ಮಕ್ಕಳಿಗೆ ಸಡನ್ ಆಗಿ ಕಾಡುವ ಶೀತದ ಸಮಸ್ಯೆ! ಮುನ್ನೆಚ್ಚರಿಕೆ ಹೇಗೆ?

ಶೀತ, ಕೆಮ್ಮು, ಜ್ವರ, ತಲೆನೋವು ಇಂತಹ ಸಾಮಾನ್ಯ ರೋಗಗಳು ಆಮಂತ್ರಣವಿಲ್ಲದೆಯೇ ಮನುಷ್ಯರನ್ನು ಕಾಡುತ್ತವೆ. ಅದರಲ್ಲೂ ಮಕ್ಕಳಿಗೆ ಬಂದರೆ ಅಂತೂ, ಸಿಕ್ಕಾ ಪಟ್ಟೆ ಹಠ ಮಾಡಲು ಶುರು ಮಾಡಿ ಬಿಡುತ್ತವೆ.....

By: jaya subramanya
Subscribe to Boldsky

ಕಾಲ ಯಾವುದೇ ಇರಲಿ ಸಾಮಾನ್ಯವಾಗಿರುವ ರೋಗಗಳು ನಮ್ಮನ್ನು ಯಾವಾಗ ಬೇಕಾದರೂ ಕಾಡಬಹುದಾಗಿದೆ. ಶೀತ, ಕೆಮ್ಮು, ಜ್ವರ, ತಲೆನೋವು ಇಂತಹ ಸಾಮಾನ್ಯ ರೋಗಗಳು ಆಮಂತ್ರಣವಿಲ್ಲದೆಯೇ ಮನುಷ್ಯರನ್ನು ಬಂದು ಕಾಡುತ್ತವೆ.  ಅದರಲ್ಲೂ ಈ ರೋಗಗಳಿಗೆ ಹಿರಿಯರು ಕಿರಿಯರು ಎಂಬಂತಹ ಬೇದಭಾವ ಇರುವುದಿಲ್ಲ. ಜ್ವರ ಬಂದ ಮಕ್ಕಳಿಗೆ ಪಥ್ಯ ಆಹಾರಕ್ರಮ

ಮಕ್ಕಳಲ್ಲಂತೂ ಶೀತ ತುಂಬಾ ಹಠಮಾರಿಯಾಗಿ ಕೆಲಸ ಮಾಡಿ ಬಿಡುತ್ತದೆ. ಶೀತ ಬಂದಾಗ ಮಕ್ಕಳ ಮೂಗು ಕಟ್ಟಿಹಾಕುತ್ತದೆ. ಹಾಗಿದ್ದರೆ ಮಕ್ಕಳಲ್ಲಿ ಕಿರಿಕಿರಿಯನ್ನುಂಟು ಮಾಡುವ ಶೀತದ ಸಮಸ್ಯೆಗೆಂದೇ ಇಂದಿನ ಲೇಖನದಲ್ಲಿ ನಾವು ಪರಿಹಾರ ಕ್ರಮಗಳನ್ನು ನೀಡುತ್ತಿದ್ದೇವೆ. ಇಲ್ಲಿ ಪಟ್ಟಿಮಾಡಿರುವ ಔಷಧಗಳು ಮನೆಮದ್ದಾಗಿದ್ದು ಇದು ಮಕ್ಕಳಿಗೆ ಶೀತದ ಸಮಸ್ಯೆಯಿಂದ ನಿವಾರಣೆಯನ್ನು ನೀಡುತ್ತದೆ.  ಮಗುವಿಗೆ ಜ್ವರ ಬಂದಾಗ, ಪ್ರಥಮ ಚಿಕಿತ್ಸೆ ಹೀಗಿರಲಿ      

