For Quick Alerts
ALLOW NOTIFICATIONS  
For Daily Alerts

ಮಕ್ಕಳ 'ಬುದ್ಧಿ ಶಕ್ತಿ' ಹೆಚ್ಚಿಸಲು, ಇಲ್ಲಿದೆ ನೋಡಿ ಶಕ್ತಿಶಾಲಿ ರೆಸಿಪಿ!

ಮನುಷ್ಯನ ಮೆದುಳು ಸಣ್ಣ ಪ್ರಾಯದಲ್ಲೇ ಬೆಳೆಯುವ ಕಾರಣದಿಂದ ಕೆಲವೊಂದು ಮನೆಯಲ್ಲೇ ತಯಾರಿಸುವ ಆಹಾರ ಬಳಸಿಕೊಂಡು ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಬಹುದು. ಇದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ...ಮುಂದೆ ಓದಿ

By Deepu
|

ಇಂದಿನ ಮಕ್ಕಳನ್ನು ನೋಡಿದರೆ ಅವರು ಹುಟ್ಟುತ್ತಲೇ ತುಂಬಾ ಬುದ್ಧಿವಂತರಾಗಿರುತ್ತಾರೆ. ಒಂದೆರಡು ವರ್ಷದಲ್ಲೇ ಅವರು ಎಷ್ಟು ಬುದ್ಧಿವಂತರಾಗಿದ್ದಾರೆಂದು ನಮಗೆ ತಿಳಿದುಬರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸುವಂತಹ ಪೋಷಕಾಂಶಯುಕ್ತ ಆಹಾರಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಷ್ಟೇ ಬುದ್ಧಿವಂತರಾಗಿದ್ದರೂ ತುಂಬಾ ಕಡಿಮೆ ಎನ್ನಬಹುದು. ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ

ಯಾಕೆಂದರೆ ತಂತ್ರಜ್ಞಾನವು ಪ್ರತಿ ಕ್ಷಣವು ಏನಾದರು ಹೊಸತನ್ನು ತರುತ್ತಲೇ ಇದೆ. ಇದರಿಂದ ಸಾಮಾನ್ಯ ಜ್ಞಾನ ಹಾಗೂ ಕಲಿಕೆಯಲ್ಲಿ ಮುಂದುವರಿಯುವುದು ತುಂಬಾ ಮುಖ್ಯ. ಇದನ್ನೇ ಬಂಡವಾಳವಾಗಿಸಿಕೊಂಡು ಕೆಲವೊಂದು ಕಂಪನಿಗಳು ನಿಮ್ಮ ಮಕ್ಕಳ ಜ್ಞಾನ ಹಾಗೂ ಬುದ್ಧಿಶಕ್ತಿಯನ್ನು ಹೆಚ್ಚಿಸುವ ಪೇಯಗಳ ಬಗ್ಗೆ ಜಾಹೀರಾತು ನೀಡುತ್ತವೆ. ಆದರೆ ಇದು ಸರಿಯಾದ ವಿಧಾನವಲ್ಲ. ಜ್ಞಾಪಕ ಶಕ್ತಿ ಹೆಚ್ಚಿಸಲು ಸರಳ ಸೂತ್ರ

ಮನುಷ್ಯನ ಮೆದುಳು ಸಣ್ಣ ಪ್ರಾಯದಲ್ಲೇ ಬೆಳೆಯುವ ಕಾರಣದಿಂದ ಕೆಲವೊಂದು ಮನೆಯಲ್ಲೇ ತಯಾರಿಸುವ ಆಹಾರ ಬಳಸಿಕೊಂಡು ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಬಹುದು. ಇದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಮೊಟ್ಟೆಯ ಹಳದಿ 2 ಚಮಚ

*ಓಟ್ ಮೀಲ್ಸ್ 4 ಚಮಚ

*ಕಡು ಚಾಕಲೇಟ್ ಹುಡಿ 1 ಚಮಚ

ಈ ಮನೆಮದ್ದನ್ನು ನಿಯಮಿತವಾಗಿ ಸೇವಿಸಿದಾಗ ನಿಮ್ಮ ಮಗುವಿನ ಮೆದುಳಿನ ಶಕ್ತಿಯು ಪರಿಣಾಮಕಾರಿಯಾಗಿ ಹೆಚ್ಚುವುದು.

