For Quick Alerts
ALLOW NOTIFICATIONS  
For Daily Alerts

ಮಗುವಿನ ನಿದ್ದೆಯ ಅವಧಿ-ತಾಯಿ ತಿಳಿಯಲೇಬೇಕಾದ ಸತ್ಯ ಸಂಗತಿ

ಮಗು ದಿನಕ್ಕೆ ಎಷ್ಟು ಗಂಟೆ ನಿದ್ರಿಸಬೇಕು, ಮಗು ಬೆಳೆಯುತ್ತಾ ಹೋದಂತೆ ಈ ನಿದ್ದೆಯ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆ ತಾಯಿಯಾದವಳು ತಿಳಿದುಕೊಂಡಿರಬೇಕು....

By Manu
|

ಮಗುವಿನ ಆಗಮನವಾದ ಬಳಿಕ ಮೊದಲ ಕೆಲವು ದಿನಗಳ ಕಾಲ ಮಗುವಿನ ಮತ್ತು ಬಾಣಂತಿಯ ಆರೈಕೆ ಮಾಡಲು ಯಾರಾದರೂ ಹತ್ತಿರವಿರುತ್ತಾರೆ. ಬಳಿಕ ಮಗುವಿನ ಯೋಗಕ್ಷೇಮಗಳನ್ನೆಲ್ಲಾ ತಾಯಿಯಾದವಳೇ ನಿರ್ವಹಿಸಬೇಕು. ಕಂದಮ್ಮನ ನಿದ್ದೆಯ ಅವಧಿ ಹೇಗಿರಬೇಕು? ಇತ್ತ ಗಮನಿಸಿ...

ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಮಕ್ಕಳು ಹೆಚ್ಚು ಸಮಯ ನಿದ್ದೆ ಮಾಡುತ್ತವೆ. ಆದರೆ ದಿನಕ್ಕೆ ಎಷ್ಟು ಗಂಟೆ ನಿದ್ರಿಸಬೇಕು, ಮಗು ಬೆಳೆಯುತ್ತಾ ಹೋದಂತೆ ಈ ನಿದ್ದೆಯ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆ ತಾಯಿಯಾದವಳು ತಿಳಿದುಕೊಂಡಿರಬೇಕು. ಒಂದು ವೇಳೆ ನೀವು ಮಗುವಿನ ತಾಯಿಯಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸುವಿರಾದರೆ ಕೆಳಗಿನ ವಿವರಗಳು ನಿಮ್ಮ ನೆರವಿಗೆ ಬರಬಲ್ಲವು...

0-2 ತಿಂಗಳು

0-2 ತಿಂಗಳು

ಈ ಅವಧಿಯಲ್ಲಿ ಮಕ್ಕಳು ದಿನದ ಸಮಯದಲ್ಲಿ ಮೂರರಿಂದ ಐದು ಚಿಕ್ಕ ಚಿಕ್ಕ ನಿದ್ದೆಯನ್ನು ಪಡೆಯುತ್ತಾರೆ. ರಾತ್ರಿ ಸುಮಾರು ಎಂಟರಿಂದ ಒಂಬತ್ತು ಗಂಟೆ ನಿದ್ರಿಸುತ್ತಾರೆ. ಒಟ್ಟಾರೆ ದಿನದ ಹದಿನಾರು ಗಂಟೆ ಸೊಂಪಾಗಿ ನಿದ್ರಿಸುತ್ತಾರೆ. ಹೇಗಿದ್ದರೂ ಒಂದು ಎರಡು ಕೆಲಸಗಳಿಗೆಲ್ಲಾ ಅಮ್ಮ ಇದ್ದಾರಲ್ಲಾ!

2-4 ತಿಂಗಳು

2-4 ತಿಂಗಳು

ದಿನದ ಅವಧಿಯಲ್ಲಿ ಸುಮಾರು ಮೂರು ಚಿಕ್ಕ ಚಿಕ್ಕ ನಿದ್ದೆಯನ್ನು ನಿದ್ರಿಸುತ್ತಾರೆ. ಆದರೆ ರಾತ್ರಿಯ ನಿದ್ದೆ ಒಂಬತ್ತರಿಂದ ಹತ್ತು ಗಂಟೆಯಷ್ಟು ದೀರ್ಘವಾಗಿರುತ್ತದೆ. ಒಟ್ಟಾರೆ ದಿನದ ಹದಿನಾಲ್ಕಕ್ಕೂ ಹೆಚ್ಚು ಗಂಟೆ ಮಲಗುತ್ತಾರೆ.

