For Quick Alerts
ALLOW NOTIFICATIONS  
For Daily Alerts

ಮಕ್ಕಳ ಕಾಫಿ ಸೇವನೆಗೆ ಈಗಲೇ ಬ್ರೇಕ್ ಹಾಕಿ

By Jaya subramanya
|

ಮಕ್ಕಳ ಆಹಾರದ ವಿಷಯದಲ್ಲಿ ತಾಯಂದಿರುವ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಮನೆಯಲ್ಲೇ ಮಾಡುವ ತಿಂಡಿಗಿಂತಲೂ ಎಳೆಯರು ಹೊರಗೆ ದೊರೆಯುವ ಪಿಜಾ ಬರ್ಗರ್‌ಗೂ ಮನಸೋಲುತ್ತಿದ್ದರೂ ಹಿತಮಿತವಾಗಿ ಮಕ್ಕಳಿಗೆ ಅವರಿಗೆ ಇಷ್ಟದ ತಿನಿಸನ್ನೂ ನೀಡಿ ಮನೆಯಲ್ಲೇ ತಯಾರಾಗುವ ಆಹಾರವನ್ನು ನೀಡುವಲ್ಲಿ ತಾಯಂದಿರು ಜಾಣೆಯಾಗಿದ್ದಾರೆ. ಇನ್ನು ಕೆಲವು ಮಕ್ಕಳಂತೂ ದೊಡ್ಡವರು ಹೇಗೆ ತಿಂಡಿ ತಿನಿಸು ಸೇವಿಸುತ್ತಾರೋ ಅಂತೆಯೇ ತಮಗೂ ಬೇಕು ಎಂಬ ಹಠ ಮಾಡಿ ಅದನ್ನು ಸೇವಿಸುತ್ತಾರೆ. ಮಗುವಿಗೂ ಟೀ ಕುಡಿಸುತ್ತಿದ್ದಿರಾ? ಹಾಗಾದರೆ ಇಂದೇ ನಿಲ್ಲಿಸಿ!

ಮಕ್ಕಳ ಹಠಕ್ಕೆ ಕಟ್ಟುಬಿದ್ದು ಇಂತಹ ಆಹಾರಗಳನ್ನು ಅವರಿಗೆ ನೀಡಬೇಕಾಗುತ್ತದೆ. ಇಂತಹ ಆಹಾರಗಳಲ್ಲಿ ಬರುವಂತಹುದೇ ಟೀ ಕಾಫಿಯಾಗಿದೆ. ಅದರಲ್ಲೂ ಮಕ್ಕಳು ಹೆಚ್ಚು ಆದ್ಯತೆ ನೀಡುವುದು ಕಾಫಿಗಾಗಿದೆ. ಹಾಲು ಕುಡಿಯಬೇಕಾದ ಚಿಣ್ಣರು ಕಾಫಿಗೆ ಮನಸೋತು ಅದನ್ನೇ ಹೆಚ್ಚು ಸೇವಿಸುತ್ತಾರೆ.

ಕಾಫಿಯಲ್ಲಿ ಕೆಫೇನ್ ಅಂಶ ಹೆಚ್ಚು ಇರುವುದರಿಂದ ಇದರ ದುಷ್ಪರಿಣಾಮಗಳಿಂದ ಮಕ್ಕಳು ಬಳಲುತ್ತಾರೆ. ಕೆಫೇನ್ ಮಾದಕ ದ್ರವ್ಯದಂತಿದ್ದು ಮಕ್ಕಳನ್ನು ಇದು ಶಕ್ತಿಶಾಲಿಯನ್ನಾಗಿ ಮಾಡಿದರೂ, ಸ್ವಲ್ಪ ಸಮಯದಲ್ಲೇ ಮಕ್ಕಳನ್ನು ಮಂಕಾಗಿಸುತ್ತದೆ ಇಂದಿನ ಲೇಖನದಲ್ಲಿ ಮಕ್ಕಳು ಕಾಫಿ ಮತ್ತು ಕೆಫೇನ್ ಅಂಶವುಳ್ಳ ಆಹಾರ ಪದಾರ್ಥಗಳನ್ನು ಏಕೆ ಸೇವಿಸಬಾರದು ಎಂಬುದರ ಮಾಹಿತಿ ನೀಡುತ್ತಿದ್ದು ನೀವು ಇದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ....