ಸಲೀನ್ ಡ್ರಾಪ್ಸ್

ಕಟ್ಟಿದ ಮೂಗು ಉಸಿರಾಟದ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದು ಮಕ್ಕಳಿಗೆ ನಿದ್ರಾ ಭಂಗವನ್ನು ಉಂಟುಮಾಡುವುದು ಖಂಡಿತ ಈ ಸಮಯದಲ್ಲಿ ಅವರಿಗೆ ಸಲೀನ್ ಡ್ರಾಪ್ಸ್ ಅನ್ನು ನೀಡಿ ಇದು ಕಟ್ಟಿದ ಮೂಗನ್ನು ನಿವಾರಿಸಿ ಅವರಿಗೆ ಸಮಾಧಾನವನ್ನುಂಟು ಮಾಡುತ್ತದೆ. ದಿನದಲ್ಲಿ ಎರಡರಿಂದ ಮೂರು ಬಾರಿ ಇದನ್ನು ಮಾಡಿ. ಸಣ್ಣ ಮಗುವಿಗೆ ಸಕ್ಶನ್ ಬಲ್ಬ್ ಕಟ್ಟಿದ ಮೂಗನ್ನು ನಿವಾರಣೆ ಮಾಡುತ್ತದೆ. ಆದರೆ ಈ ಕ್ರಿಯೆಯನ್ನು ಮಾಡುವುದಕ್ಕೆ ನೀವು ವೈದ್ಯರನ್ನು ಸಂಪರ್ಕಿಸುವುದು
ಉತ್ತಮ.

ದ್ರವಾಹಾರ

ಶೀತ ಸಮಯದಲ್ಲಿ ಮಕ್ಕಳು ದ್ರವಾಹಾರವನ್ನು ತೆಗೆದುಕೊಳ್ಳುವುದನ್ನು ಹೆಚ್ಚಿಸಿ. ಇದು ಲೋಳೆಯನ್ನು ತೆಳುವಾಗಿಸುತ್ತದೆ ಮತ್ತು ಸಮಾಧಾನವನ್ನುಂಟು ಮಾಡುತ್ತದೆ. ನೀರು, ಜ್ಯೂಸ್, ಬೆಚ್ಚಗಿನ ಹಾಲು, ಸೂಪ್, ಚೊಕಲೇಟ್ ಮೊದಲಾದವನ್ನು ಮಕ್ಕಳಿಗೆ ನೀಡಿ. ಇದು ಕಿರಿಕಿರಿಯನ್ನುಂಟು ಮಾಡುವ ಗಂಟಲಿಗೆ ಸಮಧಾನವನ್ನುಂಟು ಮಾಡುತ್ತದೆ. ಇದು ಹೆಚ್ಚು ಬಿಸಿಯಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆರು ತಿಂಗಳ ಒಳಗಿನ ಮಗುವಿಗೆ ನೀವು ಎದೆಹಾಲಲ್ಲದೆ ಬೇರಾವುದೇ ಆಹಾರವನ್ನು ನೀಡದಿರಿ.

ಜೇನನ್ನು ನೀಡಿ

ಶೀತವನ್ನು ನಿವಾರಿಸುವಲ್ಲಿ ಜೇನು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು. ನೀರನ್ನು ಕುದಿಸಿ ಇದಕ್ಕೆ ತುಳಸಿ ಮತ್ತು ಜೇನು ಸೇರಿಸಿ ಮಗುವಿಗೆ ನೀಡಿ. ನಿಮ್ಮ ಮಗು ಒಂದು ವರ್ಷಕ್ಕಿಂತ ಸಣ್ಣದಾಗಿದ್ದರೆ, ಜೇನು ಬೇಡ. ಈ ಸಮಯದಲ್ಲಿ ಅವರಲ್ಲಿ ಜೀರ್ಣಶಕ್ತಿ ಕಡಿಮೆಯಾಗಿರುತ್ತದೆ. ಆದ್ದರಿಂದ ಜೇನು ಸೇವನೆ ಅವರಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳನ್ನುಂಟು ಮಾಡಬಹುದಾಗಿದೆ.

ಮಲಗುವಾಗ ತಲೆಯನ್ನು ಎತ್ತರಿಸಿ

ಎತ್ತರಿಸಿದ ದಿಂಬಿನಿಂದ ದೊಡ್ಡವರಿಗೆ ಹೇಗೆ ಆರಾಮ ದೊರೆಯುತ್ತದೆಯೋ ಅಂತೆಯೇ ಮಗುವಿಗೂ ಇದೇ ಕ್ರಿಯೆಯನ್ನು ಮಾಡಿ.ಟವೆಲ್ ಅನ್ನು ಮಡಚಿ ಮತ್ತು ಮಗುವಿನ ತಲೆಯ ಅಡಿಭಾಗದಲ್ಲಿ ಇರಿಸಿ. ನಿಮ್ಮ ಮಗು ಸ್ವಲ್ಪ ದೊಡ್ಡದಾಗಿದೆ ಎಂದಾದಲ್ಲಿ ಇನ್ನೊಂದು ಬಟ್ಟೆಯನ್ನು ಮಡಚಿಟ್ಟುಕೊಂಡು ಇನ್ನಷ್ಟು ಎತ್ತರಗೊಳಿಸಿ. ಇದರಿಂದ ಅವರಿಗೆ ಉಸಿರಾಟ ನಿರಾಳವಾಗುತ್ತದೆ.