4-6 ತಿಂಗಳು

4-6 ತಿಂಗಳು

ದಿನದ ಅವಧಿಯಲ್ಲಿ ಎರಡರಿಂದ ಮೂರು ಚಿಕ್ಕ ಚಿಕ್ಕ ನಿದ್ದೆಯನ್ನು ನಿದ್ರಿಸುತ್ತಾರೆ. ರಾತ್ರಿಯ ಹೊತ್ತು ಸುಮಾರು ಹತ್ತು ಗಂಟೆಗಳ ಕಾಲ ನಿದ್ರಿಸುತ್ತಾರೆ. ಒಟ್ಟಾರೆ ಹದಿನಾಲ್ಕರಿಂದ ಹದಿನೈದು ಗಂಟೆ ನಿದ್ರಿಸುತ್ತಾರೆ.

6-9 ತಿಂಗಳು

6-9 ತಿಂಗಳು

ಈ ಅವಧಿಯಲ್ಲಿ ಮಕ್ಕಳು ದಿನದಲ್ಲಿ ಎರಡು ಚಿಕ್ಕ ಚಿಕ್ಕ ನಿದ್ದೆ ನಿದ್ರಿಸುತ್ತಾರೆ. ಆದರೆ ರಾತ್ರಿಯ ನಿದ್ದೆ ಕೊಂಚ ಕಡಿಮೆಯಾಗಿ ಹತ್ತರಿಂದ ಹನ್ನೊಂದು ಗಂಟೆಯ ಕಾಲ ನಿದ್ರಿಸುತ್ತಾರೆ. ಎಚ್ಚರಿದ್ದಾಗ ಮಗ್ಗುಲು ಬದಲಿಸಲು, ಅಂಬೆಗಾಲಿಕ್ಕಲು ಯತ್ನಿಸುತ್ತಾರೆ. ಒಟ್ಟಾರೆ ದಿನದ ಹದಿನಾಲ್ಕು ಗಂಟೆ ಕಾಲ ನಿದ್ರಿಸುತ್ತಾರೆ.

9-12 ತಿಂಗಳು

9-12 ತಿಂಗಳು

ದಿನದ ಹೊತ್ತಿನಲ್ಲಿ ಎರಡು ಚಿಕ್ಕ ಚಿಕ್ಕ ನಿದ್ದೆ ತೆಗೆದರೂ ರಾತ್ರಿ ಹೊತ್ತು ಹತ್ತರಿಂದ ಹನ್ನೆರಡು ಗಂಟೆ ಕಾಲ ನಿದ್ರಿಸುವ ಮೂಲಕ ತಮ್ಮ ಹದಿನಾಲ್ಕು ಗಂಟೆಗಳ ನಿಗದಿತ ನಿದ್ದೆಯನ್ನು ಪಡೆಯುತ್ತಾರೆ.

12-18 ತಿಂಗಳು

12-18 ತಿಂಗಳು

ಒಂದು ವರ್ಷದ ಬಳಿಕ ಮಕ್ಕಳು ದಿನದ ಅವಧಿಯಲ್ಲಿ ಹೆಚ್ಚು ಚುರುಕಾಗುತ್ತಾ ಚಿಕ್ಕ ಚಿಕ್ಕ ಒಂದು ಅಥವಾ ಎರಡು ನಿದ್ದೆಗಳನ್ನು ತೆಗೆಯುತ್ತಾರೆ. ರಾತ್ರಿ ಮಾತ್ರ ಹನ್ನೊಂದರಿಂದ ಹನ್ನೆರಡು ಗಂಟೆಗಳಷ್ಟು ಹೆಚ್ಚು ನಿದ್ರಿಸುತ್ತಾರೆ. ಒಟ್ಟಾರೆ ಹರಿಮೂರರಿಂದ ಹದಿನಾಲ್ಕು ಗಂಟೆಗಳ ಕಾಲ ನಿದ್ರಿಸುತ್ತಾರೆ.

