆಯಲ್ಲಿ ಲಕ್ಷಣಗಳು ಗರ್ಭಿಣಿಯಂತೆ ಇದ್ದರೂ ಮಗುವಾಗುವುದಿಲ್ಲ. ಇದನ್ನು ಶಸ್ತ್ರ ಚಿಕಿತ್ಸೆಯಿಂದ ಗುಣ ಪಡಿಸದಿದ್ದರೆ ಮಹಿಳೆಯ ಜೀವಕ್ಕೆ ಅಪಾಯ ಉಂಟಾಗಬಹುದು.

 ಥೈರಾಯ್ಡ್

ಥೈರಾಯ್ಡ್

ಥೈರಾಯ್ಡ್ ಹಾರ್ಮೋನ್ ವ್ಯತ್ಯಾಸ ಮಹಿಳೆಯರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಹಾರ್ಮೋನ್ ಗಳ ವ್ಯತ್ಯಾಸ ಮಕ್ಕಳಾಗುವ ಸಾಧ್ಯತೆಯನ್ನು ಕಮ್ಮಿ ಮಾಡುವುದು.

 ಮಧುಮೇಹ

ಮಧುಮೇಹ

ಮೊದಲ ಹೆರಿಗೆಯ ನಂತರ ಮಧುಮೇಹ ಸಮಸ್ಯೆ ಕಂಡು ಬಂದರೆ ಎರಡನೇಯ ಬಾರಿ ಗರ್ಭಧಾರಣೆಯಾಗುವ ಸಾಧ್ಯತೆಯನ್ನು ಕಮ್ಮಿ ಮಾಡುತ್ತದೆ.

ಮೊದಲ ಗರ್ಭಧಾರಣೆಯಲ್ಲಿ ಕಷ್ಟವಾಗಿದ್ದರೆ

ಮೊದಲ ಗರ್ಭಧಾರಣೆಯಲ್ಲಿ ಕಷ್ಟವಾಗಿದ್ದರೆ

ಮೊದಲ ಹೆರಿಗೆಯಲ್ಲಿ ತುಂಬಾ ಕಷ್ಟವಾಗಿದ್ದರೆ ಉದಾಹರಣೆ ಗರ್ಭಕೋಶದ ಸೋಂಕು ಮುಂತಾದ ತೊಂದರೆ ಅನುಭವಿಸಿದ್ದರೆ ಎರಡನೇಯ ಬಾರಿ ಗರ್ಭಧಾರಣೆ ಅಸಾಧ್ಯ.

English summary

Causes Of Secondary Infertility Problems |Tips For Women | ಎರಡನೇಯ ಬಾರಿ ಗರ್ಭಧಾರಣೆಯಾಗದಿರಲು ಕಾರಣಗಳು | ಮಹಿಳೆಯರಿಗೆ ಟಿಪ್ಸ್

You may face secondary infertility problems together as a couple. Here are some of the main reasons why you may have trouble conceiving a baby for the second time.
X
Desktop Bottom Promotion