For Quick Alerts
ALLOW NOTIFICATIONS  
For Daily Alerts

ಮಗುವಿಗೆ ಮಸಾಜ್ ಮಾಡಲು ಸೂಕ್ತವಾದ ಎಣ್ಣೆ ಯಾವುದು?

By Jaya subramanya
|

ಗರ್ಭಾವಸ್ಥೆಯ ಸಂದರ್ಭದಲ್ಲಿ ನಿಮ್ಮ ಮಗುವಿನ ಪೋಷಣೆಯನ್ನು ನೀವು ಯಾವ ರೀತಿಯಲ್ಲಿ ಮಾಡುತ್ತೀರೋ ಅಂತೆಯೇ ಮಗು ಜನಿಸಿದ ನಂತರ ಇನ್ನಷ್ಟು ಕಾಳಜಿ ಅಕ್ಕರೆಯನ್ನು ತಾಯಿ ತೋರಿಸಬೇಕು. ತಾಯಿಯ ಉದರದೊಳಗೆ ಒಂಬತ್ತು ತಿಂಗಳುಗಳ ಕಾಲ ವಿರಮಿಸುವ ಶಿಶು ತನ್ನ ಜನನದ ನಂತರ ಹೊಸ ಲೋಕವನ್ನು ಪ್ರವೇಶಿಸುತ್ತದೆ. ಆಗ ಅದಕ್ಕೆ ತಾಯಿಯ ಅಪ್ಪುಗೆಯ ಅಗತ್ಯವಿರುತ್ತದೆ, ಅಲ್ಲದೆ ಆಕೆ ನೀಡುವ ಆಹಾರವೇ ಮಗುವಿಗೆ ಜೀವಾಮೃತವಾಗಿರುತ್ತದೆ.

ತಾಯಿ ಕೂಡ ತನ್ನ ಮಗುವಿನ ಸಾಮಿಪ್ಯವನ್ನು ಈ ಸಮಯದಲ್ಲಿ ಹೆಚ್ಚು ಬಯಸುತ್ತಿದ್ದು ಆಕೆಯ ಅಕ್ಕರೆಯೇ ಮಗುವಿನ ಶ್ರೀರಕ್ಷೆಯಾಗಿರುತ್ತದೆ. ತಾಯಿಯನ್ನು ಬಿಟ್ಟು ಬೇರೊಬ್ಬರ ಕೈಗೆ ಮಗು ಹೋದಾಗ ಅದು ಅಳುವುದನ್ನು ನೀವು ಗಮನಿಸಿರಬಹುದು. ಅಂದರೆ ತಾಯಿಯ ಮೈಶಾಖ ಸ್ಪರ್ಶ ಸುಖದ ಅರಿವು ಅದಕ್ಕಿರುತ್ತದೆ. ಬೇರೊಬ್ಬರ ಕೈಯಲ್ಲಿ ಅದು ಈ ಸೆಳೆತ ಮತ್ತು ಸುಖವನ್ನು ಪಡೆದುಕೊಂಡಿರುವುದಿಲ್ಲ. ಅದಕ್ಕಾಗಿಯೇ ತಾಯಿ ಮಗುವಿನ ಸಂಬಂಧಕ್ಕೆ ಬೆಲೆ ಕಟ್ಟಲಾಗದು ಎನ್ನುವುದು.

