For Quick Alerts
ALLOW NOTIFICATIONS  
For Daily Alerts

ಪುಟ್ಟ ಮಕ್ಕಳ ಆರೋಗ್ಯಕ್ಕೆ ಕೊಬ್ಬರಿ ಎಣ್ಣೆಯೇ ಸರ್ವಶ್ರೇಷ್ಠ....

ಆರೋಗ್ಯದ, ವಿಶೇಷವಾಗಿ ಕೂದಲು ಮತ್ತು ಚರ್ಮದ ಆರೈಕೆಯ ವಿಷಯ ಬಂದಾಗ ಕೊಬ್ಬರಿ ನೀಡುವ ಪೋಷಣೆಯ ಬಗ್ಗೆ ಎರಡು ಮಾತಿಲ್ಲ. ಪುಟ್ಟ ಮಕ್ಕಳಿಗೂ, ನವಜಾತ ಶಿಶುಗಳಿಗೂ ಈ ಎಣ್ಣೆ ಸೂಕ್ತವಾಗಿದ್ದು ಮಕ್ಕಳ ಶೀಘ್ರ ಮತ್ತು ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ..

By Arshad
|

ಕೊಬ್ಬರಿ ಎಣ್ಣೆ ಅತ್ಯಂತ ಆರೋಗ್ಯಕರವಾಗಿದ್ದು ಪುಟ್ಟ ಮಕ್ಕಳಿಂದ ಹಿರಿಯರವೆಗೆ ಎಲ್ಲಾ ವಯಸ್ಸಿನವರೂ ಯಾವುದೇ ಅಳುಕಿಲ್ಲದೇ ಉಪಯೋಗಿಸಬಹುದಾದ ಬಹುಪಯೋಗಿ ಎಣ್ಣೆಯಾಗಿದೆ. ಬಿಸಿಲಿನಲ್ಲಿ ಒಣಗಿಸಿದ ಕೊಬ್ಬರಿನನ್ನು ತುರಿದು ಸಾಂಪ್ರಾದಾಯಿಕ ವಿಧಾನದಲ್ಲಿ ಹಿಂಡಿ ತೆಗೆದ ಎಣ್ಣೆಯೇ ಅತ್ಯುತ್ತಮವಾಗಿದೆ.

ಸಮುದ್ರ ತೀರ ಮತ್ತು ದ್ವೀಪಗಳಲ್ಲಿರುವ ಊರುಗಳಲ್ಲಿ ತೆಂಗು ಪ್ರಮುಖ ಆಹಾರದ ರೂಪದಲ್ಲಿ ಬಳಸಲಾಗುತ್ತದೆ ಅಲ್ಲದೇ ಅಡುಗೆಯ ಎಣ್ಣೆಯ ಅಗತ್ಯತೆಯನ್ನೂ ಕೊಬ್ಬರಿ ಎಣ್ಣೆಯೇ ಪೂರೈಸುತ್ತದೆ. ಅಂಡಮಾನ್ ಸಹಿತ ಎಷ್ಟೋ ಕಡೆಗಳಲ್ಲಿ ದೊಡ್ಡ ದೊಡ್ಡ ಡೀಸೆಲ್ ಯಂತ್ರಗಳಿಗೆ ಕೊಬ್ಬರಿ ಎಣ್ಣೆಯನ್ನೇ ಹಾಕಿ ಚಾಲನೆ ನೀಡುತ್ತಾರೆ. ಅಚ್ಚರಿ ಲೋಕಕ್ಕೆ ತಳ್ಳುವ ಕೊಬ್ಬರಿ ಎಣ್ಣೆಯ ಕಮಾಲ್..!

