For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರದ ಮಸಾಜ್ ನ ಪ್ರಯೋಜನಗಳು

|

ಒಂದು ಮಗುವಾದ ನಂತರ ತನ್ನ ದೇಹದ ಬಗ್ಗೆ ಆರೈಕೆ ಮಾಡಲು ಪುರುಸೊತ್ತೇ ಇರುವುದಿಲ್ಲ. ಸದಾ ಸಮಯ ಮಗುವಿನ ಆರೈಕೆಯಲ್ಲಿಯೇ ಸಮಯ ಕಳೆದುಹೋಗಿ ಬಿಡುತ್ತದೆ. ಇನ್ನು ಹೊರಗಡೆ ದುಡಿಯುವ ತಾಯಿಯಾಗಿದ್ದರೆ ಕೆಲಸ, ಮಗುವಿನ ಆರೈಕೆಯ ನಡುವೆ ತನ್ನ ದೇಹದ ಆರೈಕೆ ಕೊಡುವುದನ್ನು ಮರೆತು ಬಿಡುತ್ತಾರೆ.

ಹೆರಿಗೆಯ ನಂತರ ದೇಹದಲ್ಲೂ ಬದಲಾವಣೆಗಳಾಗಿರುತ್ತದೆ. ಕೆಲವರಿಗೆ ಮೈ, ಕೈ ನೋವು, ಸೊಂಟ ನೋವು ಇರುತ್ತದೆ. ಮೈಕೈ ನೋವನ್ನು ಹೋಗಲು, ಹಿಂದಿನ ಸೌಂದರ್ಯ ಪಡೆಯಲು ಹೆರಿಗೆ ನಂತರದ ಮಸಾಜ್ (postnatal massage) ಮಾಡಿಸಿಕೊಳ್ಳುವುದು ಒಳ್ಳೆಯದು. ಈ ಮಸಾಜ್ ಮಾಡಿಸಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

Postnatal Massage

ವಿಶ್ರಾಂತಿಯ ಅನುಭವಕ್ಕೆ: ಮಗುವಾದ ನಂತರ ಅದರ ಆರೈಕೆಯಲ್ಲಿ ದೇಹ ಸ್ವಲ್ಪ ಬಳಲಿರುತ್ತದೆ. ಈ ಮಸಾಜ್ ದೇಹಕ್ಕೆ ವಿಶ್ರಾಂತಿಯ ಅನುಭವ ನೀಡುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ದೇಹದ ನೋವು ಕಡಿಮೆಯಾಗುತ್ತದೆ: ಹೆರಿಗೆಯ ನಂತರ ಸೊಂಟ ನೋವು, ಮೈಕೈ ನೋವು ಇದ್ದರೆ ಈ ಮಸಾಜ್ ಮಾಡಿಸಿದರೆ ಸಾಕು ನೋವು ಕಡಿಮೆಯಾಗುವುದು.

ರಕ್ತ ಸಂಚಾರಕ್ಕೆ ಉತ್ತಮವಾಗುತ್ತದೆ: ಈ ಮಸಾಜ್ ಮಾಡಿದರೆ ದೇಹದಲ್ಲಿ ರಕ್ತ ುತ್ತಮವಾಗಿ ಚಲಿಸುವಂತೆ ಮಾಡುತ್ತದೆ. ಇದು ದೇಹವು ಅಧಿಕ ಆಮ್ಲಜನಕವನ್ನು ಹೀರಿಕೊಳ್ಳುವಂತೆ ಮಾಡುತ್ತದೆ.

ತ್ವಚೆಯನ್ನು ಬಿಗಿಗೊಳಿಸುತ್ತದೆ: ಹೆರಿಗೆಯ ನಂತರ ತ್ವಚೆಯ ಸ್ನಾಯುಗಳು ಸ್ವಲ್ಪ ಸಡಿಲವಾಗುತ್ತದೆ, ಇದರಿಂದ ಯೌವನದ ಕಳೆ ಮಾಸುವುದು. ಈ ಮಸಾಜ್ ಮಾಡಿದರೆ ತ್ವಚೆಯನ್ನು ಬಿಗಿಗೊಳಿಸುತ್ತದೆ, ನಿಮ್ಮ ತಾರುಣ್ಯದ ಚೆಲುವನ್ನು ಉಳಿಸುತ್ತದೆ.

ತ್ವಚೆಯಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ: ಈ ಮಸಾಜ್ ತ್ವಚೆಯಲ್ಲಿರುವ ಕಲ್ಮಶಗಳನ್ನು ಹೊರಹಾಕಿ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

English summary

Benefits Of Postnatal Massage For New Moms | Tips For Mother | ಹೆರಿಗೆಯ ನಂತರದ ಮಸಾಜ್ ಮಾಡಿಸಿದರೆ ದೊರೆಯುವ ಪ್ರಯೋಜನಗಳು | ತಾಯಿಂದಿರಿಗೆ ಕೆಲ ಸಲಹೆಗಳು

Post pregnancy, women put on weight and the urge to get back in shape becomes third main motto. Have you heard about the postnatal massages? It is a massage that every woman should take after delivery.
X
Desktop Bottom Promotion