ಮಗುವಿನ ಜನನದ ನಂತರ ಅದರ ಆರೈಕೆಯೊಂದೇ ತಾಯಿಯ ಆದ್ಯ ಕರ್ತವ್ಯವಾಗಿರುತ್ತದೆ. ಮಸಾಜ್ ಮಾಡುವುದು ಮಗುವಿನ ದೇಹಕ್ಕೆ ಶಕ್ತಿಯನ್ನು ಒದಗಿಸುವುದರ ಜೊತೆಗೆ ಅದರ ಬೆಳವಣಿಗೆಗೂ ಪೂರಕವಾಗಿದೆ. ಮಗುವಿನ ಮೂಳೆಗಳನ್ನು ದೃಢಪಡಿಸಿ ಆರೋಗ್ಯವಂತ ದೇಹವನ್ನು ಮಗುವಿಗೆ ನೀಡುತ್ತದೆ. ಉತ್ತಮ ನಿದ್ರೆಯನ್ನು ಒದಗಿಸುವುದರ ಜೊತೆಗೆ ಮಗುವನ್ನು ಕ್ರಿಯಾತ್ಮಗೊಳಿಸುವಲ್ಲಿ ಮಸಾಜ್ ನೆರವನ್ನು ನೀಡುತ್ತದೆ.

ತಾಯಿಯ ಬೆಚ್ಚಗಿನ ಸ್ಪರ್ಶವನ್ನು ದೀರ್ಘ ಸಮಯದವರೆಗೆ ಮಗುವಿಗೆ ನೀಡುವಲ್ಲಿ ಮಸಾಜ್ ನೆರವನ್ನು ನೀಡುತ್ತದೆ. ದೇಹದ ಎಲ್ಲಾ ಅಂಗಗಳಿಗೂ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ರಕ್ತ ಪ್ರಸಾರ ಚೆನ್ನಾಗಿ ನಡೆಯುತ್ತದೆ. ಆದರೆ ಹೆಚ್ಚಿನವರಿಗೆ ಉಂಟಾಗುವ ಸಂದೇಹವೆಂದರೆ ಮಸಾಜ್ ಮಾಡಲು ಯಾವ ಎಣ್ಣೆಯನ್ನು ಬಳಸುವುದು ಎಂಬುದಾಗಿದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ವೈದ್ಯರುಗಳೇ ತಿಳಿಸಿರುವ ಉತ್ತಮ ಮಸಾಜ್ ಎಣ್ಣೆಗಳ ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ. ಹಾಗಿದ್ದರೆ ಆ ವಿವಿಧ ಪ್ರಕಾರದ ಎಣ್ಣೆಗಳೇನು ಎಂಬುದನ್ನು ಮುಂದೆ ಓದಿ...

ತೆಂಗಿನೆಣ್ಣೆ

ತೆಂಗಿನೆಣ್ಣೆ

ಎಣ್ಣೆಗಳಲ್ಲಿ ಅತ್ಯುತ್ತಮ ಎಂಬ ಹಣೆಪಟ್ಟಿ ತೆಂಗಿನೆಣ್ಣೆಗಿದೆ. ತೆಳುವಾಗಿರುವ ಈ ಎಣ್ಣೆಯನ್ನು ದೇಹ ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ದೇಹಕ್ಕೆ ತಂಪಿನ ಅನುಭವವನ್ನು ನೀಡುತ್ತದೆ. ಮಗುವಿನ ತ್ವಚೆಯನ್ನು ಮೃದುಗೊಳಿಸಲು ತೆಂಗಿನೆಣ್ಣೆ ಸಹಕಾರಿಯಾಗಿದೆ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಎಣ್ಣೆಯು ಒಳಗೊಂಡಿದ್ದು ಮಗುವಿನ ತ್ಚಚೆಗೆ ಉತ್ತಮವಾಗಿದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಮಗುವಿನ ತ್ವಚೆಗೆ ಬೆಚ್ಚಗಿನ ಅನುಭವವನ್ನು ಸಾಸಿವೆ ಎಣ್ಣೆ ಮಾಡುತ್ತದೆ. ಮಗುವಿನ ತ್ವಚೆಗೆ ನೇರವಾಗಿಯೇ ಇದನ್ನು ಬಳಸಿಕೊಳ್ಳಬಹುದು. ಇತರ ಆವಶ್ಯಕ ಎಣ್ಣೆಗಳೊಂದಿಗೆ ಇದನ್ನು ಬಳಸಿಕೊಳ್ಳಬಹುದಾಗಿದ್ದು ನಂತರ ಅದನ್ನು ಹಚ್ಚಬಹುದು. ಮಗುವಿನ ದೇಹಕ್ಕೆ ವಿರಾಮವನ್ನು ನೀಡಿ ಹಿತವಾದ ಅನುಭವವನ್ನು ಮಗುವಿಗೆ ನೀಡುತ್ತದೆ.