ಆರೋಗ್ಯದ, ವಿಶೇಷವಾಗಿ ಕೂದಲು ಮತ್ತು ಚರ್ಮದ ಆರೈಕೆಯ ವಿಷಯ ಬಂದಾಗ ಈ ಎಣ್ಣೆ ನೀಡುವ ಪೋಷಣೆಯ ಬಗ್ಗೆ ಎರಡು ಮಾತಿಲ್ಲ. ಪುಟ್ಟ ಮಕ್ಕಳಿಗೂ, ನವಜಾತ ಶಿಶುಗಳಿಗೂ ಈ ಎಣ್ಣೆ ಸೂಕ್ತವಾಗಿದ್ದು ಮಕ್ಕಳ ಶೀಘ್ರ ಮತ್ತು ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ. ಬನ್ನಿ, ಪುಟ್ಟ ಮಕ್ಕಳಿಗೆ ಕೊಬ್ಬರಿ ಎಣ್ಣೆ ಯಾವ ರೀತಿಯಲ್ಲಿ ಸಹಕಾರಿಯಾಗಿದೆ ಎಂಬುದನ್ನು ನೋಡೋಣ....


ಸಮೃದ್ಧವಾಗಿರುವ ಲಾರಿಕ್ ಆಮ್ಲ

ಸಮೃದ್ಧವಾಗಿರುವ ಲಾರಿಕ್ ಆಮ್ಲ

ಕೊಬ್ಬರಿ ಎಣ್ಣೆಯಲ್ಲಿ ಯಾವುದೇ ರೀತಿಯಲ್ಲಿ ಉರಿ ತರದ ಅಥವಾ ಕಣ್ಣು ಉರಿಸದ ಲಾರಿಕ್ ಆಮ್ಲ (lauric acid) ಎಂಬ ಪೋಷಕಾಂಶವಿದೆ. ಈ ಆಮ್ಲ ತಾಯಿಹಾಲಿನಲ್ಲಿಯೂ ಸಮೃದ್ಧವಾಗಿದ್ದು ಮಗುವಿನ ಪೋಷಣೆಗೆ ಮಹತ್ವದ್ದಾಗಿದೆ. ಆದ್ದರಿಂದ ಗರ್ಭವತಿಯರು ಮತ್ತು ಮಗುವಿಗೆ ಹಾಲೂಡಿಸುತ್ತಿರುವ ತಾಯಂದಿರು ತಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಇರುವಂತೆ ನೋಡಿಕೊಳ್ಳಬೇಕು.

ಸಮೃದ್ಧವಾಗಿರುವ ಲಾರಿಕ್ ಆಮ್ಲ

ಸಮೃದ್ಧವಾಗಿರುವ ಲಾರಿಕ್ ಆಮ್ಲ

ಇದರಿಂದ ತಾಯಿಹಾಲು ವೃದ್ಧಿಯಾಗುವುದರ ಜೊತೆಗೇ ತಾಯಿಯಾಗುವವಳ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗಲು ಮತ್ತು ಹೆಚ್ಚು ಹಾಲು ಉತ್ಪತ್ತಿಯಾಗಲು ನೆರವಾಗುತ್ತದೆ. ಪರಿಣಾಮವಾಗಿ ಮಗುವಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಮಗುವಿನ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಮಗುವಿನ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಕೊಬ್ಬರಿ ಎಣ್ಣೆಯಲ್ಲಿರುವ ಟ್ರೈಗ್ಲಿಸರೈಡ್ ಎಂಬ ಕಣಗಳು ಮಧ್ಯಮ ಗಾತ್ರದ ಸಂಕೋಲೆಗಳಾಗಿದ್ದು ಜೀವರಾಸಾಯನಿಕ ಕ್ರಿಯೆಗೆ ಪೂರಕವಾಗಿದೆ. ಅಲ್ಲದೇ ಮಗುವಿನ ಆಹಾರದಲ್ಲಿ ಸೇರಿಸುವ ಮೂಲಕ ಮಗುವಿನ ಕೋಮಲ ಜೀರ್ಣಾಂಗಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ.

ಮಗುವಿನ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಮಗುವಿನ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಪರಿಣಾಮವಾಗಿ ಮಗುವಿನ ಆರೋಗ್ಯ ಉತ್ತಮಗೊಂಡು ದಿನೇ ದಿನೇ ವಿವಿಧ ಆಹಾರಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತದೆ.