ಅಂಶ:1

ಅಂಶ:1

ಕೆಫೇನ್ ಅಂಶವುಳ್ಳ ಯಾವುದೇ ಪೇಯಗಳನ್ನು ಸೇವಿಸುವ ಮಕ್ಕಳಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇದರಲ್ಲಿರುವ ಸಕ್ಕರೆ ಕೂಡ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಅಂಶ:2

ಅಂಶ:2

ಕೆಫೇನ್ ಅಂಶವು ಹೃದಯ ಸಂಬಂಧಿ ರೋಗಗಳು ಮತ್ತು ಕೆಲವೊಂದು ನರ ದೌರ್ಬಲ್ಯಗಳನ್ನು ಉಂಟುಮಾಡುತ್ತದೆ. ಆದರೆ ಮಕ್ಕಳಿಗೆ ಈ ಅಪಾಯಗಳ ಬಗ್ಗೆ ಅರಿವು ಇಲ್ಲದೇ ಇರುವುದರಿಂದ ಅವರು ಇಂತಹ ಪದಾರ್ಥಗಳನ್ನೇ ಹೆಚ್ಚು ಸೇವಿಸುತ್ತಾರೆ.

ಅಂಶ:3

ಅಂಶ:3

ಕೆಫೇನ್ ಸೇವನೆಗೆ ನೀವು ನಿರ್ಬಂಧಿತರಾದಾಗ, ಇದು ನಿಮ್ಮ ಮಕ್ಕಳಲ್ಲಿ ಕೂಡ ಅದನ್ನೊಂದು ಚಟವನ್ನಾಗಿ ಮಾರ್ಪಡಿಸುತ್ತದೆ. ಆದ್ದರಿಂದ ಮಕ್ಕಳಿಂದ ಆದಷ್ಟು ಈ ಪೇಯವನ್ನು ದೂರವಿರಿಸಿ.

ಅಂಶ:4

ಅಂಶ:4

ನಿಮ್ಮ ದೇಹದಿಂದ ನೀರನ್ನು ಇದು ಹೀರಿಕೊಳ್ಳುವುದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ಮಕ್ಕಳು ಅನುಭವಿಸುವ ಸ್ಥಿತಿ ಬಂದೊದಗಬಹುದು. ಇದರಿಂದಾಗಿ ಮಗು ಆಗಾಗ್ಗೆ ನೀರಡಿಕೆ ಸಮಸ್ಯೆಯನ್ನು ಎದುರಿಸಬಹುದು.

ಅಂಶ:5

ಅಂಶ:5

ಕೆಫೇನ್ ಅಂಶವುಳ್ಳ ಆಹಾರ ಪದಾರ್ಥಗಳು ಮತ್ತು ಕಾಫಿ ನಿಮ್ಮ ಹಲ್ಲಿಗೆ ಒಳ್ಳೆಯದಲ್ಲ. ನಿಮ್ಮ ಹಲ್ಲಿನ ಸಂರಕ್ಷಣಾ ಪದರವನ್ನು ತೊಡೆದು ಹಾಕಿ ದಂತ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಅಂಶ:6

ಅಂಶ:6

ಕೆಫೇನ್ ಪೇಯಗಳು ಸೊನ್ನೆ ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ, ಇದರಿಂದ ಮಕ್ಕಳು ಇತರ ಪೋಷಕಾಂಶ ನ್ಯೂನತೆಗಳಿಂದ ಬಳಲಬಹುದು.

English summary

Why Kids Shouldn't Be Given Coffee

Milk is a healthier option for kids compared to coffee. Yes, coffee is bad for kids. In fact, even adults may need to limit their caffeine intake. The problem is caffeine. In fact, kids do get their caffeine intake from other foods like cakes and soft drinks. Caffeine exists in so many other foods and if you don't curb its intake, your kid may have to suffer the side effects of caffeine.
X
Desktop Bottom Promotion