ಆಲೀವ್ ಎಣ್ಣೆ

ಆಲೀವ್ ಎಣ್ಣೆ

ಮಗುವಿಗೆ ಮಸಾಜ್ ಮಾಡಬಹುದಾದ ಜನಪ್ರಿಯ ಎಣ್ಣೆಯಾಗಿದೆ ಆಲೀವ್ ಎಣ್ಣೆ. ಮಗುವಿನ ತ್ವಚೆಗೆ ಬಳಸಲು ಇದು ಹೆಚ್ಚು ಯೋಗ್ಯವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಎಣ್ಣೆಯನ್ನು ಮಸಾಜ್‌ಗಾಗಿ ಬಳಸುತ್ತಾರೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ವಿಟಮಿನ್ ಇ ಅಂಶಗಳನ್ನು ಬಾದಾಮಿ ಎಣ್ಣೆ ಒಳಗೊಂಡಿದೆ. ಮಗುವಿನ ತ್ವಚೆಗೆ ಸಂಪೂರ್ಣ ರಕ್ಷಣೆಯನ್ನು ನೀಡುವ ನ್ಯೂಟ್ರೀನ್ ಅಂಶಗಳನ್ನು ಈ ಎಣ್ಣೆ ಒಳಗೊಂಡಿದೆ. ಸ್ನಾನದ ಎಣ್ಣೆಯಾಗಿಯೂ ಇದನ್ನು ಬಳಸುತ್ತಾರೆ. ಮಗುವಿಗೆ ಆರಾಮವನ್ನು ಒದಗಿಸಿ ಚೆನ್ನಾಗಿ ನಿದ್ರೆ ಬರುವಂತೆ ಬಾದಾಮಿ ಎಣ್ಣೆ ಮಾಡುತ್ತದೆ.

ಹರಳೆಣ್ಣೆ

ಹರಳೆಣ್ಣೆ

ಮಗುವಿಗೆ ಮಸಾಜ್ ಮಾಡಲು ಹರಳೆಣ್ಣೆ ಹೆಚ್ಚು ಉಪಯುಕ್ತ ಎಂದೆನಿಸಿದೆ. ಸ್ನಾನಕ್ಕೂ ಮುನ್ನ ಈ ಎಣ್ಣೆಯಿಂದ ಮಗುವಿನ ದೇಹಕ್ಕೆ ಮಸಾಜ್ ಮಾಡಿ. ಒಣ ತ್ವಚೆಯನ್ನು ಇದು ಹೈಡ್ರೇಟ್ ಮಾಡಿ ಮಗುವಿನ ತ್ವಚೆ ಆರೋಗ್ಯಕಾರಿಯಾಗಿ ಇರುವಂತೆ ಮಾಡುತ್ತದೆ. ಮಸಾಜ್ ಉದ್ದೇಶಗಳಿಗಾಗಿ ಈ ಎಣ್ಣೆಯನ್ನು ಹೆಚ್ಚು ಶಿಫಾರಸು ಮಾಡಲಾಗಿದೆ.

English summary

Top Best Baby Massage Oils

Choosing the right oil for massaging the baby is crucial. It is always advisable to take the suggestion of a doctor and choose the oil accordingly. However, there are a few good highly beneficial oils that are commonly recommended for a baby's massage. Therefore, in this article, we at Boldsky will be listing out some of the effective baby oils that can be used on a baby's skin. Read on to know more about it.
X
Desktop Bottom Promotion