ಚರ್ಮದ ತೊಂದರೆಗಳನ್ನು ಇಲ್ಲವಾಗಿಸುತ್ತದೆ

ಚರ್ಮದ ತೊಂದರೆಗಳನ್ನು ಇಲ್ಲವಾಗಿಸುತ್ತದೆ

ಹಿರಿಯರಿಗೆ ಅಭ್ಯಂಜನಕ್ಕೆ ಕೊಬ್ಬರಿ ಎಣ್ಣೆ ಹೇಗೆ ಸೂಕ್ತವೋ ಹಾಗೇ ಚಿಕ್ಕ ಮಕ್ಕಳಿಗೂ ಕೊಬ್ಬರಿ ಎಣ್ಣೆ ಉತ್ತಮವಾಗಿದೆ. ಸಾಮಾನ್ಯವಾಗಿ ಮಕ್ಕಳ ಚರ್ಮದ ತೈಲಗ್ರಂಥಿಗಳು ಹೆಚ್ಚು ಕ್ರಿಯಾಶೀಲವಾಗಿದ್ದು ಸೂಕ್ಷ್ಮಗೀರುಗಳಿಗೆ ಸುಲಭವಾಗಿ ತುತ್ತಾಗುತ್ತವೆ. ಇದರಿಂದ ಚರ್ಮ ಕೆಂಪಗಾಗುವುದು, ತುರಿಕೆ ಮೊದಲಾದ ತೊಂದರೆಗಳು ಎದುರಾಗುತ್ತವೆ.

ಚರ್ಮದ ತೊಂದರೆಗಳನ್ನು ಇಲ್ಲವಾಗಿಸುತ್ತದೆ

ಚರ್ಮದ ತೊಂದರೆಗಳನ್ನು ಇಲ್ಲವಾಗಿಸುತ್ತದೆ

ಕೊಬ್ಬರಿ ಎಣ್ಣೆ ಉತ್ತಮ ತೇವಕಾರಕವಾಗಿದ್ದು ಮಕ್ಕಳ ಕೋಮಲ ಚರ್ಮಕ್ಕೂ

ಸೂಕ್ತವಾಗಿದೆ. ಚಿಕ್ಕವಯಸ್ಸಿನಿಂದಲೇ ಕೊಬ್ಬರಿ ಎಣ್ಣೆಯನ್ನು ನಿಯಮಿತವಾಗಿ ಮಸಾಜ್ ಮಾಡುತ್ತಿರುವ ಮೂಲಕ ಮಕ್ಕಳ ಚರ್ಮ ವಿವಿಧ ಚರ್ಮದ ಸೋಂಕಿನಿಂದ ರಕ್ಷಣೆ ನೀಡಬಹುದು.

ಮಕ್ಕಳ ಸುಖನಿದ್ದೆಗೆ ನೆರವಾಗುತ್ತದೆ

ಮಕ್ಕಳ ಸುಖನಿದ್ದೆಗೆ ನೆರವಾಗುತ್ತದೆ

ಮಕ್ಕಳ ಕೋಮಲ ಚರ್ಮವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸುಲಲಿತವಾಗಿ ಆಗುತ್ತದೆ. ಮಕ್ಕಳ ಮೂಳೆಗಳೂ ದೃಢವಾಗುತ್ತವೆ ಹಾಗೂ ರಾತ್ರಿ ಸುಖನಿದ್ದೆ ಪಡೆಯಲು ನೆರವಾಗುತ್ತದೆ.

English summary

Why Is Coconut Oil Good For Babies?

Coconut oil serves as a major food item. Coconut oil is also used in various rituals in a number of countries. Coconut oil is healthy for children, including infants. Use coconut oil daily to help your babies grow faster and stronger. Also, listed here are some of the top benefits of coconut oil for babies:
X
Desktop Bottom Promotion