ಮೂರು ವರ್ಷಕ್ಕಿಂತ ಮೇಲಿನ ಮಕ್ಕಳಿಗೆ...

ಮೂರು ವರ್ಷಕ್ಕಿಂತ ಮೇಲಿನ ಮಕ್ಕಳಿಗೆ...

ಈ ಮನೆಮದ್ದನ್ನು ಮೂರು ವರ್ಷಕ್ಕಿಂತ ಮೇಲಿನ ಮಕ್ಕಳಿಗೆ ನೀಡಬೇಕು. ಇದರೊಂದಿಗೆ ಆರೋಗ್ಯಕರ ಆಹಾರ ಸೇವನೆ ಮಾಡಿದರೆ ಮಕ್ಕಳ ಬುದ್ಧಿಶಕ್ತಿಯು ಮತ್ತಷ್ಟು ಹೆಚ್ಚಾಗುವುದು.

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆಯಲ್ಲಿ ವಿಟಮಿನ್ ಇ ಮತ್ತು ಖನಿಜಾಂಶಗಳ ಸಹಿತ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದು ಮಕ್ಕಳ ಮೆದುಳಿನ ಕೋಶಗಳಿಗೆ ಪೋಷಕಾಂಶವನ್ನು ಒದಗಿಸುವುದು.

ಓಟ್ ಮೀಲ್ಸ್‌...

ಓಟ್ ಮೀಲ್ಸ್‌...

ಓಟ್ ಮೀಲ್ಸ್‌ನಲ್ಲಿ ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಇದು ಮಕ್ಕಳಲ್ಲಿ ಚುರುಕಾಗಿರಿಸುವುದು ಮತ್ತು ಮಕ್ಕಳ ಮೆದುಳಿನ ಕೋಶಗಳನ್ನು ಬಲಗೊಳಿಸುವುದು.

ಕಡು ಚಾಕಲೇಟ್

ಕಡು ಚಾಕಲೇಟ್

ಕಡು ಚಾಕಲೇಟ್ ಈ ಪೇಯಕ್ಕೆ ರುಚಿಯನ್ನು ಒದಗಿಸುವುದು ಮಾತ್ರವಲ್ಲದೆ ಇದು ಆ್ಯಂಟಿಆಕ್ಸಿಡೆಂಟ್ ಗಳನ್ನು ಪೋಷಿಸುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಓಟ್ ಮೀಲ್ಸ್ ಮೆದುವಾಗುವ ತನಕ ಇದನ್ನು ಬಿಸಿ ನೀರಿನಲ್ಲಿ ನೆನೆಸಿಡಿ...ನಂತರ ಓಟ್ ಮೀಲ್ಸ್ ಅನ್ನು ಒಂದು ಕಪ್‌ಗೆ ಹಾಕಿಕೊಳ್ಳಿ.

*ಇನ್ನು ಮೊಟ್ಟೆಯ ಹಳದಿ ಲೋಳೆ ಮತ್ತು ಕಡು ಚಾಕಲೇಟ್ ಹುಡಿಯನ್ನು ಇದಕ್ಕೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.

*ಪ್ರತೀ ದಿನ ಬೆಳಿಗ್ಗೆ ಉಪಹಾರದೊಂದಿಗೆ ಈ ಆಹಾರವನ್ನು ಮಕ್ಕಳಿಗೆ ಮೂರು ತಿಂಗಳ ಕಾಲ ನೀಡಿ.

English summary

Natural Remedy To Boost Your Kids Brain Power!

If you are a parent, one of your greatest wishes would be to see your child succeed in life, to be smart and intelligent, right? Well, here is an amazing remedy that can help your child become smarter. To survive in this fast-paced world, led by technology and education, it is extremely important to be able to learn quickly, to be good in studies and to have good general knowledge.
X
Desktop Bottom Promotion