18-24 ತಿಂಗಳು

18-24 ತಿಂಗಳು

ಈ ವಯಸ್ಸಿನಲ್ಲಿ ಕೀಟಲೆ ಹೆಚ್ಚುವ ಮೂಲಕ ದಿನದ ನಿದ್ದೆಯೂ ಕಡಿಮೆಯಾಗುತ್ತದೆ. ದಿನದ ಹೊತ್ತಿನಲ್ಲಿ ಒಂದು ಚಿಕ್ಕ ನಿದ್ದೆ ತೆಗೆದರೆ ಹೆಚ್ಚು. ಆದರೆ ರಾತ್ರಿ ಸುಮಾರು ಹನ್ನೊಂದು ಗಂಟೆಗಳ ಕಾಲ ನಿದ್ರಿಸುತ್ತಾರೆ. ಒಟ್ಟಾರೆ ಹರಿಮೂರರಿಂದ ಹದಿನಾಲ್ಕು ಗಂಟೆಗಳ ಕಾಲ ನಿದ್ರಿಸುತ್ತಾರೆ

2-3 ವರ್ಷಗಳು

2-3 ವರ್ಷಗಳು

ಈ ವಯಸ್ಸಿನಲ್ಲಿ ಹಿರಿಯರಿಂದ ಮಾತು ಮೊದಲಾದವುಗಳನ್ನು ಕಲಿಯುವ ಮೂಲಕ ದಿನವಿಡೀ ವ್ಯಸ್ತರಿರುತ್ತಾರೆ. ದಿನದ ಹೊತ್ತಿನಲ್ಲಿ ಒಂದು ಚಿಕ್ಕ ನಿದ್ದೆ, ರಾತ್ರಿ ಹೊತ್ತು ಹತ್ತರಿಂದ ಹನ್ನೊಂದು ಗಂಟೆ, ಒಟ್ಟಾರೆ ಹನ್ನೆರಡರಿಂದ ಹದಿನಾಲ್ಕು ಗಂಟೆಗಳ ಕಾಲ ನಿದ್ರಿಸುತ್ತಾರೆ.

3-5 ವರ್ಷಗಳು

3-5 ವರ್ಷಗಳು

ಈ ವಯಸ್ಸಿನಲ್ಲಿ ದಿನದಲ್ಲಿ ಒಂದು ಹೊತ್ತು ಮಾತ್ರ ನಿದ್ರಿಸಿ ರಾತ್ರಿ ಹತ್ತರಿಂದ ಹನ್ನೊಂದು ಗಂಟೆಗಳ ಕಾಲ ನಿದ್ರಿಸುತ್ತಾರೆ. ಒಟ್ಟಾರೆ ಹನ್ನೊಂದರಿಂದ ಹದಿಮೂರು ಗಂಟೆಗಳ ಕಾಲ ನಿದ್ರಿಸುತ್ತಾರೆ.

5-12 ವರ್ಷಗಳು

5-12 ವರ್ಷಗಳು

ಈ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗುವುದರಿಂದ ನಿದ್ದೆಗೆ ಕಡಿವಾಣ ಬೀಳುತ್ತದೆ. ಕೆಲವು ಶಾಲೆಗಳಲ್ಲಿ ಕೊಂಚ ಕಾಲ ನಿದ್ರಿಸಲು ಅನುವು ಮಾಡಿಕೊಟ್ಟರೂ ಇದು ಎಲ್ಲಾ ದಿನ ಸಾಧ್ಯವಾಗದು. ಬದಲಿಗೆ ರಾತ್ರಿ ಸೊಂಪಾಗಿ ಹತ್ತು ಗಂಟೆಗಳ ಕಾಲ ನಿದ್ರಿಸುತ್ತಾರೆ. ಒಟ್ಟಾರೆ ನಿದ್ದೆ ಹತ್ತು ಗಂಟೆಗಳಷ್ಟಿರುತ್ತದೆ.

English summary

How Much Sleep Does Your Baby Need?

First time moms generally wonder about how much time their babies need to sleep. Well, the sleep requirements do change with every passing month in the first year. And yes, babies need to sleep more. As their bodies undergo development and certain changes, enough sleep is required. So, here is a chart to guide you about the general sleep requirements of babies.
X
Desktop Bottom Promotion