For Quick Alerts
ALLOW NOTIFICATIONS  
For Daily Alerts

ಮಕ್ಕಳು ವ್ಯಗ್ರಗೊಳ್ಳುವುದಕ್ಕೆ ಕಾರಣಗಳೇನು?

By Manu
|

ಸಾಮಾನ್ಯವಾಗಿ ಮಕ್ಕಳು ಹಲವಾರು ಕಾರಣಗಳಿಗಾಗಿ ಕೋಪಗೊಳ್ಳುತ್ತಾರೆ. ಕೆಲವೊಮ್ಮೆ ಪೋಷಕರು ಮಕ್ಕಳನ್ನು ಅತಿಯಾಗಿ ಶಿಸ್ತಿನಿಂದ ಕಾಣುವುದೂ ಕೂಡ ಇದಕ್ಕೊಂದು ಕಾರಣವಾಗಿದ್ದು ಕೆಲವೊಮ್ಮೆ ಮಕ್ಕಳು ತಮ್ಮ ಇರುವನ್ನು ಪ್ರದರ್ಶಿಸುವುದಕ್ಕಾಗಿ ಕೂಡ ತಮ್ಮ ಉಗ್ರವನ್ನು ತೋರ್ಪಡಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಇಂತಹ ಗುಣಗಳು ಅತಿರೇಕವಾದಾಗ ಅವರನ್ನು ಸಮಾಧಾನಪಡಿಸಬೇಕು. ಇಲ್ಲದಿದ್ದರೆ ಈ ಪ್ರವೃತ್ತಿ ಚಟವಾಗಿ ಅವರನ್ನೇ ಇನ್ನಷ್ಟು ದುಷ್ಟತೆಗೆ ಇಳಿಸಬಹುದು.

Why Kids Rebel

ಹೆತ್ತವರಿಂದ ಕಡೆಗಣಿಸಲ್ಪಟ್ಟ ಮಕ್ಕಳು ತಮ್ಮನ್ನು ಈ ರೀತಿಯಿಂದಲಾದರೂ ಹೆತ್ತವರು ಗುರುತಿಸುವಂತಾಗಲಿ ಎಂದು ಕೋಪಗೊಳ್ಳುವ ಪ್ರವೃತ್ತಿಯನ್ನು ತೋರ್ಪಡಿಸುತ್ತಾರೆ. ಹೋರಾಟ ಮಾಡುವ ಮೂಲಕ ಪೋಷಕರ ಪ್ರೀತಿ ಗಳಿಸುವುದು ಇವರ ಇತರೆ ಗುಣಗಳಲ್ಲಿ ಒಂದಾಗಿದೆ. ಇನ್ನು ಕೆಲವು ಮಕ್ಕಳು ತಮ್ಮ ಕೋಪಗೊಂಡಾಗ ತಮಗೆಲ್ಲಾ ದೊರೆಯುತ್ತದೆ ಎಂಬ ಭಾವನೆಯಿಂದ ಕೂಡ ಈ ರೀತಿಯ ಸ್ವಭಾವವನ್ನು ಬೆಳೆಸಿಕೊಂಡಿರುತ್ತಾರೆ.

ಹೆತ್ತವರು ತಮ್ಮ ಮೇಲೆ ಗಮನ ಹರಿಸುತ್ತಿದ್ದಾರೆ ಎಂಬುದು ಇವರಿಗೆ ಗೊತ್ತಾದ ಒಡನೆ ಕೋಪಗೊಳ್ಳುವ ಪ್ರವೃತ್ತಿಯನ್ನು ಇವರು ಬಿಟ್ಟುಬಿಡುತ್ತಾರೆ. ಆದರೆ ಇದೇ ಅಭ್ಯಾಸ ಮುಂದುವರಿದ್ದಲ್ಲಿ ತಮ್ಮ ಸಿಟ್ಟು ಹಠವನ್ನು ಅವರು ತೋರ್ಪಡಿಸಿಕೊಳ್ಳುತ್ತಲೇ ಇರುತ್ತಾರೆ.


ಮಕ್ಕಳ ಕೋಪ ಹಠ ಒಮ್ಮೊಮ್ಮೆ ಎಷ್ಟಿರುತ್ತದೆ ಎಂದರೆ ಹೆತ್ತವರ ನಿಯಮಗಳನ್ನು ಕೂಡ ಅವರು ಲೆಕ್ಕಿಸುವುದಿಲ್ಲ. ಅವರಿಗೆ ವಿರೋಧವನ್ನೇ ತೋರ್ಪಡಿಸುತ್ತಾರೆ. ಸ್ವಾತಂತ್ರ್ಯವನ್ನು ಅನುಭವಿಸುವುದಕ್ಕಾಗಿ ಕೂಡ ಮಕ್ಕಳು ಇಂತಹ ಗುಣವನ್ನು ಬೆಳೆಸಿಕೊಂಡಿರುತ್ತಾರೆ.

ಹೀಗೆ ಹಲವಾರು ವಿಧಾನದಲ್ಲಿ ಮಕ್ಳಳು ಕೋಪೋದ್ರಿಕ್ತರಾಗುತ್ತಾರೆ. ಮಕ್ಕಳು ಏಕೆ ಕೋಪಗೊಳ್ಳುತ್ತಾರೆ ಎಂಬುದನ್ನು ಕಂಡುಕೊಂಡು ಅದಕ್ಕೆ ಪರಿಹಾರ ನೀಡುವುದರ ಕಡೆ ಪೋಷಕರು ಗಮನ ಹರಿಸಬೇಕು. ನೀವು ಅವರ ಮೇಲೆ ಹೆಚ್ಚು ನಿಯಂತ್ರಣ ಹೇರಿದಂತೆ ಈ ಸ್ವಭಾವ ಇನ್ನಷ್ಟು ತೀವ್ರವಾಗುವುದು ಖಂಡಿತ.

English summary

Why Kids Rebel

Generally, kids rebel for various reasons. In some cases, the reason behind such behaviour could also be parenting that has gone wrong. In fact children of parents who have the tendency of disciplining the kids too much may also turn into rebels.
Story first published: Tuesday, May 3, 2016, 10:12 [IST]
X
Desktop Bottom Promotion