ಕೋಣೆಯನ್ನು ಹ್ಯುಮಿಡಿಯೇಟ್ ಮಾಡಿ

ಮಾಯಿಶ್ಚರೈಸರ್ ಉಸಿರಾಟವನ್ನು ನಿರಾಳಗೊಳಿಸುವಂತೆ, ನಿಮ್ಮ ಮಗು ಮಲಗುವ ಕೋಣೆಯಲ್ಲಿ ಹ್ಯುಮಿಡಿಫೈಯರ್ ಅನ್ನು ಬಳಸಿ ಆದಷ್ಟು ಈ ಸಾಧವನ್ನು ಸ್ವಚ್ಛಗೊಳಿಸಿ.

ಜ್ವರವಿದ್ದಾಗ

ನಿಮ್ಮ ಮಗುವಿಗೆ ಜ್ವರ ಇದೆ ಎಂದಾದಾಗ ವೈದರನ್ನು ತುರ್ತಾಗಿ ಭೇಟಿಮಾಡಿ. ಆರು ತಿಂಗಳಿಗಿಂತ ಮೇಲ್ಪಟ್ಟ ಮಗುವಿಗೆ ಎಕ್ಟಾಮಿನಾಫನ್ ಮತ್ತು ಇಬುಪ್ರೊಫನ್ ಸಹಾಯಕವಾಗಿರುತ್ತದೆ. ಅದಾಗ್ಯೂ ವೈದರನ್ನು ಕಾಣುವುದು ಉತ್ತಮವಾಗಿದೆ. ಔಷಧ ಹೆಚ್ಚಾಗದಂತೆ ನೋಡಿಕೊಳ್ಳಿ ಅಂತೆಯೇ ಮಗುವಿಗೆ ಆಸ್ಪಿರಿನ್‎ಗೆ ಅಲರ್ಜಿ ಇದೆಯೇ ಎಂಬುದನ್ನು ಕಂಡುಕೊಳ್ಳಿ.

ಜೀರ್ಣವಾಗುವ ಆಹಾರವನ್ನು ನೀಡಿ

ಶೀತದಿಂದ ಮಗುವಿಗೆ ಗಂಟಲು ಕಿರಿಕಿರಿಯಾಗುತ್ತಿದೆ ಎಂದಾದಲ್ಲಿ, ಮಗು ಆಹಾರ ಸೇವನೆ ಬೇಡ ಎಂದೇ ಹೇಳುತ್ತದೆ. ಅವರಿಗೆ ಆಹಾರ ಸೇವನೆ ಈ ಸಮಯದಲ್ಲಿ ಕಷ್ಟವಾಗುತ್ತದೆ. ಈ ಸಮಯದಲ್ಲಿ ಅವರಿಗೆ ಜೀರ್ಣವಾಗುವ ಆಹಾರವನ್ನು ನೀಡಿ.ಆಪಲ್‎ಸಾಸ್, ಸೂಪು, ತಾಜಾ ಆಹಾರ ಮೊದಲಾವನ್ನು ನೀಡಿ. ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವಿಗೆ ಇಂತಹ ಆಹಾರಗಳನ್ನು ನೀಡದಿರಿ.

ಆದಷ್ಟು ಎಚ್ಚರವಹಿಸಿ....

ನಿಮ್ಮ ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳಿದ್ದಾರೆ ಎಂದಾದಲ್ಲಿ ಈ ರೋಗಗಳು ಸಾಂಕ್ರಾಮಿಕವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ದೊಡ್ಡವರಿಗೆ ಇಂತಹ ರೋಗ ಸಮಸ್ಯೆ ಎಂದಾದಲ್ಲಿ ಅವರು ಮಕ್ಕಳಿಗೆ ಹರಡುವ ಮುನ್ನವೇ ಸೂಕ್ತವಾದ ಔಷಧವನ್ನು ಮಾಡಲಿ.

 


Story first published: Wednesday, October 26, 2016, 23:17 [IST]
English summary

What To Do When Your Kid Catches Cold?

Cold in children is a common and serious problem. Since their immunity is not strong enough, a minimum exposure to cool air or moisture outside can make them suffer a lot. Especially, in case of infants, a slight cold can lead to a serious health problem as well.
Please Wait while comments are loading...
Subscribe Newsletter